Return   Facebook   Zip File

Obligatory

ರವರು ಚಿಕ್ಕ ಮಧ್ಯಮ ಮತ್ತು ದೀರ್ಘವೆಂಬ ಮೂರು ಅನಿವಾರ್ಯ ಪ್ರಾರ್ಥನೆಗಳನ್ನು ಅನುಗ್ರಹಿಸಿರುವರು. ಇವುಗಳಲ್ಲಿ ಯಾವುದಾದರೊಂದನ್ನೂ ಅಯ್ದುಕೊಂಡರೆ ನಾವು ನಮ್ಮ ಕರ್ತವ್ಯವನ್ನು ಪಾಲಿಸಿದಂತಾಗುವುದು)

ಚಿಕ್ಕ ಅನಿವಾರ್ಯ ಪ್ರಾರ್ಥನೆ

(ಪ್ರತಿ ದಿನ ಮಧ್ಯಾನ್ಹ 12 ಗಂಟೆಯಿಂದ ಸೂರ್ಯಾಸ್ತದೊಳಗೆ ಒಂದು ಬಾರಿ ಕಡ್ಡಾಯವಾಗಿ ಪಠಿಸಲೇಬೇಕಾದ ಚಿಕ್ಕ ಅನಿವಾರ್ಯ ಪ್ರಾರ್ಥನೆ)

ಓ ನನ್ನ ಪರಮಾತ್ಮನೇ, ನಿನ್ನನ್ನು ಅರಿಯಲು ಹಾಗೂ ಆರಾಧಿಸಲು ನನ್ನನ್ನು ನೀನು ಸೃಷ್ಟಿಸಿದೆ. ಅದಕ್ಕೆ ನಾನೇ ಸಾಕ್ಷಿ. ನಾನು ಬಲಹೀನ, ನೀನು ಬಲಶಾಲಿ ನಾನು ಬಡವ, ನೀನು ಸಿರಿವಂತ, ಇದನ್ನು ನಾನು ಸಾರಿ ಹೇಳುತ್ತೇನೆ.

ನೀನಲ್ಲದೆ ಬೇರೆ ದೇವರಿಲ್ಲ, ಆಪತ್ತಿನಲ್ಲಿ ನೀನೇ ರಕ್ಷಕ ಸ್ವಯಂಪರಿಪೂರ್ಣ.

#9508
- Bahá'u'lláh

 

ದೀರ್ಘ ಅನಿವಾರ್ಯ ಪ್ರಾರ್ಥನೆ (24 ಗಂಟೆಗಳಲ್ಲಿ ಒಂದು ಸಲ ಹೇಳಬೇಕಾಗಿರುವುದು)

ಯಾರು ಈ ಪ್ರಾರ್ಥನೆಯನ್ನು ಪಠಿಸಲು ಇಚ್ಛಿಸುವನೂ, ಅವನು ಎದ್ದು ನಿಲ್ಲಲಿ ಮತ್ತು ದೇವರ ಕಡೆ ತಿರುಗಲಿ, ಹಾಗೂ ಅವನು ತನ್ನ ಜಾಗದಲ್ಲಿ ನಿಲ್ಲುತ್ತಿದ್ದಂತೆ ಕೃಪಾಳುವೂ, ದಯಾಳುವೂ ಆದ ಪ್ರಭುವಿನ ಕೃಪೆಯನ್ನು ನಿರೀಕ್ಷಿಸುವಂತೆ ಬಲಗಡೆ ಹಾಗೂ ಎಡಗಡೆ ನೋಡಲಿ. ನಂತರ ಅವನು ಹೀಗೆ ಹೇಳಲಿ: ಓ ಸರ್ವ ನಾಮಾಂಕಿತಗಳ ಪ್ರಭುವೇ ಮತ್ತು ಸ್ವಗಗಳ ಸೃಷ್ಟಿಕರ್ತನೇ! ನನ್ನ ಪ್ರಾರ್ಥನೆಯನ್ನು ನಿನ್ನ ಸೌಂದರ್ಯದಿಂದ ನನ್ನನ್ನು ಮರೆ ಮಾಡಿರುವ ಪರದೆಗಳನ್ನು ದಹಿಸುವಂತಹ ಬೇಂಕಿಯಂತೆಯೂ ಹಾಗೂ ನಿನ್ನ ಸಮ್ಮುಖದ ಸಾಗರದ ಬಳಿಗೆ ಕರೆದೊಯ್ಯುವ ಪ್ರಕಾಶದಂತೆಯೂ ಮಾಡು ಎಂದು ಸರ್ವೋತ್ಕರ್ಷ ಹಾಗೂ ಮಹಾಮಹಿಮಾನ್ವಿತ ನಿನ್ನ ಅದೃಶ್ಯ ಸಾರದ ದಿನ ಚಿಲುಮೆಗಳ ಮೂಲಕ ಪ್ರಾರ್ಥಿಸುತ್ತಿದ್ದೇನೆ.

ಪೂಜ್ಯನೂ ಮತ್ತು ಸರ್ವೋತ್ಕರ್ಷನೂ ಆದ ದೇವರನ್ನು ಯಾಚಿಸಲು ಅವನು ತನ್ನ ಕೈಗಳನ್ನೆತ್ತಿ ಹೀಗೆ ಹೇಳಲಿ: ಓ ಪ್ರಪಂಚಗಳ ಆಕಾಂಕ್ಷೆಯೇ ಮತ್ತು ರಾಷ್ಟ್ರಗಳ ಪ್ರಿಯನೇ! ನಿನ್ನ ಹೊರತು ಎಲ್ಲಾ ಮೋಹಗಳಿಂದ ವಿಮುಕ್ತನಾಗಿ ನಿನ್ನೆಡೆಗೆ ತಿರುಗಿರುವುದನ್ನು ಹಾಗೂ ಯಾವುದರ ಚಲನೆಯಿಂದ ಸಮಸ್ತ ಸೃಷ್ಟಿಯೇ ಕಲಕಿ ಹೋಯಿತೋ, ಅಂತಹ ನಿನ್ನ ಪಾಶಕ್ಕೆ ನಾನು ಅಂಟಿಕೊಂಡಿರುವುದನ್ನು ನೀನು ನೋಡುತ್ತಿರುವೆ. ನಾನು ನಿನ್ನ ಸೇವಕ, ಓ ನನ್ನ ಪ್ರಭುವೇ, ಮತ್ತು ನಿನ್ನ ಸೇವಕನ ಪುತ್ರ ನಿನ್ನ ಇಚ್ಛೆ ಹಾಗೂ ಅಕಾಂಕ್ಷೆಯಂತೆ ನಡೆಯಲು ಸಿದ್ಧನಾಗಿರುವುದನ್ನೂ ಮತ್ತು ನಿನ್ನ ಸಂತೋಷವನ್ನಲ್ಲದೆ ಮತ್ತೇನನ್ನೂ ಆಶಿಸದೆ ನಿಂತಿರುವುದನ್ನೂ ನೀನು ನೋಡು. ನಿನ್ನ ಸೇವಕರ ಜೊತೆ ನಿನ್ನ ಇಚ್ಛೆ ಹಾಗೂ ಸಂತೋಷದಂತೆ ಮಾಡೆಂದು ನಾನು ನಿನ್ನ ಕೃಪಾಸಾಗರ ಹಾಗೂ ನಿನ್ನ ಅನುಗ್ರಹದ ದಿನ-ನಕ್ಷತ್ರದ ಮೂಲಕ ನಿನ್ನಲ್ಲಿ ಮೊರೆ ಇಡುತ್ತಿದ್ದೇನೆ. ಎಲ್ಲಾ ಹೇಳಿಕೆ ಮತ್ತು ಪ್ರಶಂಸೆಗೂ ಮೀರಿದ ನಿನ್ನ ಶಕ್ತಿಯಾಣೆ! ನಿನ್ನಿಂದ ಪ್ರಕಟಗೊಂಡಿರುವುದೆಲ್ಲವೂ ನನ್ನ ಹೃದಯದ ಬಯಕೆ ಮತ್ತು ನನ್ನ ಆತ್ಮದ ಅಕ್ಕರೆಯಾಗಿದೆ. ಓ ದೇವರೇ, ನನ್ನ ದೇವರೇ! ನನ್ನ ನಿರೀಕ್ಷೆ ಮತ್ತು ಕೃತಿಗಳತ್ತ ನೋಡಬೇಡ, ಬದಲಾಗಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸುವಂತಹ ನಿನ್ನ ಇಚ್ಛೆಯತ್ತ ನೋಡು. ನಿನ್ನ ಮಹಾಮಹಿಮ ನಾಮಾಂಕಿತದ ಮೂಲಕ, ಓ ಎಲ್ಲಾ ರಾಷ್ಟ್ರಗಳ ಪ್ರಭುವೇ, ನೀನು ಏನನ್ನು ಆಶಿಸಿದ್ದಿಯೋ ಅದನ್ನೇ ನಾನು ಆಶಿಸಿದ್ದೇನೆ, ಮತ್ತು ನೀನು ಏನನ್ನು ಪ್ರೀತಿಸುವೆಯೋ ಅದನ್ನೇ ನಾನು ಪ್ರೀತಿಸುವೆ.

ಅವನು ಮೊಣಕಾಲೂರಿ, ಹಣೆಯನ್ನು ನೆಲಕ್ಕೆ ಬಾಗಿಸಿ ಹೀಗೆ ಹೇಳಲಿ: ನಿನ್ನ ಹೊರತು ಬೇರೆಲ್ಲಾ ವಿವರಣೆಗಳಿಗಿಂತಲೂ ಮತ್ತು ನಿನ್ನ ಹೊರತು ಬೇರೆಲ್ಲದರ ಗ್ರಹಣ ಶಕ್ತಿಗಿಂತಲೂ ನೀನು ಮಹಾಮಹಿಮನಿದ್ದೀಯೇ.

ನಂತರ ಅವನು ನಿಂತು ಹೀಗೆ ಹೇಳಲಿ : ಓ ನನ್ನ ಪ್ರಭುವೇ, ನನ್ನ ಪ್ರಾರ್ಥನೆಯನ್ನು ಜೀವಜಲದ ಕಾರಂಜಿಯನ್ನಾಗಿಸು. ಅದರಿಂಡ ನಾನು ನಿನ್ನ ಸಾರ್ವಭೌಮತ್ವವಿರುವ ತನಕ ಬಾಳುವಂತಾಗಲಿ ಮತ್ತು ನಿನ್ನ ಪ್ರಪಂಚಗಳ ಪ್ರತಿಯೊಂದು ಪ್ರಪಂಚದಲ್ಲೂ ನಿನ್ನ ಸ್ಮರಣೆ ಮಾಡುವಂತಾಗಲಿ

ಪುನಃ ಅವನು ತನ್ನ ಕೈಗಳನ್ನು ಮೇಲೆತ್ತಿ ಬೇಡುತ್ತಾ ಹೀಗೆ ಹೇಳಲಿ: ಓ ಯಾರ ಅಗಲಿಕೆಯಿಂದ ಹೃದಯಗಳು ಮತ್ತು ಆತ್ಮಗಳು ಕರಗಿದ್ದವೋ ಹಾಗೂ ಯಾರ ಪ್ರೇಮದ ಅಗ್ನಿಯಿಂದ ಇಡೀ ಪ್ರಪಂಚವೇ ಜ್ವಲಿಸಿತೋ ಅವನೇ ನೀನು! ಎಲ್ಲ ಜನರನ್ನಾಳುವವನೇ! ನಿನ್ನಲ್ಲಿರುವುದೆಲ್ಲವನ್ನೂ ನನ್ನಿಂದ ತಡೆಗಟ್ಟದಿರೆಂದು ಸಮಸ್ತ ಸೃಷ್ಟಿಯನ್ನೇ ನಿಗ್ರಹಿಸಿರುವ ನಿನ್ನ ನಾಮದ ಮೂಲಕ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ಓ ಪ್ರಭುವೇ, ಈ ಅಪರಿಚಿತನು ನಿನ್ನ ಭವ್ಯತೆಯ ಮೇಲ್ಕಟ್ಟಿನ ಆಶ್ರಯದಲ್ಲಿರುವ ಹಾಗೂ ನಿನ್ನ ಕೃಪೆಯ ಆವರಣದಲ್ಲಿರುವ ಅವನ ಮಹೋನ್ನತವಾದ ಬೀಡಿಗೆ ತ್ವರೆಯಾಗಿ ಹೋಗುವುದನ್ನೂ, ಈ ಅತಿಕ್ರಮಿಯು ನಿನ್ನ ಕ್ಷಮಾ ಸಾಗರವನ್ನರಸುವುದನ್ನೂ; ಈ ದೀನನೂ ನಿನ್ನ ವೈಭವದ ಆಸ್ಥಾನವನ್ನೂ ಹಾಗೂ ಈ ಬಡಪಾಯಿಯು ನಿನ್ನ ಐಶ್ವರ್ಯವನ್ನು ಅರಸುವುದನ್ನೂ ನೀನು ನೋಡುತ್ತಿರುವೆ. ನಿನ್ನ ಅಪೇಕ್ಷೆಯಂತೆಯೇ ಅಪ್ಪಣೆ ನೀಡುವ ಅಧಿಕಾರ ನಿನ್ನದಾಗಿರುವುದು. ನಿನ್ನ ಕೃತಿಗಳಲ್ಲಿ ನೀನು ಪ್ರಶಂಸಿಸಲ್ಪಡಬೇಕಾಗಿರುವುದಕ್ಕೂ, ನಿನ್ನ ಅಪ್ಪಣೆಗೆ ಎಲ್ಲರೂ ಬದ್ಧರಾಗಿರಬೇಕೆಂಬುದಕ್ಕೂ ಹಾಗೂ ನಿನ್ನಾಜ್ಞೆಯಲ್ಲಿ ನಿರ್ಬಂಧದಲ್ಲಿರಬೇಕಾಗಿರುವುದಕ್ಕೂ ನಾನು ಸಾಕ್ಷಿಯಾಗಿದ್ದೇನೆ.

ನಂತರ ಅವನು ತನ್ನ ಕೈಗಳನ್ನು ಮೇಲೆತ್ತಲಿ ಹಾಗೂ ಮೂರು ಸಲ ಮಹೋನ್ನತ ನಾಮ (ಅಲ್ಹಾ-ಓ-ಅಭಾ)ವನ್ನು ಉಚ್ಚರಿಸಲಿ, ನಂತರ ಅವನು ಕೈಯನ್ನು ಮೊಣಕಾಲ ಮೇಲಿರಿಸಿ ದೇವರ ಮುಂದೆ – ಆತನು ಅನುಗ್ರಹಿತನು ಮತ್ತು ಮಹೋನ್ನತನು -ಬಗ್ಗಿ ಹೀಗೆ ಹೇಳಲಿ:

ಓ ನನ್ನ ದೇವರೇ, ಪೂಜಿಸುವ ಹೆಬ್ಬಯಕೆ ಮತ್ತು ಸ್ಮರಿಸುವ ಹಾಗೂ ಸ್ತುತಿಸುವ ಹಂಬಲಿಕೆಯಲ್ಲಿ ಹಾಗೂ ನನ್ನ ಚೈತನ್ಯವು ನನ್ನ ಕೈಕಾಲುಗಳಲ್ಲಿ ಮತ್ತು ಅಂಗಾಂಗಗಳಲ್ಲಿ ಹೇಗೆ ಕಲಕಿದೆ ಎಂಬುದನ್ನೂ, ನಿನ್ನ ನುಡಿಯ ಸಾಮ್ರಾಜ್ಯದಲ್ಲಿ ಮತ್ತು ನಿನ್ನ ಜ್ಞಾನದ ಸ್ವರ್ಗದಲ್ಲಿ ನಿನ್ನ ಆಜ್ಞೆಯ ನಾಲಿಗೆಯು ಸಾಕ್ಷಿ ನುಡಿದಿದ್ದಂತೆ ಅದು ಹೇಗೆ ಸಾಕ್ಷಿ ನುಡಿದಿದೆ ಎಂಬುದನ್ನು ನೀನು ನೋಡುತ್ತಿರುವೆ.

ಓ ನನ್ನ ಪ್ರಭುವೇ, ನಾನು ನನ್ನ ಬಡತನವನ್ನು ನಿರೂಪಿಸಿ, ನಿನ್ನ ಉದಾರತೆ ಮತ್ತು ಸಿರಿವಂತಿಕೆಯನ್ನು ದೊಡ್ಡದಾಗಿಸುವಂತೆಯೂ ಮತ್ತು ನನ್ನ ದುರ್ಬಲತೆಯನ್ನು ಘೋಷಿಸಿ ನಿನ್ನ ಶಕ್ತಿ ಮತ್ತು ವೈಭವವನ್ನು ಪ್ರತಿಪಾದಿಸುವಂತಾಗಲೆಂದು ನಿನ್ನಲ್ಲಿರುವುದೆಲ್ಲವನ್ನೂ ಪ್ರಾರ್ಥಿಸುವಂತೆ, ನಾನೀ ಸ್ಥಿತಿಯಲ್ಲಿರಲು ಇಚ್ಛಿಸುತ್ತೇನೆ. ನಂತರ ಅವನು ನಿಂತು ಕೈಗಳನ್ನು ಎರಡು ಬಾರಿ ಮೇಲೆತ್ತಿಯಾಚಿಸುತ್ತಾ ಹೀಗೆ ಹೇಳಲಿ:

ನೀನಲ್ಲದೆ ಬೇರೆ ದೇವರಿಲ್ಲ, ಸರ್ವಶಕ್ತನೂ, ಸರ್ವ ಉದಾರಿಯೂ ಆದ, ಆದಿಯಲ್ಲೂ ಮತ್ತು ಅಂತ್ಯದಲ್ಲೂ, ವಿಧೇಯಕನಾಗಿರುವ ನೀನಲ್ಲದೆ ಬೇರೆ ದೇವರಿಲ್ಲ. ಓ ದೇವರೇ ನನ್ನ ದೇವರೇ! ನಿನ್ನ ಕ್ಷಮೆಯು ನನಗೆ ಧೈರ್ಯವನ್ನು ತಂದು ಕೊಟ್ಟಿದೆ ಮತ್ತು ನಿನ್ನ ಕರುಣೆಯು ನನಗೆ ಶಕ್ತಿಯನ್ನು ಕೊಟ್ಟಿದೆ ಮತ್ತು ನಿನ್ನ ಕರೆಯು ನನ್ನನ್ನು ಎಚ್ಚರಿಸಿದೆ ಮತ್ತು ನಿನ್ನ ಅನುಗ್ರಹವು ನನ್ನನ್ನು ಮೇಲೆತ್ತಿ ನಿನ್ನೆಡೆಗೆ ಕರೆತಂದಿದೆ. ಇಲ್ಲವಾದರೆ ನಿನ್ನ ಸಾಮೀಪ್ಯದ ನಗರದ ದ್ವಾರದಲ್ಲಿ ನಿಲ್ಲಲು ಅಥವಾ ನಿನ್ನ ಇಚ್ಚೆಯ ಸ್ವರ್ಗದಿಂದ ಪ್ರಕಾಶಿಸುತ್ತಿರುವ ಬೆಳಕಿನೆಡೆಗೆ ನನ್ನ ಮುಖವನ್ನು ತಿರುಗಿಸುವ ಧೈರ್ಯ ಮಾಡಲು ನಾನ್ಯಾರು? ಓ ನನ್ನ ಪ್ರಭುವೇ, ಈ ಅನಿಷ್ಟ ಜೀವಿಯು ನಿನ್ನ ಅನುಗ್ರಹದ ಬಾಗಿಲನ್ನು ತಟ್ಟುತ್ತಿರುವುದನ್ನೂ ಮತ್ತು ಈ ಅಸ್ಥಿರ ಆತ್ಮವು ನಿನ್ನ ಅನುಗ್ರಹದ ಕೈಗಳಿಂದ ಅವಿನಾಶಿ ಜೀವನದಿಯನ್ನು ಹುಡುಕುತ್ತಿರುವುದನ್ನೂ ನೀನು ನೋಡುತ್ತಿರುವೆ. ಎಲ್ಲಾ ಕಾಲದಲ್ಲೂ ನಿನ್ನದೆ ಅಧಿಪತ್ಯ. ನೀನೇ ಎಲ್ಲಾ ನಾಮಾಂಕಿತಗಳ ಪ್ರಭುವಾಗಿರುವೆ; ಮತ್ತು ಓ ಸ್ವರ್ಗಗಳ ಸೃಷ್ಟಿಕರ್ತನೇ, ನಿನ್ನ ಇಚ್ಛೆಗೆ ನನ್ನದೆಲ್ಲವೂ ಒಪ್ಪಿಸಲ್ಪಟ್ಟಿದೆ ಹಾಗೂ ಮನಸಾರೆ ಸಮರ್ಪಿತವಾಗಿದೆ. ಅವನು ತನ್ನ ಕೈಗಳನ್ನು ಮೂರು ಬಾರಿ ಮೇಲೆತ್ತಿ ಹೀಗೆ ಹೇಳಲಿ: ಪ್ರತಿಯೊಂದು ಹಿರಿಮೆಗಿಂತಲೂ ದೇವರು ಮಹಾಮಹಿಮನಾಗಿರುವನು!

ನಂತರ ಅವನು ಮೊಣಕಾಲೂರಲಿ ಮತ್ತು ಹಣೆಯನ್ನು ನೆಲಕ್ಕೆ ಬಗ್ಗಿಸಿ ಹೀಗೆ ಹೇಳಲಿ: ನಿನ್ನ ಸಾಮೀಪ್ಯದ ಸ್ವರ್ಗವನ್ನೇರಲಿಕ್ಕಾಗಲೀ ಅಥವಾ ನಿನ್ನ ಭಕ್ತರ ಹೃದಯ ಪಕ್ಷಿಗಳು ನಿನ್ನ ಮಹಾದ್ವಾರದ ಬಾಗಿಲ ಬಳಿ ಬರಲಿಕ್ಕಾಗಲೀ, ನಿನ್ನ ಸಾಮೀಪ್ಯದಲ್ಲಿರುವವರ ಪ್ರಶಂಸೆಗೂ ಮೀರಿದವನು ನೀನು. ನೀನು ಎಲ್ಲಾ ಗುಣಗಳನ್ನೂ ಮೀರಿದ ಪರಮ ಪಾವನನು, ಎಂದು ನಾನು ಸಾಕ್ಷಿ ನುಡಿಯುತ್ತೇನೆ. ಮಹೋನ್ನತನೂ, ಸರ್ವ ಮಹಾಮಹಿಮನೂ ಆದ ನೀನಲ್ಲದೆ ಬೇರೆ ದೇವರಿಲ್ಲ.

ನಂತರ ಅವನು ಕುಳಿತುಕೊಂಡು ಹೀಗೆ ಹೇಳಲಿ: ಯಾವುದನ್ನು ಸಮಸ್ತ ಸೃಷ್ಟಿಗಳೂ, ಮೇಲಿನ ದೈವಗುಣಗಳು, ಸರ್ವೋಚ್ಛ ಸ್ವರ್ಗದ ನಿವಾಸಿಗಳು, ಎಲ್ಲದಕ್ಕಿಂತಲೂ ಮೇಲಾಗಿ ಮಹಿಮಾವಂತ ದಿಗಂತದಿಂದ ಸ್ವಯಂ ವೈಭವದ ಜಿಹ್ವೆಯೂ ನೀನೇ ದೇವರು ಮತ್ತು ನೀನಲ್ಲದೆ ಬೇರೆ ದೇವರಿಲ್ಲ ಹಾಗೂ ಪ್ರಕಟಗೊಂಡಾತನು ಒಂದು ಗುಪ್ತ ರಹಸ್ಯವೆಂದೂ, ಅತ್ಯಮೂಲ್ಯವಾದ ಲಾಂಛನವೆಂದೂ, ಯಾರ ಮೂಲಕ ಭ ಹಾಗೂ ವ (ಭವ) ಅಕ್ಷರಗಳು ಒಂದುಗೂಡಿ ಹೆಣೆದುಕೊಂಡಿರುವುದನ್ನೂ ಪ್ರಮಾಣಿಸಿದ್ದವೋ ಅದಕ್ಕೆ ನಾನು ಸಾಕ್ಷಿ ನುಡಿಯುತ್ತಿದ್ದೇನೆ. ಯಾರ ಹೆಸರನ್ನು ಸರ್ವೋಚ್ಛ ಲೇಖನಿಯು ಉಚ್ಚರಿಸಿತೋ ಹಾಗೂ ಮೇಲಣ ಸಿಂಹಾಸನ ಹಾಗೂ ಭೂಮಿಯ ಪ್ರಭುವಾಗಿರುವ ದೇವರ ಗ್ರಂಥಗಳಲ್ಲಿ ಉಲ್ಲೇಖಿತವಾಯಿತೋ ಅದು ಆತನೆಂದು ನಾನು ಸಾಕ್ಷಿ ನುಡಿಯುತ್ತಿದ್ದೇನೆ.

ನಂತರ ಅವನು ನೆಟ್ಟಗೆ ನಿಂತು ಹೀಗೆ ಹೇಳಲಿ:

ಓ ಸರ್ವಾಸ್ತಿತ್ವಗಳ ಪ್ರಭುವೇ, ಸದೃಶ್ಯ ಮತ್ತು ಅದೃಶ್ಯ ವಸ್ತುಗಳ ಒಡೆಯನೇ! ನೀನು ನನ್ನ ಕಣ್ಣೀರನ್ನು ಮತ್ತು ನನ್ನ ನಿಟ್ಟುಸಿರನ್ನು ನೋಡುತ್ತಿರುವೆ ಮತ್ತು ನನ್ನ ನರಳಾಟವನ್ನೂ ಮತ್ತು ಗೋಳಾಟವನ್ನೂ ಹಾಗೂ ನನ್ನ ಹೃದಯದ ಶೋಕವನ್ನೂ ಆಲಿಸುತ್ತಿರುವೆ. ನಿನ್ನ ಪರಾಕ್ರಮದ ಸಾಕ್ಷಿಯಾಗಿ! ನನ್ನ ಅಪರಾಧಗಳು ನನ್ನನ್ನು ನಿನ್ನ ಸಮೀಪ ಬಾರದಂತೆ ತಡೆಗಟ್ಟಿವೆ; ಮತ್ತು ನನ್ನ ಪಾಪಗಳು ನನ್ನನ್ನು ನಿನ್ನ ಪವಿತ್ರತೆಯ ಆಸ್ಥಾನದಿಂದ ಬಹುದೂರವಿಟ್ಟಿವೆ; ಓ ನನ್ನ ಪ್ರಭುವೇ, ನಿನ್ನ ಪ್ರೀತಿಯು ನನ್ನನ್ನು ಸಿರಿವಂತನನ್ನಾಗಿಸಿದೆ, ಮತ್ತು ನಿನ್ನ ಅಗಲಿಕೆಯು ನನ್ನನ್ನು ನಾಶಪಡಿಸಿದೆ. ಹಾಗೂ ನಿನ್ನಿಂದ ದೂರವಿರುವಿಕೆಯು ನನ್ನನ್ನು ಶೋಷಿಸಿದೆ. ನಾನಿಲ್ಲಿರುವೆ, ನಾನಿಲ್ಲಿರುವೆ, ಎಂದು ನಿನ್ನ ಆರಿಸಲ್ಪಟ್ಟವರು ಈ ಅಗಾಧತೆಯಲ್ಲಿ ನುಡಿದರೋ ಆ ನುಡಿಗಳಿಂದ ಮತ್ತು ನಿನ್ನ ಸಾಕ್ಷಾತ್ಕಾರದ ಉಸಿರಿನಿಂದ ಹಾಗೂ ನಿನ್ನ ಅವತಾರದ ಮುಂಜಾನೆಯ ತಂಗಾಳಿಯಿಂದ ನಾನು ನಿನ್ನ ಸೌಂದರ್ಯವನ್ನು ನೋಡುವಂತೆಯೂ ಮತ್ತು ನಿನ್ನ ಗ್ರಂಥದಲ್ಲಿರುವುದೆಲ್ಲವನ್ನೂ ಪರಿಪಾಲಿಸುವಂತೆಯೂ ಆಜ್ಞಾಪಿಸು ಎಂದು ನಾನು ನಿನ್ನಲ್ಲಿ ನಿನ್ನ ಹೆಜ್ಜೆಗಳೊಂದಿಗೆ ಈ ನಿಸ್ಸಾರತೆಯಲ್ಲಿ ಪ್ರಾರ್ಥಿಸುತ್ತಿದ್ದೇನೆ.

ಅವನು ಬಳಿಕೆ ಮೂರು ಬಾರಿ ‘ಮಹೋನ್ನತ ನಾಮ’ (ಅಲ್ಹಾ-ಓ-ಆಭಾ)ವನ್ನು ಉಚ್ಚರಿಸಲಿ ಮತ್ತು ತನ್ನ ಕೈಯನ್ನು ಮೊಣಕಾಲ ಮೇಲಿಟ್ಟು ಬಗ್ಗಿ ಹೀಗೆ ಹೇಳಲಿ: ಓ ನನ್ನ ದೇವರೇ, ನಿನ್ನನ್ನು ಸ್ಮರಿಸುವಂತೆ ಮತ್ತು ಸ್ತುತಿಸುವಂತೆ ನೀನು ನನಗೆ ಸಹಾಯ ನೀಡಿದ್ದಕ್ಕಾಗಿ ಮತ್ತು ನಿನ್ನ ಚಿಹ್ನೆಗಳ ದಿನ ಚಿಲುಮೆಯನ್ನು ನಾನು ತಿಳಿಯುವಂತೆ ಮಾಡಿದ್ದಕ್ಕಾಗಿ ಮತ್ತು ನಾನು ನಿನ್ನ ಪ್ರಭುತ್ವಕ್ಕೇ ಶರಣಾಗುವಂತೆ ಮಾಡಿದ್ದಕ್ಕಾಗಿ ಮತ್ತು ನಿನ್ನ ದೈವತ್ವದ ಮುಂದೆ ವಿನಮ್ರನಾಗಿ ಮಾಡಿದ್ದಕ್ಕಾಗಿ ಮತ್ತು ನಿನ್ನ ವೈಭವದ ಜಿಹ್ವೆಯ ನುಡಿಗಳನ್ನು ಸ್ವೀಕರಿಸುವಂತೆ ಮಾಡಿದ್ದಕ್ಕಾಗಿ ನಿನಗೆ ಪ್ರಶಂಸೆಯಾಗಲಿ.

ನಂತರ ಅವನು ಎದ್ದು ಹೀಗೆ ಹೇಳಲಿ:

ಓ ದೇವರೇ, ನನ್ನ ದೇವರೇ! ನನ್ನ ಬೆನ್ನು ನನ್ನ ಪಾಪದ ಹೊರೆಯಿಂದ ಬಾಗಿಹುದು ಮತ್ತು ನಿನ್ನ ನಿರ್ಲಕ್ಷತೆಯು ನನ್ನನ್ನು ನಾಶ ಮಾಡಿಹುದು. ಯಾವಾಗ ನಾನು ನನ್ನ ಕೆಟ್ಟ ಕಾರ್ಯಗಳನ್ನು ಮತ್ತು ನಿನ್ನ ಔದಾರ್ಯವನ್ನು ವಿಮರ್ಶಿಸುತ್ತೇನೋ ಆಗ ನನ್ನ ಹೃದಯವು ನನ್ನಲ್ಲೇ ಕರಗಿ ಹೋಗುವುದು ಮತ್ತು ನನ್ನ ರಕ್ತವು ನನ್ನ ನಾಡಿಗಳಲ್ಲಿ ಕುದಿಯುವುದು. ಓ ಪ್ರಪಂಚಗಳ ಆಕಾಂಕ್ಷೆಯೇ! ನಿನ್ನ ಸೌಂದರ್ಯದಾಣೆ! ನನ್ನ ಮುಖವನ್ನು ನಿನ್ನೆಡೆಗೆ ಎತ್ತಲು ನಾನು ನಾಚಿಕೆಯಿಂದ ಬಣ್ಣಗುಂದಿರುವೆ ಮತ್ತು ನನ್ನ ಹೆಬ್ಬಯಕೆಯ ಕೈಗಳು ನಿನ್ನ ಅನುಗ್ರಹದ ಸ್ವರ್ಗದೆಡೆ ಚಾಚಲು ಲಜ್ಜಿತವಾಗಿವೆ. ಓ ನನ್ನ ದೇವರೇ, ನಿನ್ನನ್ನು ಸ್ಮರಿಸಲು ಹಾಗೂ ನಿನ್ನ ಗುಣಗಾನ ಮಾಡಲು ನನ್ನ ಕಣ್ಣೀರು ಹೇಗೆ ನನ್ನನ್ನು ತಡೆಯುತ್ತಿದೆ ಎಂದು ನೀನು ನೋಡುತ್ತಿರುವೆ, ಓ ಇಹಲೋಕ ಮತ್ತು ಪರಲೋಕದ ಸಿಂಹಾಸನಾಧಿಕಾರಿಯೇ! ನಿನ್ನ ಸಾಮ್ರಾಜ್ಯದ ಚಿಹ್ನೆಗಳಿಂದ ಮತ್ತು ನಿನ್ನ ಪ್ರಭುತ್ವದ ರಹಸ್ಯಗಳ ಮೂಲಕ ನಿನ್ನ ಔದಾರ್ಯದಂತೆ ನಿನ್ನ ಪ್ರೀತಿಪಾತ್ರರನ್ನು ನಡೆಸಿಕೋ ಎಂದು ನಾನು ನಿನ್ನಲ್ಲಿ ಬೇಡುವೆನು. ಓ ಸರ್ವಾಸ್ತಿತ್ವದ ಪ್ರಭುವೇ, ಮತ್ತು ನಿನ್ನ ಅನುಗ್ರಹಕ್ಕೆ ಪಾತ್ರನು, ಓ ಗೋಚರ ಮತ್ತು ಅಗೋಚರ ಸಾಮ್ರಾಟನೇ! ನಂತರ ಅವನು ‘ಮಹೋನ್ನತ ನಾಮ’ (ಅಲ್ಹಾ-ಓ –ಆಭಾ)ವನ್ನು ಮೂರು ಸಲ ಉಚ್ಚರಿಸಲಿ ಮತ್ತು ತನ್ನ ಹಣೆಯನ್ನು ನೆಲಕ್ಕೆ ಮುಟ್ಟಿಸಿ ಹೀಗೆ ಹೇಳಲಿ:

ಓ ನಮ್ಮ ದೇವರೇ, ನೀನು ನಮ್ಮನ್ನು ನಿನ್ನ ಸಾಮೀಪ್ಯಕ್ಕೆ ಸೆಳೆಯುವಂತಹದ್ದನ್ನು ಕರುಣಿಸಿದ್ದಕ್ಕಾಗಿ ಮತ್ತು ನಿನ್ನಿಂದ ಕಳುಹಿಸಲ್ಪಟ್ಟ ನಿನ್ನ ಪುಸ್ತಕಗಳು ಮತ್ತು ನಿನ್ನ ಗ್ರಂಥಗಳಲ್ಲಿರುವ ಪ್ರತಿಯೊಂದು ಒಳ್ಳೆಯ ವಸ್ತುವನ್ನೂ ನೀನು ಪೂರೈಸಿರುವುದಕ್ಕಾಗಿ ನಿನಗೆ ಪ್ರಶಂಸೆಯಾಗಲಿ. ಓ ನನ್ನ ಪ್ರಭುವೇ, ಅಪ್ರಯೋಜಕ ಕಲ್ಪನೆಗಳಿಂದ ಮತ್ತು ವ್ಯರ್ಥ ಅಲೋಚನೆಗಳಿಂದ ನಮ್ಮನ್ನು ರಕ್ಷಿಸೆಂದು ನಾವು ನಿನ್ನಲ್ಲಿ ಬೇಡಿಕೊಳ್ಳುವೆವು. ನಿಜವಾಗಿಯೂ, ನೀನು ಪರಾಕ್ರಮಿ ಮತ್ತು ಸರ್ವಜ್ಞ.

ನಂತರ ಅವನು ತನ್ನ ತಲೆಯನ್ನು ಎತ್ತಲಿ ಮತ್ತು ಕುಳಿತುಕೊಂಡು ಹೀಗೆ ಹೇಳಲಿ

ನಿನ್ನಿಂದ ಆರಿಸಲ್ಪಟ್ಟವರು ಸಾಕ್ಷಿ ನುಡಿದಿದ್ದಕ್ಕೂ, ಮತ್ತು ಒಪ್ಪಿಕೊಂಡಿರುವುದಕ್ಕೂ, ಸರ್ವೋಚ್ಚ ಸ್ವರ್ಗದ ನಿವಾಸಿಗಳು ಮತ್ತು ನಿನ್ನ ಮಹಾಸಿಂಹಾಸನದ ಪ್ರದಕ್ಷಿಣೆ ಮಾಡಿದವರು ಒಪ್ಪಿಕೊಂಡಿದ್ದಕ್ಕೂ ನಾನು ಸಾಕ್ಷಿ ನುದಿಯುತ್ತೇನೆ. ಭೂಮಿ ಮತ್ತು ಸ್ವರ್ಗದಲ್ಲಿರುವ ಸಾಮ್ರಾಜ್ಯಗಳೆಲ್ಲವೂ ನಿನ್ನವೇ, ಓ ಪ್ರಪಂಚಗಳ ಪ್ರಭುವೇ!

#9509
- Bahá'u'lláh

 

General

ಅಗ್ರಗಾಮಿಗಳಿಗಾಗಿ

ಓ ದಯಾಮಯನಾದ ಪ್ರಭುವೇ, ನನ್ನನ್ನು ಚೆನ್ನಾಗಿ ತಿಳಿ. ನಾನು ದೀನ ಹಾಗೂ ಅಶಕ್ತ. ಅಸಾಮಥ್ರ್ಯನಾಗಿದ್ದರೂ, ಮಾನವ ಕೋಟಿಯಲ್ಲಿ ನಿನ್ನ ಉಪದೇಶವನ್ನು ಪ್ರಚಾರ ಮಾಡಲು ಸಂಕಲ್ಪಿಸಿರುವೆನು. ಇದಕ್ಕೆ ನಿನ್ನ ಪವಿತ್ರವಾದ ಅನುಗ್ರಹವಿರಲಿ. ನಿನ್ನ ಉನ್ನತ ಸಾಮ್ರಾಜ್ಯದ ಸೇನೆಯ ಮೂಲಕ ನಾನು ವಿಜಯಯಾಗುವಂತೆ ಮಾಡು. ನಿನ್ನ ಒಪ್ಪಿಗೆ ನನ್ನನ್ನು ಆವರಿಸಲಿ. ನಿನ್ನ ಆಶಯದಿಂದ ಪತಂಗವು ಹದ್ದಾಗುವುದು. ಹನಿ ನದಿಯಾಗುವುದು, ಸಮುದ್ರವಾಗುವುದು, ಕಿಡಿಗಳು ಸೂರ್ಯ ಹಾಗೂ ಚಂದ್ರಗಳಾಗುವುವು.

ಓ ದೇವರೇ, ನನಗೆ ನಿನ್ನ ಅಸಾಧ್ಯವಾದ ಶಕ್ತಿಯನ್ನು ಕರುಣಿಸು. ಸೂಕ್ಷ್ಮ ಬುದ್ಧಿಯ ಬಲಶಾಲಿಯನ್ನಾಗಿ ಮಾಡು. ಇದರಿಂದ ನಿನ್ನ ಮಹಿಮೆಯನ್ನು ಕುರಿತು ನನ್ನ ನಾಲಿಗೆ ಪಾಡುವಂತಾಗಲಿ. ನಿನ್ನ ಜೀವಿತಗಳಲ್ಲಿ ಘನತೆಯನ್ನು ಕೊಂಡಾಡುವಂತಾಗಲಿ. ನಿನ್ನ ಪ್ರೀತಿ ಹಾಗೂ ಜ್ಞಾನದ ದ್ರಾಕ್ಷಾರಸವು ನನ್ನ ಅಂತರಂಗದ ಮೇಲೆ ಉಕ್ಕಿ ಹರಿಯಲಿ. ನೀನು ಇಷ್ಟಪಟ್ಟಿದ್ದು ಯತಾರ್ಥವಾಗುವಂತೆ ಮಾಡುವ ಸಾಮಥ್ರ್ಯಶಾಲಿ. ಸಮಸ್ತ ವಸ್ತುಗಳ ಮೇಲೂ ನೀನು ಅತ್ಯಂತ ಪ್ರಭಾವಶಾಲಿ.

#9496
- `Abdu'l-Bahá

 

ಅಧ್ಯಯನ ವೃತ್ತದಲ್ಲಿ

ಓ ದೇವರೇ, ನೀನು ನಿನ್ನ ಭವ್ಯತೆಯನ್ನು ಮಾನವರ ತೇಜೋಮಯ ನೈಜತೆಗಳ ಮೇಲೆ, ಜ್ಞಾನ ಮತ್ತು ಮಾರ್ಗದರ್ಶನದ ಉಜ್ವಲ ಬೆಳಕನ್ನು ಅವರ ಮೇಲೆ ಪ್ರಕಾಶಿಸುವುದರೊಂದಿಗೆ ಚೆಲ್ಲಿರುವೆ ಮತ್ತು ಈ ಸ್ವರ್ಗೀಯ ಅನುಗ್ರಹಕ್ಕಾಗಿ ಸೃಷ್ಟಿಸಿದವುಗಳಲ್ಲೆಲ್ಲಾ ಅವರನ್ನೂ ಆಯ್ದುಕೊಂಡಿರುವೆ ಮತ್ತು ಅವರನ್ನು ಕತ್ತಲೆಯಿಂದ ಹೊರತೆಗೆದು ಈ ಗೋಚರವಾದ ಜಗತ್ತಿಗೆ ಬರುವಂತೆ ಮಾಡಿ ಅವರು ಎಲ್ಲವನ್ನೂ ಸುತ್ತುವರಿಯುವಂತೆ ಮಾಡಿರುವೆ. ಅವರ ಅಂತಃಸ್ಸಾರವನ್ನು ತಿಳಿಯುವಂತೆ ಹಾಗೂ ಅವರ ರಹಸ್ಯಗಳು ಬಹಿರಂಗಗೊಳಿಸುವಂತೆ ಮಾಡಿರುವೆ! ನಿಜವಾಗಿಯೂ, ಅವನಿಚ್ಚಿಸುವ ಯಾರ ಮೇಲಾದರೂ ಅವನು ಆತನ ವಿಶೇಷವಾದ ಕೃಪೆಯನ್ನು ತೋರುತ್ತಾನೆ.

ಓ ಪ್ರಭುವೇ, ನಿನ್ನ ಪ್ರಿಯತಮರು ಜ್ಞಾನ, ವಿಚ್ಞಾನಗಳು ಹಾಗೂ ಕಲೆಗಳನ್ನು ಗಳಿಸುವಂತೆ ಹಾಗೂ ಸೃಷ್ಟಿಸಿದ ಎಲ್ಲಾ ಜೀವಿಗಳ ಅಂತರಿಕ ನೈಜತೆಯ ಭಂಡಾರದಲ್ಲಿ ಹುದುಗಿರುವ ರಹಸ್ಯಗಳನ್ನು ಪ್ರಕಟಗೊಳಿಸುವಂತೆ ನೀನು ಸಹಾಯ ಮಾಡು. ಹೃದಯದಲ್ಲಿ ಬರೆದಿರುವ ಮತ್ತು ಅಡಗಿರುವ ಸತ್ಯಗಳನ್ನು ಅವರು ಆಲಿಸುವಂತೆ ಮಾಡು. ಅವರು ಜೀವಿಗಳಲ್ಲೆಲ್ಲಾ ಮಾರ್ಗದರ್ಶದ ಚಿಹ್ಹೆಗಳಾಗಿರುವಂತೆಯೂ ಮತ್ತು ಮೊದಲ ಜೀವನದಲ್ಲಿ ಅವರ ಬೆಳಕನ್ನು ಚೆಲ್ಲುವಂತೆ ಮಾಡುವ ಮನಸ್ಸಿನ ತೀಕ್ಷ್ಣ ಕಿರಣಗಳಂತೆಯೂ ಮಾಡು. ಅವರನ್ನು ನಿನ್ನೆಡೆಯ ಮುಖ್ಯಸ್ಥರನ್ನಾಗಿಯೂ, ನಿನ್ನ ಪಥದಲ್ಲಿನ ಮಾರ್ಗದರ್ಶಕರನ್ನಾಗಿಯೂ, ಮಾನವರನ್ನು ನಿನ್ನ ಸಾಮ್ರಾಜ್ಯದೆಡೆ ಪ್ರೇರೇಪಿಸುವ ಹರಿಕಾರರನ್ನಾಗಿಯೂ ಮಾಡು. ನಿಜವಾಗಿಯೂ ನೀನು ಪ್ರಬಲನೂ, ರಕ್ಷಕನೂ, ಸಮರ್ಥನೂ, ಪ್ರತಿಪಾದಕನೂ, ಬಲಾಢ್ಯನೂ, ಸರ್ವಾಧಿಕ ಉದಾರಿಯೂ ಆಗಿರುವೆ.

#9507
- `Abdu'l-Bahá

 

ಅವನೇ ದೇವರು

ಓ ಪ್ರಭು ನನ್ನ ದೇವರೇ! ದುರ್ಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನ್ನೆಡೆಗೆ ತಿರುಗುವ ಅಸಹಾಯಕರ ಉದ್ಧಾರಕನೂ ನೀನೇ.

ಪರಮ ದೀನನಾಗಿ, ನಿನ್ನ ಸೌಂದರ್ಯದ ಸಾಮ್ರಾಜ್ಯದತ್ತ ನನ್ನ ನಮ್ರ ಕೈಗಳನ್ನು ಚಾಚಿ ನನ್ನ ಅಂತರ್ ನಾಲಿಗೆಯಿಂದ ನಿನ್ನಲ್ಲಿ ಅತ್ಯುತ್ಸಾಹದಿಂದ ಈ ರೀತಿ ಬಿನ್ನವಿಸುತ್ತಿದ್ದೇನೆ. ಓ ದೇವರೇ, ನನ್ನ ದೇವರೇ! ನಿನ್ನನ್ನು ಆರಾಧಿಸುವಂತೆ ನನಗೆ ಸಹಾಯನೀಡು. ನಿನ್ನ ಸೇವೆಗೈಯ್ಯುವಂತೆ ನನ್ನ ಟೊಂಕವನ್ನು ಭದ್ರಪಡಿಸು; ನಿನಗಾಗಿ ನನ್ನ ಸೇವೆಯಲ್ಲಿ ನಿನ್ನ ಅನುಗ್ರಹದ ನೆರವು ನೀಡು; ನಿನಗೆ ವಿಧೇಯನಾಗಿರುವಲ್ಲಿ ನಾನು ದೃಢನಾಗಿರುವಂತೆ ನನಗೆ ಕಷ್ಟಗಳನ್ನೊದಗಿಸು; ನನ್ನ ಮೇಲೆ ನಿನ್ನ ಉದಾತ್ತ ಔದಾರ್ಯವನ್ನು ಉಕ್ಕಿ ಹರಿಯುವಂತೆ ಎಸಗು. ನಿನ್ನ ಪ್ರೇಮಪೂರಿತ ದಯಾದೃಷ್ಟಿಯನ್ನು ನನ್ನತ್ತ ಬೀರು ಹಾಗೂ ನಿನ್ನ ಕೃಪಾಸಾಗರದಲ್ಲಿ ನನ್ನನ್ನು ಮುಳುಗಿಸು. ನಿನ್ನ ಧರ್ಮದಲ್ಲಿ ನನ್ನ ಸ್ವಾಮಿನಿಷ್ಠೆಯ ಬಗ್ಗೆ ನಾನು ದೃಢನಾಗಿರುವಂತೆ ಅನುಗ್ರಹಿಸು. ನಿಶ್ಚಯತೆ ಹಾಗೂ ಭರವಸೆಯ ಪೂರ್ಣ ಪ್ರಮಾಣವನ್ನು ನನ್ನ ಮೇಲೆ ಕರುಣಿಸು, ಆದರಿಂಡ ನಾನು ಈ ಪ್ರಪಂಚದಿಂದ ಸಂಪೂರ್ಣವಾಗಿ ಮುಕ್ತನಾಗಬಹುದು, ನಿನ್ನ ಮುಖಾರವಿಂದದೆಡೆ ನನ್ನ ಪೂರ್ಣ ಭಕ್ತಿಯ ಮುಖವನ್ನು ತಿರುಗಿಸಬಹುದು, ಸಾಕ್ಷ್ಯ ಮತ್ತು ಪುರಾವೆಗಳ ನಿರ್ಬಂಧಿತ ಶಕ್ತಿಯಿಂದ ಬಲಯುತಗೊಳ್ಳಬಹುದು, ಹಾಗೂ ಭವ್ಯತೆ ಮತ್ತು ಬಲದಿಂದೊಡಗೂಡಿ ಭೂಲೋಕ ಮತ್ತು ಸ್ವರ್ಗದ ಪ್ರತಿಯೊಂದು ಪ್ರದೇಶವನ್ನು ಮೀರಿ ಹೋಗಬಹುದು. ಸತ್ಯವಾಗಿಯೂ ನೀನು ಕೃಪಾಳುವೂ, ಸರ್ವ ವೈಭವಶಾಲಿಯೂ, ದಯಾಳುವೂ, ಕರುಣಾಕರನೂ ಆಗಿರುವೆ.

ಓ ಪ್ರಭುವೇ! ಇವರು ಹುತಾತ್ಮರ ಜೊತೆಗಿದ್ದು ಬದುಕುಳಿದ, ಪವಿತ್ರ ಆತ್ಮಗಳ ಒಡನಾಡಿಗಳು. ಅವರು ಒಂದೊಂದು ಯಾತನೆಯನ್ನೂ ಸಹಿಸಿದ್ದರಲ್ಲದೆ ಘೋರ ಅನ್ಯಾಯವನ್ನು ಎದುರಿಸುವಲ್ಲಿ ಸಹನೆಯನ್ನು ಪ್ರದರ್ಶಿಸಿದ್ದರು. ಅವರು ಸಕಲ ಸೌಕರ್ಯ ಹಾಗೂ ಸಮೃದ್ಧಿಯನ್ನು ಪರಿತ್ಯಜಿಸಿರುವರು. ನಿನ್ನ ಪ್ರೀತಿಯ ಮಾರ್ಗದಲ್ಲಿ ದಾರುಣ ವೇದನೆ ಮತ್ತು ವಿಪತ್ತುಗಳಿಗೆ ಸ್ವಇಚ್ಛೆಯಿಂದ ಒಳಪಡಿಸಿರುವರು, ನಿನ್ನ ನೇರವಾದ ಪಥದಲ್ಲಿ ಅವರು ದೃಢವಾಗಿ ನಡೆಯುತ್ತಿರುವುದರಿಂದ ಅವರಿನ್ನೂ ಶತ್ರುಗಳ ಬಿಗಿ ಹಿಡಿತದಲ್ಲಿ ಬಂಧಿಯಾಗಿದ್ದು. ಸತತವಾದ ಭಯಂಕರ ಯಾತನೆಗೊಳಪಟ್ಟು ಹಿಂಸಿಸಲ್ಪಟ್ಟಿರುವರು. ಅವರಿಗೆ ನೆರವು ನೀಡುವವರ್ಯಾರು ಇಲ್ಲ. ಅವರ ಮಿತೃತ್ವ ಬಯಸುವವರ್ಯಾರೂ ಇಲ್ಲ. ತುಚ್ಛ ಮತ್ತು ಅಧರ್ಮಿಗಳಲ್ಲದೆ ಅವರೊಡನೆ ಬೆರೆಯಲು ಮತ್ತು ಸಮರಸದಿಂದಿರಲು ಯಾರೊಬ್ಬರೂ ಇಲ್ಲ.

ಓ ಪ್ರಭುವೇ! ಈ ಆತ್ಮಗಳು ಈ ಪ್ರಾಪಂಚಿಕ ಜೀವನದಲ್ಲಿ ಕಹಿಯಾದ ವ್ಯಥೆಯನ್ನು ಸವಿದಿರುವರು ಮತ್ತು ನಿನ್ನ ಸ್ವರ್ಗೀಯ ಸಾಮ್ರಾಜ್ಯವನ್ನು ಸೇರುವ ತವಕದಲ್ಲಿ, ನಿನ್ನ ಮುಖಾರವಿಂದದ ಕಂಗೊಳಿಸುವ ಸೌಂದರ್ಯದ ಪ್ರೀತಿಯ ಕುರುಹಾಗಿ, ಪೀಡಕರು ಅವರ ಮೇಲೆ ಹೇರಿದ ಭೀಭತ್ಸ ಅಪಮಾನವನ್ನು ಅವರು ಸಹಿಸಿರುವರು. ಓ ಪ್ರಭುವೇ! ಅವರ ಕಿವಿಗಳನ್ನು ದೈವೀ ನೆರವಿನ ಹಾಗೂ ಶೀಘ್ರ ವಿಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕ್ತಿಯಿಂದ ಅಧಿಕಾರ ಚಲಾಯಿಸುವವರ ಹಿಂಸೆಯಿಂದ ಅವರನ್ನು ಮುಕ್ತಗೊಳಿಸು. ಅಧರ್ಮಿಗಳ ಕೈಗಳನ್ನು ತಡೆಹಿಡಿ, ಈ ಆತ್ಮಗಳನ್ನು ಅನಾಗರಿಕ ಕ್ರೂರಿಗಳ ಉಗುರುಗಳು ಮತ್ತು ಹಲ್ಲುಗಳಿಂದ ಸೀಳುವಂತೆ ಮಾಡು. ಏಕೆಂದರೆ, ನಿನ್ನ ಮೇಲಿನ ಪ್ರೀತಿಯಿಂದ ಅವರು ಮರುಳಾಗಿರುವರು, ನಿನ್ನ ಪವಿತ್ರತೆಯ ರಹಸ್ಯಗಳನ್ನು ಒಪ್ಪಿಕೊಂಡಿರುವವರಾಗಿ, ನಿನ್ನ ದ್ವಾರದಲ್ಲಿ ವಿನೀತರಾಗಿ ನಿಂತಿರುವರು ಹಾಗೂ ನಿನ್ನ ಪರಮೋತ್ತಮ ಆವರಣವನ್ನು ಸೇರಿದವರಾಗಿರುವರು.

ಓ ಪ್ರಭುವೇ! ನವ ಚೈತನ್ಯದಿಂದ ಅವರನ್ನು ಉದಾರವಾಗಿ ಬಲಪಡಿಸು; ರಾತ್ರಿಯ ಮಬ್ಬು ಕತ್ತಲಿನಲ್ಲಿ ನಿನ್ನ ಅದ್ಭುತವಾದ ಪುರಾವೆಗಳನ್ನೂ ವೀಕ್ಷಿಸುವಂತೆ ಮಾಡಲು ಅವರ ಕಣ್ಣುಗಳನ್ನು ಪ್ರಜ್ವಲಿಸು; ಸನಾತನ ರಹಸ್ಯಗಳಿಂದ ತುಂಬಿದ ನಿನ್ನ ಸಾಮ್ರಾಜ್ಯದಲ್ಲಿ ಸಮೃದ್ಧವಾಗಿರುವ ಎಲ್ಲಾ ಒಳ್ಳೆಯದನ್ನು ಅವರಿಗಾಗಿ ಗೊತ್ತುಪಡಿಸು; ಎಲ್ಲಾ ಪ್ರದೇಶಗಳ ಮೇಲೂ ದೇದೀಪ್ಯಮಾನವಾಗಿ ಹೊಳೆಯುವ ನಕ್ಷತ್ರದಂತೆಯೂ, ಫಲಭರಿತ ಸಮೃದ್ಧ ವೃಕ್ಷಗಳಂತೆಯೂ ಹಾಗೂ ಮುಂಜಾವಿನ ತಂಗಾಳಿಯಲ್ಲಿ ಅಲುಗಾಡುವ ಕೊಂಬೆಗಳಂತೆಯೂ ಮಾಡು. ನಿಜವಾಗಿಯೂ, ನೀನು ಉದಾರಿಯೂ, ಪ್ರಬಲನೂ, ಸರ್ವಶಕ್ತನೂ, ಅನಿರ್ಬಂಧಿತನೂ, ಆಗಿರುವೆ. ಪ್ರೀತಿ ಹಾಗೂ ಸುಕೋಮಲ ಕರುಣೆಯ, ಸರ್ವ ವೈಭವಶಾಲಿ, ಸರ್ವದಾ ಕ್ಷಮಾಶೀಲ ದೇವರಿಲ್ಲದೆ ಅನ್ಯ ದೇವರಿಲ್ಲ.

#9476
- `Abdu'l-Bahá

 

ಓ ಭಗವಂತನೇ, ನನ್ನ ಭಗವಂತನೇ, ನಿನ್ನ ವಿಶ್ವಾಸಾರ್ಹರಾದ ಸೇವಕರನ್ನು ರಕ್ಷಿಸು. ಅವರನ್ನು ಸ್ವಾರ್ಥ ಮತ್ತು ಮೋಹದ ಕೆಡುಕಿನಿಂದ ಕಾಪಾಡು. ನಿನ್ನ ಪ್ರೇಮಮಯವಾದ ದೃಷ್ಟಿಯಿಂದ ಅವರನ್ನು ಮತ್ಸರ, ದ್ವೇಷ ಮತ್ತು ಅಸೂಯೆಗಳಿಂದ ರಕ್ಷಿಸು. ನಿನ್ನ ಉದ್ದಿಶ್ಯದ ಅಭೇದ್ಯವಾದ ಕೋಟೆಯೊಳಗಿಟ್ಟು ಆಶ್ರಯ ನೀಡು. ಸಂಶಯವೆಂಬ ಆಯುಧದಿಂದ ಕ್ಷೇಮವಾಗಿರಿಸು. ಅವರನ್ನು ನಿನ್ನ ದಿವ್ಯ ಸಾಕ್ಷಾತ್ಕಾರದ ಮೂರ್ತಿ ಸ್ವರೂಪರನ್ನಾಗಿ ಮಾಡು. ನಿನ್ನ ದೈವಿಕ ಏಕತೆಯ ದೈನಿಕ ಚಿಲುಮೆಯಿಂದ ಹೊರಹೊಮ್ಮುವ ದೇದೀಪ್ಯಮಾನವಾದ ಕಿರಣಗಳ ಮೂಲಕ ಅವರ ಮುಖಾರವಿಂದಗಳನ್ನು ಶೋಭಿಸುವಂತೆ ಮಾಡು. ನಿನ್ನ ಪವಿತ್ರ ಸಾಮ್ರಾಜ್ಯದಿಂದ ಪ್ರಸನ್ನತೆಗೊಳ್ಳುವ ಶ್ಲೋಕಗಳಿಂದ ಅವರಿಗೆ ಹೃದಯಾನಂದವನ್ನು ಉಂಟುಮಾಡು. ನಿನ್ನ ಸರ್ವಶಕ್ತಿಯಿಂದ ಅವರ ಟೊಂಕವನ್ನು ಭದ್ರಪಡಿಸು, ನೀನೇ ಸರ್ವ ಪ್ರದಾತ, ರಕ್ಷಕ, ಸರ್ವಶಕ್ತ, ಅಷ್ಟೇ ಅಲ್ಲ ದಯಾಳು.

#9477
- `Abdu'l-Bahá

 

ಅವನು ದಯಾಮಯಿ, ಅನುಪಮ ಉದಾರಿ, ಓ ನನ್ನ ದೈವವೇ, ನೀನು ನನ್ನನ್ನು ಗಮನಿಸಿರುವೆ. ತಿಳಿದಿರುವೆ, ನೀನೇ ನನ್ನ ಆಸರೆ ಮತ್ತು ನನ್ನ ಆಶ್ರಯದಾತ. ಯಾರನ್ನೂ ನಾನು ಮೊರೆ ಹೊಕ್ಕಿಲ್ಲ. ನಿನ್ನನ್ನಲ್ಲದೆ ಯಾರನ್ನೂ ನಾನು ಆಶ್ರಯಿಸೆ. ನಿನ್ನ ಪ್ರೀತಿಯ ದಾರಿಯನ್ನಲ್ಲದೆ ಇನ್ನಾವ ದಾರಿಯನ್ನು ತುಳಿದಿಲ್ಲ. ಮುಂದೆಯೂ ತುಳಿಯೆ. ನನ್ನ ಕಣ್ಣುಗಳು ನಿರಾಶೆಯ ಕಗ್ಗತ್ತಲಿನ ರಾತ್ರಿಯಲ್ಲಿ ನಿರೀಕ್ಷೆ ಹಾಗೂ ಆಶಾಭಾವನೆಯಿಂದ ನಿನ್ನ ಅಪಾರ ಉಪಕಾರದತ್ತ ಮುಂಜಾನೆಯಲ್ಲಿ ತಿರುಗುವುವು. ನಿನ್ನ ಸೌಂದರ್ಯ ಹಾಗೂ ಪರಿಪೂರ್ಣತೆಯ ಸೂರ್ಯೋದಯದ ಸಮಯದಲ್ಲಿ ನನ್ನ ಕುಗ್ಗಿದ ಆತ್ಮ ನವಚೇತನದಿಂದ, ಸ್ಫೂರ್ತಿಯಿಂದ ಬೆಳಗುವುದು. ಹನಿ ಮಾತ್ರವಾದರೂ ಸರಿ, ನಿನ್ನ ಕೃಪೆಯ ಸಹಾಯದಿಂಡ ಯಾವನೇ ಆಗಲಿ ಅವನು ಮಹಾಸಾಗರದಂತಾಗುವನು. ನಿನ್ನ ಪ್ರೀತಿಯ ನೆರವಿನಿಂದ ಅಣುವಿನ ಸಮಾನವಿದ್ದರೂ ಅವನು ಪ್ರಜ್ವಲಿಸುವ ತಾರೆಯಂತಾಗಿ ಪ್ರಕಾಶಿಸುವನು.

ಓ ಪವಿತ್ರಾತ್ಮನೇ, ನಿನ್ನ ಆಶ್ರಯದಲ್ಲಿ ರಕ್ಷಣೆ ನೀಡು. ಸರ್ವ ಉದಾರಿಯಾಗಿರುವ ನೀನು ಈ ದಾಸ, ಎಚ್ಚೆತ್ತ ಸೇವಕನನ್ನು ಉದ್ದರಿಸು. ನಿನ್ನ ವಿಚಾರದಲ್ಲಿ ದೃಢ ಹಾಗೂ ಸ್ಥೈರ್ಯದ ಪ್ರೀತಿಯಿಂದಿರಲು ಸಹಾಯ ಮಾಡು. ರೆಕ್ಕೆ ಮುರಿದ ಈ ಹಕ್ಕಿ ನಿನ್ನ ದೈವಿಕ ಗೂಡಿನಲ್ಲಿ, ಸ್ವರ್ಗ ಸದೃಶವಾದ ಗೂಡಿನಲ್ಲಿ ರಕ್ಷಣೆ ಪಡೆಯಲು ಅನುಗ್ರಹಿಸು.

#9478
- `Abdu'l-Bahá

 

ಆಧ್ಯಾತ್ಮಿಕ ಬೆಳವಣಿಗೆಗಾಗಿ

ನನ್ನಲ್ಲಿ ಒಂದು ಪವಿತ್ರ ಹೃದಯವನ್ನು ಸೃಷ್ಟಿಸು, ಓ ನನ್ನ ದೇವರೇ, ಹಾಗೂ ಪ್ರಶಾಂತವಾದ ಒಂದು ಅಂತಃಶ್ಚೇತನವನ್ನು ನವೀಕರಿಸು, ಓ ನನ್ನ ಭರವಸೆಯೇ! ಚೈತನ್ಯಶಕ್ತಿಯ ಮೂಲಕ ನಿನ್ನ ಧರ್ಮದಲ್ಲಿ ನನ್ನನ್ನು ದೃಢಪಡಿಸು, ಓ ನನ್ನ ಪರಮ ಪ್ರಿಯತಮನೇ! ಹಾಗೂ ನಿನ್ನ ವೈಭವದ ಬೆಳಕಿನಿಂದ ನಿನ್ನ ಪಥವನ್ನು ನನಗೆ ಪ್ರಕಟಿಸು, ಓ ನನ್ನ ಆಸೆಯ ಗುರಿಯೇ! ನಿನ್ನ ಸರ್ವಾತಿಶಯ ಶಕ್ತಿಯ ಮೂಲಕ ನಿನ್ನ ಪವಿತ್ರತೆಯ ಸ್ವರ್ಗಕ್ಕೆ ನನ್ನನ್ನು ಮೇಲೆತ್ತು. ಓ ನನ್ನ ಆಸ್ತಿತ್ವದ ಮೂಲನೇ ಹಾಗೂ ನಿನ್ನ ಚಿರಂತನತೆಯ ತಂಗಾಳಿಯಿಂದ ನನ್ನನ್ನು ಸಂತೋಷಪಡಿಸು. ಓ ನನ್ನ ದೇವರೇ! ನಿನ್ನ ಅಮರ ಶ್ರುತಿಗಳು ನನ್ನ ಮೇಲೆ ಪ್ರಶಾಂತತೆಯನ್ನುಂಟುಮಾಡಲಿ, ಓ ನನ್ನ ಒಡನಾಡಿಯೇ ಹಾಗೂ ನಿನ್ನ ಪುರಾತನ ದರ್ಶನದ ಸಿರಿಯಿಂದ ನಿನ್ನ ಹೊರತು ಮತ್ತೆಲ್ಲದರಿಂದ ನನ್ನನ್ನು ಮುಕ್ತಿಗೊಳಿಸು. ಓ ನನ್ನ ಒಡೆಯನೇ, ನಿನ್ನ ಶುದ್ಧವಾದ ಸಾರಸತ್ವದ ಪ್ರಕಟನೆಯ ಸುವಾರ್ತೆಗಳು ನನಗೆ ಆನಂದವನ್ನು ತಂದೀಯಲಿ. ವ್ಯಕ್ತರಲ್ಲಿ ಸರ್ವಾಧಿಕ ವ್ಯಕ್ತನೂ ಹಾಗೂ ಗುಪ್ತರಲ್ಲಿ ಅತ್ಯಂತ ಗುಪ್ತನೂ ನೀನಾಗಿರುವೆ. –

#9481
- Bahá'u'lláh

 

ನನ್ನ ದೇವರೇ, ನನ್ನ ಆರಾಧ್ಯನೇ, ನನ್ನ ದೊರೆಯೇ, ನನ್ನ ಆಕಾಂಕ್ಷೆಯೇ! ಯಾವ ನಾಲಿಗೆ ತನ್ನ ಕೃತಜ್ಞತೆಗಳನ್ನು ನಿನಗೆ ಅರ್ಪಿಸಬಲ್ಲದಾಗಿದೆ? ನಾನು ಅಲಕ್ಷ್ಯನಾಗಿದ್ದೆ ನೀನು ನನ್ನನ್ನು ಎಚ್ಚರಗೊಳಿಸಿದ್ದೀಯೇ ನಾನು ನಿನ್ನಿಂದ ವಿಮುಖನಾಗಿದ್ದೆ, ನಾನು ನಿನ್ನತ್ತ ತಿರುಗುವಂತೆ ನೀನು ನನಗೆ ಉದಾರವಾಗಿ ಸಹಕರಿಸಿದ್ದೀಯೇ. ನಾನೊಬ್ಬ ನಿರ್ಜೀವಿಯಂತಿದ್ದೆ ನೀನು ಜೀವಜಲದಿಂದ ನನ್ನಲ್ಲಿ ಜೀವ ತುಂಬಿದ್ದೀಯೇ. ನಾನು ಬಾಡಿ ಹೋಗಿದ್ದೆ, ಸರ್ವ ಕೃಪಾಳುವಿನ ಲೇಖನಿಯಿಂದ ಹರಿದು ಬಂದಿರುವ ನಿನ್ನ ವಾಣಿಯ ಸ್ವರ್ಗೀಯ ಝರಿಯಿಂದ ನೀನು ನನ್ನನ್ನು ಪುನರುಜ್ಜೀವಿತಗೊಳೀಸಿದ್ದೀಯೇ.

ಓ ದಿವ್ಯಾನುಗ್ರಹವೇ! ಸಕಲ ಸೃಷ್ಟಿಯೂ ನಿನ್ನ ಉದಾರತೆಯಿಂದ ಉತ್ಪನ್ನವಾಗಿರುವುದು! ನಿನ್ನ ಔದಾರ್ಯದ ಜಲದಿಂದ ಅದನ್ನು ವಂಚಿತವನ್ನಾಗಿಸಬೇಡ, ಅಷ್ಟು ಮಾತ್ರವಲ್ಲ, ನಿನ್ನ ಕರುಣಾ ಸಾಗರದಿಂದ ಅದನ್ನು ತಡೆಹಿಡಿಯಲೂ ಬೇಡ. ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ಸ್ಥಿತಿಗಳಲ್ಲೂ ನನಗೆ ಸಹಾಯ ಮಾಡುವಂತೆಯೂ ಹಾಗೂ ನಿನ್ನ ದೈವೀ ಉದಾರತೆಯ ಸ್ವರ್ಗದಿಂದ ನಿನ್ನ ಪುರಾತನ ಅನುಗ್ರಹವನ್ನು ಕೋರುವಂತೆ ನಾನು ನಿನ್ನಲ್ಲಿ ಮೊರೆಯಿಡುತ್ತೇನೆ. ನೀನು, ಸತ್ಯವಾಗಿಯೂ, ಔದಾರ್ಯದ ಪ್ರಭು ಹಾಗೂ ಚಿರಂತನ ಸಾಮ್ರಾಜ್ಯದ ಸಾರ್ವಭೌಮನಾಗಿರುವೆ.

#9482
- Bahá'u'lláh

 

ಓ ನನ್ನ ಪ್ರಭುವೇ! ನಿನ್ನ ಸೌಂದರ್ಯವನ್ನು ನನ್ನ ಆಹಾರವನ್ನಾಗಿಯೂ, ನಿನ್ನ ಸಾನ್ನಿಧ್ಯವನ್ನು ನನ್ನ ಪಾನೀಯವನ್ನಾಗಿಯೂ, ನಿನ್ನ ಗುಣಾಗಾನವನ್ನು ನನ್ನ ಕೃತಿಯನ್ನಾಗಿಯೂ, ನಿನ್ನ ಸ್ಮರಣೆಯನ್ನು ನನ್ನ ಸಂಗಾತಿಯನ್ನಾಗಿಯೂ, ನಿನ್ನ ಸಾಮ್ರಾಜ್ಯದ ಶಕ್ತಿಯನ್ನು ನನ್ನ ನೆರವನ್ನಾಗಿಯೂ, ನಿನ್ನ ವಾಸಸ್ಥಳವನ್ನು ನನ್ನ ಮನೆಯನ್ನಾಗಿಯೂ ಹಾಗೂ ನನ್ನ ವಾಸಸ್ಥಳವನ್ನು ನಿನ್ನಿಂದ ಮರೆಮಾಡಿಕೊಂಡಿರುವವರ ಮೇಲೆ ನೀನು ಹೇರಿರುವ ನಿರ್ಬಂಧಗಳಿಂದ ಶುದ್ಧೀಕರಿಸಿದ ಪೀಠವನ್ನಾಗಿಯೂ ಮಾಡು. ನೀನು ನಿಜವಾಗಿಯೂ ಸರ್ವಶಕ್ತ, ಮಹಿಮಾನ್ವಿತ, ಅತಿ ಪರಾಕ್ರಮಶಾಲಿಯಾಗಿರುವೆ.

#9488
- Bahá'u'lláh

 

ಹೇಳು: ಓ ದೇವರೇ, ನನ್ನ ದೇವರೇ, ನನ್ನ ಶಿರಸ್ಸನ್ನು ನ್ಯಾಯದ ಕಿರೀಟದಿಂದ ಅಲಂಕರಿಸು. ಸರ್ವ ಸಮತೆಯ ಭೂಷಣದಿಂದ ನನ್ನ ಹೃದಯ ದೇಗುಲವನ್ನು ಸಿಂಗರಿಸು. ಸತ್ಯವಾಗಿಯೂ, ನೀನೇ ಎಲ್ಲ ಕಾಣಿಕೆಗಳ ಮತ್ತು ಔದಾರ್ಯಗಳ ಒಡೆಯನಾಗಿದ್ದೀಯೇ.

ಓ ಪರಮಾತ್ಮ, ನವಚೇತನವನ್ನುಂಟುಮಾಡು ನನ್ನ ಆತ್ಮವನ್ನು ಸಂತಸಗೊಳಿಸು, ಹೃದಯವನ್ನು ಪರಿಶುದ್ಧವಾಗಿಸು. ನನ್ನ ಅಂತಃಶಕ್ತಿಯನ್ನು ಉಜ್ವಲಿಸು. ನನ್ನ ಸಮಸ್ತ ವಿಚಾರಗಳನ್ನು ನಿನ್ನ ಕೈಯಲ್ಲಿರಿಸಿರುವೆ. ನೀನೇ ನನ್ನ ಮಾರ್ಗದರ್ಶಕ, ಆಶ್ರಯದಾತ, ಇನ್ನೆಂದಿಗೂ ನಾನು ದುಃಖಿಸುವುದಿಲ್ಲ. ಸಂಕಟಪಡುವುದಿಲ್ಲ ನಾನೊಬ್ಬ ಸುಖಿ ಹಾಗೂ ಆನಂದಮಯ ಜೀವಿ. ಓ ದೇವರೇ, ಇನ್ನು ನನಗೆ ಕಳವಳದ ಭಾರವಿಲ್ಲ. ಅದಾವ ತೊಂದರೆಯೂ ಪೀಡಿಸದು ಜೀವಿತದ ಯಾವ ಅಹಿತ ವಿಚಾರವನ್ನೂ ಯೋಚಿಸದಿರುವೆ.

ಕರುಣಾಶಾಲಿಯೇ, ನಾನು ನನಗೆಷ್ಟು ಸಖನಾಗಿರುವೆನೋ, ಅದಕ್ಕಿಂತಲೂ ಅತಿಶಯವಾಗಿ ನೀನು ನನಗೆ ಸಖನಾಗಿರುವೆ ಪ್ರಭುವೇ, ನಾನು ನಿನಗೆ ಅನನ್ಯ ಶರಣಾಗಿಬಿಟ್ಟಿದ್ದೇನೆ.

#9483
- `Abdu'l-Bahá

 

ಓ ಪರಮಾತ್ಮ, ನಾವು ದುರ್ಬಲರು ನಮ್ಮನ್ನು ಶಕ್ತರನ್ನಾಗಿ ಮಾಡು. ಓ ದೇವರೇ, ನಾವು ಅಜ್ಞಾನಿಗಳು, ಜ್ಞಾನಿಗಳನ್ನಾಗಿ ಮಾಡು. ಓ ದೇವರೇ ನಾವು ಬಡವರು, ಸಿರಿವಂತರನ್ನಾಗಿ ಮಾಡು. ನಾವು ಸತ್ತವರು, ಮುಕ್ತಿಗೊಳಿಸು. ಓ ಪ್ರಭುವೇ, ನಾವು ಕುಗ್ಗಿಬಿಟ್ಟಿದ್ದೇವೆ. ನಿನ್ನ ಸಾಮ್ರಾಜ್ಯದಲ್ಲಿ ಶ್ರೇಷ್ಠರನ್ನಾಗಿ ಮಾಡು. ಪ್ರಭುವೇ, ನೀನು ನಮಗೆ ಸಹಾಯವೆಸಗಿದರೆ ಮಿನುಗು ನಕ್ಷತ್ರಗಳಂತಾದೇವು ಸಹಾಯವೆಸಗದಿದ್ದರೆ ಭೂಮಿಗಿಂತಲೂ ಕೀಳಾದೇವು. ಪರಮಾತ್ಮ, ನಮ್ಮನ್ನು ಶಕ್ತಗೊಳಿಸು, ಯಶಸ್ಸನ್ನು ಅನುಗ್ರಹಿಸು. ಅಹಂಕಾರವನ್ನು ಗೆಲ್ಲುವಂತೆ ಮಾಡು. ಆಶೆಯಿಂದ ಪಾರುಗಾಣಿಸು. ಇಹ ಪ್ರಪಂಚದ ಬಂಧನದಿಂಡ ಮುಕ್ತರನ್ನಾಗಿ ಮಾಡು. ದೇವರೇ, ನಿನನ್ನು ಸೇವಿಸಲು, ಪೂಜಿಸತೊಡಗಲು ನಿನ್ನ ಸಾಮ್ರಾಜ್ಯದಲ್ಲಿ ಶ್ರದ್ಧಾಸಕ್ತಿಯಿಂದ ಶ್ರಮಿಸಲು ಅನುಕೂಲಿಸುವಂತೆ ನಿನ್ನ ಪವಿತ್ರಾತ್ಮದ ಮೂಲಕ ಉದ್ಯುಕ್ತಗೊಳಿಸುವವನಾಗು ಪ್ರಭುವೇ, ನೀನು ಶಕ್ತಿಯ ಅಧಿದೇವತೆ, ಕ್ಷಮಾದಾತ, ಕರುಣಾಶಾಲಿ.

#9484
- `Abdu'l-Bahá

 

ನನ್ನ ಪರಮಾತ್ಮ, ಓ ನನ್ನ ಪರಮಾತ್ಮ, ನೀನೇ ನನ್ನ ಆಶಾದೀವಿಗೆ, ಪ್ರೇಮಿ, ನನ್ನ ಗುರಿ, ಇಚ್ಛಾಪೂರೈಕೆಯ ಮೂರ್ತಿ. ಅತಿ ನಮ್ರತೆಯಿಂದ, ಪೂರ್ಣತನ್ಮಯ ಭಾವದಿಂದ ಪ್ರಾರ್ಥಿಸುವುದಿಷ್ಟೆ - ನಿನ್ನ ಆಸರೆಯ ಜಗತ್ತಿನಲ್ಲಿ ನನ್ನನ್ನು ಪ್ರೇಮದ ಶಿಖರವನ್ನಾಗಿ ನಿರ್ಮಿಸು. ನಿನ್ನ ಸೃಷ್ಟಿಯ ಜೀವಿಗಳಲ್ಲಿ ನನ್ನನ್ನು ನಿನ್ನ ಜ್ಞಾನದೀವಿಗೆಯಂತೆ ಮಾಡು. ನಿನ್ನ ಕೃಪೆಯ ಧ್ವಜವನ್ನಾಗಿ ಏರಿಸು. ನಿನ್ನ ಹೊರತು ಮತ್ತೆಲ್ಲ ವಸ್ತುಗಳಿಂದಲೂ ದೂರವಿರುವ, ಈ ಪ್ರಪಂಚದ ಎಲ್ಲ ವಸ್ತುಗಳಿಂದಲೂ ಅತೀತರಾಗಿ ಪವಿತ್ರವಾಗಿರುವ ಹಾಗೂ ಶಂಕೆಗೊಳಪಟ್ಟವರ ದೋಷದಿಂದ ಹೊರತಾಗುಳ್ಳ ನಿನ್ನ ಭಕ್ತರಲ್ಲಿ ನನ್ನನ್ನು ಒಬ್ಬನನ್ನಾಗಿ ಸೇರಿಸಿಕೋ. ನಿನ್ನ ಜಗತ್ತಿನ ಭಾವನಾತ್ಮಕ ಹೆಗ್ಗಳಿಕೆಯ ಮೂಲಕ ಹೃದಯ ಹಿರಿಹಿಗ್ಗಲಿ. ನಿನ್ನ ಸರ್ವಾಂತರ್ಯಾಮಿತ್ವದಿಂಡ ಒಂದರ ಮೇಲೊಂದರಂತೆ ಎರಗುವ ಯಶಸ್ಸಿನ ತರಂಗಗಳನ್ನು ಕಾಣುವಂತೆ ನನ್ನ ದೃಷ್ಟಿಯನ್ನು ಬೆಳಗಿಸು. ನೀನು ಸರ್ವಸಮರ್ಥ, ಪ್ರಬಲ, ಅಜೇಯ

#9485
- `Abdu'l-Bahá

 

ಓ ನನ್ನ ಪ್ರಭುವೇ, ಪ್ರಿಯತಮನೇ, ಇಚ್ಛಾಪೂರೈಕೆಯ ಸಾಕಾರ ಮೂರ್ತಿಯೇ, ನಾನು ಒಬ್ಬಂಟಿಗ, ಈ ದಿಶೆಯಲ್ಲಿ ನನ್ನ ಮಿತ್ರನಾಗು. ನನ್ನ ದೇಶಭ್ರಷ್ಟ ಜೀವಿತದಲ್ಲಿ ನನ್ನೊಡನಿರು, ನನ್ನ ದುಃಖವನ್ನು ನಿವಾರಿಸು. ನಿನ್ನ ಸುಂದರ ಸ್ವರೂಪಕ್ಕೆ ಮಣಿಯುವಂತೆ ಮಾಡು. ನಿನ್ನ ಹೊರತಾಗಿ ಮಿಕ್ಕೆಲವುಗಳಿಂದಲೂ ನನ್ನನ್ನು ದೂರಮಾಡು. ನಿನ್ನ ಪವಿತ್ರ ಸುವಾಸನೆಯಿಂದ ನನ್ನನ್ನು ಆಕರ್ಷಿಸು. ನಿನ್ನ ಸಾಮ್ರಾಜ್ಯದಲ್ಲಿ ನಿನ್ನನ್ನು ಬಿಟ್ಟು ಬೇರೆಲ್ಲವನ್ನು ಉದ್ದಾರಗೊಳಿಸುವವರೊಡನೆ ಬೆರೆಯುವಂತೆ ಮಾಡು. ಅಲ್ಲದೆ ಯಾರು ನಿನ್ನ ಪವಿತ್ರ ದ್ವಾರದ ಹೊಸ್ತಿಲನ್ನು ತವಕದಿಂದ ಮುಟ್ಟಿ ಸೇವೆ ಮಾಡಲು ಸಿದ್ಧರಿರುವರೋ, ಅಂಥವರೊಡನೆ ಮಿಲನವಾಗಲೂ ಅವಕಾಶವನ್ನು ಕಲ್ಪಿಸು. ನಿನ್ನ ಆನಂದಕ್ಕಾಗಿ ಸೇವೆ ಸಲ್ಲಿಸಲು ನಿರ್ಧರಿಸಿರುವ ಹೆಣ್ಣಾಳುಗಳಲ್ಲಿ ನಾನೊಬ್ಬನಾಗಲು ಅವಕಾಶ ನೀಡು. ನಿಜಕ್ಕೂ ನೀನು ಘನವಂತ ಔದಾರ್ಯದ ಖನಿ.

#9486
- `Abdu'l-Bahá

 

ಪ್ರಭುವೇ, ಓ ನನ್ನ ಪ್ರಭುವೇ, ನಿನ್ನ ಪ್ರೇಮದಿಂದ ಹೊತ್ತಿಸಿದ ಜ್ಯೋತಿ, ನಿನ್ನ ದಯೆಯೆಂಬ ಮರದಲ್ಲಿ ಎದ್ದ ಉರಿಯಿಂದ ದೇದೀಪ್ಯಮಾನವಾಗಿ ಪ್ರಜ್ವಲಿಸಿದೆ. ಓ ಪ್ರಭುವೇ, ನಿನ್ನ ಸಿನಾಯ್ ಘೋಷಣೆಯಿಂದ ಹೊತ್ತಿದ ಬೆಂಕಿಯ ಜ್ವಾಲೆ ಹಾಗೂ ಶಾಖವು ಅಧಿಕಗೊಳ್ಳಲಿ. ಸತ್ಯವಾಗಿ ನೀನು ದೃಢೀಕರಿಸ ತಕ್ಕವ, ಸಹಾಯಕ, ಸುಶಕ್ತ, ಉದಾರಿ ಮತ್ತು ಪ್ರೀತಿಗೆ ಅರ್ಹ.

#9487
- `Abdu'l-Bahá

 

ಆಧ್ಯಾತ್ಮಿಕ ಸಭೆಗಳಲ್ಲಿ

(ಸಮಾಲೋಚನಾ ಸಭೆಯನ್ನು ಪ್ರವೇಶಿಸಿದಾಗಲೆಲ್ಲಾ ಭಗವಂತನಲ್ಲಿ ತಲ್ಲೀನರಾಗಿ, ಅವನ ಪ್ರೀತಿಗೆ ಪಾತ್ರರಾಗಿ, ಈ ಪ್ರಾರ್ಥನೆಯನ್ನು ಸಲ್ಲಿಸಿ)

ಓ ದೇವರೇ, ನನ್ನ ದೇವರೇ! ನಿನ್ನಲ್ಲಿ ಭಕ್ತಿಪರವಶರಾಗಿ ನಿನ್ನತ್ತ ನಿರೀಕ್ಷಿಸುವ ನಿನ್ನ ಸೇವಕರು ನಾವು. ಈ ಮಹಾದಿನದಲ್ಲಿ ನಿನ್ನನ್ನು ಮಾತ್ರ ಬಿಟ್ಟು ಮಿಕ್ಕೆಲ್ಲದರಿಂದಲೂ ಅಲಿಪ್ತರಾಗಿದ್ದೇವೆ. ನಮ್ಮ ಅಭಿಪ್ರಾಯಗಳಲ್ಲಿ, ಭಾವನೆಗಳಲ್ಲಿ ಒಮ್ಮತಗೊಂಡು. ಈ ಆಧ್ಯಾತ್ಮಿಕ ಸಭೆಯಲ್ಲಿ ಸೇರಿದ್ದೇವೆ. ಮಾನವ ಪ್ರಪಂಚದಲ್ಲಿ ನಿನ್ನ ಉಪದೇಶವನ್ನು ಉನ್ನತ ಮಟ್ಟದಲ್ಲಿರಿಸಲು ಏಕಮುಖ ಉದ್ದಿಶ್ಯದಿಂದ ಕೂಡಿದ್ದೇವೆ. ಓ ಪ್ರಭುವೇ, ಭಗವಂತನೇ, ನಮ್ಮನ್ನು ದೈವಿಕ ಮಾರ್ಗದರ್ಶಕತ್ವದ ಚಿಹ್ನೆಯನ್ನಾಗಿಸು. ಮಾನವರಲ್ಲಿ ನಿನ್ನ ಶ್ರೇಷ್ಠ ಧರ್ಮದ ಪ್ರಮಾಣಕರ್ತರನ್ನಾಗಿ ಅನುಗೊಳಿಸು. ಶಕ್ತಿಯುತವಾದ ನಿನ್ನ ನಿರ್ಧಾರದ ಪ್ರಸಾರದಲ್ಲಿ ನಿನ್ನ ಸೇವಕರನ್ನಾಗಿ ಮಾಡು. ಮಹಿಮಾವಂತ ಸ್ವಾಮಿಯೇ, ನಿನ್ನ ಆಭಾ ಸಾಮ್ರಾಜ್ಯದಲ್ಲಿ ದೈವಿಕ ಏಕತೆಯ ಸಾಕ್ಷಾತ್ಕರನೂ ನೀನು. ಎಲ್ಲ ಪ್ರದೇಶಗಳ ಮೇಲು ಬೆಳಗುತ್ತಿರುವ ನಕ್ಷತ್ರನೂ ಹೌದು. ನಿನ್ನ ಅಸಾಧಾರಣವಾದ ಘನತೆಯ ಅಲೆಗಳಿಂದ ನಾವು ಸಾಗರದಂತಾಗಲು ಸಹಾಯ ಮಾಡು. ನಿನ್ನ ಮಹಿಮೆಯ ಶಿಖರದಿಂದ ಹರಿದು ಬರುವ ಹೊಳೆಯಂತೆಯೂ ಮಾಡು. ನಿನ್ನ ಸ್ವರ್ಗ ತೇಜಃಪುಂಜವಾದ ಉದ್ದಿಶ್ಯದ ಮರದಲ್ಲಿ ಬೆಳೆವ ಉತ್ತಮ ಹಣ್ಣುಗಳಂತೆ ಏರ್ಪಡಿಸು. ಓ ಪರಮಾತ್ಮನೇ, ನಿನ್ನ ದೈವಿಕ ಏಕತೆಯ ಮಾತುಗಳ ಆಧಾರದ ಮೇಲೆ ನಮ್ಮ ಆತ್ಮಗಳು ನಿಲ್ಲುವಂತೆ ನೋಡು. ನಿನ್ನ ದಯಾಮಯವಾದ ಭಾವನೆಗಳಿಂದ ನಮ್ಮ ಹೃದಯಗಳು ಸಂತಸಗೊಳ್ಳುವಂತೆ ಮಾಡು. ಇದರಿಂದ ಒಂದೇ ಸಾಗರದ ಅಲೆಗಳಂತಾದರೂ ನಾವು ಐಕ್ಯವಂತರಾಗಿ ನಿನ್ನ ಪ್ರಕಾಶದ ಜ್ಯೋತಿಯ ಕಿರಣಗಳೋಪಾದಿಯಲ್ಲಿ ಒತ್ತಟ್ಟಿಗೆ ಮಿಲನವಾಗಲಿ. ನಮ್ಮ ಭಾವನೆಗಳು, ನಮ್ಮ ಅಭಿಪ್ರಾಯಗಳು, ನಮ್ಮ ಅಂತರಂಗ ಇವೆಲ್ಲ ಒಂದು ವಾಸ್ತವಿಕ ಸ್ಥಿತಿಯಾಗಲಿ, ಇಡೀ ಪ್ರಪಂಚದಲ್ಲಿ ಐಕ್ಯತೆಯ ಭಾವದ ಪ್ರತಿಬಿಂಬವಾಗಲಿ ನೀನು ಘನವಂತ, ದಯಾಮಯ, ದಾತ, ಸರ್ವಶಕ್ತ, ಕರುಣಾಶಾಲಿ, ಅಷ್ಟೇ ಅಲ್ಲ, ಕರುಣಾಳು.

#9479
- `Abdu'l-Bahá

 

(ಅಧ್ಯಾತ್ಮಿಕ ಸಭೆ ಮುಕ್ತಾಯಗೊಳ್ಳುವ ಸಮಯದಲ್ಲಿ ಮಾಡತಕ್ಕ ಪ್ರಾರ್ಥನೆ ಹೀಗೆ)

ಓ ದೇವರೇ! ಓ ದೇವರೇ! ನಿನ್ನಲ್ಲಿ ವಿಶ್ವಾಸವನ್ನಿಟ್ಟು, ನಿನ್ನ ಸೂಚನೆಗಳನ್ನು ನಂಬಿ, ನಿನ್ನ ಉಪದೇಶಗಳಲ್ಲಿ ದೃಢತೆ ತೋರಿ, ನಿನ್ನತ್ತ ಆಕರ್ಷಕರಾಗಿ, ನಿನ್ನ ಪ್ರೀತಿಯ ಜ್ವಾಲೆಯ ಬೆಳಕಿನಿಂದ ತೃಪ್ತರಾಗಿ, ನಿನ್ನ ಕಾರ್ಯದಲ್ಲಿ ಪ್ರಾಮಾಣಿಕ ಭಾವನೆಯುಳ್ಳವರಾಗಿ, ನಿನ್ನ ಶ್ರದ್ಧಾಸಕ್ತಿಯ ಸೇವಕರಾಗಿ, ನಿನ್ನ ಧಾರ್ಮಿಕ ತತ್ವಗಳನ್ನು ಪ್ರಚಾರಗೊಳಿಸಲು ಸನ್ನದ್ಧರಾಗಿ, ನಿನ್ನ ಮೂರ್ತಿಯ ಆರಾಧಕರಾಗಿ, ಪ್ರೀತಿ ತೋರಿಸುವವರಲ್ಲಿ ನಮ್ರರಾಗಿ, ಅವಿಚ್ಚಿನ್ನ ಭಕ್ತರಾಗಿ, ನಿನ್ನ ಅಭಿಮಾನಕ್ಕೆ ಪಾತ್ರರಾದವರ ಸೇವೆ ಸಲ್ಲಿಸಲು ಕಾತುರರಾಗಿ ಇರುವ ಈ ಸಭೆಯವರತ್ತ ನಿನ್ನ ಕೃಪಾಕಟಕ್ಷ ಬೀರುವವನಾಗು. ಅಗೋಚರರಾದ ನಿನ್ನ ಬೆಂಬಲಕಾರರೊಡನೆ ನಮಗೆ ನೆರವಾಗು. ನಿನ್ನ ಸೇವೆಗೋಸ್ಕರ ನಮ್ಮ ದೇಹದಲ್ಲಿ ಶಕ್ತಿಯನ್ನು ಬಲಪಡಿಸು. ನಿನಗೆ ಶರಣಾಗುವ ಹಾಗೂ ಪೂಜಿಸುವ ಸೇವಕರನ್ನಾಗಿ ಮಾಡು. ನಿನ್ನೊಡನೆ ಸಂಭಾಷಣೆ ನಡೆಸುವಂತೆ ಒಲಿಸು.

ಓ ನಮ್ಮ ಪ್ರಭುವೇ! ನಾವು ದುರ್ಬಲರು, ನೀನಾದರೋ ಪರಮಶಕ್ತ, ಬಲಾಢ್ಯ, ನಾವು ಮಾನವರು ನೀನಾದರೋ ಜೀವಗೊಳಿಸುವ ಮಹಾನ್ ವ್ಯಕ್ತಿ ನಾವು ಬೇಡುವವರು, ನೀನು ಕಾಪಾಡುವವ ಹಾಗೂ ಪ್ರಭಾವಶಾಲಿ. ಓ ನಮ್ಮ ಪ್ರಭುವೇ! ನಿನ್ನ ದಿವ್ಯ ಮುಖಾರವಿಂದದ ಕಡೆಗೆ ನಮ್ಮ ದೃಷ್ಟಿ ಹೊರಳುವಂತೆ ಕೃಪೆ ಮಾಡು. ದೈವದತ್ತ ಸಹಾಯದಿಂದ ಅನ್ನ ನೀಡು. ನಿನ್ನ ಉನ್ನತ ದೇವದೂತರ ಮೂಲಕ ಸಹಾಯವೆಸಗು. ಅಭಾ ಸಾಮ್ರಾಜ್ಯದ ಪವಿತ್ರಾತ್ಮಗಳಿಂದ ನಮ್ಮನ್ನು ಸ್ಥಿರಗೊಳಿಸು. ನಿಜಕ್ಕೂ ನೀನು ದಯಾನಿಧಿ, ಕರುಣಾಕರ, ಅತ್ಯಂತ ಉದಾರಿ, ಕ್ಷಮೆ ನೀಡುವವ ಹಾಗೂ ಮಹಿಮಾನ್ವಿತ.

#9480
- `Abdu'l-Bahá

 

ಉಷಃ ಕಾಲದ ಪ್ರಾರ್ಥನೆ

ಓ ನನ್ನ ಭಗವಂತನೇ, ನನ್ನ ಸ್ವಾಮಿಯೇ! ನಾನು ನಿನ್ನ ಸೇವಕನು, ನಿನ್ನ ಸೇವಕನ ಮಗನು, ನಿನ್ನ ಸಂಕಲ್ಪವೆಂಬ ಅರುಣೋದಯದಿಂದ ನಿನ್ನ ಏಕತೆಯೆಂಬ ದಿನಮಣಿಯು ಈ ಉಷಃ ಕಾಲದಲ್ಲಿ ಉದಯಿಸಿ ಪ್ರಕಾಶಿಸುತ್ತ, ಅಲ್ಲದೆ, ಇಡೀ ಜಗತ್ತಿನ ಮೇಲೆ ತನ್ನ ಪ್ರಭೆಯನ್ನು ನಿನ್ನಾಜ್ಞೆಯ ಗ್ರಂಥಗಳಲ್ಲಿ ವಿಧಿಸಿರುವಂತೆಯೇ ಬೀರಿರುವಾಗ, ನಾನು ನನ್ನ ಹಾಸಿಗೆಯಿಂದ ಎದ್ದಿರುವೆನು. ನಿನ್ನ ಪ್ರಶಂಸೆಯಾಗಲಿ, ಓ ನನ್ನ ಭಗವಂತನೇ! ನಿನ್ನ ಜ್ಞಾನವೆಂಬ ಬೆಳಕಿನ ಪ್ರಭೆಗೆ ನಾವು ಬೇರೆಲ್ಲದರಿಂದಲೂ ನಾವು ವಿಮುಕ್ತರಾಗುವಂತೆ ಮಾಡುವುದು ಯಾವುದು ಇದೆಯೋ ಅದನ್ನು ನಮಗೆ ಕಳುಹಿಸಿಕೊಂಡು. ಹಾಗೆಯೇ, ನಿನ್ನ ವಿನಾ ಇತರ ಎಲ್ಲಾ ಮೋಹ ಪಾಶಗಳಿಂದಲೂ ನಾವು ಬಿಡುಗಡೆ ಹೊಂದುವಂತೆ ಮಾಡು. ಇದಲ್ಲದೆ, ನನಗಾಗಿಯೂ, ನನ್ನ ಪ್ರೀತಿಪಾತ್ರರಿಗಾಗಿಯೂ ಅಲ್ಲದೆ, ಅವರು ಸ್ತ್ರೀಯರಾಗಿರಲೀ, ಪುರುಷರಾಗಿರಲೀ ನನ್ನ ಬಾಂಧವರಾದ ಇವರೆಲ್ಲರಿಗೂ ಈ ಪ್ರಪಂಚಕ್ಕೂ ಮತ್ತು ಮುಂದೆ ಬರುವ ಪ್ರಪಂಚಕ್ಕೂ ಯಾವುದು ಒಳ್ಳೆಯದೋ ಅದನ್ನೆಲ್ಲ ಬರೆದಿಡು. ಇಡೀ ಸೃಷ್ಟಿಯೇ ಪ್ರೀತಿಸುವ ಮತ್ತು ಇಡೀ ಜಗತ್ತೇ ಆಶೆ ಪಡುತ್ತಿರುವ ಓ ಸ್ವಾಮಿಯೇ! ಮಾನವ ಹೃದಯಗಳಲ್ಲಿ ಪಿಸುಗುಟ್ಟುತ್ತ ಮಾತನಾಡುವ ಆ ಕೆಡುಕನು ಏನನ್ನು ನಿನ್ನ ಸಂಕಲ್ಪದಂತೆಯೇ ವ್ಯಕ್ತಪಡಿಸಿದನೋ, ಅಂಥವುಗಳಿಂದ ಎಂದೂ ಅಪಜಯ ಪಡೆಯದ ನಿನ್ನ ಸಂರಕ್ಷಣೆಯನ್ನು ಕೊಟ್ಟು ನಮ್ಮನ್ನು ಸುರಕ್ಷಿತವಾಗಿಡು. ನಿನ್ನ ಸಂತೋಷದಂತೆಯೇ ಏನನ್ನು ಬೇಕಾದರೂ ಮಾಡುವ ಸಾಮಥ್ರ್ಯ ನಿನಗಿದೆ. ನಿಜವಾಗಿಯೂ ಸರ್ವಶಕ್ತನೂ, ಕಷ್ಟದಲ್ಲಿ ಸಹಾಯಕನೂ, ಸ್ವಯಮಾಧಾರಿಯೂ ನೀನೇ ಆಗಿರುವೆ.

ಯಾವ ವ್ಯಕ್ತಿಗೆ ನಿನ್ನ ಪರಮ ಶ್ರೇಷ್ಠವಾದ ಬಿರುದುಗಳನ್ನು ದಯಪಾಲಿಸಿರುವೆಯೋ ಯಾವ ವ್ಯಕ್ತಿಯ ಮುಲಕ ಸಚ್ಚನರನ್ನು ಮತ್ತು ದುರ್ಜನರನ್ನು ನೀನು ವಿಂಗಡನೆ ಮಾಡಿರುವೆಯೋ ಅಲ್ಲದೆ, ನೀನು ಪ್ರೀತಿಸುವುದನ್ನು ಮತ್ತು ಇಚ್ಛಿಸುವುದನ್ನು ನಾವು ಮಾಡುವಂಟೆ ನಮಗೆ ಸಹಾಯ ಒದಗಿಸು. ಓ ನನ್ನ ಭಗವಂತನಾದ ನನ್ನ ಸ್ವಾಮಿಯೇ, ಅಂತಹವರನ್ನು ಆಶೀರ್ವಾದಿಸು ಅದಲ್ಲದೆ, ಓ ನನ್ನ ಸ್ವಾಮಿಯೇ, ನಿನ್ನ ನುಡಿಗಳಲ್ಲಿಯೂ ಮತ್ತು ನಿನ್ನ ಅಕ್ಷರಗಳಲ್ಲಿಯೂ ಇರುವವರನ್ನೂ, ಅಲ್ಲದೆ, ನಿನ್ನ ಕಡೆಗೆ ಮುಖಮಾದಿ ನೋಡುತ್ತಿರುವವರನ್ನೂ, ನಿನ್ನ ಕರೆಗೆ ಕಿವಿಗೊಟ್ಟವರನ್ನೂ ಆಶೀರ್ವಾದಿಸು. ನಿಜವಾಗಿಯೂ, ನೀನು ಪ್ರಭುವು ಮತ್ತು ಮಾನವರಿಗೆಲ್ಲ ದೊರೆಯಾಗಿರುವೆ. ಅಲ್ಲದೆ, ಎಲ್ಲ ವಸ್ತುಗಳ ಮೇಲೆಯೂ ನೀನು ನಿನ್ನ ಸಾಮಥ್ರ್ಯವನ್ನು ಉಳ್ಳವನಾಗಿದ್ದೀಯೆ.

#9465
- Bahá'u'lláh

 

ಐಕ್ಯತೆಗಾಗಿ

ಇಡೀ ಭೂಮಿಯನ್ನೇ ಆವರಿಸುವಂತಹ ಐಕ್ಯತೆಯ ಬೆಳಕನ್ನು ದೇವರು ದಯಪಾಲಿಸಲಿ. “ದೇವರದೇ ಸಾಮ್ರಾಜ್ಯ”ವೆಂಬ ಮುದ್ರೆಯು ಎಲ್ಲ ಜನಗಳ ಹುಬ್ಬುಗಳ ಮೆಲೂ ಒತ್ತುವಂತಾಗಲಿ.

#9503
- Bahá'u'lláh

 

ಓ ನನ್ನ ದೇವರೇ, ಓ ನನ್ನ ದೇವರೇ, ನಿನ್ನ ಸೇವಕರ ಹೃದಯಗಳನ್ನು ಮಿಲನಗೊಳಿಸು. ನಿನ್ನ ಘನ ಉದ್ದಿಶ್ಯವನ್ನು ಅವರಿಗೆ ಪ್ರಕಟಿಸು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿ. ನಿನ್ನ ಶಾಸನಗಳನ್ನು ಅನುಸರಿಸಲಿ. ಭಗವಂತನೇ, ಅವರ ಪ್ರಯತ್ನಗಳಿಗೆ ಸಹಾಯವೆಸಗು. ನಿನ್ನ ಸೇವೆ ಸಲ್ಲಿಸಲು ಶಕ್ತಿಯನ್ನು ಕೊಡು. ಅವರನ್ನು ಅವರಷ್ಟಕ್ಕೇ ಬಿಡಬೇಡ. ಜ್ಞಾನದೀವಿಗೆಯಿಂದ ಅವರ ಹೆಜ್ಜೆಯನ್ನು ಮುನ್ನಡೆಸು. ಪ್ರೀತಿಯಿಂದ ಅವರ ಹೃದಯಗಳನ್ನು ಸ್ಫೂರ್ತಿಗೊಳಿಸು. ಸತ್ಯವಾಗಿಯೂ ನೀನು ಅವರ ಸಹಾಯಕ ಮತ್ತು ಪ್ರಭು.

#9504
- Bahá'u'lláh

 

ಓ ದೇವರೇ, ನಿನಗೆ ಕೀರ್ತಿಯುಂಟಾಗಲಿ, ಮಾನವ ವರ್ಗಕ್ಕೆ ನಿನ್ನ ಪ್ರೀತಿಯ ಪ್ರಸನ್ನತೆ ದೊರೆಯಲಿ. ನೀನು ನಮ್ಮ ಜೀವ ಹಾಗೂ ಬೆಳಕು. ಆದ್ದರಿಂದ ನಿನ್ನ ಮಾರ್ಗದಲ್ಲಿ ನಿನ್ನ ಸೇವಕರನ್ನು ಕರೆದೊಯ್ಯು. ನಮ್ಮನ್ನು ನಿನ್ನಲ್ಲಿ ಸಿರಿವಂತರನ್ನಾಗಿಸು. ನಿನ್ನ ಹೊರತು ಮಿಕ್ಕೆಲ್ಲವುಗಳಿಂದಲೂ ಪಾರುಮಾಡು.

ಓ ದೇವರೇ. ನಿನ್ನ ಏಕತ್ವವನ್ನು ನಮಗೆ ಬೋಧಿಸು, ನಿನ್ನ ಐಕ್ಯತೆಯ ಸ್ವರೂಪದ ಗ್ರಹಿಕೆಯಾಗುವಂತೆ ನೋಡು, ನಿನ್ನನ್ನಲ್ಲದೆ ಯಾರ ದರ್ಶನವಾಗದಂತೆಯೂ ಮಾಡು. ನೀನು ದಯಾಪರ ಹಾಗೂ ದಾನವೀರ. ಓ ಪರಮಾತ್ಮನೇ, ನಿನ್ನ ಪ್ರೀತಿಪಾತ್ರರ ಹೃದಯಗಳಲ್ಲಿ ಪ್ರೇಮದ ಕಿಚ್ಚನ್ನೆಬ್ಬಿಸು. ನಿನ್ನ ಹೊರತಾಗಿ ಬೇರಾವ ಯೋಚನೆಯನ್ನು ಈ ಕಿಚ್ಚು ದಹಿಸುವಂತಾಗಲಿ.

ನಿನ್ನ ಉನ್ನತ ಸ್ಥಿತಿಯನ್ನು ನಮಗೆ ಸಾಕ್ಷ್ಯತ್ಕರಿಸು. ಎಂದಿನಂತೆ ಮುಂದೆಯೂ ನೀನಲ್ಲದೆ ಬೇರೆ ಯಾವ ದೇವರೂ ಇಲ್ಲವೆಂದು ತಿಳಿಯಪಡಿಸು ನಿಜಕ್ಕೂ ನಿನ್ನಲ್ಲಿ ನಾವು ಸಮಾಧಾನ ಪಡುವೆವು ಹಾಗೂ ಶಕ್ತಿಯನ್ನು ಗಳಿಸುವೆವು.

#9505
- Bahá'u'lláh

 

ಓ ಪರಮಾತ್ಮನೇ, ಸ್ವಾಮಿಯೇ, ನಿನ್ನ ಕರುಣೆ ಈ ಆತ್ಮಗಳ ಮೇಲೆ ಬಂದಿಳಿಯಲಿ ಎಂದು ಕೋರುವೆ. ಸೆರಗೊಡ್ಡಿ ಬೇಡುವೆ. ನಿನ್ನ ಉಪಕಾರ ಹಾಗೂ ಸತ್ಯ ಸಾಕ್ಷಾತ್ಕಾರಕ್ಕೆ ಅವರನ್ನು ಅರ್ಹರನ್ನಾಗಿ ಮಾಡು. ಹೃದಯಗಳನ್ನು ಒಂದುಗೂಡಿಸು ಎಲ್ಲ ಆತ್ಮಗಳನ್ನು ಏಕತ್ರಗೊಳಿಸು. ನಿನ್ನ ಪವಿತ್ರ ಹಾಗೂ ಏಕೀಭಾವದ ಮೂಲಕ ಚಿತ್ತವನ್ನು ಆನಂದಮಯವನ್ನಾಗಿ ಮಾಡು, ನಿನ್ನ ಏಕಮೂರ್ತಿ ಸ್ವರೂಪದ ಜ್ಯೋತಿಯಿಂದ ಈ ಮುಖಗಳನ್ನು ಬೆಳಗಿಸು. ನಿನ್ನ ಪರಿಸರದ ಸೇವೆಗಾಗಿ ನಿನ್ನ ಸೇವಕರ ಬಲವನ್ನು ಹೆಚ್ಚಿಸು ಪ್ರಭುವೇ. ಅಪಾರ ದಯಾಮಯನಾದವನೂ ನೀನು. ಕ್ಷಮಿಸುವವನೂ ಮತ್ತು ಮುನ್ನಿಸುವವನೂ ನೀನೇ. ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮ ಲೋಪದೋಷಗಳನ್ನು ಮನ್ನಿಸು. ನಿನ್ನ ಕರುಣೆಯ ಸಾಮ್ರಾಜ್ಯದತ್ತ ನಮ್ಮ ಗಮನವನ್ನು ಹರಿಯಿಸುವಂತೆ ಮಾಡಿ, ನಿನ್ನ ಬಲ ಹಾಗೂ ಅಧಿಕಾರಕ್ಕೆ ತಲೆಬಾಗಿಸಿ, ನಿನ್ನ ಕೀರ್ತಿ ಮತ್ತು ಪ್ರಸನ್ನತೆಗೆ ನಮ್ರತೆಯಿಂದ ಶರಣಾಗುವಂತೆ ನನ್ನನ್ನು ಅನುಗ್ರಹಿಸು. ಭಗವಂತನೇ, ಸಮುದ್ರದ ಆಲೆಗಳಂತೆ ನಮ್ಮನ್ನು ಮಾಡು. ಉದ್ಯಾನವನದ ಪುಷ್ಪಗಳಂತೆ ಪರಿವರ್ತಿಸು. ನಿನ್ನ ಪ್ರೇಮದ ಅಪಾರ ಉದಾರತೆಯ ಮೂಲಕ ಐಕ್ಯತೆ ಹಾಗೂ ಸಮ್ಮತಿಗಾಗಿ ಏಸಗು. ನಿನ್ನ ಏಕತ್ವ ಸ್ವರೂಪದ ಸೂಚನೆಯ ಮೂಲಕ ನಮ್ಮ ಹೃದಯಗಳನ್ನು ವಿಶಾಲಗೊಳಿಸು. ಎಲ್ಲ ಮಾನವ ವರ್ಗದವರೂ ಕೀರ್ತಿಯ ಉತ್ತುಂಗ ಶಿಖರದಿಂದ ಪ್ರಜ್ವಲಿಸುವ ನಕ್ಷತ್ರಗಳಂತೆ ನಿನ್ನ ಜೀವಿತ ಸೌರಭದ ಮರದಲ್ಲಿ ಬೆಳೆದ ಶ್ರೇಷ್ಠ ಹಣ್ಣುಗಳೋಪಾದಿಯಲ್ಲಿ ನಿರ್ಮಿಸು. ಸತ್ಯವಾಗಿಯೂ ನೀನು ಸರ್ವಶಕ್ತ, ಸ್ವಯಂಪರಿಪೂರ್ಣ, ದಾನಿ, ಮನ್ನಿಸುವಾತ, ಕ್ಷಮಿಸುವವ ಸರ್ವಾಂತರ್ಯಾಮಿ ಸೃಷ್ಟಿಕರ್ತ

#9506
- `Abdu'l-Bahá

 

ಒಡಂಬಡಿಕೆಯಲಿ ದೃಢತೆಗಾಗಿ

ಓ ಪ್ರಭುವೇ, ನಿನ್ನ ಹಾದಿಯಲ್ಲಿ ನಮ್ಮ ಹೆಜ್ಜೆಯನ್ನು ಭದ್ರಪಡಿಸು. ನಿನ್ನ ಆಜ್ಞಾಧಾರಕರಾಗಿರಲು ನಮ್ಮ ಮನಸ್ಸನ್ನು ಸ್ಥಿರಪಡಿಸು. ನಿನ್ನ ವ್ಯಕ್ತಿತ್ವದ ಸೌಂದರ್ಯದ ಕಡೆ ನಮ್ಮ ದೃಷ್ಟಿ ಹೊರಳುವಂತೆ ಮಾಡು. ನಿನ್ನ ದೈವಿಕ ಏಕೀಭಾವದ ಸೂಚನೆಗಳಿಂದ ನಮ್ಮ ಎದೆಯನ್ನು ಉಬ್ಬುವಂತೆ ಮಾಡು. ನಿನ್ನ ಔದಾರ್ಯದ ನಿಲುವಂಗಿಯಿಂದ ನಮ್ಮ ಶರೀರಗಳನ್ನು ಅಲಂಕರಿಸು. ನಮ್ಮ ಕಣ್ಣಿನಿಂದ ಪಾಪದ ಪರದೆಯನ್ನು ತೊಡೆದು ಹಾಕಿ ನಿನ್ನ ಘನತೆಯ ಬಟ್ಟಲನ್ನು ದಯಪಾಲಿಸು. ಎಲ್ಲ ಜೀವಿಗಳ ಭಾವನೆಯೂ ನಿನ್ನ ವೈಭವದ ಕುರಿತು ಪಾಡುವಂತಾಗಲಿ. ಓ ಪ್ರಭುವೇ, ಆಗ ನೀನು ನಿನ್ನ ಕೃಪಾಕಟಾಕ್ಷದ ಮಾತುಗಳಿಂದ ಪ್ರಸನ್ನನಾಗು. ಭಗವಂತನ ಸಾಕ್ಷಾತ್ಕಾರದ ಪವಾಡವನ್ನು ತೋರಿಸುವವನಾಗು. ಪ್ರಾರ್ಥನೆಯ ಪವಿತ್ರ ತನ್ಮಯತೆಯು ನಮ್ಮ ಆತ್ಮಗಳನ್ನು ಸೇರಲಿ. ಈ ಪ್ರಾರ್ಥನೆಯು ಶಬ್ದೋಚ್ಚಾರಗಳಿಗಿಂತ, ಅಕ್ಷರಗಳಿಗಿಂತ ಉನ್ನತವಾಗಿರಲಿ, ಧ್ವನಿಯ ನಾದಗಳನ್ನು ಮೀರೇರಲಿ.

ಪ್ರಭುವೇ, ಇವರೆಲ್ಲ ನಿನ್ನ ದಾಸರು ನಿಷ್ಠೆಯಿಂದಿರುವವರು ನಿನ್ನ ಒಡಂಬಡಿಕೆ ಹಾಗೂ ಉಯಿಲಿನ ಬಗ್ಗೆ ಅಚಲ ಭಾವನೆಯುಳ್ಳವರು. ನಿನ್ನ ತತ್ವದ ಬಗ್ಗೆ ಪಟ್ಟು ಹಿಡಿದವರು. ನಿನ್ನ ವೈಭವದ ಅಂಚನ್ನು ಅಪ್ಪಿಹಿಡಿದುಕೊಂಡಿರುವವರು. ಓ ಪರಮಾತ್ಮನೇ, ನಿನ್ನ ದಯಾಮಯ ಪ್ರೀತಿಯಿಂದ ಅವರಿಗೆ ಸಹಾಯವೆಸಗು. ನಿನ್ನ ಶಕ್ತಿಯಿಂದ ಅವರನ್ನು ಊರ್ಜಿತಗೊಳಿಸು. ನಿನಗೆ ವಿಧೇಯರಾಗಿರುವಂತೆ ಅವರ ಟೊಂಕವನ್ನು ನಿನ್ನ ಪ್ರಭಾವದಿಂದ ಬಲಗೊಳಿಸು. ನೀನು ಕ್ಷಮಾಶೀಲನಾಗಿದ್ದೀಯೇ ಗೌರವ ಪ್ರದನಾಗಿದ್ದೀಯೇ.

#9444
- `Abdu'l-Bahá

 

ಓ ನನ್ನ ಪ್ರಭುವೇ ಹಾಗೂ ನನ್ನ ಭರವಸೆಯೇ! ನಿನ್ನ ಪ್ರೀತಿಪಾತ್ರರು, ಉನ್ನತವಾದ ನಿನ್ನ ಒಡಂಬಡಿಕೆಯಲ್ಲಿ ದೃಢರಾಗಿರುವಂತೆಯೂ, ನಿನ್ನಿಂದ ಪ್ರಕಟಿತ ಧರ್ಮಕ್ಕೆ ವಿಧೇಯರಾಗಿರುವಂತೆಯೂ ಹಾಗೂ ನಿನ್ನ ಭವ್ಯತೆಯ ಗ್ರಂಥದಲ್ಲಿ ಅವರಿಗಾಗಿ ನೀನು ವಿಧಿಸಿರುವ ಆಜ್ಞೆಗಳನ್ನು ಪಾಲಿಸುವಲ್ಲಿ ಅವರಿಗೆ ಸಹಾಯಮಾಡು; ಇದರಿಂದ ಅವರು ದಿವ್ಯಲೋಕದ ಒಡನಾಡಿಗಳ ಮಾರ್ಗದರ್ಶನದ ನಿಶಾನೆ ಹಾಗೂ ನಿನ್ನ ಅನಂತ ವಿವೇಕದ ಕಾರಂಜಿಗಳೂ, ಅಲೌಕಿಕ ಗಗನದಲ್ಲಿ ಸರಿಯಾದ ಮಾರ್ಗ ತೋರುವ ನಕ್ಷತ್ರಗಾಳೂ ಆಗಬಹುದು. ನಿಜವಾಗಿಯೂ, ಅಜೇಯನೂ, ಸರ್ವಶಕ್ತನೂ, ಬಲಿಷ್ಠನೂ ನೀನೇ ಆಗಿರುವೆ.

#9445
- `Abdu'l-Bahá

 

ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ

“ನಿನ್ನ ನಾಮದ ಶಕ್ತಿಯಿಂದ ಸಶಸ್ತ್ರವಾಗಿದ್ದ ಯಾವುದೂ ನನ್ನನ್ನು ಎಂದಿಗೂ ನೋಯಿಸದು, ಹಾಗೂ ನನ್ನ ಹೃದಯದಲ್ಲಿ ನಿನ್ನ ಪ್ರೀತಿಯಿಂದಾಗಿ ಎಲ್ಲಾ ಪ್ರಪಂಚದ ಮುಖಗಳು ಯಾವ ರೀತಿಯಲ್ಲೂ ನನಗೆ ಬೆದರಿಸವು.”

ಓ ದೇವರೇ, ನನ್ನ ದೇವರೇ, ನಿನ್ನ ಔದಾರ್ಯ ಹಾಗೂ ಕೊಡುಗೈತನದಿಂದ ನನ್ನ ಸಂಕಟವನ್ನು ನಿವಾರಿಸು. ನನ್ನ ಮನೋವೇದನೆಯನ್ನು ನಿನ್ನ ಪ್ರಭಾವ ಮತ್ತು ಶಕ್ತಿಯಿಂದ ಹೊಡೆದೋಡಿಸು. ಎಲ್ಲ ಕಡೆಯಿಂದಲು ನನ್ನನ್ನು ಸುತ್ತುಗಟ್ಟಿರುವ ದುಃಖಗಳನ್ನು ಸಹಿಸುತ್ತಾ ನಿನ್ನತ್ತ ನನ್ನ ಮುಖವನ್ನು ಹೊರಳಿಸುವ ವೇಳೆಯಲ್ಲಿ ಓ ದೇವರೇ, ನೀನು ನನಗೆ ಪ್ರಸನ್ನನಾಗು. ಸಮಸ್ತ ಅಗೋಚರವಾದ ಎಲ್ಲ ವಸ್ತುಗಳ ಮೇಲೂ ನಿನ್ನ ಪ್ರಭಾವವನ್ನು ಹಾಯಿಸಿರುವ ನಿನ್ನಲ್ಲಿ ನನ್ನ ಬೇಡಿಕೆ ಹೀಗೆ: ನಿನ್ನ ಖ್ಯಾತಿಯಿಂದ ಎಲ್ಲ ಮಾನವರ ಹೃದಯ ಮತ್ತು ಆತ್ಮಗಳನ್ನು ನಿಗ್ರಹಿಸಿರುವ ಅಲ್ಲದೆ ನಿನ್ನ ಕರುಣೆಯ ಸಾಗರದ ದೊಡ್ಡ ತೆಗೆಗಳಿಂದ ಆವರಿಸಿರುವ, ಔದಾರ್ಯದ ಮತ್ತು ದಯೆಯೂ ಪ್ರಕಾಶಗೊಳಿಸಿರುವ ನೀನು ನಿನ್ನತ್ತ ಅಡೆತಡೆಗೂ ಜಗ್ಗದೆ ಗಮನವಿಡುವವರ ಸಾಲಿಗೆ ನನ್ನನ್ನು ಸೇರಿಸು. ಸಕಲ ಕೀರ್ತಿ ಹಾಗೂ ಸೃಷ್ಟಿಕರ್ತನಾದ ಓ ಪರಮಾತ್ಮನೇ ನನ್ನ ಪ್ರಾರ್ಥನೆಯನ್ನು ಲಾಲಿಸು.

ಓ ಪ್ರಭುವೇ, ನಿನ್ನ ದಿನಗಳಲ್ಲಿ ನನ್ನ ಪಾಲಿಗೆ ಬಂದುದ್ದನ್ನು ನೀನು ಕಂಡಿರುವೆ. ನಿನ್ನ ಕೀರ್ತಿ ಹಾಗೂ ನಿನ್ನ ಸುಗುಣಗಳನ್ನು ಸ್ಮರಿಸುತ್ತಾ ನಿನ್ನ ಸೇವೆಗೈಯಲು ಮತ್ತು ನಿನ್ನ ಸದ್ಗುಣಗಳನ್ನು ಕೊಂಡಾಡುವಂತಹ ಸದಾವಕಾಶಗಳನ್ನು ದಯಾಪಾಲಿಸು ಎಂದು ನಿನ್ನಲ್ಲಿ ಮೊರೆಯಿಡುತ್ತೇನೆ. ವಾಸ್ತವವಾಗಿ ನೀನು ಸರ್ವಶಕ್ತ, ಅತ್ಯಂತ ಬಲಶಾಲಿ ಎಲ್ಲ ಮಾನವರ ಪ್ರಾರ್ಥನೆಯನ್ನೂ ಪಡೆವ ಮಹಾನುಭಾವ. ಕಡೆಯದಾಗಿ ನಾನು ಬಿನ್ನವಿಸುವುದಿಷ್ಟೆ, ನಿನ್ನ ಸ್ವರೂಪದ ಜ್ಯೋತಿಯ ಮುಖೇನ ನನ್ನ ವಿಚಾರಗಳನ್ನು ಆಶೀರ್ವದಿಸು. ನನ್ನ ಋಣಗಳನ್ನು ಪರಿಹರಿಸು. ನನ್ನ ಅಗತ್ಯಗಳನ್ನು ಪೂರೈಸು ಯಾರ ಶಕ್ತಿ ಹಾಗೂ ಅಧಿಕಾರವನ್ನು ಪ್ರತಿಯೊಬ್ಬರೂ ಸಾಕ್ಷೀಭೂತ ಮಾಡಿರುವರೋ, ಯಾರ ವೈಭವ ಹಾಗೂ ಪರಮಾಧಿಕಾರವನ್ನು ಯಾವ ಹೃದಯಗಳು ಅಂಗೀಕರಿಸುವುವೋ ಆತನೇ ನೀನು. ನನ್ನ ಕರೆಗೆ ಓಗೊಟ್ಟು ಉತ್ತರ ನೀಡಲು ಸಿದ್ಧವಿರುವ ನೀನಲ್ಲದೆ ಬೇರೆ ಯಾವ ದೇವರೂ ಇಲ್ಲ.

#9497
- Bahá'u'lláh

 

ಓ ಸ್ವಾಮಿಯೇ, ನಿನ್ನ ಸಾಮೀಪ್ಯವಿರುವವರಿಗೆ ನಿನ್ನ ಪರೀಕ್ಷೆಯೇ ಗುಣಗೊಳಿಸುವ ಔಷದಿಯಿದ್ದಂತೆ. ನಿನ್ನನ್ನು ಪ್ರೀತಿಸುವವರಿಗೆಲ್ಲ ನಿನ್ನ ಖಡ್ಗವೇ ಉತ್ಸಾಹಪೂರ್ವಕ ಆಕಾಂಕ್ಷೆ ನಿನ್ನನ್ನು ಕುರಿತು ಹಂಬಲಿಸುವವರಿಗೆ ನಿನ್ನ ಈಟಿಯೇ ಪ್ರಿಯವಾದ ಇಚ್ಛೆ. ನಿನ್ನ ಸತ್ಯವನ್ನು ಗ್ರಹಿಸುವವರಿಗೆ ನಿನ್ನ ನಿರ್ಧಾರವೇ ಅವರ ಆಶೆ. ನಿನ್ನ ದೈವಿಕ ಮಾಧುರ್ಯ ಹಾಗೂ ನಿನ್ನ ಖ್ಯಾತಿಯ ದಿವ್ಯ ಪ್ರಕಾಶದಿಂದ ನಿನ್ನ ಸಾಮೀಪ್ಯಕ್ಕೆ ಬರಮಾಡಿಕೊಳ್ಳುವಂತೆ ಬೇಡುತ್ತೇನೆ. ಓ ದೇವರೇ, ನಮ್ಮ ಹೃದಯಗಳನ್ನು ನಿನ್ನ ಜ್ಞಾನ ಸಾಗರದಿಂದ ಜಾಗೃತಗೊಳಿಸು. ನಿನ್ನ ಕೀರ್ತಿಯ ಪ್ರಕಾಶದಿಂದ ನಮ್ಮ ಎದೆಗಳನ್ನು ಬೆಳಗಿಸು. -

#9498
- Bahá'u'lláh

 

ಓ ದೇವರೇ, ನನ್ನ ಪ್ರಭುವೇ, ನಾನು ನಿನ್ನನ್ನು ಹೀಗೆ ಬೇಡುವೆ ಕಷ್ಟ ಪರಿಹಾರಕ ಮಹಾಸಾಗರನೇ, ನಿನ್ನ ಘನತೆಯ ದಿವ್ಯ ಜ್ಯೋತಿಯಿಂದ, ನಿನ್ನ ಕೀರ್ತಿಯ ಮೂಲಕ ನಿನ್ನ ಸೇವಕರನ್ನು ನಿಗ್ರಹಿಸಿರುವುದರಿಂದ, ನಿನ್ನ ಉನ್ನತವಾದ ವಚನಗಳಿಂದ, ಶ್ರೇಷ್ಠವಾದ ನಿನ್ನ ಬರಹಗಳಿಂದ ನಿನ್ನ ಕರುಣೆಗೆ ಪಾತ್ರರಾದ ಸ್ವರ್ಗದಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲರ ಮೇಲಿನ ದಯೆಯಿಂದ ಕೂಡಿದವನಾದ ನೀನು ನನ್ನನ್ನು ಎಲ್ಲ ಕಷ್ಟಗಳಿಂದ, ತೊಂದರೆಗಳಿಂದ ಅಲ್ಲದೆ ಎಲ್ಲ ದುರ್ಬಲತೆಯಿಂದ, ನಿಶಕ್ತಿಯಿಂದ ತೊಲಗಿಸುವವನಾಗು. ನಿನ್ನ ದಯಾಪೂರಿತವಾದ ಜಲದಿಂದ ಮುಕ್ತಿಗೆ ಕಾರಣನಾಗು.

ಓ ನನ್ನ ಸ್ವಾಮಿಯೇ, ನಿನ್ನ ಉದಾರತೆಯ ದ್ವಾರದಲ್ಲಿ ಕಾಯುತ್ತಿರುವ ಅಲ್ಲದೆ ನಿನ್ನ ದಯೆಯನ್ನೇ ಹಿಡಿದು ಜೋಲಾಡುತ್ತಿರುವ ಹಾಗೂ ನಿನ್ನಲ್ಲಿ ಆಸೆ ಭರವಸೆಯನ್ನು ಹೊಂದಿರುವ ಈ ಕಿಂಕರನನ್ನು ಕಂಡಿರುವೆ. ನಿನ್ನ ಸಮುದ್ರದಂತಹ ಘನತೆಯನ್ನು ಆಶ್ರಯಿಸಲು ಕಾತುರಪಡುತ್ತಿರುವ ಮತ್ತು ನಿನ್ನ ಕರುಣೆಯನ್ನು ಅಪೇಕ್ಷಿಸುತ್ತಿರುವ ಅವನ ಆಶಯವನ್ನು ನಿರಾಕರಿಸಬೇಡವೆಂದು ನಿನ್ನಲ್ಲಿ ಅನನ್ಯವಾಗಿ ಬೇಡುತ್ತೇನೆ. ನನ್ನನ್ನು ಸಂತಸಗೊಳಿಸುವಂತೆ ಮಾಡಲು ಶಕ್ತನಾಗಿದ್ದೀಯೇ, ನಿನ್ನಲ್ಲದೆ ಬೇರೆ ಯಾವ ದೇವರೂ ಇಲ್ಲ. ಸದಾ ಕ್ಷಮಿಸುವ ಹಾಗೂ ಔದಾರ್ಯದ ಹೊಳೆಯನ್ನು ಹರಿಸುವ ಭಗವಂತ ಇನ್ನಾರೂ ಇಲ್ಲ.

#9499
- Bahá'u'lláh

 

ಓ ನನ್ನ ಭಗವಂತನೇ, ನಿನ್ನ ಶಕ್ತಿಯ ಬಲದಿಂದ ನಾನು ಪ್ರಮಾಣಿಸುತ್ತಿದ್ದೇನೆ. ನನ್ನ ಪರೀಕ್ಷಾ ಸಮಯದಲ್ಲಿ ಯಾವುದೇ ಕೆಡುಕು ನನ್ನನ್ನು ಆಕ್ರಮಿಸದಿರಲಿ ಹಾಗೂ ಅಜಾಗರೂಕತೆಯ ಕ್ಷಣಗಳಲ್ಲಿ ನಿನ್ನ ಪ್ರೇರಣೆಯ ಮೂಲಕ ನನ್ನ ಹೆಜ್ಜೆಗಳಿಗೆ ಸರಿ ದಾರಿಯ ಮಾರ್ಗದರ್ಶನ ನೀಡು. ನೀನೇ ದೇವರು ನಿನ್ನ ಅಪೇಕ್ಷೆಯಂತೆಯೇ ಮಾಡಲು ನೀನು ಶಕ್ತನಿರುವೆ. ನಿನ್ನ ಸಂಕಲ್ಪವನ್ನು ಯಾರೂ ಎದುರಿಸಲಾರರು ಅಥವಾ ನಿನ್ನ ಉದ್ದೇಶವನ್ನು ಯಾರೂ ನಿಷ್ಫಲಗೊಳಿಸಲಾರರು.

#9500
- The Báb

 

ಓ ಪ್ರಭುವೇ! ಪ್ರತಿಯೊಂದು ಸಂಕಟದ ನಿವಾರಕನೂ, ಮತ್ತು ಪ್ರತಿಯೊಂದು ದುಃಖವನ್ನು ಹೋಗಲಾಡಿಸುವವನೂ ನೀನೇ ಆಗಿರುವೆ. ಯರು, ಶೋಕವನ್ನು ಹೊರಗಟ್ಟಿ ಪ್ರತಿಯೊಂದು ಸ್ರೆರೆಯಾಳನ್ನು ಮುಕ್ತಗೊಳಿಸುವನೋ, ಪ್ರತಿಯೊಂದು ಆತ್ಮವನ್ನು ಉದ್ದರಿಸುವನೋ ಅವನೇ ನೀನಾಗಿರುವೆ. ಪ್ರಭುವೇ! ನಿನ್ನ ಕರುಣೆಯ ಮೂಲಕ ವಿಮೋಚನೆಗೊಳಿಸು ಮತ್ತು ಮೋಕ್ಷ ಹೊಂದಿರುವ ಸೇವಕರುಗಳಲ್ಲಿ ನಾನೂ ಒಬ್ಬನಾಗಿರುವಂತೆ ಲೆಕ್ಕಿಸು.

#9501
- The Báb

 

ಓ ನನ್ನ ಪ್ರಭುವೇ, ಜನರು ನೋವು, ಅಪತ್ತುಗಳಿಂದ, ಕಷ್ಟ, ನಿಷ್ಠುರಗಳಿಂಡ ಅವರಿಸಲ್ಪಟ್ಟಿರುವರೆಂದು ನೀನು ಅರಿತಿರುವೆ. ಮಾನವನ ಒಂದೊಂದು ಕಷ್ಟವೂ ಅವನನ್ನು ಹಿಂಸಿಸುವುದು. ಅವನ ಒಂದೊಂದು ದುಃಸ್ಥಿತಿಯೂ ಅವನನ್ನು ಸರ್ಪ ಕಚ್ಚಿದಂತೆಯೇ ಸರಿ. ಇದನ್ನು ಕೂಡ ನೀನು ತಿಳಿದಿರುವಿ. ನೀನು ನೀಡುವ ಸಂರಕ್ಷಣೆ, ಭದ್ರತೆ, ಕಾಯುವಿಕೆ ಮತ್ತು ಕಾಪಾಡುವಿಕೆ ಇವುಗಳ ಹೊರತಾಗಿ ಅವನಿಗೆ ಬೇರೆ ಯಾವ ರಕ್ಷಣೆ ಹಾಗೂ ಆಶ್ರಯವಿಲ್ಲ.

ಓ ದಯಾಳು, ಓ ನನ್ನ ಸ್ವಾಮಿಯೇ, ನಿನ್ನ ಸಂರಕ್ಷಣೆಯೇ ನನ್ನ ಅಸ್ತ್ರಶಸ್ತ್ರಗಳ ಬತ್ತಳಿಕೆಯಾಗಿರಲಿ. ನಿನ್ನ ಜೋಪಾನ ತನವೇ ನನ್ನ ಗುರಾಣಿಯಾಗಿರಲಿ. ನಿನ್ನ ಏಕೀಭಾವದ ಮೂರ್ತಿಯೇ ಹಾಗೂ ಅದರ ದ್ವಾರದಲ್ಲಿ ಕಾಣಿಸಿಕೊಳ್ಳುವ ನಮ್ರತೆಯೇ ನನಗೆ ಬೆಂಗಾವಲಾಗಿರಲಿ. ನಿನ್ನ ವಶತ್ವ ಮತ್ತು ರಕ್ಷಣೆ ನನ್ನ ಕೋಟೆ ಹಾಗೂ ನಿವಾಸಸ್ಥಾನವಾಗಿರಲಿ. ನನ್ನನ್ನು ಅಹಂ ಮತ್ತು ಆಕಾಂಕ್ಷೆಗಳಿಂದ ರಕ್ಷಿಸು. ಎಲ್ಲ ರೋಗರುಜಿನಗಳಿಂದ, ಪರೀಕ್ಷೆಯಿಂದ ಮತ್ತು ಕಷ್ಟಗಳಿಂದ ನನ್ನನ್ನು ಪಾರುಗಾಣಿಸು.

ಸತ್ಯವಾಗಿಯೂ ನೀನು ರಕ್ಷಕ, ಪೋಷಕ, ಕಾಪಾಡತಕ್ಕವ, ಸಂತೃಪ್ತಿದಾತ, ಅಷ್ಟೇ ಅಲ್ಲ. ಕರುಣಾಳುಗಳಲ್ಲಿ ಕರುಣಾಳು.

#9502
- `Abdu'l-Bahá

 

ಕ್ಷಮೆಯಾಚನೆಗಾಗಿ

. . . . ಮನುಷ್ಯರ ಮುಂದೆ ಉಲ್ಲಂಘನೆ ಮತ್ತು ಪಾಪಗಳ ನಿವೇದನೆಗೆ ಅನುಮತಿಯಿಲ್ಲ . . . . ಪಾಪಿಯು, ತನ್ನ ಮತ್ತು ದೇವರ ಮಧ್ಯೆ, ಕೃಪಾಸಾಗರದಿಂದ ಕೃಪೆಗಾಗಿ ಮೊರೆಯಿಡಬೇಕು, ಉದಾರತೆಯ ಸ್ವರ್ಗದಿಂದ ಕ್ಷಮೆಯಾಚಿಸಿ ಈ ರೀತಿ ಹೇಳಬೇಕು.

ಓ ದೇವರೇ, ನನ್ನ ದೇವರೇ! ಯಾರು ನಿನ್ನ ಮಧುರವಾಣಿಗಳಿಂದ ಅತೀ ಹರ್ಷಿತರಾಗಿ, ದಿವ್ಯ ಹುತಾತ್ಮತೆಯ ಭವ್ಯವಾದ ಉನ್ನತ ಸ್ಥಾನದೆಡೆ ಧಾವಿಸಿದರೋ ಅಂತಹ ನಿನ್ನ ನಿಜ ಪ್ರೇಮಿಗಳ ನೆತ್ತರಿನ ಮೂಲಕ ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ನಿನ್ನ ಜ್ಞಾನದಲ್ಲಿ ಪ್ರತಿಷ್ಠೆಯಾಗಿರುವ ರಹಸ್ಯಗಳ ಮೂಲಕ ಹಾಗೂ ನಿನ್ನ ಉದಾರತೆಯ ಸಾಗರದಲ್ಲಡಗಿರುವ ಮುತ್ತುರತ್ನಗಳ ಮೂಲಕ ನನಗೂ ನನ್ನ ತಂದೆ ಮತ್ತು ನನ್ನ ತಾಯಿಗೂ ಕ್ಷಮೆಯನ್ನೀಡೆಂದು ನಾನು ನಿನ್ನನ್ನು ಯಾಚಿಸುತ್ತಿದ್ದೇನೆ. ಕೃಪೆಯನ್ನು ತೋರುವವರಲ್ಲಿ, ಸತ್ಯವಾಗಿಯೂ, ನೀನೇ ಅತ್ಯಂತ ದಯಾಳು ಆಗಿರುವೆ. ಸದಾ ಕ್ಷಮಾಶೀಲನೂ, ಸರ್ವ ಉದಾರಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

ಓ ಪ್ರಭುವೇ! ಪಾಪಗಳ ಈ ಸಾರವು ನಿನ್ನ ಕೃಪಾ ಸಾಗರದತ್ತ ತಿರುಗಿರುವುದನ್ನೂ, ಈ ದುರ್ಬಲನು ನಿನ್ನ ದಿವ್ಯ ಶಕ್ತಿಯ ರಾಜ್ಯವನ್ನರಸುವುದನ್ನೂ ಹಾಗೂ ಈ ಬಡ ಜೀವಿಯು ಸ್ವಯಂ ನಿನ್ನ ಐಶ್ವರ್ಯದ ದಿನ ನಕ್ಷತ್ರದೆಡೆ ವಾಲಿರುವುದನ್ನೂ ನೀನು ನೋಡುತ್ತಿರುವೆ. ಓ ಪ್ರಭುವೇ, ನಿನ್ನ ಕರುಣೆ ಮತ್ತು ನಿನ್ನ ಕೃಪೆಯಿಂದ ಅವನನ್ನು ನಿರಾಶೆಗೊಳಿಸದಿರು ಅಥವಾ ನಿನ್ನ ದಿನಗಳಲ್ಲಿ ನಿನ್ನ ಅನುಗ್ರಹಿತ ದಿವ್ಯ ದರ್ಶನಗಳಿಂದ ಅವನನ್ನು ಬಹಿಷ್ಕರಿಸದಿರು, ಅಲ್ಲದೆ ನಿನ್ನ ಸ್ವರ್ಗ ಹಾಗೂ ನಿನ್ನ ಪೃಥ್ವಿಯಲ್ಲಿ ವಾಸಿಸುತ್ತಿರುವ ಸರ್ವರಿಗೂ ನೀನು ವಿಶಾಲವಾಗಿ ತೆರೆದಿಟ್ಟಿರುವ ನಿನ್ನ ದ್ವಾರದಿಂದ ಅವನನ್ನು ಹೊರದೂಡದಿರು.

ಅಕಟಕಟಾ! ನನ್ನ ಪಾಪಗಳು ನಿನ್ನ ಪವಿತ್ರತೆಯ ಅಸ್ಥಾನವನ್ನು ಸಮೀಪಿಸುತ್ತಿರುವುದರಿಂದ ನನ್ನನ್ನು ತಡೆದಿವೆ ಹಾಗೂ ನನ್ನ ಅತಿಕ್ರಮ ಪ್ರವೇಶವು ನನ್ನನ್ನು ನಿನ್ನ ಭವ್ಯವಾದ ಪೂಜಾಸ್ಥಾನದಿಂದ ಬಹುದೂರವಿರುವಂತೆ ಮಾಡಿದೆ. ನಾನು ಮಾಡಬಾರದೆಂದು ನೀನು ನಿಷೇಧಿಸಿರುವುದನ್ನು ನಾನು ಮಾಡಿರುವೆ ಹಾಗೂ ನಾನು ಲಕ್ಷಿಸಬೇಕೆಂದು ನೀನು ವಿಧಾಯಕ ಮಾಡಿರುವುದನ್ನು ನಾನು ಅಲಕ್ಷಿಸಿರುವೆ. ನನ್ನನ್ನು ನಿನ್ನ ಬಳಿ ಸೆಳೆಯುವಂತೆ ಮಾಡುವುದನ್ನು ನಿನ್ನ ಉದಾರತೆಯ ಲೇಖನಿಯಿಂದ ನನಗೆ ಬರೆದಿಡಬೇಕೆಂದೂ, ನಿನ್ನ ಕ್ಷಮೆ ಮತ್ತು ಮನ್ನಿಸುವಿಕೆ ಹಾಗೂ ನನ್ನ ಮಧ್ಯೆ ನುಸುಳಿರುವ ನನ್ನ ಅತಿಕ್ರಮಣಗಳಿಂದ ನನ್ನನ್ನು ಶುದ್ಧಗೊಳಿಸೆಂದೂ ನಾಮಧೇಯಗಳ ಸಾರ್ವಭೌಮ ಪ್ರಭುವಿನ ಮೂಲಕ ನಾನು ನಿನ್ನನ್ನು ಪ್ರಾರ್ಥಿಸುವೆ.

ನಿಜವಾಗಿಯೂ ನೀನೇ ಸಮರ್ಥ, ಉದಾರಿ, ಪ್ರಬಲನೂ, ಕೃಪಾಳುವೂ ಆದ ನೀನಲ್ಲದೆ ಬೇರೆ ದೇವರಿಲ್ಲ.

#9447
- Bahá'u'lláh

 

ಓ ಪ್ರಭುವೇ, ನಿನಗೆ ಸ್ತೋತ್ರವಾಗಲಿ! ನಮ್ಮ ಪಾಪಗಳಿಗಾಗಿ ನಮ್ಮನ್ನು ಕ್ಷಮಿಸು. ನನ್ನ ಮೇಲೆ ಕರುಣೆ ತೋರು ಹಾಗೂ ನಾವು ನಿನ್ನೆಡೆಗೆ ಹಿಂದಿರುಗುವಂತೆ ಮಾಡು. ನಿನ್ನನ್ನಲ್ಲದೆ ಬೇರಾವುದರ ಮೇಲೂ ಅವಲಂಬಿತರಾಗದಿರುವಂತೆ ನಮ್ಮನ್ನು ಕಷ್ಟಪಡಿಸು, ನೀನು ಪ್ರೀತಿಸುವುದನ್ನೂ, ಇಚ್ಚಿಸುವುದನ್ನೂ ನಿನಗೆ ತಕ್ಕುದಾದ ಒಳ್ಳೆಯದನ್ನೂ ನಮಗೆ ನಿನ್ನ ಔದಾರ್ಯದ ಮೂಲಕ ದಯಪಾಲಿಸು. ನಿಜವಾಗಿಯೂ ನಂಬಿದವರ ಸ್ಥಾನವನ್ನು ಉನ್ನತಿಗೇರಿಸು. ನಿನ್ನ ಕೃಪೆಯಿಂದ, ಕ್ಷಮಾಶೀಲತೆಯಿಂದ ಅವರನ್ನು ಮನ್ನಿಸು.

ನೀನು ನಿಜವಾಗಿಯೂ ಆಪತ್ತಿನಲ್ಲಿ ಸಹಾಯಕನು, ಸ್ವಯಮಾಧಾರನು.

#9448
- The Báb

 

ಓ ನನ್ನ ದೇವರೇ, ಓ ನನ್ನ ಪ್ರಭುವೇ, ಓ ನನ್ನ ಒಡೆಯನೇ! ನಾನು, ನಿನ್ನ ಪ್ರೀತಿಯನ್ನಲ್ಲದೆ, ಬೇರಾವುದೋ ಆನಂದ, ಅಥವಾ ನಿನ್ನ ಸಾಮೀಪ್ಯವನ್ನಲ್ಲದೆ ಬೇರಾವುದೋ ಸುಖ ಅಥವಾ ನಿನ್ನ ಸಂತೃಪ್ತಿಯನ್ನಲ್ಲದೆ ಬೇರಾವುದೋ ಸಂತೋಷ ಅಥವಾ ನಿನ್ನೊಡನೆ ಭಾವೈಕ್ಯವನ್ನಲದೆ ಬೇರಾವುದೋ ಬದುಕನ್ನು ಅರಸಿದುದ್ದಕ್ಕಾಗಿ, ನನ್ನನ್ನು ಮನ್ನಿಸೆಂದು ನಿನ್ನನ್ನು ಬೇಡುವೆ. - ಬಾಬ್

ಓ ಸ್ವಾಮಿಯೇ, ನೀನೇ ಜನರ ಆಶಾಕಿರಣ, ಈ ಎಲ್ಲ ನಿನ್ನ ಸೇವಕರ ರಕ್ಷಕ. ರಹಸ್ಯ ಹಾಗೂ ಪವಾಡಗಳನ್ನು ನೀನು ಬಲ್ಲೆ. ನಾವೆಲ್ಲ ಪಾಪಿಗಳು ನೀನಾದರೋ ಇಂಥ ಪಾಪಗಳ ನಿವಾರಕ ಕರುಣಾಮಯಿ ಹಾಗೂ ಕೃಪಾಳು ಓ ಪ್ರಭುವೇ ನಮ್ಮ ಲೋಪದೋಷಗಳನ್ನು ಗಮನಿಸಬೇಡ. ದಯೆ ಹಾಗೂ ಕರುಣೆಯಿಂದ ಕಾಣು. ನಮ್ಮ ಲೋಪದೋಷಗಳು ಹಲವು ಆದರೆ ನಿನ್ನ ಕ್ಷಮಾಗುಣದ ಸಾಗರ ಬಹು ವಿಶಾಲ. ಆದ್ದರಿಂದ ನಮ್ಮನ್ನು ದೃಢಗೊಳಿಸು ಬಲಪಡಿಸು ನಾವು ನಿನಗೆ ಸಮರ್ಪಣವಾಗುವಂತೆ ಸಹಾಯವೆಸಗು ನಮ್ಮ ಆತ್ಮಗಳನ್ನು ಬೆಳಗಿಸು ಕಣ್ಣುಗಳು ತೆರೆದು ನೋಡುವಂತೆ ಮಾಡು. ಕಿವಿಗಳು ಗಮನಿಸುವಂತೆ ಮಾಡು ಸತ್ತವರನ್ನು ಉದ್ದರಿಸು. ರೋಗಿಗಳನ್ನು ಗುಣಪಡಿಸು ಬಡವರನ್ನು ಸಿರಿವಂತರನ್ನಾಗಿ ಮಾಡು. ನಿರಾಶ್ರಿತರಲ್ಲಿ ವಿಶ್ವಾಸವನ್ನು ಮೂಡಿಸು. ನಿನ್ನಲ್ಲಿ ನಮ್ಮನ್ನು ಅರ್ಪಿಸಿಕೊಳ್ಳು. ನಿನ್ನ ಪ್ರೀತಿಯ ಜ್ಯೋತಿಯಿಂದ ನಮ್ಮಲ್ಲಿ ಬೆಳಕನ್ನುಂಟುಮಾಡು. ನೀನು ಉದಾರಿ, ಕರುಣಾಶಾಲಿ, ವಾತ್ಸಲ್ಯಮಯಿ.

#9449
- `Abdu'l-Bahá

 

ಓ ಮನ್ನಿಸುವ ಭಗವಂತನೇ, ಈ ಸೇವಕರು ನಿನ್ನತ್ತ ತಿರುಗಿ ನಿನ್ನ ದಯೆ ಹಾಗೂ ಉದಾರತೆಯನ್ನು ಯಾಚಿಸುತ್ತಿರುವರು. ದೇವರೇ, ಅವರ ಹೃದಯಗಳನ್ನು ನಿನ್ನ ಪ್ರೀತಿಗೆ ಆರ್ಹವಾಗಿರುವಂತೆ, ಉತ್ತಮವಾದುದನ್ನಾಗಿಯೂ, ಪರಿಶುದ್ಧವನ್ನಾಗಿಯೋ ಮಾಡುವವನಾಗು, ಅವರ ಮೂಲಕ ಸೂರ್ಯಪ್ರಭೆ ಬೆಳಗಲು ಆತ್ಮಗಳನ್ನು ಶುದ್ಧ ಹಾಗೂ ಪವಿತ್ರಗೊಳಿಸುವವನಾಗು. ನಿನ್ನ ಪ್ರಭೆಯನ್ನು ಕಾಣುವ ಕಣ್ಣುಗಳನ್ನು ಶುದ್ಧಗೊಳಿಸಿ ಶ್ರೇಷ್ಠರನ್ನಾಗಿ ಮಾಡು. ನಿನ್ನ ಕರೆಗೆ ಓಗೊಡುವಂತೆ ಕಿವಿಗಾಳನ್ನು ಒಳ್ಳೆಯದನ್ನಾಗಿ ಮಾಡು. ಪ್ರಭುವೇ, ನಾವು ನಿಜಕ್ಕೂ ದುರ್ಬಲರು ಆದರೆ ನೀನು ಪ್ರಬಲ ನಾವು ಬಡವರು, ನೀನು ಶ್ರೀಮಂತ, ನಾವು ನಿನ್ನನ್ನು ಅರಸುವವರು. ನೀನಾದರೋ ಆಶ್ರಯ ನೀಡುವವ. ಪ್ರಭುವೇ, ನಮ್ಮ ಮೇಲೆ ಕನಿಕರವಿತ್ತು ಕ್ಷಮಿಸು. ನಿನ್ನ ಉಪಕಾರಕ್ಕೆ ಅರ್ಹತೆ ಹಾಗೂ ಸಿದ್ಧತೆಯನ್ನು ಕರುಣಿಸು. ನಿನ್ನ ಪ್ರೇಮದ ಕಿಡಿಯಿಂದ ಹೊತ್ತಿದ ಜ್ವಾಲೆಗೆ ಆಕರ್ಷಕನಾಗಿ ನಿನ್ನ ಸಾನ್ನಿದ್ಯವನ್ನು ಸಮೀಪಿಸಲು ಅವಕಾಶ ದಯಪಾಲಿಸು. ನಿನ್ನ ಪವಿತ್ರಾತ್ಮದ ಶ್ವಾಸದ ಮೂಲಕ ಈ ಪ್ರಭಾವಯುತ ಯುಗದಲ್ಲಿ ಪುನರುಜ್ಜೀವಿಸುವಂತಾಗಲಿ. ನೀನು ಪರಮ ಸತ್ವಶಾಲಿ, ಬಲಾಢ್ಯ, ಕರುಣಾಳು, ಅಷ್ಟೇ ಅಲ್ಲ ದಯಾಸಾಗರ.

#9450
- `Abdu'l-Bahá

 

ಗರ್ಭಿಣಿ ಸ್ತ್ರೀಯರಿಗಾಗಿ

ನನ್ನ ಪ್ರಭುವೇ ನನ್ನ ಪ್ರಭುವೇ! ಈ ನಿನ್ನ ದೀನ ಸೇವಕಿಯನ್ನು ವಿಶೇಷವಾದ ಕೃಪೆಯಿಂದ ನಿಗ್ರಹಿಸಿದ್ದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತಿದ್ದೇನೆ ಮತ್ತು ಕೃತಜ್ಞತೆಗಳನ್ನರ್ಪಿಸುತ್ತಿದ್ದೇನೆ. ನಿನ್ನ ಈ ಸೆರೆಯಾಳು ನಿನ್ನಲ್ಲಿ ಪ್ರಾರ್ಥಿಸುತ್ತಿದ್ದಾಳೆ, ಬಿನ್ನವಿಸುತ್ತಿದ್ದಾಳೆ. ಏಕೆಂದರೆ, ನಿಜವಾಗಿಯೂ ನೀನು ಆಕೆಯನ್ನು ನಿನ್ನ ವಿಶದವಾದ ಸಾಮ್ರಾಜ್ಯದತ್ತ ಮಾರ್ಗದರ್ಶನ ನೀಡಿರುವೆ, ಈ ಕ್ಷಣಿಕ ಪ್ರಪಂಚದಲ್ಲಿ ನಿನ್ನ ಉತ್ಕೃಷ್ಟವಾದ ಕರೆಯನ್ನು ಆಲಿಸುವಂತೆ ಮಾಡಿರುವೆ. ಎಲ್ಲಾ ವಸ್ತುಗಳ ಮೇಲೂ ನಿನ್ನ ಜಯಪ್ರದ ಪ್ರಭುತ್ವವನ್ನು ಸಾರುವ ನಿನ್ನ ಚಿನ್ಹೆಗಳನ್ನು ನೋಡುವಂತೆ ಮಾಡಿರುವೆ.

ಓ ನನ್ನ ಪ್ರಭುವೇ, ನನ್ನ ಗರ್ಭದಲ್ಲಿರುವುದನ್ನು ನಿನಗಾಗಿ ಸಮರ್ಪಿಸುವೆ ಬಳಿಕ ಅದು ನಿನ್ನ ಶಿಕ್ಷಣದ ಪಾರುಪತ್ಯದಲ್ಲಿ ಬೆಳೆದು ವಿಕಾಸಗೊಳ್ಳುವಂತಹ; ನಿನ್ನ ಕೃಪೆ ಮತ್ತು ನಿನ್ನ ಔದಾರ್ಯದಿಂದ ನಿನ್ನ ಸಾಮ್ರಾಜ್ಯದಲ್ಲಿ ಅದನ್ನೊಂದು ಪ್ರಶಂಸಾರ್ಹ ಹಾಗೂ ಭಾಗ್ಯಶಾಲಿ ಮಗುವಾಗುವಂತೆ ಕಾರಣನಾಗು. ನಿಜವಾಗಿಯೂ ನೀನು ಕೃಪಾಳು ನಿಜವಾಗಿಯೂ, ನೀನು ವಿಶೇಷಾನುಗ್ರಹ ಪ್ರದಾಯಕ ಪ್ರಭುವಾಗಿರುವೆ.

-

#9442
- `Abdu'l-Bahá

 

“ಓ ಕರುಣಾಕರನ ಸೇವಕಿಯರೇ! ಮಕ್ಕಳನ್ನು ಶೈಶವಾವಸ್ಥೆಯಿಂದಲೇ ತರಬೇತಿಗೊಳಿಸುವುದು ನಿಮಗೆ ಅಗತ್ಯವಿದೆ! . . . . ಮತ್ತಿದರಲ್ಲಿ ಯಾವುದೇ ರೀತಿಯ ಸಡಿಲತೆಗೆ ಅನುಮತಿಯೇ ಇಲ್ಲ.”

#9443
- `Abdu'l-Bahá

 

ಗುಣಕಾರಿ ಪ್ರಾರ್ಥನೆ

“ಉಪಶಮನಕ್ಕಾಗಿ ಕೋರಿ ಸಾಕ್ಷಾತ್ಕರಿಸಲ್ಪಟ್ಟ ಪ್ರಾರ್ಥನೆಗಳು ಶಾರೀರಿಕ ಹಾಗೂ ಆಧ್ಯಾತ್ಮಿಕ ಉಪಶಮನಗಳೆರಡಕ್ಕೂ ಅನ್ವಯವಾಗುತ್ತವೆ. ಆದ್ದರಿಂದ, ಆತ್ಮ ಹಾಗೂ ಶರೀರ ಎರಡರ ಉಪಶಮನಕ್ಕಾಗಿ ಅವುಗಳನ್ನು ಪಠಿಸಿರಿ. . . . .”

ನಿನ್ನ ಹೆಸರೇ ನನ್ನ ಗುಣಕಾರಿ, ಓ ನನ್ನ ದೇವರೇ, ಮತ್ತು ನಿನ್ನ ಸ್ಮರಣೆಯೇ ನನ್ನ ಚಿಕಿತ್ಸೆ, ನಿನ್ನ ಸಾಮೀಪ್ಯವೇ ನನ್ನ ಭರವಸೆ, ಮತ್ತು ನಿನ್ನ ಬಗ್ಗೆ ಪ್ರೀತಿಯೇ ನನ್ನ ಒಡನಾಡಿ. ನಿನ್ನ ಕರುಣೆ ನನ್ನ ರೋಗ ನಿವಾರಕ ಮತ್ತು ಈ ಜಗತ್ತು ಹಾಗೂ ಮುಂಬರುವ ಜಗತ್ತುಗಳೆರಡರಲ್ಲಿಯೂ ನನ್ನ ಕಷ್ಟರಲ್ಲಿ ಸಹಾಯಕಾರಿ. ನೀನು ಸತ್ಯವಾಗಿಯೂ, ಸರ್ವ ಉದಾರಿ, ಸರ್ವಶ್ರುತ, ಸರ್ವಜ್ಞ.

#9453
- Bahá'u'lláh

 

ಯಾರ ನಾಮಗಳ ಮೂಲಕ ರೋಗಿಗಳು ಗುಣಮುಖರಾಗುವರೋ, ಅಸ್ವಸ್ಥರು ವಾಸಿಗೊಳ್ಳುವರೋ, ಬಾಯಾರಿದವರು ದಾಹವನ್ನು ತಣಿಸುವ ಪಾನೀಯ ಪಡೆಯುವರೋ, ದುಃಖಪೀಡಿತರು ಶಾಂತರಾಗುವರೋ, ಚಪಲಚಿತ್ತರು ಮಾರ್ಗದರ್ಶಿತರಾಗುವರೋ, ಕಡೆಗಣಿಸಲ್ಪಟ್ಟವರು ಉನ್ನತಿಗೇರುವರೋ, ಬಡವರು ಸಿರಿವಂತರಾಗುವರೋ, ಅಜ್ಞಾನಿಗಳು ಜ್ಞಾನಿಗಳಾಗುವರೋ, ಅಂಧಕಾರದಲ್ಲಿರುವವರು ಪ್ರಕಾಶಿತರಾಗುವರೋ, ಶೋಕತಪ್ತರು ಪ್ರಸನ್ನರಾಗುವರೋ, ನಿರಾತ್ಸಾಹಿಗಳು ಉತ್ಸಾಹಿತರಾಗುವರೋ, ತುಳಿಯಲ್ಪಟ್ಟವರು ಮೇಲೆತ್ತಲ್ಪಡುವರೋ, ಅವನೇ ನೀನಾಗಿರುವೆ, ಓ ಪರಮಾತ್ಮ. ನಿನ್ನ ಹೆಸರಿನ ಮೂಲಕ, ಓ ನನ್ನ ದೇವರೇ, ಸೃಷ್ಟಿಸಿದ ಎಲ್ಲವೂ ಹುರಿದುಂಬಿಸಲ್ಪಟ್ಟಿವೆ, ಸ್ವರ್ಗಗಳು ವ್ಯಾಪಿಸಿವೆ, ಭೂಮಿಯು ಸ್ಥಾಪಿತವಾಗಿದೆ. ಮೇಘಗಳನ್ನೆಬ್ಬಿಸಿ ಭೂಮಿಯ ಮೇಲೆ ಅವು ಮಳೆ ಸುರಿಸುವಂತೆ ಮಾಡಿದೆ. ನಿಶ್ಚಯವಾಗಿಯೂ ಇದು ನಿನ್ನ ಜೀವಿಗಳಿಗೆ ನಿನ್ನ ಕುರುಹಾಗಿದೆ.

ಯಾರ ನಾಮದ ಮೂಲಕ ನೀನು ನಿನ್ನ ದೈವತ್ವವನ್ನು ಪ್ರಕಟಪಡಿಸಿರುವೆಯೋ, ಸೃಷ್ಟಿಯಲ್ಲಿರುವುದಕ್ಕಿಂತ ಮಿಗಿಲಾಗಿ ನಿನ್ನ ಧರ್ಮವನ್ನು ಉನ್ನತಿಗೇರಿಸಿರುವೆಯೋ ಹಾಗೂ ನಿನ್ನ ಪ್ರತಿಯೊಂದೂ ಅತ್ಯಂತ ಶ್ರೇಷ್ಠ ಬಿರುದುಗಳಿಂದ ಅತೀ ಮಹಿಮಾನ್ವಿತ ಗುಣಧರ್ಮಗಳಿಂದ, ಮತ್ತೆಲ್ಲಾ ಸದ್ಗುಣಗಳಿಂದ ನಿನ್ನ ಉತ್ಕೃಷ್ಟ ಹಾಗೂ ಅತ್ಯಂತ ಶ್ರೇಷ್ಠವಾದ ಅಸ್ತಿತ್ವವು ಶ್ಲಾಘಿಸಲ್ಪಟ್ಟಿದೆಯೋ, ಆದ್ದರಿಂದ ನಿನ್ನ ಸೃಷ್ಟಿಯ ಸಾಮ್ರಾಜ್ಯದಲ್ಲಿ ನಿನ್ನ ಸಕಲ ವೈಭವದ ಆತ್ಮದೊಡನೆ ನೀನು ಸಂಬಂಧಿಸಿರುವ ಈ ಹಸುಳೆಯ ಮೇಲೆ ಈ ರಾತ್ರಿ ನಿನ್ನ ದಯೆಯ ಮೋಡಗಳಿಂದ ನಿನ್ನ ಉಪಶಮನವನ್ನು ವರ್ಷಿಸೆಂದು ನಾನು ನಿನ್ನಲ್ಲಿ ಮೊರೆಯಿಡುತ್ತಿದ್ದೇನೆ. ಆನಂತರ, ನಿನ್ನ ಅನುಗ್ರಹ, ಸುಸ್ಥಿತಿ ಹಾಗೂ ಆರೋಗ್ಯದ ನಿಲುವಂಗಿಯನ್ನು ಅವನಿಗೆ ತೊಡಿಸು. ಓ ನನ್ನ ಪ್ರಿಯತಮನೇ, ಪ್ರತಿಯೊಂದು ಬೇನೆ ಮತ್ತು ವ್ಯಾಧಿಯಿಂದ ಹಾಗೂ ನಿನಗೆ ಅಪ್ರಿಯವಾದವುಗಳಿಂದ ಅವನನ್ನು ಕಾಪಾಡು. ನಿಜವಾಗಿಯೂ ನಿನ್ನ ಪರಾಕ್ರಮವು ಎಲ್ಲಾ ವಸ್ತುಗಳಿಗೂ ಸಮಬಲವುಳ್ಳದ್ದಾಗಿದೆ. ಸತ್ಯವಾಗಿಯೂ ನೀನು ಅತ್ಯಂತ ಶಕ್ತಿಶಾಲಿ, ಸ್ವಯಮಾಧಾರನು. ಅದೂ ಅಲ್ಲದೆ, ಓ ನನ್ನ ಪರಮಾತ್ಮನೇ, ಅವನ ಮೇಲೆ ಈ ಜಗತ್ತಿನ ಹಾಗೂ ಮುಂದಿನದರ ಒಳಿತನ್ನೂ ಅಲ್ಲದೆ ಹಿಂದಿನ ಮತ್ತು ನಂತರದ ತಲೆಮಾರುಗಳ ಒಳಿತನ್ನೂ ಕಳುಹಿಸಿಕೊಡು. ನಿನ್ನ ಬಲ ಮತ್ತು ವಿವೇಕ ನಿಜವಾಗಿಯೂ ಇದಕ್ಕೆ ಸರಿಸಮವಾಗಿರುವುದು.

#9454
- Bahá'u'lláh

 

ನಿಧಿಗಾಗಿ ಕೊಡುಗೆಗಳು

(ದೈವ ಮಿತ್ರರೆಲ್ಲರ- ಅವರ ಕೊಡುಗೆ ಎಷ್ಟೇ ಅಲ್ಪ ಪ್ರಮಾಣದಲ್ಲಿದ್ದರೂ ತಮಗೆ ಸಾಧ್ಯವಾದಷ್ಟೂ ನಿಧಿಗಾಗಿ ಕೊಡುಗೆಗಳನ್ನು ನೀಡಬೇಕು. ದೇವರು ಯಾವುದೇ ಆತ್ಮಕ್ಕಾದರೂ ಅದರ ಶಕ್ತಿಗೆ ಮೀರಿದ್ದನ್ನು ಹೊರಿಸುವುದಿಲ್ಲ. ಇಂತಹ ಕೊಡುಗೆಗಳು ಎಲ್ಲ ಕೇಂದ್ರಗಳಿಂದಲೂ ಎಲ್ಲ ಅನುಯಾಯಿಗಳಿಂದಲೂ ಬರಬೇಕು. . . . ಓ ದೈವ ಮಿತ್ರರೇ! ನಿಮ್ಮ ಕೊಡುಗೆಗಳಿಂದ, ಒಳ್ಳೆಯ ಕಾಣಿಕೆಗಳಿಂದ ನಿಮ್ಮ ವ್ಯವಸಾಯ, ನಿಮ್ಮ ಕೈಗಾರಿಕೆ ಮತ್ತು ನಿಮ್ಮ ವಾಣಿಜ್ಯಗಳು ಅನುಗ್ರಹಿತವಾಗಿ ಅನೇಕ ಪಟ್ಟು ಅಭಿವೃದ್ಧಿ ಆಗುತ್ತವೆ. ಎಂಬುದರಲ್ಲಿ ಭರವಸೆ ತಾಳಿರಿ, ಯಾರು ಒಂದು ಒಳ್ಳೆಯ ಕೆಲಸದೊಂದಿಗೆ ಮುಂದೆ ಬರುತ್ತಾರೋ ಅಂತಹವರು ಅದಕ್ಕೆ ಪ್ರತಿಯಾಗಿ ಹತ್ತು ಪಟ್ಟು ಬಹುಮಾನವನ್ನು ಪಡೆಯುವರು. ಯಾರು ತಮ್ಮ ಐಶ್ವರ್ಯವನ್ನು ಆತನ ಪಥದಲ್ಲಿ ವಿನಿಯೋಗಿಸುವರೋ ಅಂತಹವರನ್ನು ನೈಜಪ್ರಭುವು ಸಮೃದ್ಧತೆಯಿಂದ ದೃಢಪಡಿಸುವನೆಂಬುದು ನಿಸ್ಸಂಶಯ.)

ಓ ದೇವರೇ, ನನ್ನ ದೇವರೇ, ನಿನ್ನ ನಿಜವಾದ ಪ್ರೇಮಿಗಳ ಹುಬ್ಬುಗಳನ್ನು ಪ್ರಕಾಶಗೊಳಿಸು. ನಿಶ್ಚಿತ ವಿಜಯದ ದೇವತಾ ಸಮೂಹದೊಡನೆ ಅವರಿಗೆ ಸಹಾಯ ನೀಡು. ನಿನ್ನ ನೇರವಾದ ಪಥದ ಮೇಲೆ ಅವರ ಹೆಜ್ಜೆಗಳನ್ನು ಸ್ಥಿರಪಡಿಸು. ನಿನ್ನ ಪ್ರಾಚೀನ ಔದಾರ್ಯದಿಂದ ನಿನ್ನ ಅನುಗ್ರಹ ದ್ವಾರಗಳಾನ್ನು ಅವರ ಮುಂದೆ ತೆರೆದಿಡು; ನೀನು ಏನನ್ನು ದಯಪಾಲಿಸಿರುವೆಯೋ ಅದನ್ನು ನಿನ್ನ ಪಥದಲ್ಲಿಯೇ ಅವರು ವಿನಿಯೋಗಿಸುತ್ತಿದ್ದಾರೆ. ನಿನ್ನ ಧರ್ಮವನ್ನು ರಕ್ಷಿಸುತ್ತಿದ್ದಾರೆ ನಿನ್ನ ಸ್ಮರಣೆಯಲ್ಲಿ ಅವರ ವಿಶ್ವಾಸವನ್ನಿಟ್ಟಿದ್ದಾರೆ. ನಿನ್ನ ಪ್ರೇಮಕ್ಕಾಗಿ ಅವರು ಹೃದಯಗಳನ್ನು ಅರ್ಪಿಸುತ್ತಿದ್ದಾರೆ. ನಿನ್ನ ಸೌಂದರ್ಯದ ಆರಾಧನೆಗಾಗಿ, ನಿನ್ನನ್ನು ಸಂತೋಷಗೊಳಿಸುವ ಹಾದಿಗಳನ್ನು ಅರಸುವುದಕ್ಕಾಗಿ ತಮ್ಮಲ್ಲಿ ಏನಿದೆಯೋ ಅದನ್ನು ಅರ್ಪಿಸದೇ ಹೋಗಿಲ್ಲ.

ಓ ನನ್ನ ಒಡೆಯನೇ! ಸಮೃದ್ಧತೆಯ ಭಾಗವೊಂದನ್ನು, ನಿಶ್ಚಿತ ಬಹುಮಾನವೊಂದನ್ನು ಮತ್ತು ಪೂರ್ವ ನಿಯೋಜಿತ ಪ್ರತಿಫಲವೊಂದನ್ನು ಅವರಿಗೆ ದಯಪಾಲಿಸು. ನಿಜವಾಗಿ ನೀನು ಸಂರಕ್ಷಕನೂ, ಸಹಾಯಕನೂ, ಉದಾರಿಯೂ, ಪ್ರದಾತನೂ, ಎಂದೆಂದಿಗೂ ಕೊಡುಗೆಗಳನ್ನು ನೀಡುವವನೂ ಆಗಿರುವೆ.

#9451
- `Abdu'l-Bahá

 

ನಿಧನರಾದವರಿಗಾಗಿ

ಈ ಪ್ರಾರ್ಥನೆಗಳನ್ನು ಹದಿನೈದು ವರ್ಷ ಮೇಲ್ಪಟ್ಟ ಬಹಾಯಿಗಳಗಾಗಿ ಉಪಯೋಗಿಸಬೇಕು.

“ಧಾರ್ಮಿಕ ಸಮೂಹದಲ್ಲಿ ಪಠಿಸುವಂತಹ ಏಕೈಕ ಬಹಾಯಿ ಅನಿವಾರ್ಯ ಪ್ರಾರ್ಥನೆ ಇದಾಗಿದೆ, ಇದನ್ನು ಒಬ್ಬರು ಪಠಿಸುತ್ತಿರುವಾಗ ಉಪಸ್ಥಿತರೆಲ್ಲರೂ ನಿಂತುಕೊಳ್ಳಬೇಕು. ಈ ಪ್ರಾರ್ಥನೆಯನ್ನು ಹೇಳುವಾಗ ಸಂಪೂಜನಾ ಸ್ಥಳದೆಡೆ ಮುಖ ತಿರುಗಿಸುವ ಅವಶ್ಯಕತೆಯಿರುವುದಿಲ್ಲ.”

ಓ ನನ್ನ ದೇವರೇ! ನಿನ್ನ ಹೊರತು ಉಳಿದೆಲ್ಲವುಗಳಿಂದ ಅಲಿಪ್ತನಾಗಿ ತನ್ನ ಮುಖವನ್ನು ನಿನ್ನೆಡೆಗೆ ತಿರುಗಿಸಿರುವ, ನಿನ್ನನ್ನು ಮತ್ತು ನಿನ್ನ ಸಂಕೇತಗಳನ್ನು ನಂಬಿರುವ ಈತ ನಿನ್ನ ಸೇವಕ. ನಿನ್ನ ಸೇವಕನ ಮಗ ನಿಜವಾಗಿಯೂ ನೀನೇ ಕರುಣೆ ತೋರುವವರಲ್ಲಿ ಮಹಾ ಕರುಣಾಶಾಲಿಯಾಗಿದ್ದೀಯೆ.

ಮಾನವರ ತಪ್ಪುಗಳನ್ನು ಮರೆಯಾಗಿಟ್ಟು ಅವರ ಪಾಪಗಳನ್ನು ಮನ್ನಿಸುವಾತನೇ, ನಿನ್ನ ಔದಾರ್ಯದ ಸ್ವರ್ಗಕ್ಕೆ ಮತ್ತು ನಿನ್ನ ಅನುಗ್ರಹದ ಸಾಗರಕ್ಕೆ ಯೋಗ್ಯವಾಗಿರುವಂತೆ ಇವನೊಡನೆಯೂ ವ್ಯವಹರಿಸು. ಭೂ ಸ್ವರ್ಗಗಳ ಮೂಲಕ್ಕಿಂತಲೂ ಮೊದಲಿನ ನಿನ ಸರ್ವಶ್ರೇಷ್ಠ ದಯೆಯ ಆವರಣದೊಳಗೆ ಅವನಿಗೆ ಪ್ರವೇಶ ನೀಡು. ಎಂದೆಂದಿಗೂ ಕ್ಷಮಾಶೀಲನಾಗಿರುವ, ಮಹಾ ಉದಾರಿಯಾಗಿರುವ ನೀನಲ್ಲದೆ ಬೇರೆ ದೇವರಿಲ್ಲ.

(ಆ ತರುವಾಯ ‘ಅಭಾ ಓ ಅಭಾ’ ಎಂಬ ಶುಭಾಶಯವನ್ನು ಆತ ಆರು ಸಲ ಪುನರುಚ್ಚರಿಸಲಿ ನಂತರ ಈ ಕೆಳಗಿನ ಪ್ರತಿಯೊಂದು ಶ್ಲೋಕವನ್ನು ಹತ್ತೊಂಬತ್ತು ಸಲ ಪುನರುಚ್ಚರಿಸಲಿ)

ನಾವೆಲ್ಲರೂ, ನಿಜವಾಗಿಯೂ, ದೇವರನ್ನು ಆರಾಧಿಸುವೆವು.

ನಾವೆಲ್ಲರೂ, ನಿಜವಾಗಿಯೂ, ದೇವರ ಮುಂದೆ ತಲೆಬಾಗಿಸುವೆವು

ನಾವೆಲ್ಲರೂ, ನಿಜವಾಗಿಯೂ, ದೇವರಲ್ಲಿ

ಭಕ್ತಿಯುಳ್ಳವರಾಗಿರುವೆವು

ನಾವೆಲ್ಲರೂ, ನಿಜವಾಗಿಯೂ, ದೇವರಿಗೆ ಸ್ತುತಿಯನ್ನು

ಸಲ್ಲಿಸುತ್ತಿರುವೆವು

ನಾವೆಲ್ಲರೂ, ನಿಜವಾಗಿಯೂ, ದೇವರಿಗೆ ಕೃತಜ್ಞತೆಯನ್ನು

ಅರ್ಪಿಸಲು ಶರಣಾಗತರಾಗಿರುವೆವು

ನಾವೆಲ್ಲರೂ, ನಿಜವಾಗಿಯೂ, ದೇವರಲ್ಲಿ

ತಾಳ್ಮೆಯುಳ್ಳವರಾಗಿರುವೆವು.

(ಮೃತರು ಸ್ತ್ರೀ ಆಗಿದ್ದರೆ ಹೀಗೆ ಹೇಳಲಿ : ಈಕೆ ನಿನ್ನ ಸೇವಕಿ, ಸೇವಕಿಯ ಮಗಳು ಇತ್ಯಾದಿ)

#9438
- Bahá'u'lláh

 

.

ನಿನ್ನನ್ನು ಕೊಂಡಾಡಲಿ, ಓ ಪ್ರಭುವೇ ನನ್ನ ದೇವರೇ! ಯಾರನ್ನು ನೀನು ನಿನ್ನ ಚಿರಂತನ ಸಾರ್ವಭೌಮತೆಯ ಶಕ್ತಿಯ ಮೂಲಕ ಉನ್ನತವಾಗಿರಿಸಿರುವೆಯೋ ಅವನನ್ನು ಕಡೆಗಣಿಸದಿರು, ಯಾರನ್ನು ನಿನ್ನ ನಿತ್ಯತೆಯ ಪೂಜಾ ಸ್ಥಾನವನ್ನು ಸೇರುವಂತೆ ಮಾಡಿರುವೆಯೋ ಅವರನ್ನು ಕಡೆಗಣಿಸದಿರು, ಯಾರನ್ನು ನಿನ್ನ ನಿತ್ಯತೆಯ ಪೂಜಾ ಸ್ಥಾನವನ್ನು ಸೇರುವಂತೆ ಮಾಡಿರುವೆಯೋ ಅವರನ್ನು ನಿನ್ನಿಂದ ಬಹುದೂರಕ್ಕೆ ಸ್ಥಳಾಂತರಿಸದಿರು. ಓ ನನ್ನ ದೇವರೇ, ನಿನ್ನ ಪ್ರಭುತ್ವದಿಂದ ನಿನ್ನಾಶ್ರಯಿಸಿದವರನ್ನು ನೀನು ಕೈ ಬಿಡುವೆಯಾ?” ಓ ನನ್ನ ಆಕಾಂಕ್ಷೆಯೇ, ಯಾರಿಗೆ ನೀನೊಬ್ಬ ಆಶ್ರಯದಾತನಾಗಿರುವೆಯೋ, ಅವನನ್ನು ನಿನ್ನಿಂದ ದೂರ ಸರಿಸುವೆಯಾ? ಯಾರನ್ನು ನೀನು ಮೇಲೆತ್ತಿರುವೆಯೋ ಅವನನ್ನು ಕೆಳಕ್ಕಿಳಿಸುವೆಯಾ ಅಥವಾ ನಿನ್ನ ಸ್ಮರಣೆ ಮಾಡಲು ಶಕ್ತರನ್ನಾಗಿಸಿದವರನ್ನು ಮರೆತುಬಿಡುವೆಯಾ?

ನಿನ್ನ ಸ್ತೋತ್ರವಾಗಲಿ, ಓ ದೇವರೇ, ನಿನ್ನನ್ನು ಅಪಾರವಾಗಿ ಕೊಂಡಾಡಲಿ! ಅನಾದಿ ಕಾಲದಿಂದಲೂ ಇಡೀ ಸೃಷ್ಟಿಯ ರಾಜನು ಹಾಗೂ ಅದರ ಪ್ರಧಾನ ಚಾಲಕನೂ ನೀನೇ ಆಗಿರುವೆ, ಮತ್ತು ನೀನು ಸೃಷ್ಟಿಸಿರುವ ಎಲ್ಲಾ ವಸ್ತುಗಳ ಅಮರ ಪ್ರಭು ಮತ್ತು ವಿಧಾಯಕನಾಗಿ ನೀನೇ ಉಳಿಯುವೆ. ನೀನು ಸ್ತುತಿಸಲ್ಪಡಲಿ, ಓ ನನ್ನ ದೇವರೇ! ನೀನು ನಿನ್ನ ಸೇವಕರಿಗೆ ಕರುಣೆ ತೋರಿಸುವುದನ್ನು ನಿಲ್ಲಿಸಿದ್ದಲ್ಲಿ ಅವರಿಗೆ ಕರುಣೆಯನ್ನು ತೋರುವವರಾರು, ಮತ್ತು ನಿನ್ನ ಪ್ರೀತಿಪಾತ್ರರಿಗೆ ನೀನು ಸಹಾಯ ನಿರಾಕರಿಸಿದ್ದಲ್ಲಿ, ಅವರಿಗೆ ನೆರವು ನೀಡುವವರಾರಿಹರು?

ಸ್ತುತಿಸಲ್ಪಟ್ಟಿದ್ದೀಯೇ, ನೀನು ಅಪಾರವಾಗಿ ಕೊಂಡಾಡಲ್ಪಟ್ಟಿದ್ದಿಯೇ! ನೀನು ನಿನ್ನ ಸತ್ಯತೆಯಲ್ಲಿ ಆರಾಧ್ಯನಾಗಿರುವೆ ಮತ್ತು ನಿಜವಾಗಿಯೂ ನಾವೆಲ್ಲರೂ ನಿನ್ನನ್ನು ಆರಾಧಿಸುವೆವು; ನಿನ್ನ ನ್ಯಾಯದಲ್ಲಿ ನೀನು ವ್ಯಕ್ತವಾಗಿರುವೆ ಮತ್ತು ನಿನ್ನನ್ನು ನಿಜವಾಗಿ ನಾವೆಲ್ಲರೂ ಸಾಕ್ಷೀಕರಿಸುವೆವು. ಸತ್ಯವಾಗಿಯೂ ನಿನ್ನ ಕೃಪೆಯಲ್ಲಿ ನೀನು ಪ್ರಿಯತಮನಾಗಿರುವೆ. ಆಪತ್ತಿನಲ್ಲಿ ಸಹಾಯಕನೂ, ಸ್ವಯಮಾಧಾರನೂ ಆದ ನೀನಲ್ಲದೆ ಬೇರೆ ದೇವರಿಲ್ಲ.

#9439
- Bahá'u'lláh

 

“ಮೃತ್ಯುವು ಪ್ರತಿಯೊಬ್ಬ ಭರವಸೆಯುಳ್ಳ ಭಕ್ತಿನಿಗೂ ನಿಜಜೀವನದ ಬಟ್ಟಲನ್ನು ಕಾಣಿಕ ನೀಡುತ್ತದೆ. . . . ಅಮರ ಜೀವನದ ಕೊಡುಗೆಯನ್ನು ಅದು ಅನುಗ್ರಹಿಸುತ್ತದೆ.”

#9441
- Bahá'u'lláh

 

ಓ ನನ್ನ ಸ್ವಾಮಿಯೇ, ಪಾಪಗಳಿಂದ ಮುಕ್ತಿಗೊಳಿಸುವ ಕರುಣಾನಿಧಿಯೇ, ವರಪ್ರದಾತನೇ, ಸಂಕಟ ನಿವಾರಕನೆ, ಇಹ ಶರೀರವನ್ನು ತ್ಯಜಿಸಿ ಆಧ್ಯಾತ್ಮಿಕ ಜಗತ್ತನ್ನು ಏರಿದವರ ಪಾಪಗಳನ್ನು ಕ್ಷಮಿಸೆಂದು ಸತ್ಯವಾಗಿ ನಿನ್ನಲ್ಲಿ ಪ್ರಾರ್ಥಿಸುವೆ. ಭಗವಂತನೇ, ಅವರನ್ನು ಆಕ್ರಮಗಳಿಂದ ಪಾರುಗಾಣಿಸಿ ಪರಿಶುದ್ಧರನ್ನಾಗಿ ಮಾಡು. ಅವರ ದುಃಖಗಳನ್ನು ಪರಿಹರಿಸು. ಅವರಲ್ಲಿ ಕವಿದಿರುವ ಕತ್ತಲೆಯನ್ನು ಬೆಳಕನ್ನಾಗಿ ಪರಿವರ್ತಿಸು. ಸೌಖ್ಯದ ಉದ್ಯಾನವನವನ್ನು ಪ್ರವೇಶಿಸುವಂತೆ ಮಾಡು. ಪರಿಶುದ್ಧವಾದ ಜಲದಿಂದ ಅವರನ್ನು ಶುಚಿಗೊಳಿಸು. ನಿನ್ನ ಅನುಪಮ ತೇಜಸ್ಸನ್ನು ಕಾಣುವಂತೆ ಅನುಗ್ರಹಿಸು.

#9440
- `Abdu'l-Bahá

 

ನಿರ್ಲಿಪ್ತತೆಗಾಗಿ

ಓ ಪ್ರಭುವೇ! ನಿನ್ನಾಶ್ರಯಕ್ಕಾಗಿ ನಾನು ನಿನ್ನಲ್ಲಿಗೇ ಬರುತ್ತಿದ್ದೇನೆ, ನಿನ್ನ ಎಲ್ಲಾ ಚಿಹ್ನೆಗಳತ್ತ ನನ್ನ ಹೃದಯವನ್ನು ತೆರುಗಿಸಿದ್ದೇನೆ.

ಓ ಪ್ರಭುವೇ! ಪ್ರಯಾಣಿಸುತ್ತಿರಲಿ, ಅಥವಾ ಮನೆಯಲ್ಲಿರಲಿ, ನನ್ನ ವ್ಯತ್ತಿಯಲ್ಲಿರಲಿ ಅಥವಾ ನನ್ನ ಕೆಲಸದಲ್ಲಿರಲಿ ನನ್ನ ಸಂಪೂರ್ಣ ಭರವಸೆಯನ್ನು ನಿನ್ನಲಿರಿಸುವೆ.

ಓ ನಿನ್ನ ಕರುಣೆಯಲ್ಲಿ ಯಾರೂ ನಿನ್ನನ್ನು ಮೀರಿಸಲಾಗದವನೇ, ಎಲ್ಲಾ ವಿಷಯಗಳಿಂದಲೂ ಸ್ವತಂತ್ರವಾಗಿರುವಂತೆ ಅವಶ್ಯವಾದುದನ್ನು ಒದಗಿಸುವ ನಿನ್ನ ಸಹಾಯವನ್ನು ನನಗೆ ದಯಪಾಲಿಸು.

ಓ ಪ್ರಭುವೇ! ನೀನು ಇಚ್ಛಿಸಿದಂತೆ, ನನ್ನ ಪಾಲಿನದನ್ನು ನನಗೆ ಅನುಗ್ರಹಿಸು, ಹಾಗೂ ನನಗೆ ನೀನು ವಿಧಿಸಿರುವುದರಲ್ಲೇ ನಾನು ತೃಪ್ತಿಪಡುವಂತೆ ಮಾಡು. ಆಜ್ಞಾಪಿಸುವ ಸಂಪೂರ್ಣ ಅಧಿಕಾರ ನಿನ್ನದಾಗಿದೆ.

#9436
- The Báb

 

ಓ ನನ್ನ ದೇವರೇ, ನನ್ನ ಪ್ರಭುವೇ ಮತ್ತು ನನ್ನ ಒಡೆಯನೇ! ನಾನು ನನ್ನ ಬಂಧು ಬಳಗದವರಿಂದ ನಿರ್ಲಿಪ್ತನಾಗಿದ್ದೇನೆ ಮತ್ತು ನಿನ್ನ ಮೂಲಕ ಭೂ ನಿವಾಸಿಗಳೆಲ್ಲರಿಂದ ಸ್ವತಂತ್ರನಾಗಲು ಕೋರುತ್ತಿದ್ದೇನೆ ಹಾಗೂ ನಿನ್ನ ದೃಷ್ಟಿಯಲ್ಲಿ ಶ್ಲಾಘನೀಯವಾದುದನ್ನು ಪಡೆಯಲು ಸದಾ ಸಿದ್ಧನಿದ್ದೇನೆ. ನಿನ್ನನ್ನಲ್ಲದೆ ಬೇರೆಲ್ಲದರಿಂದ ಸ್ವತಂತ್ರನಾಗಿರುವಂತೆ ಒಳ್ಳೆಯದನ್ನು ಅನುಗ್ರಹಿಸು ಮತ್ತು ನಿನ್ನ ಸೀಮಾತೀತ ಅನುಗ್ರಹಗಳಲ್ಲಿ ಪುಷ್ಕಳಪಾಲನ್ನು ನನಗೆ ದಯಪಾಲಿಸು. ನಿಜವಾಗಿಯೂ, ನೀನು ಸಮೃದ್ಧ ಅನುಗ್ರಹದ ಪ್ರಭುವಾಗಿರುವೆ.

#9437
- The Báb

 

ಪತಿಯರಿಗಾಗಿ ಪ್ರಾರ್ಥನೆ

ಓ ದೇವರೇ, ನನ್ನ ದೇವರೇ! ಈ ನಿನ್ನ ಸೇವಕಿ ನಿನ್ನಲ್ಲಿ ಭರವಸೆಯನ್ನಿಟ್ಟು ನಿನ್ನತ್ತ ತನ್ನ ಮುಖವನ್ನು ತಿರುಗಿಸುತ್ತ, ನಿನ್ನ ಸ್ವರ್ಗಿಯ ಔದಾರ್ಯಗಳನ್ನು ತನ್ನ ಮೇಲೆ ಸುರಿಸುವಂತೆ, ನಿನ್ನ ಆಧ್ಯಾತ್ಮಿಕ ರಹಸ್ಯಗಳನ್ನು ಬಹಿರಂಗಪಡಿಸುವಂತೆ ಹಾಗೂ ನಿನ್ನ ದೈವತ್ವದ ಪ್ರಕಾಶವನ್ನು ತನ್ನ ಮೇಲೆ ಬೀರುವಂತೆ ಮೊರೆಯಿಡುತ್ತಾ ನಿನ್ನಲ್ಲಿ ಬಿನ್ನವಿಸುತ್ತಿದ್ದಾಳೆ.

ಓ ನನ್ನ ಪ್ರಭುವೇ! ನನ್ನ ಪತಿಯ ಕಣ್ಣುಗಳು ವೀಕ್ಷಿಸುವಂತೆ ಮಾಡು. ನೀನು ನಿನ್ನ ಜ್ಞಾನದ ಬೆಳಕಿನಿಂದ ಅವನ ಹೃದಯವನ್ನು ಆನಂದಗೊಳಿಸು, ನೀನು ನಿನ್ನ ತೇಜೋಮಯ ಸೌಂದರ್ಯದತ್ತ ಅವನ ಮನಸ್ಸನ್ನು ಆಕರ್ಷಿಸು, ನೀನು ನಿನ್ನ ಸಾಕ್ಷಾತ್ಕಾರದ ಭವ್ಯತೆಯನ್ನು ಅವನಿಗೆ ಪ್ರಕಟಿಸಿ ಅವನ ಚೈತನ್ಯವನ್ನು ಉಲ್ಲಾಸಗೊಳಿಸು.

ಓ ನನ್ನ ಪ್ರಭುವೇ! ಅವನ ಕಣ್ಣಿನ ಮುಂದಿರುವ ಪರದೆಯನ್ನು ಮೇಲೆತ್ತು. ನಿನ್ನ ಸಮೃದ್ಧವಾದ ಕೃಪೆಯನ್ನು ಅವನ ಮೇಲೆ ವರ್ಷಿಸು, ನಿನ್ನ ಪ್ರೇಮ ಮದಿರೆಯಿಂದ ಅವನನ್ನು ಮತ್ತನನ್ನಾಗಿಸು, ಯಾರ ಪಾದಗಳು ಈ ಭೂಮಿಯ ಮೇಲೆ ನಡೆದಾಡುತ್ತಿದ್ದರೂ, ಅವರ ಆತ್ಮಗಳು ಉನ್ನತವಾದ ಸ್ವರ್ಗದಲ್ಲಿ ತೇಲಾಡುತ್ತಿರುವಂತಹ ನಿನ್ನ ದಿವ್ಯ ಪುರುಷದಲ್ಲಿ ಅವನನ್ನೂ ಒಬ್ಬನನ್ನಾಗಿ ಮಾಡು. ಅವನನ್ನು ನಿನ್ನ ಜನರ ಮಧ್ಯೆ ನಿನ್ನ ಜ್ಞಾನದ ಬೆಳಕಿನಿಂದ ಕಂಗೊಳಿಸುವ ದೀಪದಂತಾಗಲು ಕಾರಣನಾಗು ನಿಜವಾಗಿಯೂ ನೀನು ಅತ್ಯಮೂಲ್ಯನೂ, ಸದಾಕೊಡುಗೈದಾನಿಯೂ, ವರದಹಸ್ತನೂ ಆಗಿರುವೆ.

#9455
- `Abdu'l-Bahá

 

ಪ್ರಯಾಣಕ್ಕಾಗಿ

ಓ ನನ್ನ ಪರಮಾತ್ಮನೇ, ನಿನ್ನ ಕೃಪೆಯಿಂದ ನಾನಿಂದ ಪ್ರಾತಃಕಾಲ ಎಚ್ಚೆತ್ತಿದ್ದೇನೆ. ನಿನ್ನಲ್ಲಿ ಪೂರ್ಣ ವಿಶ್ವಾಸವನ್ನಿಟ್ಟು ಮನೆಯಿಂದ ತೆರಳಿದ್ದೇನೆ. ನಿನ್ನ ಆಶ್ರಯಕ್ಕೆ ಅಧೀನನೂ ಹೌದು. ಅಂದ ಮೇಲೆ ನಿನ್ನ ಕರುಣೆಯ ಸ್ವರ್ಗವನ್ನು ನನಗೆ ಅನುಗ್ರಹಿಸು. ನಿನ್ನ ಕಡೆಯಿಂದ ಆಶೀರ್ವಾದ ಹೊರಹೊಮ್ಮಲಿ. ನಿನ್ನ ರಕ್ಷಣೆಗೆ ನಾನು ಒಪ್ಪಿಸಿಕೊಂಡಿರುವೆನು. ನಿನ್ನ ರಕ್ಷಣೆಯಿಂದ, ನಾನು ಮನೆಯಿಂದ ಹೇಗೆ ಸುರಕ್ಷಿತವಗಿ ಹೊರಬಂದೆನೋ ಅದೇ ಬಗೆಯಾಗಿ ನನ್ನ ಚಿಂತನೆಯನ್ನೆಲ್ಲಾ ನಿನ್ನಲ್ಲಿಯೇ ದೃಢವಾಗಿ ನೆಟ್ಟು ಮನೆಯನ್ನು ಸುಖವಾಗಿ ಸೆರುವಂತೆ ಮಾಡು. ಹೋಲಿಕೆಗೆ ಅತೀತನಾಗಿರುವ, ಏಕಮಾತ್ರ ಸರ್ವಜ್ಞ ಹಾಗೂ ಸಕಲ ಗುಣಸಂಪನ್ನನಾದ ದೇವರು ನೀನಲ್ಲದೆ ಮತ್ತ್ಯಾರೂ ಇಲ್ಲ.

#9456
- Bahá'u'lláh

 

ಓ ದೇವರೇ, ನನ್ನ ದೇವರೇ, ನಿನ್ನ ಪ್ರೇಮಪಾಶವನ್ನು ಬಿಗಿದಪ್ಪಿಕೊಂಡು ನನ್ನ ಮನೆಯಿಂದ ಹೊರಟಿರುವೆ. ನಿನ್ನ ರಕ್ಷಣೆಗೆ ಹಾಗೂ ಲಕ್ಷ್ಯಕ್ಕೆ ಪೂರ್ಣವಾಗಿ ಒಳಗಾಗಿರುವೆ. ನಿನ್ನ ಪ್ರೀತಿಗೆ ಪಾತ್ರರಾದವರನ್ನು ಯಾವ ಬಗೆಯಿಂದ ರಕ್ಷಿಸುತ್ತಿರುವೆಯೋ ಅದೇ ಪ್ರೀತಿಯಿಂದ ನಾನು ದುರ್ಮಾರ್ಗಿಯಾಗದಂತೆ, ನಿಷಿದ್ಧ ನಡತೆಗಳಿಂದ ಕಾಪಾಡು, ತಿಳಿಗೇಡಿಗಳ ದುಷ್ಟತನದಿಂದ ಉಳಿಸು, ನಿನ್ನಿಂದ ದೂಡಲ್ಪಟ್ಟ ಕುಹಕಿಗಳಿಂದ ದೂರವಿಡು. ನಿನ್ನ ಔದಾರ್ಯ ಹಾಗೂ ಅದರದಿಂದ ನನ್ನನ್ನು ಸುಖವಾಗಿರಿಸು, ಆಮೇಲೆ ನನ್ನನ್ನು ನಿನ್ನ ಪ್ರಭಾವ ಮತ್ತು ಬಲದಿಂದ ನನ್ನ ಮನೆಗೆ ಹಿಂತಿರುಗುವಂತೆ ಮಾಡು. ನೀನು ಸತ್ಯವಾಗಿಯೂ ಸರ್ವಶಕ್ತ ಸಂಕಟ ನಿವಾರಕ ಸ್ವಯಂಪೂರ್ಣ.

#9457
- Bahá'u'lláh

 

ಪ್ರಶಂಸೆ ಮತ್ತು ಕೃತಜ್ಞತೆಗಾಗಿ

ಓ ನನ್ನ ದೇವರೇ, ಯಾರು ಎಲ್ಲ ವೈಭವ ಮತ್ತು ಭವ್ಯತೆಯ, ಮಹತ್ವ ಮತ್ತು ಗೌರವದ, ಸೌರ್ವಭೌಮತ್ವ ಮತ್ತು ಪ್ರಭುತ್ವದ, ಔನ್ನತ್ಯ ಮತ್ತು ದಯೆಯ, ಗಂಭೀರತೆ ಮತ್ತು ಶಕ್ತಿಯ ಮೂಲನಾಗಿರುವನೋ, ಅವನ ಸರ್ವ ಪ್ರಶಂಸೆಯಾಗಲಿ. ನೀನು ಯಾರನ್ನು ಇಚ್ಛಿಸುವೆಯೋ ಅವರನ್ನು ಅತ್ಯಂತ ಮಹಾಸಾಗರದ ಬಳಿಗೆ ಕರೆದೊಯ್ಯುವಂತೆ ಮಾಡುವೆ, ಹಾಗೂ ಯಾರನ್ನು ನೀನು ಇಚ್ಛಿಸುವೆಯೋ ಅವರ ಮೇಲೆ ನಿನ್ನ ಅತಿ ಪುರಾತನ ನಾಮವನ್ನು ಗುರುತಿಸುವ ಗೌರವವನ್ನು ನೀನು ಅನುಗ್ರಹಿಸುವೆ. ಸ್ವರ್ಗದಲ್ಲಿರುವವರಾಗಲೀ ಮತ್ತು ಭೂಮಿಯಲ್ಲಿರುವವರಾಗಲೀ, ಯಾರು ನಿನ್ನ ಸಾರ್ವಭೌಮ ಇಚ್ಛೆಯನ್ನು ಪೂರೈಸುವುದನ್ನು ತಡೆಹಿಡಿಯಲಾರರು. ಚಿರಂತನ ಸಮಯದಿಂದಲೂ ಸಮಸ್ತ ಸೃಷ್ಟಿಯನ್ನು ನೀನು ಆಳುತ್ತಿರುವೆ ಹಾಗೂ ಎಂದೆಂದಿಗೂ ಎಲ್ಲಾ ಸೃಷ್ಟಿಯ ಮೇಲೂ ನಿನ್ನ ಪ್ರಭುತ್ವವನ್ನು ಚಲಾಯಿಸುವೆ. ಸರ್ವಶಕ್ತನೂ, ಮಹೋನ್ನತನೂ, ಸರ್ವಪ್ರಬಲನೂ, ಸರ್ವವಿವೇಕಿಯೂ ಆದ ನೀನಲ್ಲದೆ ಅನ್ಯ ದೇವರಿಲ್ಲ.

ಓ ಪ್ರಭುವೇ, ನಿನ್ನನ್ನು ನೋಡುವಂತೆ ನನ್ನ ಸೇವಕರ ಮುಖಗಳನ್ನು ಬೆಳಗಿಸು ನಿನ್ನ ಸ್ವರ್ಗೀಯವಾದ ಕೃಪೆಗಳತ್ತ ಅವರು ತಿರುಗುವಂತೆ ಹಾಗೂ ಸ್ವಯಂ ನಿನ್ನ ಪ್ರಕಟಣೆ ಹಾಗೂ ನಿನ್ನ ಸಾರಸತ್ವದ ದಿನ ಚಿಲುಮೆಯಾಗಿರುವವನನ್ನು ಗುರುತಿಸುವಂತೆ ಅವರ ಹೃದಯಗಳನ್ನು ಸ್ವಚ್ಛಗೊಳಿಸು. ಸತ್ಯವಾಗಿಯೂ, ಎಲ್ಲಾ ಪ್ರಪಂಚಗಳ ಪ್ರಭು ನೀನಾಗಿರುವೆ. ಅನಿರ್ಬಂಧಿತನೂ, ಸರ್ವನಿಗ್ರಹಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

#9472
- Bahá'u'lláh

 

ಓ ದಯಾಮಯನಾದ ಪರಮಾತ್ಮನೆ! ನನ್ನನ್ನು ಎಚ್ಚರಗೊಳಿಸಿ ಜಾಗೃತನನ್ನಾಗಿ ಮಾಡಿದ್ದಕ್ಕೆ ನಿನಗೆ ಆಭಾರಿಯಾಗಿದ್ದೇನೆ. ನೀನು ಕಾಣುವ ಕಣ್ಣನ್ನು ದಯಪಾಲಿಸಿದ್ದೀಯೆ. ಕೇಳುವ ಕಿವಿಗಳನ್ನು ನೀಡಿದ್ದೀಯೆ. ನಿನ್ನ ಸಾಮ್ರಾಜ್ಯಕ್ಕೆ ಒಯ್ದಿದ್ದೀಯೆ. ಅಲ್ಲದೆ ನನ್ನ ಮಾರ್ಗಕ್ಕೆ ದಾರಿದೀಪವಾಗಿದ್ದೀಯೆ. ನೀನು ನನಗೆ ಸನ್ಮಾರ್ಗವನ್ನು ತೋರಿರುವೆ ಮುಕ್ತಿಯ ನಾವೆಯನ್ನು ಪ್ರವೇಶಿಸುವಂತೆ ಮಾಡಿರುವೆ. ಓ ದೇವರೇ, ನನ್ನನ್ನು ನಿಶ್ಚಲ ಮನಸ್ಸಿನವನಂತೆ ಮಾಡು. ಅಚಲನಾಗಿರಲು ಒತ್ತಾಸೆ ನೀಡು, ನಿಷ್ಠಾವಂತನಾಗಿರುವಂತೆಯೂ ಕರುಣಿಸು. ಉಗ್ರವಾದ ಸತ್ವ ಪರೀಕ್ಷೆಗಳಿಂದ ಕಾಪಾಡು. ನಿನ್ನ ಒಡಂಬಡಿಕೆ ಹಾಗೂ ಶಾಸನವೆಂಬ ಪ್ರಬಲವಾದ ದುರ್ಗಮವಾದ ಕೋಟೆಯೊಳಗಿಟ್ಟು ನನ್ನನ್ನು ರಕ್ಷಿಸು. ನೀನೇ ನನ್ನ ಕಣ್ಣು, ಕಿವಿ, ನೀನೇ ಶಕ್ತಿಶಾಲಿ. ಓ ಕರುಣಾಮಯಿಯಾದ ಭಗವಂತನೇ, ನಿನ್ನ ಪ್ರೇಮದ ಜ್ಯೋತಿಯಿಂದ ಬೆಳಗುವ ಕನ್ನಡಿಯಂಥ ಹೃದಯವನ್ನು ಕೊಡು. ಆಧ್ಯಾತ್ಮಿಕ ಪ್ರಸಾದದ ಮೂಲಕ ಈ ಜಗತ್ತನೇ ಒಂದು ಗುಲಾಬಿ ತೋಟದಂತೆ ಮಾರ್ಪಡಿಸುವ ಸೂಚನೆಯೊಂದನ್ನು ಕರುಣಿಸುವವನಾಗು.

ನೀನು ಕಾರುಣ್ಯಮೂರ್ತಿ, ದಯಾನಿಧಿ, ನೀನೇ ಅಪಾರ ಸೌಭಾಗ್ಯದ ಸಾಕಾರ ಪರಮಾತ್ಮ.

#9473
- `Abdu'l-Bahá

 

ಪ್ರಾತಃ ಕಾಲದ ಪ್ರಾರ್ಥನೆ

ಓ ಭಗವಂತ, ನಿನ್ನ ರಕ್ಷಣೆಯಲ್ಲಿ ಎಚ್ಚರಗೊಂಡೆ, ಯಾರು ಈ ರಕ್ಷಣೆಯನ್ನು ಅಪೇಕ್ಷಿಸುವರೋ ಅವರಿಗೆ ಅದು ಲಭ್ಯ. ನಿನ್ನ ರಕ್ಷಣೆಯ ಪವಿತ್ರ ನೆಲೆಯಲ್ಲಿ, ನಿನ್ನ ಆ ಬಲವತ್ತರವಾದ ಕೊತ್ತಲದಲ್ಲಿ ಯಾರು ನೆಲೆಸಲು ಇಚ್ಛಿಸುವರೋ ಅವರಿಗೂ ಅದು ಪ್ರಾಪ್ತಿಯಾದೀತು. ಓ ನನ್ನ ಪ್ರಭುವೇ, ನನ್ನ ಅಂತರಾತ್ಮವನ್ನು ನಿನ್ನ ಸಾಕ್ಷಾತ್ಕಾರದ ದಿವ್ಯಜ್ಯೋತಿಯಿಂದ ಬೆಳಗಿಸು. ನನ್ನ ಬಾಹ್ಯ ಸ್ಥಿತಿಯನ್ನು ನಿನ್ನ ಪ್ರಸನ್ನತೆಯ ಬೆಳಕಿನ ಕಿರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

#9466
- Bahá'u'lláh

 

ಬೋಧನೆಗಾಗಿ

ಓ ಪ್ರಭು, ನನ್ನ ಭಗವಂತನೇ, ನೀನು ಪ್ರಶಂಸಾರ್ಹ ನಿನ್ನ ಕೋಮಲ ಕರುಣೆಯತ್ತ ನನ್ನ ದೃಷ್ಟಿ ನೆಟ್ಟಿರುವುದನ್ನು ನೀನು ಗಮಿನಿಸಿರುವೆ. ನಿನ್ನ ದಿವ್ಯ ದಿಗಂತದತ್ತ ನನ್ನ ಕಣ್ಣುಗಳು ಬಾಗಿರುವುದನ್ನೂ ತಿಳಿದಿರುವೆ. ಅಷ್ಟೇ ಅಲ್ಲ, ನಿನ್ನ ಕೊಡುಗೈ ಸ್ವರ್ಗದತ್ತ ನನ್ನ ಕೈಗಳು ಹೇಗೆ ಚಾಚಿವೆ ಎಂಬುದನ್ನೂ ಬಲ್ಲೆ. ನೀನೇ ನನಗೆ ಸಾಕ್ಷಿ ನನ್ನ ಶರೀರದ ಪ್ರತಿಯೊಂದೂ ಅವಯವವೂ ನಿನ್ನಲ್ಲಿ ಗೋಳಿಡುತ್ತಾ ಹೀಗೆ ಹೇಳುವುದು: “ವಿಶ್ವದ ಪ್ರೀತಿ ಪಾತ್ರನಾದ ಹಾಗೂ ಸ್ವರ್ಗ ಮತ್ತು ಭೂಮಿಯಲ್ಲಿರುವ ಎಲ್ಲ ವಸ್ತುಗಳ ಮೇಲೂ ಪ್ರಭುವಾಗಿರುವೆ ಮತ್ತು ಭಕ್ತರಾಗಿರುವವರ ಅಂತರಂಗದ ಆಶೋತ್ತರದ ಪ್ರತಿಬಿಂಬವೂ ನೀನಾಗಿರುವೆ. ಸ್ವರ್ಗ ಮತ್ತು ಭೂಮಿಯಲ್ಲಿ ವಾಸಿಸುವ ಎಲ್ಲರನ್ನೂ ನಿನ್ನ ಸಾಗರ ಸದೃಶ್ಯವಾದ ಕರುಣಾಕಟಾಕ್ಷಕ್ಕೆ ಆಹ್ವಾನಿಸಿ ಈ ಕರುಣೆಯ ಬೀಡಿಗೆ ದೂರವಾಗಿರಿಸಲ್ಪಟ್ಟು ದಡವನ್ನು ಮುಟ್ಟಲು ಆಸ್ವದವಿಲ್ಲದಂಟೆ ಮಾಡಲಾಗಿರುವ ನಿನ್ನ ಸೇವಕರಿಗೆ ಸಹಾಯವೆಸಗು. ಓ ಪರಮಾತ್ಮನೇ, ಅವರನ್ನು ನಿನ್ನ ಸಂಪರ್ಕವಲ್ಲದೆ ಬೇರಾವುದರಿಂದಲೂ ಬೇರ್ಪಡಿಸು. ನಿನ್ನ ಗುಣಗಾನ ಹಾಗೂ ಪ್ರಶಂಸೆ ಮಾಡುವಂತೆ ನೋಡು. ಅಲ್ಲದೆ, ಓ ದೇವರೇ, ಅವರಿಗೆ ನಿನ್ನ ಕರುಣೆಯೆಂಬ ದ್ರಾಕ್ಷಾರಸವನ್ನು ಒದಗಿಸಿ ಆ ಮೂಲಕ ನಿನ್ನನ್ನಲ್ಲದೆ ಮಿಕ್ಕವರನ್ನು ಮರೆಯುವಂತೆಯೂ, ನಿನ್ನ ಧ್ಯೇಯೋದ್ದೇಶಗಳನ್ನು ಕುರಿತು ಸೇವೆ ಸಲ್ಲಿಸುವಂತೆಯೂ ಮತ್ತು ನಿನ್ನ ಬಗ್ಗೆ ಅವರು ಪ್ರೀತಿ, ನಿಷ್ಠೆಯಿಂದಿರುವಂತೆಯೂ ಅನುಗ್ರಹಿಸು. ನಿಜಕ್ಕೂ ಅವರ ಜೀವಿತಗಳ ಮೇಲೆ ಅಧಿಪತಿ ನೀನಾಗಿದ್ದೀಯೇ. ಅವರು ನಿನ್ನಿಂದ ತ್ಯಜಿಸಲ್ಪಟ್ಟರೆ ಅವರನ್ನು ನೋಡುವವರಾರು? ನಿನ್ನಿಂದ ದೂರಕ್ಕೆ ಸರಿಸಲ್ಪಟ್ಟರೆ ನಿನ್ನ ಸಾಮೀಪ್ಯಕ್ಕೆ ಬರಲು ಅವರಿಗೆ ಸಹಾಯ ನೀಡುವವರಾರು? ನಿನ್ನ ಶಕ್ತಿಯ ಬಗ್ಗೆ ನನಗೆ ಅಪಾರ ನಂಬಿಕೆಯಿದೆ. ನಿನ್ನ ಬಳಿಯಲ್ಲದೆ ಬೇರೆಲ್ಲಿಯೂ ಸುಳಿಉಯುವ ನಿರಾಶ್ರಿತನನ್ನು ನಾಕಾಣೆ. ನಿನ್ನ ರಕ್ಷಣೆಯಲ್ಲದೆ ಬೇರೆ ರಕ್ಷಣೆಯನ್ನು ಅರಸಲು ಶಕ್ಯವಿಲ್ಲ. ನಿನ್ನ ಸುರಕ್ಷತೆಯಲ್ಲದೆ ಬೇರೆ ಯಾವ ಸುರಕ್ಷತೆಯೂ ಇಲ್ಲ. ನಿನ್ನನ್ನಲದೆ ಬೇರೆ ಯಾರನ್ನೇ ಆಗಲಿ ತನ್ನ ಪ್ರಭುವೆಂದು ಸ್ವೀಕರಿಸಿದವನಿಗೆ ಸಂಕಟ ಪ್ರಾಪ್ತವಾಗಲಿ, ಭೂಮಿಯ ನಿವಾಸಿಗಳ ಮೇಲಿನ ಎಲ್ಲ ಮಮತೆಯನ್ನು ನೀಗಿದವರು ಪಾವನರು. ನಿನ್ನ ದಯಾಪರತೆಯ ಅಂಚನ್ನು ಅಂಟಿಕೊಂಡಿರುವವರು ಧನ್ಯರು. ಬಹಾರ ಈ ಜನರೇ ಸ್ವರ್ಗದಲ್ಲಾಗಲೀ, ಭೂಮಿಯಲ್ಲಾಗಲೀ ವಾಸಿಸುವ ಜನರ ಮೇಲಿನವರು. ನೀನಲ್ಲದೆ ಇನ್ನಾವ ದೇವರಿಲ್ಲ ನೀನು ಅನಂತ, ಸರ್ವ ಸಂಪನ್ನ” ವಿಶ್ವಗಳೆಲ್ಲದರ ಪ್ರಭುವಾಗಿರುವ ನಿನಗೆ ವಂದನೆ.

#9489
- Bahá'u'lláh

 

“ಯಾರು ತನ್ನ ನಂಬಿಕೆಯನ್ನು ದೇವರಲ್ಲಿರಿಸುವನೋ, ದೇವರು ಆತನಿಗೆ ಅವಶ್ಯವಾದುದ್ದನ್ನು ಒದಗಿಸುವನು ಮತ್ತು ಯಾರು ದೇವರಿಗೆ ಭಯಪಡುವನೋ, ದೇವರು ಆತನಿಗೆ ಪರಿಹಾರ ಕಳುಹಿಸುವನು.”

#9495
- Bahá'u'lláh

 

ಓ ಸ್ವಾಮಿಯೇ, ಇದೊಂದು ರೆಕ್ಕೆ ಮುರಿದಹಕ್ಕಿ, ಅದರ ಹಾರಾಟ ಬಲು ನಿಧಾನ. ಸುಖ ಸಂಪತ್ತಿನ ಶಿಖರ ಮತ್ತು ಮುಕ್ತಿಯತ್ತ ಹಾರಾಡಲು ಸಹಾಯ ನೀಡು. ಅತ್ಯಂತ ಆನಂದ ಹಾಗೂ ನೆಮ್ಮದಿಯಿಂದ ವಿಶಾಲವಾದ ಅಕಾಶದಲ್ಲಿ ಹಾರಾಡಲು ಅವಕಾಶವನ್ನು ಕಲ್ಪಿಸು. ನಿನ್ನ ಹೆಸರಿನ ವೈಭವದಲ್ಲಿ ಎಲ್ಲೆಡೆಯಲ್ಲಿಯೂ ಇಂಪಾದ ಧ್ವನಿ ಮೂಡುವಂತೆ ಎಸಗು. ನಿನ್ನ ಕರೆಯು ಪ್ರತಿಧ್ವನಿಸಿ ಕಿವಿಗಳನ್ನು ತಣಿಸಲಿ. ನಿನ್ನ ಮಾರ್ಗವನ್ನು ವೀಕ್ಷಿಸಿ ಕಣ್ಣುಗಳು ಪ್ರಜ್ವಲಿಸುವಂತೆ ಮಾಡು.

ಓ ಪರಮಾತ್ಮನೇ, ನಾನು ಒಬ್ಬೊಂಟಿಗ, ಒಡನಾಡಿಗರಿಲ್ಲ. ಪತಿತ ನೀನಲ್ಲದೆ ನನಗೆ ಬೇರೆ ಯಾರ ಬೆಂಬಲವೂ ಇಲ್ಲ. ನೀನಲ್ಲದೆ ಬೇರೆ ಸಹಾಯಕರಿಲ್ಲ, ಪೋಷಕರಿಲ್ಲ, ನಿನ್ನ ಸೇವೆಗಾಗಿ ನನ್ನನ್ನು ದೂಡು. ನಿನ್ನ ದೂತ ಗುಂಪಿನ ಮೂಲಕ ನನಗೆ ಸಹಾಯ ನೀಡು. ನಿನ್ನ ಸಂದೇಶವನ್ನು ಸಾರುವಲ್ಲಿ ನನಗೆ ಯಶಸ್ಸು ದಯಪಾಲಿಸು. ನಿನ್ನ ಜೀವಿಗಳಲ್ಲಿ ನಿನ್ನ ಸುಗುಣಗಳ ಪ್ರಚಾರಕ್ಕೆ ಒತ್ತಾಸೆ ಕಲ್ಪಿಸು. ವಾಸ್ತವಕ್ಕೂ ಬಡವರ ಆಧಾರಿ ನೀನು. ಅಲ್ಪರ ಹಿತರಕ್ಷಕ, ಪ್ರಬಲ, ಬಲಾಢ್ಯ ಹಾಗೂ ಅನಿರ್ಬಂಧಿತ.

#9490
- `Abdu'l-Bahá

 

ಓ ಸರ್ವೋತ್ತಮನಾದ ಪರಮಾತ್ಮನೇ, ಚಕ್ರಾಧಿಪತ್ಯದ ಪ್ರಭುವೇ, ಈ ಆತ್ಮಗಳೆಲ್ಲ ನಿನ್ನ ಸ್ವರ್ಗದ ಸೈನಿಕರು. ಸಹಾಯ ವೆಸಗು ಈ ಉನ್ನತ ಸೇನೆಯ ನೆರವಿನಿಂದ ಅವರನ್ನು ಜಯಗೊಳಿಸು. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ಸೇನಾತುಕಡಿಯಂತಾಗಿ, ದೇವರ ಅನುಗ್ರಹದಿಂಡ ಈ ದೇಶಗಳೆಲ್ಲವನ್ನೂ ಗೆಲ್ಲರಿ. ನಿನ್ನ ದೈವದತ್ತವಾದ ಉಪದೇಶಗಳಿಂದ ಪ್ರಕಾಶಿಸುವಂತಾಗಲಿ.

ಓ ದೇವರೇ, ಅವರ ಬೆಂಬಲಿಗನಾಗಿರು. ಸಹಾಯಕನಾಗಿರು, ಅವರಿಗೆ ಕಾನನದಲ್ಲಿ, ಬೆಟ್ಟಗಳಲ್ಲಿ, ಕಣಿವೆಯಲ್ಲಿ, ಕಾಡಿನಲ್ಲಿ, ಮೈದಾನದಲ್ಲಿ, ಸಾಗರದಲ್ಲಿ ನೀನು ಮಿತ್ರನಾಗಿರು. ಇದರಿಂದ ಅವರು ನಿನ್ನನ್ನು ಪವಿತ್ರ ಸ್ಫೂರ್ತಿಯಿಂದ ಪ್ರಾರ್ಥಿಸುವಂತಾಗಲಿ. ನೀನು ಬಲಶಾಲಿ, ಪರಾಕ್ರಮಿ, ಅನಂತ ಗುಣಾಡ್ಯ ಕೇಳುವವ ಹಾಗೂ ನೋಡುವವ.

#9492
- `Abdu'l-Bahá

 

ಓ ದೇವರೇ, ನನ್ನ ದೇವರೇ ನಿನ್ನ ನಂಬಿಕೆಯ ಸೇವಕರು ಪ್ರೀತಿಯುತ ಹಾಗೂ ಕೋಮಲವಾದ ಹೃದಯಗಳನ್ನು ಹೊಂದುವಂತೆ ನೆರವಾಗು. ಪೃಥ್ವಿಯ ದೇಶಗಳಲ್ಲೆಲ್ಲಾ ದೈವೀ ಸಮೂಹದಿಂದ ಬರುತ್ತಿರುವ ಮಾರ್ಗದರ್ಶನದ ಬೆಳಕನ್ನು ಪಸರಿಸಲು ಅವರಿಗೆ ಸಹಾಯ ನೀಡು. ಸತ್ಯವಾಗಿಯೂ ನೀನು ಬಲಶಾಲಿ, ಸಾಮಥ್ರ್ಯವಂತ ಪರಾಕ್ರಮಿ, ಸರ್ವನಿಗ್ರಹಿ ಹಾಗೂ ಸರ್ವ ಉದಾರಿ. ಸತ್ಯವಾಗಿಯೂ ನೀನು ಕೊಡುಗೈ ದಾನಿಯೂ, ಸಭ್ಯನೂ, ಕೋಮಲನೂ, ಅತ್ಯಂತ ದಾನಶೂರನೂ ಆಗಿರುವೆ.

#9493
- `Abdu'l-Bahá

 

ಓ ಪ್ರಭುವೇ! ನಿನ್ನ ಧರ್ಮಕ್ಕಾಗಿ ಸಜ್ಜಾಗಿರುವ ಹೃದಯಗಳುಳ್ಳ ಆತ್ಮಗಳೆಡೆ ನಾವು ಮಾರ್ಗದರ್ಶಿಸುವಂತೆ ನೀನು ಬಾಗಿಲತೆರೆ, ಸವಲತ್ತುಗಳನ್ನು ಒದಗಿಸು, ದಾರಿಯ ಸುಸಜ್ಜಿತಗೊಳಿಸು, ಹಾದಿಯ ಸುರಕ್ಷಿತಗೊಳಿಸು. ಸತ್ಯವಾಗಿಯೂ ನೀನು ಕೃಪಾಳುವೂ, ಮಹಾ ಉದಾರಿಯೂ, ಸರ್ವಸಕ್ತನೂ ಆಗಿರುವೆ.

#9494
- `Abdu'l-Bahá

 

ಓ ನನ್ನ ದೇವರೇ, ನಿನ್ನ ಸೇವಕರು ನಿನ್ನ ನುಡಿಯನ್ನು ಉನ್ನತಿಗೇರಿಸುವಂತೆಯೂ, ವ್ಯರ್ಥ ಮತ್ತು ಮಿಥ್ಯವಾದವುಗಳನ್ನು ಖಂಡಿಸುವಂತೆಯೂ, ಸತ್ಯವನ್ನು ಸ್ಥಾಪಿಸುವಂತೆಯೂ, ನಿನ್ನ ಪವಿತ್ರ ವಚನಗಳನ್ನು ದೂರದೂರವರೆಗೆ ಪಸರಿಸುವಂತೆಯೂ, ನಿನ್ನ ಭವ್ಯತೆಯನ್ನು ಪ್ರಕಾಶಪಡಿಸುವಂತೆಯೂ ಹಾಗೂ ಧರ್ಮಶೀಲರ ಹೃದಯಗಳಲ್ಲಿ ಪ್ರಾತಃಕಾಲದ ಬೆಳಕು ಗೋಚರಿಸುವಂತೆಯೂ ನೀನು ಸಹಾಯ ಮಾಡು. ನೀನು, ನಿಜವಾಗಿಯೂ, ಉದಾರಿಯೂ, ಕ್ಷಮಾದಾತನೂ ಆಗಿರುವೆ.

#9491
- `Abdu'l-Bahá

 

ಭಗವದ್ಧರ್ಮದ ಹಸ್ತಕರಿಗಾಗಿ

ಯಾರ ಮೂಲಕ ಮನೋಬಲದ ಬೆಳಕು ಕಂಗೊಳಿಸಿತ್ತೋ, ಅರಿಸುವ ಅಧಿಕಾರವು ಪರಾಕ್ರಮಶಾಲಿಯೂ, ಪ್ರಬಲನೂ, ಅನಿರ್ಬಂಧಿತನೂ ಆದ ದೇವರ ಮೇಲಿರುವುದೆಂಬ ಸತ್ಯವು ಸ್ಥಾಪಿತವಾಗಿತ್ತೋ, ಯಾರ ಮೂಲಕ ಉದಾರತೆಯ ಸಾಗರದ ಅಲೆಗಳೆದಿದ್ದವೋ, ಮಾನವತೆಯ ಪ್ರಭುವಾಗಿರುವ ದೇವರ ಶೋಭಾಯಮಾನ ಅನುಗ್ರಹದ ಸುಗಂಧವು ಪಸರಿಸಿತ್ತೋ ಅಂತಹ ಭಗವದ್ಧರ್ಮದ ಹಸ್ತಕರ ಮೇಲೆ ಪ್ರಕಾಶ ಹಾಗೂ ವೈಭವ, ನಮನ ಹಾಗೂ ಪ್ರಶಂಸೆಯಿರಲಿ. ಆತನ ಅತಿಥೇಯರ ಬಲದ ಮೂಲಕ ಅವರನ್ನು ಕಾಪಾಡೆಂದು, ಅವರನ್ನು ಆತನ ಪ್ರಭುತ್ವದ ಸಾಮಥ್ರ್ಯದ ಮೂಲಕ ರಕ್ಷಿಸೆಂದು ಮತ್ತು ಸೃಷ್ಟಿಸಿರುವ ಎಲ್ಲದರ ಮೇಲೂ ವ್ಯಾಪಿಸಿರುವ ಅದನ್ನು ಶಕ್ತಿಯ ಮೂಲಕ ಅವರಿಗೆ ಬೆಂಬಲ ನೀಡೆಂದು ಆತನಲ್ಲಿ –ಆತನು ಘನತೆವೆತ್ತವನು- ನಾವು ಪ್ರಾರ್ಥಿಸುತ್ತಿದ್ದೇವೆ. ಪರಮಾಧಿಕಾರವು ಸ್ವರ್ಗಗಳ ಸೃಷ್ಟಿಕರ್ತನೂ ನಾಮಾವಳಿಯ ಸಾಮ್ರಜ್ಯದ ಪ್ರಭುವೋ ಆಗಿರುವ ಭಗವಂತನದೇ ಆಗಿದೆ.

ರವರ ಭ್ರೂಣಾವಸ್ಥೆಯಲ್ಲಿರುವ ಜಾಗತಿಕ ಪ್ರಜಾಪ್ರಭುತ್ವದ ಪ್ರಮುಖ ಪಾರುಪತ್ಯಗಾರರಾಗಿರುವ, ಅವರ ಮೇಲೆ ಆತನ ಒಡಂಬಡಿಕೆಯ ಕೇಂದ್ರದ ಸವ್ಯಸಾಚಿ ಲೇಖನಿಯಿಂದ, ಆತನ ತಂದೆಯ ಧರ್ಮದ ರಕ್ಷಣೆಯನ್ನು ಕಾಪಾಡುವ ಹಾಗೂ ಅದರ ಪ್ರಸಾರ ಮಾಡುವ ಇಬ್ಬಗೆಯ ಕರ್ತವ್ಯವನ್ನು ವಿಧಿಸಲಾಗಿದೆ.”

- ಶೋಘಿ ಎಫೆಂಡಿ

#9452
- Bahá'u'lláh

 

ಮಕ್ಕಳಿಗಾಗಿ

ನೀನು ಪ್ರಶಂಸಿಸಲ್ಪಡಲಿ, ಓ ಪ್ರಭುವೇ ನನ್ನ ದೇವರೇ ಈ ಶಿಶುವು ನಿನ್ನ ಕೋಮಲವಾದ ಕರುಣೆ ಹಾಗೂ ಪ್ರೇಮಾನುಗ್ರಹದ ವಕ್ಷ ಸ್ಥಳದಿಂದ ಪೋಷಿಸಲ್ಪಡುವಂತೆಯೂ ಮತ್ತು ನಿನ್ನ ದಿವ್ಯ ವೃಕ್ಷಗಳ ಫಲಗಳಿಂದ ಪುಷ್ಟೀಕರಿಸಲ್ಪಡುವಂತೆಯೂ ಅನುಗ್ರಹಿಸು. ಅವನನ್ನು ನಿನ್ನನಲ್ಲದೆ ಬೇರೊಬ್ಬರ ರಕ್ಷಣೆಗೆ ಒಳಗಾಗುವ ತೊಂದರೆಯಿಂದ ತಪ್ಪಿಸು. ಏಕೆಂದರೆ, ನೀನೇ, ನಿನ್ನ ಸಾರ್ವಭೌಮತೆಯ ಇಚ್ಛಾಶಕ್ತಿ ಮತ್ತು ಸಾಮಥ್ರ್ಯದ ಮೂಲಕ, ಅವನನ್ನು ಸೃಜಿಸಿ ಅಸ್ತಿತ್ವಕ್ಕೆ ತಂದಿರುವೆ. ಸರ್ವ ಸಮರ್ಥನೂ, ಸರ್ವಜ್ಞನೂ ಆಗಿರುವ ನೀನಲ್ಲದೆ ಬೇರೆ ದೇವರಿಲ್ಲ.

ನೀನು ಸ್ತುತ್ಯಾರ್ಹನು, ಓ ನನ್ನ ಪರಮ ಶ್ರೇಷ್ಥ ಪ್ರಿಯತಮನೇ, ಅವನ ಮೇಲೆ ನಿನ್ನ ಮಧುರವಾದ ಪರಿಮಳದ ಉತ್ಕೃಷ್ಟ ಔದಾರ್ಯ ಹಾಗೂ ಪವಿತ್ರ ಕೊಡುಗೆಯ ಕಂಪನ್ನು ಬೀರು. ನಂತರ ಎಲ್ಲಾ ನಾಮ ಮತ್ತು ಗುಣಗಳ ಸಾಮ್ರಾಜ್ಯವನ್ನೇ ತನ್ನ ವಶದಲ್ಲಿಟ್ಟುಕೊಂಡಿರುವ, ನಿನ್ನ ಪರಮೋನ್ನತ ನಾಮದ ನೆರಳಿನಡಿಯಲ್ಲಿ ಆಶ್ರಯವನ್ನು ಕೋರುವಂತೆ ಮಾಡು. ಸತ್ಯವಾಗಿಯೂ, ನೀನು ಏನನ್ನು ಮಾಡಲು ಇಚ್ಛಿಸುವೆಯೋ ಅದನ್ನು ಮಾಡಲು ನೀನು ಸಮರ್ಥನು. ನಿಶ್ಚಯವಾಗಿಯೂ ನೀನು ಮಹಿಮಾನ್ವಿತನೂ, ಉನ್ನತನೂ, ಸರ್ವದಾ ಕ್ಷಮಾದಾತನೂ, ದಯಾಪರನೂ, ಕೊಡುಗೈ ದಾನಿಯೂ, ಕೃಪಾಳುವೂ ಆಗಿರುವೆ.

#9428
- Bahá'u'lláh

 

ಓ ಅಪ್ರತಿಮ ಪ್ರಭುವೇ! ಈ ಹಾಲೂಡುವ ಹಸುಗೂಸು ನಿನ್ನ ಪ್ರೇಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲ್ಪಡಲಿ, ನಿನ್ನ ಸುರಕ್ಷತೆ, ಮತ್ತು ರಕ್ಷಣೆಯ ತೊಟ್ಟಿಲಿನಲ್ಲೆ ಅದನ್ನು ಕಾಪಾಡು ಹಾಗೂ ಅದು ನಿನ್ನ ಸುಕೋಮಲ ಮಮತೆಯ ತೋಳುಗಳಲ್ಲಿ ಬೆಳೆಯುವಂತೆ ಅನುಗ್ರಹಿಸಿ.

#9429
- `Abdu'l-Bahá

 

ಓ ಭಗವಂತನೇ! ನಿನ್ನ ಪ್ರೀತಿಯ ಹೃದಯಾಂತರಾಳದಲ್ಲಿ ಈ ಶಿಶುವನ್ನು ಬೆಳೆಸು ಮತ್ತು ನಿನ್ನ ಅನುಗ್ರಹದ ಎದೆ ಹಾಲನ್ನುಣಿಸಿ. ನಿನ್ನ ಪ್ರೇಮದ ಗುಲಾಬಿ ಹೂ ತೋಟದಲ್ಲಿ ಈ ಹೊಸ ಸಸಿಯನ್ನು ಹಸನುಮಾಡು ಮತ್ತು ನಿನ್ನ ಉದಾರತೆಯ ಸುರಿಮಳೆಯಿಂದ ಅದು ಬಲಿಯುವಂತೆ ನೆರವಾಗು. ಅದನ್ನು ನಿನ್ನ ಸಾಮ್ರಾಜ್ಯದ ಶಿಶುವಂತೆ ಮಾಡು ಮತ್ತು ನಿನ್ನ ದಿವ್ಯಲೋಕಕ್ಕೆ ಅದನ್ನು ಕರೆದೊಯ್ಯು, ನೀನು ಬಲಶಾಲಿ ಹಾಗೂ ದಯಾಮಯ ಆಗಿರುವೆ. ನೀನು ದಾನಿ, ಉದಾರಿ ಅತಿಶಯ ಉದಾರತೆಯ ಪ್ರಭು.

#9430
- `Abdu'l-Bahá

 

ಓ ಭಗವಂತ, ನನಗೆ ಮಾರ್ಗದರ್ಶನ ನೀಡು. ನನ್ನನ್ನು ರಕ್ಷಿಸು, ನನ್ನ ಹೃದಯ ದೀವಿಗೆಯನ್ನು ಪ್ರಜ್ವಲಿಸು, ನನ್ನನ್ನು ದೇದೀಪ್ಯಮಾನವಾದ ನಕ್ಷತ್ರದಂತೆ ಮಾಡು. ನೀನು ಅಪಾರ ಶಕ್ತ ಹಾಗೂ ಬಲಾಢ್ಯ.

#9431
- `Abdu'l-Bahá

 

ಓ ದೇವರೇ! ಈ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡು ಈ ಮಕ್ಕಳು ನಿನ್ನ ಹಣ್ಣಿನ ತೋಟದಲ್ಲಿನ ಸಸಿಗಳು; ನಿನ್ನ ಹುಲ್ಲುಗಾವಲಿನಲ್ಲಿಯ ಹೂಗಳು, ನಿನ್ನ ಉದ್ಯಾನದ ಗುಲಾಬಿಗಳು, ನಿನ್ನ ವರ್ಷಧಾರೆ ಅವುಗಳ ಮೇಲೆ ಬೀಳಲಿ; ನೈಜತೆಯ ಸೂರ್ಯ ನಿನ್ನ ಪ್ರೇಮದೊಡನೆ ಅವುಗಳ ಮೇಲೆ ಪ್ರಕಾಶವನ್ನು ಬೀರಲಿ. ಅವು ತರಬೇತಿಗೊಂಡು, ಸಮೃದ್ಧವಾಗಿ ಬೆಳೆದು, ಅತ್ಯಂತ ರಮ್ಯತೆಯಿಂದ ಕಾಣುವಂತಾಗಲೂ ನಿನ್ನ ತಂಪುಗಾಳಿ ಅವುಗಳ ಮೆಲೆ ಬೀಸಲಿ. ನೀನು ಪ್ರದಾಯಕ, ನೀನು ಕರುಣಾಶಾಲಿ. - ಅಬ್ದುಲ್ ಬಹಾ

ಓ ಕರುಣಾಳು ಪ್ರಭುವೇ! ಈ ಸುಂದರ ಮಕ್ಕಳು ನಿನ್ನ ಬಲಿಷ್ಟವಾದ ಬೆರಳುಗಳಿಂದ ಸೃಷ್ಟಿಯಾಗಿವೆ. ಹಾಗೂ ನಿನ್ನ ಶ್ರೇಷ್ಟತೆಯ ಅದ್ಭುತವಾದ ಚಿಹ್ನೆಗಳಾಗಿವೆ. ಓ ದೇವರೇ! ಈ ಮಕ್ಕಳನ್ನು ರಕ್ಷಿಸು, ಅವರು ಶಿಕ್ಷಣ ಪಡೆಯುವಂತೆ ಉದಾರವಾಗಿ ಸಹಕರಿಸು. ಮತ್ತು ಮಾನವ ಪ್ರಪಂಚಕ್ಕೆ ಸೆವೆ ಸಲ್ಲಿಸುವಂತೆ ಅವರನ್ನು ಶಕ್ತಗೊಳಿಸು. ಓ ದೇವರೇ! ಈ ಮಕ್ಕಳು ಮುತ್ತುಗಳು, ಅವರು ನಿನ್ನ ಪ್ರೇಮಭರಿತ ದಯೆಯೆಂಬ ಚಿಪ್ಪಿನಲ್ಲಿ ರಕ್ಷಿಸಲ್ಪಡುವಂತೆ ಮಾಡು. ನೀನು ಉದಾರಿಯೂ, ಸರ್ವಪ್ರೇಮಿಯೂ ಆಗಿರುವೆ. – ಅಬ್ದುಲ್ಬಹಾ.

ಓ ನನ್ನ ಪ್ರಭುವೇ! ಓ ನನ್ನ ಪ್ರಭುವೇ!

ನಾನೊಂದು ಏಳೆವಯಸ್ಸಿನ ಮಗು, ನಿನ್ನ ಕರುಣೆಯ ಮೊಲೆಯಿಂದ ನನ್ನನ್ನು ಪೋಷಿಸು, ನಿನ್ನ ಪ್ರೀತಿಯ ವಕ್ಷ ಸ್ಥಳದಲ್ಲಿ ನನ್ನನ್ನು ತರಬೇತುಗೊಳಿಸು, ನಿನ್ನ ಮಾರ್ಗದರ್ಶನದ ಶಾಲೆಯಲ್ಲಿ ನನಗೆ ಶಿಕ್ಷಣ ನೀಡು ಮತ್ತು ನಿನ್ನ ಔದಾರ್ಯದ ನೆರಳಿನಾಶ್ರಯದಲ್ಲಿ ನನ್ನನ್ನು ವಿಕಸಿಸು, ಕತ್ತಲೆಗಳಿಂದ ನನ್ನನ್ನು ಮುಕ್ತಿಗೊಳಿಸು, ನನ್ನನ್ನು ಪ್ರಕಾಶಮಾನವಾದ ದೀಪವನ್ನಾಗಿ ಮಾಡು; ನನ್ನನ್ನು ದುಃಖದಿಂದ ಬಿಡುಗಡೆಗೊಳಿಸು, ನನ್ನನ್ನು ಗುಲಾಬಿ ತೋಟದಲ್ಲಿನ ಒಂಡು ಹೂವಿನಂತೆ ಮಾಡು; ನಿನ್ನ ಹೊಸ್ತಿಲಲ್ಲಿ ಸೇವಕನಾಗುವಂತೆ ಕಷ್ಟವನ್ನು ದಯಪಾಲಿಸು ಹಾಗೂ ಧರ್ಮಶೀಲರ ಸ್ವಭಾವ ಮತ್ತು ಗುಣಲಕ್ಷಣವನ್ನು ನನ್ನ ಮೇಲೆ ಕರುಣಿಸು; ಮಾನವ ಪ್ರಪಂಚಕ್ಕೆ ಔದಾರ್ಯದ ಕಾರಣವನ್ನಾಗಿ ಮಾಡು ಮತ್ತು ಅಮರ ಜೀವನದ ಮುಕುಟದಿಂಡ ನನ್ನ ಶಿರಸ್ಸನ್ನು ಅಲಂಕರಿಸು. ಸತ್ಯವಾಗಿಯೂ, ನೀನೇ ಶಕ್ತಿಶಾಲಿ, ಪರಾಕ್ರಮಿ, ದಿವ್ಯ ಜ್ಞಾನಿ, ಶ್ರೋತೃ.

#9432
- `Abdu'l-Bahá

 

ಓ ಅತ್ಯಂತ ಮಹಿಮಾನ್ವಿತನಾದ ಪ್ರಭುವೇ! ಈ ನಿನ್ನ ಪುಟ್ಟ ಸೇವಕಿಯನ್ನು ಅನುಗ್ರಹಿತಳನ್ನಾಗಿ ಮತ್ತು ಸಂತುಷ್ಟಳನ್ನಾಗಿ ಮಾಡು; ನಿನ್ನ ಏಕತೆಯ ಹೊಸ್ತಿಲಲ್ಲಿ ಸಾಕಲ್ಪಡುವಂತೆ ಮಾಡು ಹಾಗೂ ನಿನ್ನ ಪ್ರೀತಿಯ ಬಟ್ಟಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತ್ತು ಅತ್ಯಾನಂದಭರಿತಳಾಗಿ ಸುಮಧುರ ಸುಗಂಧವನ್ನು ಬೀರಬಹುದು. ನೀನೇ ಬಲಿಷ್ಠ ಹಾಗೂ ಪ್ರಬಲ ಮತ್ತು ನೀನೇ ಸರ್ವಜ್ಞ ಹಾಗೂ ಸರ್ವದರ್ಶಿ ಆಗಿರುವೆ.

#9433
- `Abdu'l-Bahá

 

.

ಓ ದಯಾಮಯಿಯಾದ ಪ್ರಭುವೇ! ನಾನೊಂದು ಚಿಕ್ಕ ಮಗು. ದೈವೀ ಸಾಮ್ರಾಜ್ಯದಲ್ಲಿ ನನ್ನನ್ನು ಸೇರಿಸಿಕೊಂಡು ನನ್ನನ್ನು ಉನ್ನತಿಗೇರಿಸು. ನಾನು ಪ್ರಾಪಂಚಿಕದವನಾಗಿರುವೆ. ನನ್ನನ್ನು ಸ್ವರ್ಗಿಯದವನನ್ನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಬ್ಬಾಗಿರುವೆ, ನಾನು ಪ್ರಕಾಶಮಾನವಾಗಲು ಶ್ರಮಿಸುವಂತೆ ಮಾಡುಅ; ಭೌತಿಕ, ನನ್ನನ್ನು ಧಾರ್ಮಿಕನನ್ನಾಗಿಸು ಹಾಗೂ ನಾನು ನಿನ್ನ ಅಪರಿಮಿತ ಔದಾರ್ಯಗಳನ್ನು ಪ್ರಕಟಿಸುವಂತೆ ದಯಪಾಲಿಸು, ನೀನು ಬಲಾಡ್ಯ, ಎಲ್ಲವನ್ನೂ ಪ್ರೀತಿಸುವವ.

#9434
- `Abdu'l-Bahá

 

ಮಧ್ಯರಾತ್ರಿ

(ಓ ಸತ್ಯಾನ್ವೇಷಕನೇ, ದೇವರು ನಿನ್ನ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆಸಬೇಕೆಂದು ನೀಣು ಅಪೇಕ್ಷಿಸುವೆಯಾದರೆ ಅವನಲ್ಲಿ ಹಾಗೆ ಯಾಚಿಸು. ಮಧ್ಯರಾತ್ರಿಯ ಮೇಲೆ ಅವನಲ್ಲಿ ತಲ್ಲೀನನಾಗಿ ಹೀಗೆ ಪ್ರಾರ್ಥಿಸು.)

ಓ ಪರಮಾತ್ಮನೇ, ನಿನ್ನ ಸರ್ವಾಂತರ್ಯಾಮಿತ್ವದೆಡೆಗೆ ನನ್ನ ಮುಖವನ್ನು ಹೊರಳಿಸಿರುವೆ. ನಾನು ನಿನ್ನ ಕೃಪಾ ಸಾಗರದಲ್ಲಿ ಮುಳುಗಿಬಿಟ್ಟಿದ್ದೇನೆ. ಇಂದಿನ ಕಗ್ಗತ್ತಲೆಯ ರಾತ್ರಿಯಲ್ಲಿ ನಿನ್ನ ದಿವ್ಯ ಜ್ಯೋತಿಯ ಬೆಳಕು ಕಾಣಿಸುವಂತೆ ನನ್ನ ದೃಷ್ಟಿಯನ್ನು ಪ್ರಕಾಸಮಾನವಾಗಿಸು. ಈ ಅದ್ಭುತ ಯುಗದಲ್ಲಿ ನಿನ್ನ ಪ್ರೇಮ ಸುಧೆಯಿಂದ ಸುಖಿಯನ್ನಾಗಿ ಮಾಡು. ಓ ಪ್ರಭುವೇ, ನಿನ್ನ ಕರೆಯನ್ನು ಲಾಲಿಸುವಂತೆ ಎಸಗು. ನಿನ್ನ ಸ್ವರ್ಗದ ಬಾಗಿಲನ್ನು ನನ್ನೆದುರು ತೆರೆಯುವಂತೆ ಮಾಡು. ನಿನ್ನ (ಬಹ) ಪ್ರತಿಭೆಯ ಜ್ಯೋತಿಯನ್ನು ಕಾಣುವಂತೆ ನನ್ನ ಈ ಮೊರೆಯನ್ನು ಲಾಲಿಸು. ಅಷ್ಟೇ ಅಲ್ಲ, ನಿನ್ನ ಸೌಂದರ್ಯದತ್ತ ಆಕರ್ಷಕನಾಗುವಂತೆ ಕೃಪೆಮಾಡು. ನಿಜಕ್ಕೂ ನೀನು ದಾತ, ಉದಾರಿ, ಕರುಣಾಳು ಮತ್ತು ಕ್ಷಮಾಶೀಲ.

#9469
- `Abdu'l-Bahá

 

ಮಾನವ ವರ್ಗಕ್ಕಾಗಿ

ಓ ಕರುಣಾಕರ ಪ್ರಭುವೇ! ಒಂದೇ ಮೂಲ ತಂದೆ ತಾಯಿಗಳ ಉದರದಿಂದ ಮಾನವ ವರ್ಗವನ್ನೆಲ್ಲ ಸೃಷ್ಟಿಸಿರುವೆ, ನಿನ್ನ ಉದ್ದಿಶ್ಯವಾದರೂ ಅದೇ ಒಂದು ಸಂಸಾರಕ್ಕೆ ಸೇರಿದವರಾಗಿರಲೆಂಬುದೇ. ನಿನ್ನ ಪವಿತ್ರ ಸಮ್ಮುಖದಲ್ಲಿ ಅವರೆಲ್ಲ ನಿನ್ನ ಸೇವಕರು ಮಾನವ ವರ್ಗವೆಲ್ಲ ನಿನ್ನ ಆಶ್ರಯದಲ್ಲಿ ರಕ್ಷಣೆಗೊಂಡಿದೆ. ನಿನ್ನ ಔದಾರ್ಯದ ಸ್ಥಾನದ ಮುಂದೆ ಕಲೆತಿದ್ದಾರೆ. ನಿನ್ನ ಸಾನ್ನಿಧ್ಯದ ಬೆಳಕಿನಲ್ಲಿ ಪ್ರಕಾಶಮಾನವಾಗಿದ್ದಾರೆ. ಓ ದೇವರೇ, ಎಲ್ಲರ ಬಗ್ಗೆಯೂ ನೀನು ಕರುಣೆಯುಳ್ಳವನಾಗಿದ್ದೀಯೇ, ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದ್ದೀಯೇ. ಎಲ್ಲರಿಗೂ ರಕ್ಷಣೆ ನೀಡಿದ್ದೀಯೇ, ಎಲ್ಲರಿಗೂ ಜೀವದಾತನಾಗಿದ್ದೀಯೇ ಎಲ್ಲರಿಗೂ ಜಾಣತನವನ್ನೂ, ಬುದ್ಧಿಶಕ್ತಿಯನ್ನೂ ದಯಪಾಲಿಸಿರುವೆ. ಎಲ್ಲರೂ ನಿನ್ನ ದಯಾ ಸಾಗರದಲ್ಲಿ ಮುಳುಗಿಬಿಟ್ಟಿದ್ದಾರೆ. ಓ ಪ್ರಭುವೇ, ಕರುಣಾಮಯನೇ, ಎಲ್ಲರನ್ನೂ ಒಟ್ಟುಗೂಡಿಸು ಎಲ್ಲ ಮತಗಳು ಒಮ್ಮತಕ್ಕೆ ಬರಲಿ. ಒಂದೇ ಒಂದಾಗಿ ಒಂದೇ ನಾಡಿದ ಮಕ್ಕಳಂತೆ ಭಾವಿಸಲು ಎಲ್ಲ ರಾಷ್ಟ್ರಗಳನ್ನೂ ಒಂದುಗೂಡಿಸುವವನಾಗು. ಅವರೆಲ್ಲ ಐಕ್ಯ ಹಾಗೂ ಸೌಹಾರ್ದದಿಂದ ಬಾಳ್ವೆ ನಡೆಸುವಂತಾಗಲಿ. ದೇವರೇ, ಇಡೀ ಮಾನವ ವರ್ಗದ ಏಕತೆಯ ಮಟ್ಟವನ್ನು ಹೆಚ್ಚಿಸು. ಮಹಾಶಾಂತಿ ಸ್ಥಾಪನೆ ಮಾಡು. ಎಲ್ಲರ ಹೃದಯ ಮನಗಳನ್ನು ಭದ್ರಗೊಳಿಸು. ಓ ಕರುಣೆಯ ತಂದೆಯೇ, ದೇವರೇ, ನಿನ್ನ ಪ್ರೀತಿಯ ಸುಗಂಧದ ಮೂಲಕ ಹೃದಯಗಳನ್ನು ಆನಂದಗೊಳಿಸು. ನಿನ್ನ ಮಾರ್ಗದರ್ಶನದ ಬೆಳಕಿನ ಮೂಲಕ ಕಣ್ಣುಗಳನ್ನು ಜಾಜ್ವಲ್ಯಗೊಳಿಸು. ನಿನ್ನ ಮಾತುಗಳ ಸುಮಧುರ ನಾದದ ಮೂಲಕ ಸಂತಸಗೊಳಿಸು. ನಿನ್ನ ಕೃಪೆಯ ಗವಿಯಲ್ಲಿಟ್ಟು ನಮ್ಮನ್ನು ರಕ್ಷಿಸು. ನೀನು ಬಲಾಢ್ಯ, ಪ್ರಬಲಶಕ್ತ, ಕ್ಷಮಾದಾನಿ, ಮಾನವ ವರ್ಗದ ಲೋಪದೋಷಗಳನ್ನು ಕಡೆಗಣಿಸುವವನು ನೀನೊಬ್ಬನೇ.

#9458
- `Abdu'l-Bahá

 

ಓ ದೇವರೇ! ನಾವು ಬಲಹೀನರು; ನಮಗೆ ಶಕ್ತಿಯನ್ನು ಕೊದು, ನಾವು ದೀನರು, ನಿನ್ನ ಅಮಿತ ಸಂಪತ್ತನ್ನು ನಮ್ಮ ಮೇಲೆ ದಯಪಾಲಿಸು. ನಾವು ರೋಗಗ್ರಸ್ತರು, ನಮಗೆ ನಿನ್ನ ದಿವ್ಯ ಉಪಶಮನವನ್ನು ಕರುಣಿಸು. ನಾವು ದುರ್ಬಲರು, ನಮಗೆ ನಿನ್ನ ಸ್ವರ್ಗೀಯ ಬಲವನ್ನು ನೀಡು. ಓ ಪ್ರಭುವೇ! ಈ ಪ್ರಪಂಚದಲ್ಲಿ ನಮ್ಮನ್ನು ಉಪಯುಕ್ತರನ್ನಾಗಿ ಮಾಡು. ನಮ್ಮನ್ನು ಸ್ವಾರ್ಥ ಹಾಗೂ ಆಸೆಗಳಿಂದ ಮುಕ್ತರನ್ನಾಗಿಸು. ಓ ಪ್ರಭುವೇ! ನಿನ್ನ ಪ್ರೀತಿಯಲ್ಲಿ ನಮ್ಮನ್ನು ಅಚಲರಾಗಿರುವಂತೆ ಮಾಡು ಮತ್ತು ನಮ್ಮನ್ನು ಇಡೀ ಮಾನವ ಜನಾಂಗದ ಪ್ರೀತಿ ಪಾತ್ರರನ್ನಾಗಿಸಲು ಕಾರಣನಾಗು. ನಾವು ನಿನ್ನ ಸೇವಕರುಗಳ ಸೇವಕರಾಗುವಂತೆಯೂ, ನಿನ್ನ ಸೃಷ್ಟಿಯೆಲ್ಲವನ್ನೂ ಪ್ರೀತಿಸುವಂತೆಯೂ ಮಾನವ ಪ್ರಪಂಚದ ಸೇವೆಯಲ್ಲಿ ನಮ್ಮನ್ನು ದೃಢಪಡಿಸು.

ಓ ಪ್ರಭುವೇ! ನೀನು ಸರ್ವಸಮರ್ಥ! ನೀನು ಕರುಣಾಳು! ನೀನು ಕ್ಷಮಾದಾತ! ನೀನು ಸರ್ವಶಕ್ತ!

#9459
- `Abdu'l-Bahá

 

ಯುವಕರಿಗಾಗಿ

ಓ ಸ್ವಾಮಿಯೇ, ಈ ಯುವಕನನ್ನು ಬೆಳಗಿಸು ಈ ದುರ್ಬಲನನ್ನು ಬಲಶಾಲಿಯನ್ನಾಗಿ ಮಾಡು. ಜ್ಞಾನವನ್ನು ಕರುಣಿಸು. ಪ್ರತಿ ಉಷಃಕಾಲದಲ್ಲಿಯೂ ಅವನಿಗೆ ಹೆಚ್ಚಿನ ಶಕ್ತಿಯನ್ನು ದಯಪಾಲಿಸು. ನಿನ್ನ ಕಾರ್ಯದಲಿಲ್ ಪಾಪಕ್ಕೆ ಅವಕಾಶವಿಲ್ಲದಂತೆ ನೋಡಿ, ನಿನ್ನ ರಕ್ಶಣೆಯಿಂಡ ಕಾಪಾಡಿ. ಆಶ್ರಯನೀಡು, ಯಾರು ತಪ್ಪು ಮಾರ್ಗದಲ್ಲಿ ಕಾಲಿಟ್ಟಿರುವರೋ ಯಾರು ಬಡವರೋ ನಿಶ್ಯಕ್ತರೋ, ನಿರ್ಬಂಧದಲ್ಲಿ, ದಾಸ್ಯತ್ವದಲ್ಲಿ ಇರುವರೋ ಅಂತಹವರನ್ನು ಸನ್ರ್ಮಾಗಕ್ಕೆ ಎಳೆ, ಅಜಾಗೃತಾವಸ್ಥೆಯಲ್ಲಿ, ಇರುವವರನ್ನು ಎಚ್ಚರಿಸು, ನಿನ್ನ ಸ್ಮರಣೆ ಹಾಗೂ ಚಿಂತನದಿಂದ ಸುಖಿಗಳಾಗಿರುವಂತೆ ಮಾಡು. ನೀನು ಬಲಶಾಲಿಯೂ ಹೌದು, ಜಾಣನೂ ಹೌದು.

#9435
- `Abdu'l-Bahá

 

ರಕ್ಷಣೆಗಾಗಿ

ಓ ಪ್ರಭು ನನ್ನ ದೇವರೇ, ನಿನ್ನ ನಾಮದ ಸ್ತುತಿಯಾಗಲಿ! ಯಾವ ನಾಮದ ಮೂಲಕ ಕಾಲವು ನಿಂತು ಹೋಗಿತ್ತೋ, ಪುನರ್ಜೀವನ ಸಾಧ್ಯವಾಗಿತ್ತೋ, ಭೂಮಿ ಮತ್ತು ಸ್ವರ್ಗದಲ್ಲಿರುವವರೆಲ್ಲರೂ ಭಯದಿಂದ ಕಂಪಿತರಾಗಿದ್ದರೋ ಅದರಿಂದ, ನಿನ್ನ ಬಳಿ ತಿರುಗಿ ನಿನ್ನ ಧರ್ಮಕ್ಕೆ ಸಹಾಯ ಮಾಡಿದವರ ಹೃದಯಗಳನ್ನು ಸಂತೋಷಪಡಿಸುವಂತಹ ನಿನ್ನ ಕೃಪಾಸ್ವರ್ಗ ಹಾಗೂ ನಿನ್ನ ಸುಕೋಮಲ ಕರುಣೆಯ ಮೋಡಗಳಿಂದ ವರ್ಷಿಸುವಂತೆ ಮಾಡೆಂದು ನಾನು ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೇನೆ.

ಓ ನನ್ನ ಪ್ರಭುವೇ, ನಿನ್ನ ಸೇವಕರು ಮತ್ತು ಸೇವಕಿಯರನ್ನು ವ್ಯರ್ಥ ಭ್ರಮೆ ಮತ್ತು ತೋರಿಕೆಯ ಕಲ್ಪನೆಗಳಿಂದ ಕ್ಷೇಮವಾಗಿರಿಸು ಹಾಗೂ ಅವರಿಗೆ ನಿನ್ನ ಅನುಗ್ರಹದ ಕರಗಳಿಂದ ಮೃದುವಾಗಿ ಹರಿಯುವ ನಿನ್ನ ಜ್ಞಾನ ಬಲದ ಗುಟುಕನ್ನು ನೀಡು.

ನೀನು, ನಿಜವಾಗಿಯೂ, ಸರ್ವಶಕ್ತ, ಮಹೋನ್ನತ, ಸರ್ವ ಕ್ಷಮದಾತ, ಅತ್ಯಂತ ಉದಾರಿಯೂ ಆಗಿರುವೆ.

#9474
- Bahá'u'lláh

 

ಓ ದೈವೀ ಅನುಗ್ರಹವೇ, ದಯಾಪಾತ್ರರು ನಾವು, ದಯಪಾಲಿಸು ನಿನ್ನ ನೆರವನ್ನು ನೆಲೆಯಿಲ್ಲದ ಸಂಚಾರಿಗಳು, ನೀಡು ನಿನ್ನ ಆಶ್ರಯವನ್ನು; ಚದುರಿದವರು, ಒಂದು ಗೂಡಿಸು ನಮ್ಮನ್ನು; ದಾರಿ ತಪ್ಪಿದವರು, ಸೇರಿಸು ನಿನ್ನೆಡೆಗೆ ನಮ್ಮನ್ನು; ವಂಚಿತರು; ಅನುಗ್ರಹಿಸು ನಮ್ಮ ಮೇಲೆ ನಮ್ಮ ಪಾಲಿನ ಒಂದು ಭಾಗವನ್ನು; ಬಾಯಾರಿದವರು, ಜೀವ ಜಲ ಚಿಲುಮೆಯತ್ತ ನಡೆಸು ನಮ್ಮನ್ನು; ದುರ್ಬಲರು, ನಿನ್ನ ಧರ್ಮದ ಸಹಾಯಕರಾಗುವಂತೆಯೂ, ಮಾರ್ಗ ದರ್ಶನದ ಹಾದಿಯಲ್ಲಿ ನಮ್ಮನ್ನು ನಾವೇ ತ್ಯಾಗ ಜೀವಿಯನ್ನಾಗಿ ಅರ್ಪಿಸುವಂತೆಯೂ ನಾವು ಎದ್ದೇಳುವಂತೆ ನಮ್ಮನ್ನು ಬಲಪಡಿಸು.

#9475
- `Abdu'l-Bahá

 

ರಾತ್ರಿ

ಓ ನನ್ನ ಪರಮಾತ್ಮನೇ, ಒಡೆಯನೇ, ನನ್ನ ಆಕಾಂಕ್ಷೆಯನ್ನು ಪೂರೈಸಬಲ್ಲವನೇ, ಈ ನಿನ್ನ ಸೇವಕ ನಿನ್ನ ಕರುಣೆಯ ರಕ್ಷಣೆಯಲ್ಲಿ ನಿದ್ರೆ ಮಾಡಬಯಸುತ್ತಾನೆ. ನಿನ್ನ ಘನತೆಯ ಆಶ್ರಯದ ಕೆಳಗೆ ವಿಶ್ರಾಂತಿ ಪಡೆಯಲು ಇಚ್ಛಿಸುತ್ತಾನೆ. ನಿನ್ನ ಪೋಶಣೆ ಹಾಗೂ ಸಂರಕ್ಷಣೆಗಾಗಿ ಮೊರೆಯಿಡುತ್ತಾನೆ.

ಓ ಪ್ರಭುವೇ, ಎವೆಯಿಕ್ಕದೆ ನಿನ್ನ ಕಣ್ಣುಗಳಿಂದ ನಿನ್ನನ್ನಲ್ಲದೆ ಬೇರೆ ಯಾರನ್ನೂ ನೋಡದಂತಿರಲು ನನ್ನ ಕಣ್ಣನ್ನು ರಕ್ಷಿಸಬೇಕೆಂದು ಬೇಡುವೆ. ನಿನ್ನ ಸಂಜ್ಞೆಗಳನ್ನು ಅಲ್ಲದೆ ನಿನ್ನ ಸಾಕ್ಷಾತ್ಕಾರವನ್ನು ಗುರುತಿಸುವಂತೆ ನನ್ನ ದೃಷ್ಟಿಯನ್ನು ದೃಢಪಡಿಸು. ಯಾರ ಅಖಂಡ ಸಾಕ್ಷಾತ್ಕಾರದ ಮುಂದೆ ಬಲದ ಪ್ರಭಾವವೂ ಕೂಡ ಬೆದರಿಬೆಚ್ಚಿಬಿದ್ದೀತೋ ಅಂಥಾ ಪರಮ ಪ್ರಭಾವಶಾಲಿಯೂ ನೀನೇ. ಸರ್ವಶಕ್ತ, ಸರ್ವವಿಜಯಿ, ನಿಯಮಾತೀತನಾದ ನೀನಲ್ಲದೆ ಬೇರೆ ದೇವರಿಲ್ಲ.

#9467
- Bahá'u'lláh

 

ಓ ದೇವರೇ, ನನ್ನ ದೇವರೇ, ನಿನ್ನಿಂದ ಅಗಲಿರುವ ಕಾರಣದಿಂದಾಗಿ ನಿನ್ನನ್ನು ಹಂಬಲಿಸುವವರ ಕಣ್ಣುಗಳು ಎಚ್ಚೆತ್ತಿರುವಾಗ ನಾನು ಹೇಗೆ ನಿದ್ರಿಸಲು ಆಯ್ದುಕೊಳ್ಳಲಿ, ನಿನ್ನ ಪ್ರೇಮಿಗಳ ಆತ್ಮಗಳು ನಿನ್ನ ಸಮ್ಮುಖದಿಂದ ದೂರ ಸರಿದಿರುವುದರಿಂದ ದುಃಖ ಪೀಡಿತರಾಗಿರುವಾಗ ನಾನು ಹೇಗೆ ವಿಶ್ರಾಂತಿ ಪಡೆಯಲಿ?

ಓ ನನ್ನ ಪ್ರಭುವೇ, ನಿನ್ನ ಸಾಮಥ್ರ್ಯ ಹಾಗೂ ನಿನ್ನ ರಕ್ಷಣೆಯು ಬಲಗೈಯಲ್ಲಿ ನನ್ನ ಚೈತನ್ಯ ಹಾಗೂ ನನ್ನ ಸಂಪೂರ್ಣ ಅಸ್ತಿತ್ವವನ್ನೇ ಒಪ್ಪಿಸಿದ್ದೇನೆ ಮತ್ತು ನನ್ನ ಶಿರಸ್ಸನ್ನು ನಿನ್ನ ಶಕ್ತಿಯ ಮೂಲಕ ನನ್ನ ದಿಂಬಿನ ಮೇಲಿರಿಸುತ್ತೇನೆ ಮತ್ತು ನಿನ್ನ ಇಚ್ಚೆ ಹಾಗೂ ನಿನ್ನ ಸಂತೃಪ್ತಿಗೆ ತಕ್ಕಂತೆ ಮೇಲೆತ್ತುತ್ತೇನೆ. ನೀನು ಸತ್ಯವಾಗಿಯೂ, ಸಂರಕ್ಷಕ, ಕಾಪಾಡತಕ್ಕವ, ಸರ್ವಸಮರ್ಥ, ಪರಮ ಬಲಶಾಲಿ.

ನಿನ್ನ ಸರ್ವಶಕ್ತಿಯ ಪ್ರಮಾಣವಾಗಿ! ನಾನು ನಿದ್ರಿಸುತ್ತಿರಲಿ ಅಥವಾ ಎಚ್ಚೆತ್ತಿರಲಿ, ನೀನು ಇಚ್ಛಿಸುವುದನ್ನಲ್ಲದೆ ಬೇರೇನನ್ನೂ ಬೇಡೆನು. ನಾನು ನಿನ್ನ ಸೇವಕ ಹಾಗೂ ನಿನ್ನ ಕೈಯಾಳಾಗಿರುವೆ. ನಿನ್ನ ಸಂತೃಪ್ತಿಯ ಸುಗಂಧವನ್ನು ಯಾವುದು ಬೀರುವುದೋ ಅದನ್ನು ನಾನು ಮಾಡುವಂತೆ ನನ್ನನ್ನು ಉದಾರತೆಯಿಂದ ಸಹಾಯ ಮಾಡು. ನಿಜವಾಗಿಯೂ, ಇದು ನನ್ನ ಹಾರೈಕೆಯಾಗಿದೆ ಹಾಗೂ ನಿನ್ನ ಸಾಮೀಪ್ಯವನ್ನು ಆನಂದಿಸುವವರ ಹಾರೈಕೆಯೂ ಆಗಿದೆ. ಓ ಪ್ರಪಂಚಗಳ ಪ್ರಭುವಾಗಿರುವ ನಿನಗೆ ಸ್ತೋತ್ರವಾಗಲಿ.

#9468
- Bahá'u'lláh

 

ಸನ್ಮಾರ್ಗ ತಪ್ಪಿದವರಿಗಾಗಿ ಮಾರ್ಗದರ್ಶನದ ಪ್ರಾರ್ಥನೆ

ಯಾರು ಸನ್ಮಾರ್ಗದಿಂದ ದೂರವಾಗಿರುವರೋ ಅವರು ನ್ಯಾಯ ಮತ್ತು ಒಳ್ಳೆಯ ಮನಸ್ಸಿನವರಾಗಲು ಉದಾರವಾಗಿ ಸಹಾಯ ಮಾಡೆಂದೂ ಹಾಗೂ ಯಾವುದರಿಂದ ಅವರು ಅಲಕ್ಷ್ಯರಾಗಿರುವರೋ ಅದರ ಬಗ್ಗೆ ಅವರಿಗೆ ಅರಿವನ್ನುಂಟು ಮಾಡೆಂದೂ ನಾವು ದೇವರಲ್ಲಿ ಪ್ರಾರ್ಥಿಸುವೆವು. ಆತನು ಸತ್ಯವಾಗಿಯೂ ಸರ್ವ ಉದಾರಿಯೂ, ಅತಿ ಕೊಡುಗೈದಾನಿಯೂ ಆಗಿರುವನು. ಓ ನನ್ನ ಪ್ರಭುವೇ, ನಿನ್ನ ಸೇವಕರನ್ನು ನಿನ್ನ ಕೃಪಾಕಟಾಕ್ಷದ ದ್ವಾರದಿಂದ ಬಹಿಷ್ಕರಿಸದಿರು ಮತ್ತು ನಿನ್ನ ಸಮ್ಮುಖದಿಂದ ಅವರನ್ನು ಹೊರದೂಡದಿರು. ಅಪ್ರಯೋಜಕ ಘನವಾದ ಭ್ರಮೆಯನ್ನು ಹೋಗಲಾಡಿಸುವಂತೆ ಹಾಗೂ ವ್ಯರ್ಥ ಕಲ್ಪನೆಗಳ ಮತ್ತು ಆಸೆಯ ಮುಸುಕನ್ನು ಹರಿದು ಹಾಕುವಂತೆ ಅವರಿಗೆ ಸಹಾಯ ನೀಡು. ನಿಜವಾಗಿಯೂ, ನೀನು ಸರ್ವೋನ್ನತವಾಗಿರುವೆ. ಸರ್ವಶಕ್ತನೂ, ಕೃಪಾಳುವೂ ಆದ ನೀನಲ್ಲದೆ ಬೇರೆ ದೇವರಿಲ್ಲ.

#9446
- Bahá'u'lláh

 

ಸಭೆಗಳಲ್ಲಿ

ಓ ಕರುಣಾಕರ, ಸರ್ವಶಕ್ತನೇ! ಈ ಆತ್ಮಗಳ ಸಮೂಹವು ತಮ್ಮ ಮುಖಗಳನ್ನು ಯಾಚನೆಯಿಂದ ನಿನ್ನತ್ತ ತಿರುಗಿಸಿದೆ. ಅತ್ಯಂತ ವಿನಮ್ರತೆ ಹಾಗೂ ದೈನ್ಯತೆಯಿಂದ ಅವರು ನಿನ್ನ ಸಾಮ್ರಾಜ್ಯದತ್ತ ನೋಡುತ್ತಿರುವರು ಮತ್ತು ಕ್ಷಮೆ ಹಾಗೂ ಮನ್ನಿಸುವಿಕೆಗಾಗಿ ನಿನ್ನಲ್ಲಿ ಯಾಚಿಸುತ್ತಿರುವರು. ಓ ದೇವರೇ! ಈ ಸಭೆಯನ್ನು ನಿನ್ನ ಪ್ರೀತಿ ಪಾತ್ರವನ್ನಾಗಿ ಮಾಡು. ಈ ಆತ್ಮಗಳನ್ನು ಪಾವನಗೊಳಿಸು ಹಾಗೂ ಅವರ ಮೇಲೆ ನಿನ್ನ ಮಾರ್ಗದರ್ಶನದ ಕಿರಣಗಳನ್ನು ಚೆಲ್ಲುವಂತೆ ಮಾಡು, ಅವರ ಹೃದಯಗಳನ್ನು ಬೆಳಗಿಸು ಮತ್ತು ನಿನ್ನ ಹರ್ಷದಾಯಕ ವಾರ್ತೆಯಿಂದ ಅವರ ಚೈತನ್ಯಗಳನ್ನು ಉಲ್ಲಾಸಗೊಳಿಸು. ನಿನ್ನ ಪವಿತ್ರ ಸಾಮ್ರಾಜ್ಯದಲ್ಲಿ ಅವರೆಲ್ಲರನ್ನೂ ಸ್ವಾಗತಿಸು. ನಿನ್ನ ಅಕ್ಷಯವಾದ ಔದಾರ್ಯವನ್ನು ಅವರ ಮೇಲೆ ಅನುಗ್ರಹಿಸು. ಈ ಪ್ರಪಂಚ ಹಾಗೂ ಮುಂದಿನ ಪ್ರಪಂಚದಲ್ಲಿ ಅವರನ್ನು ಸಂತೋಷಭರಿತರನ್ನಾಗಿ ಮಾಡು.

#9460
- `Abdu'l-Bahá

 

ಓ ದೇವರೇ! ಸತ್ಯವಾಗಿಯೂ ನಾವೆಲ್ಲಾ ನಿನ್ನ ಪ್ರೀತಿಯ ಸುಗಂಧದಲ್ಲಿ ಒಂದುಗೂಡಿರುವೆವು ನಾವು ನಿನ್ನ ಸಾಮ್ರಾಜ್ಯದತ್ತ ತಿರುಗಿರುವೆವು. ನಾವು ನಿನ್ನನ್ನಲ್ಲದೆ ಬೇರೇನನ್ನೂ ಕೋರುವುದಿಲ್ಲ ಹಾಗೂ ನಿನ್ನ ಸಂತೋಷವನ್ನಲ್ಲದೆ ಬೇರಾವುದಕ್ಕೂ ಆಸೆಪಡುವುದಿಲ್ಲ. ಓ ದೇವರೇ! ಈ ಆಹಾರವು ನಿನ್ನ ಸ್ವರ್ಗದ ಆಧ್ಯಾತ್ಮಿಕ ಆಹಾರವಾಗಲಿ. ಈ ಸಭೆಯನ್ನು ನಿನ್ನ ಪರಮ ಶ್ರೇಷ್ಠ ಸಮೂಹವನ್ನಾಗಿಸುವಂತೆ ಸಮ್ಮತಿಸು. ಅವರು ಮಾನವ ಕುಲಕ್ಕೆ ಸಜೀವ ತುಂಬುವ ಪ್ರೀತಿಯ ಕಾರಣವಾಗಲಿ ಮತ್ತು ಮಾನವ ಜನಾಂಗಕ್ಕೆ ಪ್ರಕಾಶದ ಮೂಲವಾಗಲಿ, ಭೂಮಿಯ ಮೇಲೆ ಅವರು ನಿನ್ನ ಮಾರ್ಗದರ್ಶನದ ಸಾಧನವಾಗಲಿ, ನಿಜವಾಗಿಯೂ ನೀಣು ಪ್ರಬಲನೂ, ಕೊಡುಗೈದಾನಿಯೂ, ಕ್ಷಮಾದಾತನೂ ಮತ್ತು ಸರ್ವಶಕ್ತನೂ ಆಗಿರುವೆ!

#9461
- `Abdu'l-Bahá

 

ಓ ದೈವೀ ಅನುಗ್ರಹವೇ! ಈ ಸಭೆಯು ನಿನ್ನ ಸೌಂದರ್ಯದತ್ತ ಆಕರ್ಷಿತರಾಗಿರುವ ಹಾಗೂ ನಿನ್ನ ಪ್ರೀತಿಯ ಅಗ್ನಿಯಿಂದ ಜಾಜ್ವಲ್ಯಮಾನರಾಗಿರುವ ನಿನ್ನ ಮಿತ್ರರಿಂದ ತುಂಬಿಕೊಂಡಿದೆ. ಈ ಆತ್ಮಗಳನ್ನು ಸ್ವರ್ಗೀಯ ದೇವತೆಗಳನ್ನಾಗಿ ರೂಪಿಸು. ನಿನ್ನ ಪವಿತ್ರಾತ್ಮದ ಉಸಿರಿನ ಮೂಲಕ ಅವರನ್ನು ಪುನರ್ಜೀವಿತಗೊಳಿಸು, ಅವರಿಗೆ ವಾಕ್ ಚತುರತೆಯನ್ನೂ, ದೃಢಸಂಕಲ್ಪದ ಹೃದಯಗಳನ್ನೂ ದಯಪಾಲಿಸು, ಸ್ವರ್ಗೀಯ ಶಕ್ತಿ ಹಾಗೂ ಅಪಾರ ಕರುಣೆಯನ್ನು ಅವರಿಗೆ ಅನುಗ್ರಹಿಸು. ಅವರನ್ನು ಮಾನವ ಜನಾಂಗದ ಏಕತೆಯ ಪ್ರಚಾರಕರಾಗುವಂತೆ ಮಾಡು ಹಾಗೂ ಅವರು ಮಾನವತೆಯ ಲೋಕದಲ್ಲಿ ಪ್ರೀತಿ ಮತ್ತು ಮೈತ್ರಿಯ ಕಾರಣರಾಗುವಂತೆ ಮಾಡು, ಇದರಿಂದ ಆಪತ್ಕಾರಿ ಕತ್ತಲೆಯಾದ ತಿಳಿಗೇಡಿ ಪೂರ್ವಾಗ್ರಹಗಳು, ಸತ್ಯಸೂರ್ಯನ ಬೆಳಕಿನ ಮೂಲಕ ಮಾಯವಾಗಬಹುದು, ಈ ಮಂಕುಕವಿದ ಪ್ರಪಂಚವು ಪ್ರಕಾಶಿತಗೊಳ್ಳಬಹುದು, ಈ ಭೌತಿಕ ಪ್ರಪಂಚವು ಆತ್ಮ ಪ್ರಪಂಚದ ಕಿರಣಗಳನ್ನು ಪಡೆಯುವಂತಾಗಬಹುದು, ಈ ವಿವಿಧ ವರ್ಣಗಳು ಒಂದಾಗಿ ಒಂದೇ ಬಣ್ಣವಾಗಬಹುದು, ಹಾಗೂ ಸ್ತೋತ್ರದ ಸುಮಧುರ ಸ್ವರವು ನಿನ್ನ ಪವಿತ್ರತೆಯ ಸಾಮ್ರಾಜ್ಯಕ್ಕೇರಬಹುದು. ನಿಜವಾಗಿಯೂ, ನೀನು ಸರ್ವಶಕ್ತನೂ, ಸರ್ವಸಮರ್ಥನೂ ಆಗಿರುವೆ!

#9462
- `Abdu'l-Bahá

 

ಓ ಕರುಣಾಮಯಿಯಾದ ದೇವರೇ, ಶಕ್ತಿವಂತನೂ, ಪರಾಕ್ರಮಿಯೂ ಆದ ಪ್ರಭುವೇ ನೀನು, ಅತ್ಯಂತ ಪ್ರೀತಿಯ ತಂದೆಯೇ, ಈ ನಿನ್ನ ಸೇವಕರು ಒತ್ತಟ್ಟಿಗೆ ಕಲೆತು ನಿನ್ನ ಅಭಿಮುಖರಾಗಿದ್ದಾರೆ. ನಿನ್ನಲ್ಲಿ ವಿನಂತಿ, ಮಾಡಿಕೊಳ್ಳುತ್ತಿದ್ದಾರೆ. ನಿನ್ನಿಂದ ಮಿತಿಯಿಲ್ಲದ ದಯೆಯ ಭರವಸೆ ಬರಲೆಂದು ನಿನ್ನ ಆನಂದವೇ ವಿನಾ ಅವರಿಗೆ ಮತ್ತ್ಯಾವ ಉದ್ದೀಶ್ಯವೇ ಇಲ್ಲ. ಮಾನವ ಕೋಟಿಯ ಸೇವೆಯೊಂದಲ್ಲದೆ ಬೇರಾವ ಇಚ್ಛೆಯೂ ಅವರಿಗಿಲ್ಲ. ಈ ಗುಂಪು ತೇಜಸ್ವಿಯಾಗುವಂತೆ ಮಾಡು. ಹೃದಯಗಳನ್ನೆಲ್ಲ ದಯಾಪೂರಿತವನ್ನಾಗಿಸು. ಪವಿತ್ರ ಆತ್ಮದ ಔದಾರ್ಯವನ್ನು ಕರುಣಿಸುವವನಾಗು, ಸ್ವರ್ಗಸದೃಶವಾದ ಶಕ್ತಿಯನ್ನು ದಯಪಾಲಿಸು, ಶ್ರೇಷ್ಠವಾದ ಮನಸ್ಸನ್ನು ನೀಡಿ ಆಶೀರ್ವಾದಿಸು. ನಮ್ರ ಭಾವನೆಯಿಂದ ಹಾಗೂ ಪಶ್ಚಾತ್ತಾಪ ಬುದ್ಧಿಯಿಂದ ನಿನ್ನತ್ತ ಗಮನಹರಿಸಿ, ಮಾನವ ಕೋಟಿಯ ಸೇವೆಯಲ್ಲಿ ಮಗ್ನರಾಗಲು ಅವರ ಪ್ರಾಮಾಣಿಕತೆಯನ್ನು ಹೆಚ್ಚಿಸು. ಪ್ರತಿಯೊಬ್ಬನೂ ಪ್ರಕಾಶಮಾನವಾದ ಮೇಣದ ಬತ್ತಿಯಂತಾಗಲಿ, ಪ್ರತಿಯೊಬ್ಬನೂ ಜಾಜ್ವಲ್ಯಮಾನವಾದ ನಕ್ಷತ್ರದಂತಾಗಲಿ, ಪ್ರತಿಯೊಬ್ಬನೂ ರಮ್ಯವಾದ ಬಣ್ಣದಂತಾಗಲಿ, ದೈವೀ ರಾಜ್ಯದಲ್ಲಿ ಪ್ರತಿಯೊಬ್ಬನೂ ಸುಗಂಧದ ಪರಮಾವಧಿಯಾಗಲಿ, ಓ ಪ್ರಿಯ ತಂದೆಯೇ, ನಿನ್ನ ಅಶೀರ್ವಾದವನ್ನು ದಯಪಾಲಿಸು, ನಮ್ಮ ಲೋಪದೋಷಗಳನ್ನು ಗಮನಿಸಬೇಡ. ನಿನ್ನ ರಕ್ಷಣೆಯಲ್ಲಿ ನಮ್ಮನ್ನು ಕಾಪಾಡು. ನಮ್ಮ ಪಾಪಗಳನ್ನು ಲೆಕ್ಕಿಸಬೇಡ, ಸ್ಮರಿಸಬೇಡ, ನಿನ್ನ ಕರುಣೆಯಿಂಡ ನಮ್ಮನ್ನು ಪಾರುಗಾಣಿಸು. ನಾವು ದರಿದ್ರರು ನೀನು ಶ್ರೀಮಂತ ನಾವು ರೋಗ ಪೀಡಿತರು ನೀನು ವೈದ್ಯ, ನಾವು ನಿರ್ಗತಿಕರು, ನೀನು ಉದಾರಿ. ಓ ಪ್ರಭುವೇ, ನಿನ್ನ ದಯೆ ನಮ್ಮ ಮೇಲಿರಲಿ ನೀನು ಸಮರ್ಥದಾತ ಹಾಗೂ ಉಪಕಾರಿ.

#9463
- `Abdu'l-Bahá

 

ಓ ಕರುಣೆಯ ಪ್ರಭುವೇ, ಇವರೆಲ್ಲ ನಿನ್ನ ಸೇವಕರು, ನಿನ್ನ ಉದಾರತೆ ಹಾಗೂ ಆಶೀರ್ವಾದಕ್ಕಾಗಿ ಕಾದು ಕುಳಿತಿರುವರು ಇಲ್ಲಿ, ದೇವರೇ, ನಿನ್ನ ಏಕಮಾತ್ರ ಸ್ವರೂಪದ ಸೂಚನೆಯನ್ನು ಆಧಾರಗೊಳಿಸು. ಈ ಮಾನವರಲ್ಲಿ ಅಡಗಿರುವ ಹಾಗೂ ಅಗೋಚರವಾಗಿರುವಂತೆ, ಮಾಡಿರುವ ಸದ್ಗುಣಗಳನ್ನು ಸಾಕ್ಷಾತ್ಕರಿಸು ಹಾಗೂ ಪ್ರಕಟಿಸು. ದೇವರೇ, ನಾವು ಗಿಡಗಳಂತೆ, ನಿನ್ನ ಉದಾರತೆ ಮಳೆಯಂತೆ, ನಿನ್ನ ಔದಾರ್ಯದ ಆಸರೆಯಿಂದ ಈ ಗಿಡಗಳು ಬೆಳೆದು ಪ್ರಫುಲ್ಲಿತವಾಗುವಂತೆ ಮಾಡು. ನಾವೆಲ್ಲ ನಿನ್ನ ಆಜ್ಞಾಪಾಲಕರು. ಈ ಇಹ ಪ್ರಪಂಚದ ಬದುಕಿನ ಸಂಕೋಲೆಗಳಿಂದ ನಮ್ಮನ್ನು ಪಾರುಗಾಣಿಸು. ನಾವು ಅಜ್ಞಾನಿಗಳು; ಬುದ್ಧಿವಂತರನ್ನಾಗಿ ಮಾಡು. ನಾವು ಸತ್ತವರು, ಪ್ರಾಣಭಿಕ್ಷೆ ನೀಡು. ನಾವು ಇಚ್ಛಾಪರರು, ಸ್ಫೂರ್ತಿ ತುಂಬು, ನಾವು ನಿರಾವಲಂಬಿಗಳು, ನಿನ್ನ ರಹಸ್ಯದ ಆಪ್ತರನ್ನಾಗಿ ಮಾಡು ನಮ್ಮನ್ನು ನಾವು ಅಗತ್ಯವುಳ್ಳವರು, ನಿನ್ನ ಅಪಾರ ಸಂಪತ್ತಿನಿಂದ ನಮ್ಮನ್ನು ಸಿರಿವಂತರನ್ನಾಗಿ ಮಾಡಿ ಅನುಗ್ರಹಿಸು. ಭಗವಂತನೇ, ನಮ್ಮಲ್ಲಿ ಚೇತನವನ್ನು ತುಂಬು, ದೃಷ್ಟಿಯನ್ನು ನೀಡು, ಆಲಿಸುವಂತೆ ಮಾಡು. ಜೀವಿತದ ರಹಸ್ಯಗಳ ಪರಿಚಯಗೊಳಿಸು. ಇದರಿಂದ ನಿನ್ನ ಮಹಿಮೆಯ ಗುಟ್ಟು ನಮಗೆ ಗ್ರಹಿಕೆಯಾಗಿ ನಾವು ನಿನ್ನ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುವಂತೆ ಮಾಡು, ಪ್ರತಿ ಔದಾರ್ಯವೂ ನಿನ್ನಿಂದ ಉತ್ಪತ್ತಿ, ಪ್ರತಿ ಅನುಗ್ರಹವೂ ನಿನ್ನದೇ, ನೀನು ಪರಾಕ್ರಮಿ ಶಕ್ತಿವಂತ, ದಾನಿ, ಘನ ಉದಾರಿ.

“ಸಭೆಯ ಸ್ಥಾಳದಲ್ಲಿ ಯಾವಾಗಲಾದರೂ ಜನ ಸಮೂಹವು ಒಂದು ಸೇರಿ, ದೇವರ ಸ್ತುತಿಯಲ್ಲಿ ನಿರತರಾಗಿರುವುದೋ, ಹಾಗೂ ದೇವರ ರಹಸ್ಯಗಳ ಬಗ್ಗೆ ಪರಸ್ಪರ ಮಾತನಾಡುವುದೋ, ನಿಸ್ಸಂಶಯವಾಗಿ ಪವಿತ್ರ ಆತ್ಮದ ಮಂದಾನಿಲವು ಅವರ ಮೇಲೆ ಶಾಂತವಾಗಿ ಬೀಸುವುದು ಮತ್ತು ಪ್ರತಿಯೊಬ್ಬರೂ ಅದರಲ್ಲಿ ಒಂದು ಪಾಲನ್ನು ಪಡೆಯುವರು.”

#9464
- `Abdu'l-Bahá

 

ಸಹಾಯಕ್ಕಾಗಿ

ಓ ನನ್ನ ಪರಮಾತ್ಮನೇ! ನಿನ್ನ ಖ್ಯಾತಿಯ ನಾಮದಿಂದ ನಾನು ನಿನ್ನಲ್ಲಿ ಪ್ರಾರ್ಥಿಸುವುದಿಷ್ಟೆ, ನಿನ್ನ ಸೇವಕರ ವಿಚಾರಗಳಲ್ಲಿ ಏಳಿಗೆಯನ್ನುಂಟುಮಾಡು; ನಿನ್ನ ಪ್ರದೇಶಗಳು ಅಭಿವೃದ್ಧಿಗೊಳ್ಳುವಂತೆ ಮಾಡು; ವಾಸ್ತವವಾಗಿ ಜಗತ್ತಿನ ಎಲ್ಲ ವಸ್ತುಗಳ ಮೇಲೂ ನಿನಗೆ ಪರಮಾಧಿಕಾರ ಉಂಟು.

#9424
- Bahá'u'lláh

 

“ಪ್ರತಿಯೊಂದು ಪರಿಸ್ಥಿತಿಗಳಲ್ಲೂ ಸಹನೆಯಿಂದಿರಿ ಮತ್ತು ನಿಮ್ಮ ಸಂಪೂರ್ಣ ಭರವಸೆ ಹಾಗೂ ವಿಶ್ವಾಸವನ್ನು ದೇವರ ಮೇಲಿಡಿ.”

#9425
- Bahá'u'lláh

 

ಪರಮಾತ್ಮನಲ್ಲದೆ ಕಷ್ಟನಿವಾರಕ ಮತ್ತ್ಯಾರಿದ್ದಾರೆ? ಪರಮಾತ್ಮನೆ ಘನವಂತ ಎಂದೆನ್ನು. ಅವನೇ ದೇವರು ಎಂದು ಘೋಷಿಸು. ಎಲ್ಲರೂ ಅವನ ಸೇವಕರು ಆಜ್ಞಾಧಾರಕರು ಎಂದು ನುಡಿ. - ಬಾಬ್

ಹೇಳು: ಪರಮಾತ್ಮನೇ ಎಲ್ಲರಿಗೂ ಅವಶ್ಯವಾದುದನ್ನು ಒದಗಿಸುವವನು. ಅಲ್ಲದೆ ಎಲ್ಲರ ಮೇಲೂ ವ್ಯಾಪ್ತಿಯುಳ್ಳವನು. ಸ್ವರ್ಗದಲ್ಲಾಗಲೀ, ಅಥವಾ ಪೃಥ್ವಿಯಲ್ಲಾಗಲೀ ಪರಮಾತ್ಮನ ವ್ಯಾಪ್ತಿಗೆ ಅತೀತವಾದುದು ಯಾವುದೂ ಇಲ್ಲ. ಅರಿತವನೂ, ಆಧಾರಿಯೂ, ಸರ್ವಶಕ್ತನೂ ಆದ ಅವನು ನಿಜಕ್ಕೂ ತನ್ನೊಳಗೇ ಅಡಗಿರುವನು. - ಬಾಬ್

ಪ್ರಭುವೇ, ಆರ್ತರು ನಾವು ಪ್ರೀತಿಯ ಕೊಡುಗೆ ನೀಡು, ದಯೆತೋರು ನಿನ್ನ ಸಂಪತ್ತಿನ ಮಹಾ ಸಾಗರದಲ್ಲಿ ಅಗತ್ಯವಿರುವ ನಮಗೆ ಪಾಲು ದೊರಕಿಸು. ಕೀಳಾಗಿಸಲ್ಪಟ್ಟಿರುವ ನಮ್ಮನ್ನು ಸಂತೈಸು, ನಿನ್ನ ಕೀರ್ತಿಗೆ ನಮ್ಮನ್ನು ಭಗಸ್ಥರನ್ನಾಗಿ ಮಾಡು. ಆಕಾಶದ ಪಕ್ಷಿಗಳೂ ತಮ್ಮ ಆಹಾರವನ್ನು ದಿನಂಪ್ರತಿ ನಿನ್ನಿಂದ ಪಡೆಯುವುವು. ಎಲ್ಲ ವಸ್ತುಗಳೂ, ಜೀವಿಗಳೂ ನಿನ್ನ ಲಕ್ಷ್ಯ ಹಾಗೂ ಪ್ರೇಮಮಯವಾದ ಪ್ರೀತಿಯ ಆಸರೆಯಲ್ಲಿರುವುವು. ಈ ಅಶಕ್ತನನ್ನು ನಿನ್ನ ಅಗಾಧ ಕರುಣೆಯಿಂದ ದೂರಗೊಳಿಸಬೇಡ. ಈ ನಿಸ್ಸಹಾಯಕ ಆತ್ಮವನ್ನು ನಿನ್ನ ಉದಾರತೆಯಿಂದ ರಕ್ಷಿಸುವ ಭರವಸೆ ನೀಡು.

ನಮ್ಮ ದೈನಂದಿನ ಆಹಾರವನ್ನು ಒದಗಿಸು ಜೀವನದ ಅವಶ್ಯಕತೆಗಳನ್ನು ಹೆಚ್ಚಿಸುವಲ್ಲಿ ಕೃಪೆಮಾಡು ನಿನ್ನನ್ನಲ್ಲದೆ ಬೇರೆಯವರನ್ನು ಅವಲಂಬಿಸದಂತೆ, ನಿನ್ನೊಡನೆ ಸಂಪೂರ್ಣವಾಗಿ ಸಂಪರ್ಕವಿರುವಂತೆ ನಿನ್ನ ಮಾರ್ಗನುಯಾಯಿಯಾಗುವಂತೆ, ಹಾಗೂ ನಿನ್ನ ಸರ್ವಶಕ್ತ, ಪ್ರೇಮಮಯಿ, ಮಾನವ ಕೋಟೆಯ ಇಷ್ಟಾರ್ಥವನ್ನು ಪೂರೈಸುವವನು.

#9426
- `Abdu'l-Bahá

 

ಓ ಪ್ರಭುವೇ, ನನ್ನ ದೇವರೇ! ನಿನ್ನನ್ನು ಪ್ರೀತಿಸುವವರಲ್ಲಿ ನಿನ್ನ ಬಗ್ಗೆ, ವಿಶ್ವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷ್ಟು ಮಾತ್ರವಲ್ಲ ನಿನ್ನ ಮಾರ್ಗವನ್ನು ಅನುಸರಿಸುವಂತೆ, ನಿನ್ನ ಕಾರ್ಯದಲ್ಲಿ ನಿಷ್ಠೆಯಿಂದಿರುವಂತೆ ಅನುಗ್ರಹಿಸು. ಸ್ವಾರ್ಥ ಹಾಗೂ ಮೋಹಪಾಶಗಳ ಹೊಡೆತವನ್ನು ಎದುರಿಸಲು ಸ್ಥೈರ್ಯ ನೀಡು. ಭಗವಂತನ ದಿವ್ಯ ಮಾರ್ಗದರ್ಶನವನ್ನು ಹಿಡಿದು ಸಾಗಲು ಒತ್ತಾಸೆ ಕರುಣಿಸು, ನೀನು ಅತಿ ಬಲಶಾಲಿ, ಕರುಣಾಳು, ಸ್ವಯಂಪೂರ್ಣದಾತ, ದಯಾದ್ರ್ರಹೃದಯ, ಸರ್ವಶಕ್ತ, ಅತುಲ ಉದಾರಿ.

#9427
- `Abdu'l-Bahá

 

ಹೆತ್ತವರಿಗಾಗಿ

“ದೇವರೊಡನೆ ಸಂಭಾಷಿಸುವಾಗ ಯಾರು ಅವನ ಹೆತ್ತವನ್ನು ಸ್ಮರಿಸುತ್ತಾನೋ ಅವನು ಧನ್ಯನು.” - ಬಾಬ್

ಓ ಪ್ರಭುವೇ, ನಮ್ಮ ದೀನ ಕೈಗಳು ನಿನ್ನ ಕೃಪೆ ಹಾಗೂ ಔದಾರ್ಯದ ಸ್ವರ್ಗದತ್ತ ಚಾಚಿರುವುದನ್ನು ನೀನು ನೋಡುತ್ತಿರುವೆ. ನಿನ್ನ ಕೊಡುಗೆ ಹಾಗೂ ಉದಾರತೆಗಳ ನಿಧಿಗಳಿಂದ ಅವುಗಳು ತುಂಬುವಂತೆ ಅನುಗ್ರಹಿಸು. ನಮ್ಮನ್ನೂ ಮತ್ತು ನಮ್ಮ ತಂದೆ ತಾಯಂದಿರನ್ನೂ ಕ್ಷಮಿಸು, ಹಾಗೂ ನಿನ್ನ ಮನೋಹರತೆ ಮತ್ತು ದೈವೀ ಉದಾರತೆಯ ಸಾಗರದಿಂದ ನಾವು ಬಯಸಿದುದೆಲ್ಲವನ್ನೂ ಈಡೇರಿಸು. ಓ ನಮ್ಮ ಹೃದಯಗಳ ಪ್ರೀತಿ ಪಾತ್ರನೇ, ನಿನ್ನ ಪಥದಲ್ಲಿನ ನಮ್ಮ ಎಲ್ಲಾ ಕಾರ್ಯಗಳನ್ನೂ ಸ್ವೀಕರಿಸುವವನಾಗು ನೀನು, ಸತ್ಯವಾಗಿಯೂ, ಅತ್ಯಂತ ಪ್ರಬಲನೂ, ಮಹೋನ್ನತನೂ, ಅನುಪಮನೂ, ಕ್ಷಮಾಶೀಲನೂ, ಕೃಪಾಕರನೂ ಆಗಿರುವೆ.

#9470
- Bahá'u'lláh

 

ಓ ಪ್ರಭುವೇ! ಈ ಮಹಾ ಶ್ರೇಷ್ಠಯುಗದಲ್ಲಿ, ತಮ್ಮ ಹೆತ್ತವರ ಪರವಾಗಿ ಮಕ್ಕಳ ಮಧ್ಯಸ್ಥಿಕೆಯನ್ನು ನೀನು ಸ್ವೀಕಾರ ಮಾಡಿರುವೆ. ಇದು ಈ ಯುಗದ ಅಪರಿಮಿತ, ವಿಶೇಷವಾದ ಕೊಡುಗೆಗಳಲ್ಲೊಂದಾಗಿದೆ. ಆದ್ದರಿಂದ, ಓ ದಯಾಳು ಪ್ರಭುವೇ, ನಿನ್ನ ಏಕಮೇವ ಹೊಸ್ತಿಲಲ್ಲಿ ಈ ನಿನ್ನ ಸೇವಕನ ವಿನಂತಿಯನ್ನು ಸ್ವೀಕರಿಸು ಹಾಗೂ ಅವನ ತಂದೆಯನ್ನು ನಿನ್ನ ಕೃಪಾಸಾಗರದಲ್ಲಿ ಮುಳುಗಿಸು. ಏಕೆಂದರೆ, ನಿನ್ನ ಪ್ರೇಮದ ಪಥದಲ್ಲಿ ನಿನ್ನ ಸೇವೆ ಮಾಡಲು ಹಾಗೂ ಎಲ್ಲಾ ಸಮಯದಲ್ಲೂ ಅವಿರತವಾಗಿ ಶ್ರಮಿಸಲು ಈ ಪುತ್ರನು ಎದ್ದಿರುವನು. ಸತ್ಯವಾಗಿಯೂ, ಕೊಡುವವನೂ, ಕ್ಷಮಾದಾತನೂ, ಹಾಗೂ ದಯಾಳುವೂ ನೀನೇ ಆಗಿರುವೆ.

#9471
- `Abdu'l-Bahá

 

Occasional

ಅಧಿಕ ಮಾಸದ ದಿನಗಳಲ್ಲಿ

(ಅಧಿಕ ಮಾಸದ ದಿವಸಗಳಲ್ಲಿ ಫೆಬ್ರವರಿ 26ರಿಂದ ಮಾರ್ಚ್ 1ರ ತನಕ ಉಪವಾಸ, ದಾನ, ಧರ್ಮ ಹಾಗೂ ಸತ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು)

ನನ್ನ ದೇವರೇ, ನನ್ನ ಅಗ್ನಿ ಮತ್ತು ಜ್ಯೋತಿಯೇ, ನಿನ್ನ ಗ್ರಂಥವಾದ ಅಯ್ಯಾಮ್ –ಇ-ಹಾ (ಹಾ ದಿವಸಗಳು ಅಧಿಕ ಮಾಸದ ದಿನಗಳು)ದಲ್ಲಿ ಹೇಳಿರುವ ದಿನಗಳು ಆರಂಭವಾಗಿವೆ. ವೈಭವದ ದೊರೆಯೆನಿಸಿರುವ ಎಲ್ಲಾ ಜೀವಿಗಳಿಗೂ ಆದೇಶವಾಗಿರುವಂತೆ ಆಚರಿಸುವ ದಿನಗಳೂ ಸನ್ನಿಹಿತವಾಗುತ್ತಿವೆ. ಓ ಪ್ರಭುವೇ, ನಿನ್ನಲ್ಲಿ ನಾನು ಬೇಡುವುದಿಷ್ಟೆ ಈ ದಿನಗಳಲ್ಲಿ, ನಿನ್ನ ಅಜ್ಞಾಧಾರಕರಾಗಿರುವವರೆಲ್ಲ. ನಿನ್ನ ಮಾರ್ಗಾನುವರ್ತಿಗಳಾಗಿ ಇರುವವರೆಲ್ಲ ನಿನ್ನ ವ್ಯಾಪ್ತಿಗೆ ಒಳಪಡುವಂತೆ ಅವರ ಆತ್ಮಗಳಿಗೆ ಸ್ಥಾನ ಕಲ್ಪಿಸು. ನಿನ್ನ ದಿವ್ಯ ಜ್ಯೋತಿಯ ಪ್ರಭಾವವನ್ನು ಅವರಿಗೆ ಕರುಣಿಸು.

ಓ ಸ್ವಾಮಿಯೇ, ಇವರೆಲ್ಲ ನಿನ್ನ ಸೇವಕರು ನಿನ್ನ ಉಪದೇಶಗಳನ್ನು ತ್ಯಜಿಸುವಂಥ ಯಾವ ಕೆಟ್ಟ ಯೋಚನೆಯೂ ಇವರ ಬಳಿ ಸುಳಿದಿಲ್ಲ. ನಿನ್ನ ಧ್ಯೇಯಕ್ಕಾಗಿ ಶರಣಾಗಿರುವರು. ನಿನ್ನ ಆದೇಶಗಳನ್ನು ಮನಸಾರೆ ಅಂಗೀಕರಿಸಿರುವರು. ನಿನ್ನ ಗುಣಕ್ಕನುಸಾರವಾಗಿ ನಿರ್ಧಾರ ಕೈಗೊಂಡಿರುವರು. ಅವರ ಮುಂದಿಟ್ಟಿರುವ ವಿಧಿಗಳನ್ನು ಅಚರಿಸುತ್ತಿರುವರು. ನೀನು ವಿಧಾಯಕಗೊಳಿಸಿರುವ ನೀತಿಯನ್ನು ಪಾಲಿಸುತ್ತಿರುವರು.

ಓ ದೇವರೇ, ನಿನ್ನ ಧರ್ಮಗ್ರಂಥದಲ್ಲಿ ನಿರೂಪಿಸಿರುವುದನ್ನೆಲ್ಲ ಅವರು ಒಪ್ಪಿರುವುದಲ್ಲದೆ, ಮಾನ್ಯ ಮಾಡಿರುವುದನ್ನೂ ನೀನು ಕಂಡಿರುವೆ. ಪ್ರಭುವೇ, ನಿನ್ನ ಅಮೃತ ಹಸ್ತದಿಂಡ ನಿನ್ನ ಅನಂತಕಾರಕ ಜಲವನ್ನು ನೀಡಿ ಅವರು ಪಾನ ಮಾಡುವಂತೆ ಕೃಪೆತೋರು. ಅವರಿಗಾಗಿ ವಿಧಿಸಿರುವ ಪ್ರತಿಫಲವನ್ನು ಸ್ಪಷ್ಟಪಡಿಸು. ನಿನ್ನ ಸಮಕ್ಷಮದಿಂದ ಹಾಗೂ ಸಮಾಗಮದಿಂದ ಅವರು ಹರ್ಷೋನ್ಮಾದರಾಗಲಿ.

ಓ ದೊರೆಗಳ ದೊರೆಯೇ, ದೀನದಲಿತರ ಸಹಾನುಭೂತಿಪರನೇ, ಅವರಿಗೆ ಈ ಪ್ರಪಂಚದ ಹಾಗೂ ಮುಂದಿನ ಪ್ರಪಂಚದ ಒಳ್ಳೆಯದೆಲ್ಲವನ್ನೂ ಕರುಣಿಸೆಂದು ಸೆರಗೊಡ್ಡಿ ಬೇಡುವೆ. ನಿನ್ನ ಸುತ್ತ ಯಾರು ಇದ್ದು ಅನಸರಿಸುವರೋ ಅಂಥವರೊಡನೆ ನಿನ್ನ ಜೀವಿಗಳು ಬೆರೆಯುವಂತೆ ಮಾಡು.

ನಿಜಕ್ಕೂ ನೀನು ಮಹಾಶಕ್ತಿವಂತ, ಸರ್ವಜ್ಞಾನಿ, ಎಲ್ಲ ಬಲ್ಲವನು.

#9510
- Bahá'u'lláh

 

ಉಪವಾಸದ ಸಮಯದಲ್ಲಿ

(ಅಲಾ ಔನ್ನತ್ಯ ತಿಂಗಳಲ್ಲಿ ಉಪವಾಸ ವ್ರತವು ಮಾರ್ಚ್ ತಿಂಗಳ 2ರಿಂದ 20ರ ತನಕ ಒಳಗೊಂಡಿರುತ್ತದೆ. ಈ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಸಮಯದಲ್ಲಿ ಯಾವುದೇ ರೀತಿಯ ಆಹಾರವಾಗಲೀ, ಪಾನೀಯವಾಗಲೀ ಸೇವಿಸಕೂಡುದು. ಇದು ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪುನಃಶ್ಚೇತನದ ಸಮಯವಾಗಿದೆ. 15 ವರ್ಷಕ್ಕಿಂತ ಕಮ್ಮಿ ವಯಸ್ಸುಳ್ಳುವರು, ಪ್ರಯಾಣಿಕರು, ರೋಗಿಗಳು, ಗರ್ಭಿಣಿ ಮತ್ತು ಮೊಲೆಯೂಡುವ ತಾಯಂದಿರು ಉಪವಾಸದಿಂದ ವಿನಾಯ್ತಿ ಪಡೆದುಕೊಂಡಿರುವರು)

ಓ ಪ್ರಭು ನನ್ನ ದೇವರೇ, ನೀನು ಪ್ರಶಂಸನೀಯ! ಈ ನಿನ್ನ ಸಾಕ್ಷಾತ್ಕಾರದಿಂದ ಕತ್ತಲು ಬೆಳಕಾಗಿ ತನ್ಮೂಲಕ ದೇವಾಲಯ ನಿರ್ಮಿತವಾಗಿ ಶಾಸನ ಪ್ರಕಟವಾಯಿತೋ ಮತ್ತು ಉಪದೇಶಗಳ ಪತ್ರಾವಳಿ ತೆರೆಯಲ್ಪಟ್ಟಿರುವುದೋ, ಈ ಸಂದರ್ಭದಲ್ಲಿ ನನ್ನ ಹಾಗೂ ಅವರನ್ನು ನಿನ್ನ ಅಚಿಂತ್ಯವಾದ ವೈಭವೋಪೇತ ಸ್ವರ್ಗಕ್ಕೆ ಏರುವಂತೆ ಮಾಡಬೇಕೆಂದೂ, ಅನುಮಾನವುಳ್ಳವರು ನಿನ್ನ ಪೂಜಾ ಮಂದಿರವನ್ನು ಪ್ರವೇಶಿಸಲು ಅಡ್ಡಿ ತರುವವರ ಸಂಶಯಗಳ ಕಳಂಕವನ್ನು ತೊಡೆದುಹಾಕಬೇಕೆಂದೂ ಪ್ರಾರ್ಥಿಸುವೆ.

ಓ ಪ್ರಭುವೇ, ನಿನ್ನ ಪ್ರೀತಿಯ ಸೂತ್ರಕ್ಕೆ ದೃಢವಾಗಿ ಅಂಟಿಕೊಂಡಿರುವವನ್ನು ನಾನೊಬ್ಬ, ನಿನ್ನ ದಯೆ ಹಾಗೂ ಉಪಕಾರಕ್ಕಾಗಿ ಕಾತುರತೆಯಿಂದಿರುವವನೂ ಹೌದು. ನನಗೂ ಹಾಗೂ ನನ್ನ ಪ್ರೀತಿಗೆ ಪಾತ್ರರಾದವರಿಗೆಲ್ಲ ಈ ಜಗತ್ತಿನ ಮತ್ತು ಭಾವೀ ಜಗತ್ತಿನ ಎಲ್ಲ ಒಳ್ಳೆಯದನ್ನೂ ಅನುಗ್ರಹಿಸು. ನಿನ್ನ ಅಪ್ತ ಜೀವಿಗಳಿಗೆ ಸಲ್ಲಿಸಿರುವ ಗುಪ್ತ ವರವನ್ನು ಅವರಿಗೆ ಕೊಡುವವನಾಗು.

ಸ್ವಾಮಿಯೇ, ನೀನು ನಿನ್ನ ಸೇವಕರು ಉಪವಾಸವನ್ನು ಆಚರಿಸಬೇಕೆಂದು ವಿಧಾಯಕ ಮಾಡಿರುವ ದಿನಗಳಿವು. ಉಪವಾಸವನ್ನು ನಿನ್ನ ಪ್ರೀತ್ಯರ್ಥವಾಗಿ ಹಾಗೂ ನಿನ್ನ ಹೊರತು ಎಲ್ಲ ವಿಚಾರಗಳಿಂದಲೂ ಸಂಪೂರ್ಣ ಅಲಿಪ್ತನಾಗಿ ನಡೆದುಕೊಳ್ಳುತ್ತಾ ಆಚರಿಸುವವನೇ ಧನ್ಯ. ದೇವರೇ, ನನಗೂ ಮತ್ತು ಅವರಿಗೂ ನಿನ್ನ ಆದೇಶವನ್ನು ಪಾಲಿಸುವಂತೆಯೂ, ನಿನ್ನ ಅನುಚರರಾಗಿರುವಂತೆಯೂ ಸಹಾಯವೆಸಗು. ನಿಜಕ್ಕೂ ನೀನು ಬಯಸಿದುದನ್ನು ನಡೆಸಿಕೊಡಲು ಸಮರ್ಥನಾಗಿದ್ದೀಯೇ. ಸರ್ವಜ್ಞನೂ, ಸಕಲ ಗುಣಶಾಲಿಯೂ ಆದ ಭಗವಂತ ನೀನಲ್ಲದೆ ಬೇರೆ ಇಲ್ಲ. ಎಲ್ಲ ಪ್ರಪಂಚದ ಪ್ರಭುವಾಗಿರುವ ದೇವರೇ ನಿನಗೆ ವಂದನೆ.

#9511
- Bahá'u'lláh

 

ಓ ದೈವೀ ಅನುಗ್ರಹವೇ! ನಾನು ಶಾರೀರಿಕವಾದ ಅಪೇಕ್ಷೆಗಳಿಂದ ದೂರವಿದ್ಧು ತಿನ್ನುವ ಮತ್ತು ಪಾನೀಯ ಸೇವನೆಯಲ್ಲಿ ತೊಡಗದಿರುವಂತೆಯೇ, ನನ್ನ ಹೃದಯವನ್ನು ನಿನ್ನ ಹೊರತಲ್ಲದ ಪ್ರೀತಿಯಿಂದ ಪರಿಶುದ್ಧಗೊಳಿಸು ಹಾಗೂ ಪವಿತ್ರಗೊಳಿಸು, ಮತ್ತು ನನ್ನ ಆತ್ಮವನ್ನು ದೂಷಿತ ಬಯಕೆಗಳಿಂದ ಹಾಗೂ ಪೈಶಾಚಿಕ ಪ್ರವೃತಿಗಳಿಂದ ಕಾಪಾಡು ಹಾಗೂ ರಕ್ಷಿಸು, ಇದರಿಂದ ನನ್ನ ಆತ್ಮವು ಪವಿತ್ರತೆಯ ಉಸಿರಿನೊಂದಿಗೆ ಸಂಭಾಷಿಸಬಹುದು ಹಾಗೂ ನಿನ್ನನ್ನಲ್ಲದೆ ಬೇರೆಲ್ಲವುಗಳನ್ನು ಉಚ್ಚರಿಸುವುದರಿಂದ ಉಪವಾಸ ಮಾಡಬಹುದು!

#9512
- `Abdu'l-Bahá

 

ದೀರ್ಘ ಗುಣಕಾರಿ ಪ್ರಾರ್ಥನೆ

ದೀರ್ಘ ಗುಣಕಾರಿ ಪ್ರಾರ್ಥನೆ

ಅವನೇ ರೋಗ ನಿವಾರಕ, ಪರಿಪೂರಕ,

ಸಹಾಯಕ, ಕ್ಷಮಾಶೀಲ, ಕರುಣಾಮಯಿ.

ಓ ಘನತೆವೆತ್ತವನೇ, ಓ ನಿಷ್ಠಾವಂತನೆ,

ಓ ವೈಭವ ಪೂರಿತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸಾರ್ವಭೌಮನೇ, ಓ ಉನ್ನತಿದಾತನೇ,

ಓ ನ್ಯಾಯಾಧೀಶನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಅನುಪಮನೆ, ಓ ಅನಂತನೇ,

ಓ ಏಕಮೇವನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಶ್ಲಾಘನೀಯನೇ, ಓ ಪೂಜ್ಯನೇ,

ಓ ಸಹಾಯಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸರ್ವಜ್ಞನೇ, ಓ ಮಹಾಪ್ರಜ್ಞನೇ,

ಓ ಮಹಾಮಹಿಮನೇ, ನಿನ್ನಲ್ಲಿ ನಾನು ಬಿನ್ನಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸೌಮ್ಯನೇ, ಓ ಭವ್ಯನೇ,

ಓ ವಿಧಾಯಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪ್ರಿಯತಮನೇ, ಓ ಪ್ರೀತಿಪಾತ್ರನೇ,

ಓ ಸಂತೋಷಕಾರಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಮಹಾಬಲನೇ, ಓ ಜೀವಾಧಾರನೇ,

ಓ ಸಾಮಥ್ರ್ಯವಂತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಆಳುವರಸನೇ, ಓ ಸ್ವಯಂ ಜೀವಿಯೇ,

ಓ ಸರ್ವಜ್ಞನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಒ ಚೈತನ್ಯನೇ, ಓ ಪ್ರಕಾಶನೇ,

ಓ ಮಹಾವ್ಯಕ್ತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸರ್ವರಿಂದಲೂ ಸಂದರ್ಶಿಸಲ್ಪಡುವವನೇ, ಓ ಸರ್ವಜ್ಞಾತನನೇ,

ಓ ನಿಗೂಢನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಗೋಪ್ಯನೇ, ಓ ವೀಜೇತನೇ,

ಓ ವರದಾತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಶಕ್ತಿಶಾಲಿಯೆ, ಓ ಸಹಾಯಕನೇ,

ಓ ಅಗೋಚರನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸ್ವರೂಪದಾತನೇ, ಓ ತೃಪ್ತಿಕಾರಕನೇ,

ಓ ಸಂಹಾರಕರ್ತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಉದಯನೇ, ಓ ಏಕತ್ರಕತ್ರ್ನನೇ,

ಓ ಘನತೆವೆತ್ತವನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪರಿಪೂರ್ಣನೇ, ಓ ಅನಿರ್ಬಂಧಿತನೇ,

ಓ ಔದಾರ್ಯ ಮೂರ್ತಿಯೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪರೋಪಕಾರಿಯೇ, ಓ ತಡೆಹಿಡಿಯುವವನೇ,

ಓ ಸೃಷ್ಟಿಕರ್ತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪರಮ ಉದಾತ್ತನೇ, ಓ ಸೌಂದರ್ಯ ಮೂರ್ತಿಯೇ,

ಓ ಸಮೃದ್ಧನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ನ್ಯಾಯವಂತನೇ, ಓ ದಯಾಪೂರಿತನೇ,

ಓ ಕೊಡುಗೈ ದೊರೆಯೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸರ್ವ ನಿರ್ಬಂಧಕನೇ, ಓ ಚಿರಶಾಶ್ವತನೇ,

ಓ ಪರಮ ಜ್ಞಾನಿಯೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಭವ್ಯನೇ, ಓ ಪ್ರಾಚೀನನೇ,

ಓ ಮಹಾನುಭಾವನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸುಸಂರಕ್ಷಿತನೇ, ಓ ಸಚ್ಚಿದಾನಂದನೇ,

ಓ ಅಪೇಕ್ಷಿತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸರ್ವದಯಾಳುವೇ, ಓ ಸರ್ವಕೃಪಾಳುವೇ,

ಓ ಕಲ್ಯಾಣಕಾರಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಆಶ್ರಯದಾತನೇ, ಓ ಆಸರೆಯೇ,

ಓ ಸರ್ವಸುರಕ್ಷಿತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸರ್ವಸಹಾಯಕನೇ, ಓ ಸರ್ವರಿಂದಲೂ ಪ್ರಾರ್ಥಿಸಲ್ಪಡುವವನೇ,

ಓ ಸ್ಪೂರ್ತಿದಾಯಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪ್ರಕಟಕರ್ತನೇ, ಓ ರುದ್ರನೇ,

ಓ ಕರುಣಾಶಾಲಿಯೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ನನ್ನಾತ್ಮನೇ, ಓ ನನ್ನ ಪ್ರಿಯತಮನೇ,

ಓ ನನ್ನ ನಂಬಿಕೆಯೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಬಾಯಾರಿದವರನ್ನು ತಣಿಸುವವನೇ, ಓ ಸರ್ವಾತಿಶಯ ಪ್ರಭುವೇ,

ಓ ಅತ್ಯಮೂಲ್ಯನೆ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಮಹಾಸ್ಮೃತಿಯೇ, ಓ ಸರ್ವೋತ್ತಮ ನಾಮಾಂಕಿತನೇ,

ಓ ಮಹಾಪ್ರಾಚೀನ ಮಾರ್ಗವೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪರಮ ಪ್ರಶಂಸಾರ್ಹನೇ, ಓ ಪರಮ ಪಾವನನೇ,

ಓ ಪರಮ ಪವಿತ್ರನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ನಿಬಂಧಕನೇ, ಓ ಸಲಾಹಾದಾರನೇ,

ಓ ಮುಕ್ತಿದಾತನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸ್ನೇಹಿತನೇ, ಓ ಚಿಕಿತ್ಸಕನೇ,

ಓ ಸಮ್ಮೋಹಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ವೈಭವನೇ, ಓ ಸುಂದರನೇ,

ಓ ಔದಾರ್ಯನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪರಮ ನಂಬಿಗಸ್ತನೇ, ಓ ಸರ್ವಾಧಿಕ ಪ್ರೇಮಿಯೇ,

ಓ ಅದಿತ್ಯನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಜ್ಯೋತಿರ್ದಾನೇ, ಓ ಪ್ರತಿಭಾ ಶಾಲಿಯೇ,

ಓ ಆನಂದದಾಯಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ದಾನಶೂರ ಪ್ರಭುವೇ, ಓ ಕರುಣಾಮೂರ್ತಿಯೇ,

ಓ ಕೃಪಾಕರನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ನಿಶ್ಚಲನೇ, ಓ ಜೀವದಾತನೇ,

ಓ ಸರ್ವಾಸ್ತಿತ್ವ ಮೂಲನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಸರ್ವ ವಿಷಯ ಭೇದಕನೇ, ಓ ಸರ್ವದರ್ಶಿ ದೇವರೇ,

ಓ ದಿವ್ಯವಾಣಿ ಪ್ರಭುವೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ವ್ಯಕ್ತನಾದರೂ ನಿಗೂಢನೇ, ಓ ಅದೃಶ್ಯನಾದರೂ ಪ್ರಸಿದ್ಧನೇ,

ಓ ಸರ್ವ ಪ್ರತೀಕ್ಷಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪ್ರೇಮಿಗಳ ಸಂಹಾರಕನೇ, ಓ ದುಷ್ಟರಿಗೂ

ದಯಾಳು ಪ್ರಭುವೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ!

ನೀನೇ ಪರಿಪೂರಕ, ನೀನೇ ರೋಗನಿವಾರಕ,

ನೀನೇ ಚಿರಂತನ ಓ ಚಿರಂತನನೇ!

ಓ ಪರಿಪೂರಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ,

ಓ ಪರಿಪೂರಕನೇ,

ಓ ರೋಗ ನಿವಾರಕನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೆನೆ,

ಓ ರೋಗನಿವಾರಕನೇ !

ಓ ಚಿರಂತನನೇ, ನಿನ್ನಲ್ಲಿ ನಾನು ಬಿನ್ನವಿಸುತ್ತಿದ್ದೇನೆ,

ಓ ಚಿರಂತನನೇ!

ನೀನೇ ಚಿರಶಾಶ್ವತ, ಓ ಚಿರಂತನನೇ!

ಓ ನನ್ನ ದೇವರೇ, ನೀನೇ ಪರಮ ಪಾವನ! ಯಾವುದರಿಂದ ನಿನ್ನ ಕೃಪೆ ಮತ್ತು ಉದಾರತೆಯ ಚೌಕಟ್ಟುಗಳು ವಿಶಾಲವಾಗಿ ತೆರೆಯಲ್ಪಟ್ಟಿದ್ದವೋ, ಯಾವುದರಿಂದ ನಿನ್ನ ಪವಿತ್ರತೆಯ ಮಂದಿರವು ಅನಂತತೆಯ ಸಿಂಹಾಸನದ ಮೇಲೆ ಸ್ಥಾಪಿಸಲ್ಪಟ್ಟಿತ್ತೋ, ಅಂತಹ ನಿನ್ನ ಔದಾರ್ಯತನದಿಂದ ನಿನ್ನಲ್ಲಿ ನಾನು ಯಾಚಿಸುತ್ತಿದ್ದೇನೆ, ಯಾವುದರಿಂಡ ನಿನ್ನ ಕೃಪೆ ಮತ್ತು ಉದಾರತೆಗಳ ಸಹಭೋಜನಕ್ಕೆ ಸಮಸ್ತ ಸೃಷ್ಟಿಯನ್ನು ನೀನು ಆಮಂತ್ರಿಸಿದ್ದೀಯೋ ಅಂತಹ ನಿನ್ನ ಅನುಗ್ರಹದಿಂದ ನಿನ್ನಲ್ಲಿ ಯಾಚಿಸುತ್ತಿದ್ದೇನೆ, ಯಾವುದರಿಂಡ ನಿನ್ನ ಸಾಮ್ರಾಜ್ಯ ಮತ್ತು ನಿನ್ನ ಭವ್ಯತೆಯು ಪ್ರತ್ಯಕ್ಷಗೊಂಡಿದ್ದ, ನಿನ್ನ ಚಕ್ರಾಧಿಪತ್ಯದ ಬಲ ವ್ಯಕ್ತವಾಗಿದ್ದ ಮುಂಜಾನೆಯಲ್ಲಿ ಸ್ವರ್ಗ ಮತ್ತು ಭೂಮಿಯಲ್ಲಿರುವವರ ಪರವಾಗಿ ನೀನು ನಿನ್ನ ಆತ್ಮ ಸ್ವರೂಪದಲ್ಲೇ, ನಿನ್ನದೇ ವಾಣಿಯಾದ “ಸೈ” (ಹಾಗೆಯೇ ಆಗಲಿ) ಎಂದು ನೀನು ಉತ್ತರಿಸಿದ್ದೀಯೋ ಅಂತಹ ನಿನ್ನ ಕೃಪಾಕಟಾಕ್ಷದಿಂದ ನಿನ್ನಲ್ಲಿ ನಾನು ಯಾಚಿಸುತ್ತಿದ್ದೇನೆ. ಈ ಅನುಗ್ರಹಿತ ಶಾಸನವನ್ನು ಹೊಂದಿರುವವರನ್ನೂ, ಇದನ್ನು ಪಠಿಸುವವರನ್ನೂ, ಇದನ್ನು ಸಮೀಪಿಸುತ್ತಿರುವವರನ್ನೂ, ಇದನ್ನು ಹೊಂದಿರುವ ಮನೆಯ ಸುತ್ತಮುತ್ತ ಹಾದು ಹೋಗುವವರನ್ನೂ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಕಷ್ಟಗಳ ವಸ್ತ್ರದಿಂಡ ಸುತ್ತಲ್ಪಟ್ಟವರನ್ನು ನಿನ್ನ ಈ ಅತಿ ಸುಂದರ ನಾಮಗಳ ಮೂಲಕ, ನಿನ್ನ ಈ ಉದಾತ್ತ ಗುಣಗಳ ಮೂಲಕ ಮತ್ತು ನಿನ್ನ ಮಹೋನ್ನತ ಸ್ಮರಣೆಯ ಮೂಲಕ, ನಿನ್ನ ಪವಿತ್ರ ಹಾಗೂ ನಿರ್ಮಲ ಸೌಂದರ್ಯದ ಮೂಲಕ, ನಿನ್ನ ಮಹಾ ನಿಗೂಢತೆಯ ಗುಡಾರದಲ್ಲಿ ಮರೆಯಾಗಿರುವ ಪ್ರಕಾಶದ ಮೂಲಕ ಮತ್ತು ನಿನ್ನ ನಾಮದ ಮುಲಕ ರಕ್ಷಿಸೆಂದು ನಾನು ಮತ್ತೊಮ್ಮೆ ನಿನ್ನನ್ನು ಯಾಚಿಸುತ್ತಿದ್ದೇನೆ. ಇದರ ಮೂಲಕ ಪ್ರತಿಯೊಬ್ಬ ರೋಗಿಯನ್ನೂ ಗುಣಪಡಿಸು. ಪ್ರತಿಯೊಬ್ಬ ರೋಗಗ್ರಸ್ತನನ್ನು ಸಂಕಟ ಮತ್ತು ಯಾತನೆಯಿಂದಲೂ, ದುರ್ಬಲನನ್ನು ಪ್ರತಿಯೊಂದು ಶೋಕ ಮತ್ತು ದುಃಖದಿಂದ ಮುಕ್ತಗೊಳಿಸು. ನಿನ್ನ ಮಾರ್ಗದರ್ಶನದ ಪಥದಲ್ಲಿ ಮತ್ತು ನಿನ್ನ ಕ್ಷಮೆ ಹಾಗೂ ಕೃಪೆಯ ಹಾದಿಯಲ್ಲಿ ಪ್ರವೇಶಿಸಲು ಯಾರು ಇಚ್ಛಿಸುವರೋ ಅವರಿಗೆ ಇದರಿಂದ ಮಾರ್ಗದರ್ಶನ ನೀಡು.

ನಿಜವಾಗಿಯೂ ನೀನು ಸರ್ವಶಕ್ತ, ಪರಿಪೂರಕ, ರೋಗ ನಿವಾರಕ, ರಕ್ಷಕ, ದಾನಿ, ಕರುಣಾಳು, ಪರಮ ಉದಾರಿ, ಸರ್ವಕೃಪಾಳು.

#9515
- Bahá'u'lláh

 

ನೌ-ರೂeóï ಸಮಯದಲ್ಲಿ

(ಮಾರ್ಚ್ 21ನೇ ತಾರೀಖು ನೌರೂeóï ಇದು ಬಹಾಯಿ ವರ್ಷದ ಪ್ರಥಮ ದಿನ ಇದು ಸಂಭ್ರವದ ದಿನವಾಗಿದೆ.)

ಓ ನನ್ನ ಪರಮಾತ್ಮನೇ, ನೀನು ಧನ್ಯ. ನಿನ್ನ ಪ್ರೀತ್ಯರ್ಥವಾಗಿ ಹಾಗೂ ನಿನಗೆ ಅಸಹ್ಯವೆನಿಸುವ ಎಲ್ಲ ವಿಚಾರಗಳಿಂದಲೂ ದೂರದಿಂದಿರಲು ಸಂಕಲ್ಪಿಸಿ ಉಪವಾಸ ಮಾಡಿದವರಿಗೋಸ್ಕರ ನೀನು ನೌ-ರೂeóï ಸಂಭ್ರಮದ ಹಬ್ಬವನ್ನು ಗೊತ್ತುಪಡಿಸಿರುವೆ. ನಿನ್ನ ಪ್ರೀತಿಯ ಅಗ್ನಿ ಮತ್ತು ಉಪವಾಸದಿಂದ ಉತ್ಪನ್ನವಾದ ಶಾಖ ನಿನ್ನ ಧ್ಯೇಯೋದ್ದೇಶಗಳ ಸಲುವಾಗಿ ಧಗಧಗಿಸುವಂತೆ ಮಾಡಲಿ. ಅದು ಮಾತ್ರವಲ್ಲ, ಅವು ನಿನ್ನನ್ನು ಸ್ತುತಿಗೈಯುವುದರಲ್ಲಿ ಹಾಗೂ ಸ್ಮರಣೆ ಮಾಡುವುದರಲ್ಲಿ ನಿರತವಾಗುವಂತೆ ಕೃಪೆ ಮಾಡು, ಓ ಪ್ರಭುವೇ, ನೀನೇ ವಿಧಾಯಕಪಡಿಸಿದ ಉಪವಾಸದ ಆಭರಣದಿಂದ ಅವರನ್ನು ಸಿಂಗರಿಸಿರುವೆಯಾದ ಕಾರಣ ನಿನ್ನ ದಯೆ ಹಾಗೂ ಔದಾರ್ಯದ ಉಪಕಾರದಿಂದಲೂ ಮನ್ನಣೆಯಿಂದಲೂ ಕೂಡಿದಾ ಆಭರಣದಿಂದ ಸಹ ಅಲಂಕರಿಸುವವನಾಗು. ಮಾನವರ ನಡವಳಿಕೆಯೆಲ್ಲ ನಿನ್ನ ಸಮಾಧಾನ ಹಾಗೂ ಸಂತೋಷಚಿತ್ತದ ಅವಲಂಬನೆಯಾಗುತ್ತದೆ. ಅಷ್ಟೇ ಅಲ್ಲ, ನಿನ್ನ ಆಜ್ಞೆಯ ಆಧಾರದ ಮೇಲೂ ನಿಂತಿರುತ್ತದೆ. ಯಾರು ಉಪವಾಸವನ್ನು ಆಚರಿಸಿ, ಸತ್ಯಸಂಧನಾಗಿ ಮುಕ್ತಾಯಗೊಳಿಸುವನೋ ಅಂಥವನು ಚಿರಕಾಲದಿಂದಲೂ ಉಪವಾಸ ಮಾಡುತ್ತಿರುವವರ ಗುಂಪಿಗೆ ಸೇರಿಸಲ್ಪಡುವನು. ಅದಿಲ್ಲದೆ ನಿನ್ನ ಭಾವನೆಯಲ್ಲಿ ಯಾವನು ಉಪವಾಸವನ್ನು ಆಚರಿಸಿ ನಿಲ್ಲಿಸಿ ಬಿಡುವನೋ ಅವನು ನಿನ್ನ ಪವಿತ್ರ ಉದ್ದಿಶ್ಯಗಳಿಗೆ ಕಳಂಕ ತಂದವನೆಂದು ಪರಿಗಣಿಸಲ್ಪಡುವನು. ಈ ಜೀವಂತ ಚಿಲುಮೆಯ ಪರಿಶುದ್ಧವಾದ ಜಲದಿಂದ ಅವನು ಹೊರದೂಡಲ್ಪಡುವನು. ನಿನ್ನ ಮೂಲಕವೇ ನಿನ್ನ ಪ್ರಶಂಸನೀಯ ಕರ್ತವ್ಯ ಪ್ರಕಟವಾಗಿದೆ. ನಿನ್ನ ಆಜ್ಞೆಯ ಧ್ವಜವನ್ನೂ ಹಾರಿಸಿದೆ. ಇದನ್ನು ನಿನ್ನ ಆಜ್ಞಾಪಾಲಕರಿಗೆ ತಿಳಿಸು ಪ್ರಭುವೇ. ಎಲ್ಲ ವಸ್ತುಗಳ ಪವಿತ್ರತೆಯು ನಿನ್ನ ಇಚ್ಛೆ ಹಾಗೂ ಆದೇಶವನ್ನು ಅವಲಂಬಿಸುವುದೆಂದೂ ಅವರಿಗೆ ಗೊತ್ತು ಪಡಿಸು. ಅವರ ಪ್ರತಿ ಆಚಾರವೂ ನಿನ್ನ ಅನುಮತಿ ಮತ್ತು ಸಂತೋಷದ ವಿಧಿ ಬದ್ಧವಾಗಿದೆ. ಮಾನವರ ನಡವಳಿಕೆಗಳೆಲ್ಲವೂ ನಿನ್ನ ಸಮ್ಮತಿ ಮತ್ತು ಆಜ್ಞೆಗೆ ಅನುಸಾರವಾಗಿ ಉಳ್ಳದ್ದೆಂದು ಅಂಗೀಕರಿಸಬಹುದು. ಇದು ಅವರಿಗೆ ಗೊತ್ತಾಗುವಂತೆ ಮಾಡು. ಈ ದಿನಗಳಲ್ಲಿ ನಿನ್ನ ಸೌಂದರ್ಯದ ನೆಲೆಯಿಂದ ಯಾವುದೂ ಅವರನ್ನು ಮರೆಮಾಚಲು ಸಾಧ್ಯವಿಲ್ಲವೆಂದು ಅವರಿಗೆ ಸ್ಪಷ್ಟಪಡಿಸು. ಕ್ರಿಸ್ತ ಈ ದಿನಗಳಲ್ಲಿ ಹೀಗೆ ಹೇಳಿದ : “ಎಲ್ಲ ರಾಜ್ಯಗಳೂ ನಿನ್ನವು “ಓ ಚೈತನ್ಯ ಕರ್ತನೇ” ನಿನ್ನ ಮಿತ್ರ ಮೊಹಮ್ಮದ್ ಹೀಗೆ ಸಾರಿದ: “ ಓ ಉತ್ತಮೋತ್ತಮ ಪ್ರೀತಿಗೆ ಪಾತ್ರನಾದವನೇ, ನಿನ್ನ ಸೌಂದರ್ಯವನ್ನು ಬಹಿರಂಗಪಡಿಸಿರುವೆ. ನಿನ್ನ ವಿಶ್ವಾಸ ಪಾತ್ರರಿಗೆ, ಅತಿ ವೈಭವದ ನಿನ್ನ ಸಾಕ್ಷಾತ್ಕಾರದಲ್ಲಿ ಸ್ಥಾನ ಗಳಿಸುವ ಮಾರ್ಗವಾವುದು ಎಂಬುದನ್ನು ಖಚಿತಪಡಿಸಿರುವೆ. ಹೀಗೆ ನಿನ್ನ ಹೊರತು ಮಿಕ್ಕೆಲ್ಲ ವಸ್ತುಗಳಿಂದಲೂ ಬಾಹಿರರಾದವರನ್ನು ಬಿಟ್ಟು ಉಳಿದವರೆಲ್ಲ ದುಃಖಿಗಳಾಗಿರುವರು. ಯಾರು ನಿನ್ನ ಸಾಕ್ಷಾತ್ಕಾರದ ದರ್ಶನಕರ್ತನೋ ಮತ್ತು ನಿನ್ನ ಸುಗುಣಗಳ ಪ್ರಕಾಶಕನೋ ಅಂಥವನತ್ತ ಅವರು ತಮ್ಮ ದೃಷ್ಟಿಯನ್ನು ನೆಟ್ಟಿರುವರು.”

ಯಾವನು ನಿನ್ನ ಶಾಖೆಯಂತಿರುವನೋ ಅಲ್ಲದೆ ನಿನ್ನ ಒಡನಾಡಿಯಂತಿರುವನೋ, ಓ ಸ್ವಾಮಿಯೇ, ಅವನು ಈ ದಿವಸ ತನ್ನ ಉಪವಾಸವನ್ನು ಮುಕ್ತಾಯಗೊಳಿಸಿರುವನು. ನಿನ್ನ ಸಮಕ್ಷಮದಲ್ಲಿಯೇ, ನಿನ್ನನ್ನು ಸಂತೋಷಗೊಳಿಸಲು ಕೈಗೊಂಡ ಇದು ಮುಕ್ತಾಯವಾಗಿದೆ. ಅವನಿಗೂ, ಅವರಿಗೂ, ಅಲ್ಲದೆ ಈ ದಿನಗಳಲ್ಲಿ ನಿನ್ನ ಸಮ್ಮುಖದಲ್ಲಿ ನಿನ್ನ ವಿಧಿವತ್ತಾದ ಸತ್ಕರ್ಮಗಳನ್ನು ನಡೆಸಿದವರೆಲ್ಲರಿಗೂ ಗೌರವಿಸು. ಆತನ ಇಂದಿನ ಜನ್ಮದಲ್ಲಿ ಹಾಗೂ ಭವಿಷ್ಯ ಜನ್ಮಗಳಲ್ಲಿ ಅನುಕೂಲಿಸುವಂಥವುಗಳನ್ನು ಒದಗಿಸು. ವಾಸ್ತವಕ್ಕೂ ನೀನೇ ಎಲ್ಲವನ್ನೂ ಬಲ್ಲವ, ಸರ್ವಜ್ಞ.

#9513
- Bahá'u'lláh

 

ವಿವಾಹದ ಸಂದರ್ಭಗಳಲ್ಲಿ

(ಅಧ್ಯಾತ್ಮಿಕ ಸಭೆಗೆ ಸ್ವೀಕಾರಾರ್ಹ, ಕೊನೇ ಪಕ್ಷ ಇಬ್ಬರು ಸಾಕ್ಷಿಗಳ ಸಮಕ್ಷಮದಲ್ಲಿ ವೈಯುಕ್ತಿಕವಾಗಿ ವಧು ಮತ್ತು ವರ ಇಬ್ಬರೂ ಕಿತಾಬ್ –ಇ-ಅಕ್ದಾಸ್ ಗ್ರಂಥದಲ್ಲಿ ಗೊತ್ತು ಪಡಿಸಿರುವ ಹೇಳಬೇಕಾದ ವಿವಾಹದ ವಿಧಿವತ್ತಾದ ಪ್ರತಿಜ್ಞಾ ಶ್ಲೋಕವು ಈ ರೀತಿಯಿದೆ “ನಾವೆಲ್ಲರೂ, ನಿಶ್ಚಯವಾಗಿಯೂ, ದೇವರ ಇಚ್ಛೆಗೆ ಬದ್ಧರಾಗಿರುವೆವು.”)

ಓ ನನ್ನ ಸ್ವಾಮಿಯೇ, ನೀನು ಮಹಿಮಾನ್ವಿತ, ನಿನ್ನ ಕೃಪಾಶ್ರಯದಲ್ಲಿ ನಿನ್ನ ಈ ಸೇವಕ ಮತ್ತು ನಿನ್ನ ಸೇವಕಿ ಕಲೆತಿದ್ದಾರೆ. ನಿನ್ನ ಉಪಕಾರ ಹಾಗೂ ಔದಾರ್ಯದಿಂದ ಒಂದುಗೂಡಿದ್ದಾರೆ. ಓ ಪ್ರಭುವೇ, ಈ ನಿನ್ನ ಪ್ರಪಂಚದಲ್ಲಿ ಮತ್ತು ರಾಜ್ಯದಲ್ಲಿ ಅವರಿಗೆ ಸಹಾಯನೀಡು. ನಿನ್ನ ದಯೆ ಮತ್ತು ಕರುಣೆಯ ಮೂಲಕ ಅವರಿಗೆ ಎಲ್ಲ ಒಳ್ಳೆಯದಾಗಲೆಂದು ಹರಸು. ನಿನ್ನ ಸೇವೆಯಲ್ಲಿ ನಿರತರಾಗುವಂತೆ ಅನುಗ್ರಹಿಸು. ಈ ಸೇವೆಯಲ್ಲಿ ನೆರವಾಗು. ನಿನ್ನ ಪ್ರಪಂಚದಲ್ಲಿ ನಿನ್ನ ಖ್ಯಾತಿಯ ಸಂಜ್ಞೆಯಂತೆ ಅವರನ್ನು ನಡೆಸು. ಈ ಪ್ರಪಂಚದಲ್ಲಿ ಹಾಗೂ ಮುಂದಿನ ಪ್ರಪಂಚದಲ್ಲಿ ಎಣೆಯಿಲ್ಲದಿರುವ ನಿನ್ನ್ ಅನುಗ್ರಹದಿಂದ ಅವರನ್ನು ರಕ್ಷಿಸು. ನಿನ್ನ ಕೃಪಾ ಸಾಮ್ರಾಜ್ಯದತ್ತ ವಿನೀತರಾಗಿ ನಿನ್ನೊಂದಿಗೆ ಬೆರೆಯಲು ಬೇಡುತ್ತಿದ್ದಾರೆ. ನಿಜಕ್ಕೂ ಅವರು ನಿನ್ನ ಆಜ್ಞೆಗೆ ಬದ್ಧರಾಗಿ ವಿವಾಹವಾಗಿದ್ದಾರೆ. ಕಾಲದ ಅಂತ್ಯದವರೆಗೂ ಅವರು ಮಧುರ ಹಾಗೂ ಐಕ್ಯತೆಯ ಸೂಚಕವಾಗಿರುವಂತೆ ದಯೆ ನೀಡು.

ಸತ್ಯಕ್ಕೂ ನೀನು ಅನಂತ, ಸರ್ವವ್ಯಪ್ತ ಮತ್ತು ಪ್ರಬಲ.

#9514
- `Abdu'l-Bahá

 

Tablets

ಅಗ್ನಿಶಾಸನ

ಅಗ್ನಿಶಾಸನ

ಪರಮ ಪ್ರಾಚೀನನೂ ಮಹಾಮಹಿಮನೂ ಆದ ದೇವರ ಹೆಸರಿನಲ್ಲಿ.

ನಿಶ್ಚಯವಾಗಿಯೂ ಅಗಲಿಕೆಯ ಅಗ್ನಿಯಲ್ಲಿ ನಿಷ್ಠಾವಂತರ ಹೃದಯಗಳು ಧಗಧಗಿಸಿವೆ

ಎಲ್ಲಿಹುದು ನಿನ್ನ ಮುಖಾರವಿಂದದ ಪ್ರಭೆ,

ಓ ಪ್ರಪಂಚಗಳ ಪ್ರಿಯತಮನೇ?

ನಿನ್ನ ಸಮೀಪದವರೆಲ್ಲಾ ಅವಶೇಷದ ಕತ್ತಲೆಯಲ್ಲಿ ಪರಿತ್ಯಕ್ತರಾಗಿಹರು:

ಎಲ್ಲಿಹುದು ಪುನರ್ಮಿಲನದ ಸುಪ್ರಭಾತದ ಕಾಂತಿ,

ಓ ಪ್ರಪಂಚಗಳ ಅಪೇಕ್ಷೆಯೇ?

ನಿನ್ನಿಂದ ಆರಿಸಲ್ಪಟ್ಟವರ ಶರೀರಗಳು ದೂರದ ಉಸುಕಿನಲ್ಲಿ ಕಂಪಿಸುತ್ತಾ ಬಿದ್ದಿವೆ; ಎಲ್ಲಿಹುದು ನಿನ್ನ ಉಪಸ್ಥಿತಿಯ ಸಾಗರ,

ಓ ಪ್ರಪಂಚಗಳ ಮೋಹಕನೇ?

ಹೆಬ್ಬಯಕೆಯ ಕೈಗಳು ನಿನ್ನ ಅನುಗ್ರಹ ಹಾಗೂ ಉದಾರತೆಯ ಸ್ವರ್ಗದೆಡೆ ಚಾಚಿಹವು;

ಎಲ್ಲಿಹುದು ನಿನ್ನ ಕೊಡುಗೆಯ ಸುರಿಮಳೆ,

ಓ ಪ್ರಪಂಚಗಳ ಹೊಣೆಗಾರನೇ?

ದೈವ ಪ್ರತಿಭಟಕರು ಎಲ್ಲೆಡೆಯಿಂದಲೂ ಪೀಡಿಸುತಿಹರು;

ಎಲ್ಲಿಹುದು ನಿನ್ನ ಆಜ್ಞಾಕಾರಕ ಲೇಖನಿಯ ನಿರ್ಬಂಧಕಶಕ್ತಿ

ಓ ಪ್ರಪಂಚಗಳ ಜಯಶಾಲಿಯೇ?

ಎಲ್ಲಾ ದಿಕ್ಕುಗಳಲ್ಲೂ ಶ್ವಾನಗಳ ಬೊಗಳಿಕೆಯು ಜೋರಾಗಿಹುದು;

ಎಲ್ಲಿಹನು ನಿನ್ನ ಪ್ರಾಕ್ರಮದ ಕಾಡಿನ ಮೃಗರಾಜ,

ಓ ಪ್ರಪಂಚಗಳ ಶಿಕ್ಷಿಸುವವನೇ?

ನಿರಾಸಕ್ತಿಯ ಚಳಿಯು ಮಾನವತೆಯನ್ನೆಲ್ಲಾ ಬಿಗಿಯಾಗಿ ಹಿಡಿದಿಹುದು:

ಎಲ್ಲಿಹುದು ನಿನ್ನ ಪ್ರೇಮದ ಶಾಖ,

ಓ ಪ್ರಪಂಚಗಳ ಅಗ್ನಿಯೇ? ದುರ್ದೆಶೆಯು ತುತ್ತ ತುದಿಗೇರಿಹುದು:

ಎಲ್ಲಿಹವು ನಿನ್ನ ನೆರವಿನ ಚಿಹ್ನೆಗಳು, ಓ ಪ್ರಪಂಚಗಳ ವಿಮೋಚಕನೇ?

ಅಂಧಕಾರವು, ಬಹಳಷ್ಟು ಜನರನ್ನೆಲ್ಲಾ ಆವರಿಸಿಹುದು;

ಎಲ್ಲಿಹುದು ನಿನ್ನ ವೈಭವದ ಕಾಂತಿ, ಓ ಪ್ರಪಂಚಗಳ ಪ್ರಭೆಯೇ?

ಮನುಷ್ಯರ ಕೊರಳುಗಳು ದ್ವೇಷದಿಂದ ಚಾಚಿಹವು:

ಎಲ್ಲಿಹವು ನಿನ್ನ ಪ್ರತೀಕಾರದ ಖಡ್ಗಗಳು, ಓ ಪ್ರಪಂಚಗಳ ವಿನಾಶಕನೇ?

ಅಪಮಾನವು ಪಾತಾಳವನ್ನು ಮುಟ್ಟಿಹುದು: ಎಲ್ಲಿಹವು ನಿನ್ನ ವೈಭವದ ಸಂಕೇತಗಳು,

ಓ ಪ್ರಪಂಚಗಳ ಮಹಿಮನೇ? ನಿನ್ನ ನಾಮವನ್ನು ಸಾಕ್ಷಾತ್ಕರಿಸಿದ ಸರ್ವಕೃಪಾಳುವನ್ನು

ದುಃಖಗಳು ಬಾಧಿಸಿಹವು:

ಎಲ್ಲಿಹುದು ನಿನ್ನ ಸಾಕ್ಷಾತ್ಕರಿತ ದಿನ ಚಿಲುಮೆಯ ಆನಂದ,

ಓ ಪ್ರಪಂಚಗಳ ಸಂತೋಷಕಾರಕನೇ?

ಸಂಕಟವು ಭೂಮಿಯ ಜನರನ್ನೆಲ್ಲಾ ಆವರಿಸಿಹುದು:

ಎಲ್ಲಿಹವು ನಿನ್ನ ಹರುಷದ ಲಾಂಛನಗಳು,

ಓ ಪ್ರಪಂಚಗಳ ಉಲ್ಲಾಸವೇ?

ನಿನ್ನ ಚಿಹ್ನೆಗಳ ಉದಯ ಸ್ಥಳವು ಅನಿಷ್ಟ ಸೂಚನೆಗಳಿಂದ

ಮುಚ್ಚಿರುವುದನ್ನು ನೀನು ನೋಡುತ್ತಿರುವೆ:

ಎಲ್ಲಿಹವು ನಿನ್ನ ಬಲಿಷ್ಠ ಬೆರಳುಗಳು,

ಓ ಪ್ರಪಂಚಗಳ ಶಕ್ತಿಯೇ?

ಭಯಂಕರ ದಾಹವು ಮನುಷ್ಯರನ್ನೆಲ್ಲಾ ಆವರಿಸಿಹುದು:

ಎಲ್ಲಿಹುದು ನಿನ್ನ ಅನುಗ್ರಹದ ನದಿ,

ಓ ಪ್ರಪಂಚಗಳ ಕರುಣೆಯೇ?

ದುರಾಶೆಯು ಮಾನವ ಜನಾಂಗವನ್ನೆಲ್ಲಾ ಬಂಧಿಸಿಹುದು:

ಎಲ್ಲಿಹವು ನಿನ್ನ ವಿರಕ್ತಿಯ ಸಶರೀರಗಳು,

ಓ ಪ್ರಪಂಚಗಳ ಪ್ರಭುವೇ?

ದಬ್ಬಾಳಿಕೆಗೊಳಪಟ್ಟಿ ಈತನು

ಒಬ್ಬಂಟಿಯಾಗಿರುವುದನ್ನು ನೀನು ನೋಡುತ್ತಿರುವೆ:

ಎಲ್ಲಿಹರು ನಿನ್ನ ಆಜ್ಞೆಯ ಸ್ವರ್ಗದ ಅತಿಥೇಯರು,

ಓ ಪ್ರಪಂಚಗಳ ಸಾರ್ವಭೌಮನೇ?

ಪರಸ್ಥಳದಲ್ಲಿ ಪರಿತ್ಯಜಿಸಲ್ಪಟ್ಟಿರುವೆ ನಾನು:

ಎಲ್ಲಿಹವು ನಿನ್ನ ನಿಷ್ಠೆಯ ಸಂಕೇತಗಳು,

ಓ ಪ್ರಪಂಚಗಳ ನಂಬಿಗಸ್ತನೇ?

ಮೃತ್ಯು –ವೇದನೆಗಳು ಮನುಜರನ್ನೆಲ್ಲಾ ಹಿಡಿದಿಹವು:

ಎಲ್ಲಿಹವು ನಿನ್ನ ಅಮರ ಜೀವನದ ಭೋರ್ಗರೆವ

ಮಹಾಸಾಗರದಲೆಗಳು

ಓ ಪ್ರಪಂಚಗಳ ಜೀವವೇ?

ಶೈತಾನನ ಪಿಸುಮಾತುಗಳು ಪ್ರತಿಯೊಂದು ಜೀವಿಯ ಮೇಲೂ ಪಿಸುಗುಟ್ಟಿವೆ:

ಎಲ್ಲಿಹುದು ನಿನ್ನ ಬೆಂಕಿಯ ಉಲ್ಕೆ,

ಓ ಪ್ರಪಂಚಗಳ ಬೆಳಕೇ?

ಉದ್ವೇಗದ ಅಮಲು ಹೆಚ್ಚಿನ ಮಾನವ ಜನಾಂಗವನ್ನೆಲ್ಲಾ

ದುರ್ಮಾರ್ಗಕ್ಕೆ ಒಯ್ದಿಹುದು:

ಎಲ್ಲಿಹವು ನಿನ್ನ ಪರಿಶುದ್ಧತೆಯ ದಿನ ಚಿಲುಮೆಗಳು,

ಓ ಪ್ರಪಂಚಗಳ ಅಭಿಲಾಷೆಯೇ?

ದಬ್ಬಾಳಿಕೆಗೊಳಪಟ್ಟ ಈತನು ಸಿರಿಯನ್ನರ ಮಧ್ಯೆ ಜುಲುಮೆಯಲ್ಲಿ

ಮರೆಮಾಚಿರುವುದನ್ನು ನೀನು ನೋಡುತ್ತಿರುವೆ:

ಎಲ್ಲಿಹುದು ನಿನ್ನ ಮುಂಬೆಳಗಿನ ತೇಜಸ್ಸು,

ಓ ಪ್ರಪಂಚಗಳ ಬೆಳಕೇ?

ನಾನು ಮಾತನಾಡಲು ನಿಷೇಧಿಸಲ್ಪಟ್ಟಿರುವುದನ್ನು

ನೀನು ನೋಡುತ್ತಿರುವೆ:

ಎಲ್ಲಿಂದ ಪುಟಿಯುವುದು ನಿನ್ನ ಶ್ರುತಿ,

ಓ ಪ್ರಪಂಚಗಳ ಕೋಗಿಲೆಯೇ?

ಬಹಳಷ್ಟು ಜನ ಭ್ರಾಂತಿ ಹಾಗೂ ವ್ಯರ್ಥ ಕಲ್ಪನೆಯಲ್ಲಿ ಸುತ್ತುವರಿದಿಹರು:

ಎಲ್ಲಿಹರು ನಿನ್ನ ನಿಶ್ಚಯತೆಯ ಪ್ರತಿಪಾದಕರು,

ಓ ಪ್ರಪಂಚಗಳ ಭರವಸಿಗನೇ?

ಯಾತನೆಗಳ ಸಾಗರದಲ್ಲಿ ಮುಳುಗುತ್ತಿಹರು ಬಹಾ:

ಎಲ್ಲಿಹುದು ನಿನ್ನ ವಿಮುಕ್ತಿಯ ನೌಕೆ,

ಓ ಪ್ರಪಂಚಗಳ ಉದ್ಧಾರಕನೇ?

ನಿನ್ನ ವಾಣಿಯ ದಿನ ಚಿಲುಮೆಯು ಸೃಷ್ಟಿಯ

ಕಾರ್ಗತ್ತಲಲ್ಲಿರುವುದನ್ನು ನೀನು ನೋಡುತ್ತಿರುವೆ:

ಎಲ್ಲಿಹನು ನಿನ್ನ ದಿವ್ಯಾನುಗ್ರಹದ ಸೂರ್ಯ,

ಓ ಪ್ರಪಂಚಗಳ ಬೆಳಕುಗಾರನೇ?

ಸತ್ಯ ಹಾಗೂ ಪರಿಶುದ್ಧತೆ, ನಿಷ್ಠೆ ಹಾಗೂ ಸನ್ಮಾನದ ದೀಪಗಳ

ನಂದಿಸಲ್ಪಟ್ಟಿವೆ:

ಎಲ್ಲಿಹುದು ನಿನ್ನ ಸೇಡು ಭರಿತ ಕ್ರೋಧದ ಸುಳಿವು,

ಓ ಪ್ರಪಂಚಗಳ ಸಾರಥಿಯೇ?

ನಿನಗಾಗಿ ವೀರರಾದವರನ್ನು ಯಾರನ್ನಾದರೂ, ಅಥವಾ ನಿನ್ನ

ಪ್ರೀತಿಯ ಪಥದಲ್ಲಿ ಸಂಭವಿಸಿರುವುದರ ಬಗ್ಗೆ ಚಿಂತಿಸುವವರನ್ನಾದರೂ

ನೀನು ಕಾಣಬಲ್ಲೆಯಾ?

ಈಗ ನನ್ನ ಲೇಖನಿಯು ಸ್ತಬ್ಧವಾಗುತ್ತಿಹುದು,

ಓ ಪ್ರಪಂಚಗಳ ಪ್ರಿಯಕರನೇ,

ದಿವ್ಯ ಕಲ್ಪವೃಕ್ಶದ ಕೊಂಬೆಗಳು ವಿಧಿಯ ಚಂಡಮಾರುತಗಳಿಗೆ

ಸಿಕ್ಕಿ ಮುರಿದು ಹೋಗಿಹವು:

ಎಲ್ಲಿಹುದು ನಿನ್ನ ಪೋಷಣೆಯ ನಿಶಾನೆ

ಓ ಪ್ರಪಂಚಗಳ ವೀರಾಗ್ರೇಸರನೇ?

ಈ ಮುಖವು ನಿಂದೆಯ ಧೂಳಿನಲ್ಲಿ ಅಡಗಿ ಹೋಗಿಹುದು:

ಎಲ್ಲಿಹುದು ನಿನ್ನ್ ಅನುಕಂಪದ ತಂಗಾಳಿ,

ಓ ಪ್ರಪಂಚಗಳ ಕರುಣಾಳೇ?

ಪವಿತ್ರತೆಯ ನಿಲುವಂಗಿಯು ಕಪಟಿಗಳಿಂದ ಮೈಲಿಗೆಯಾಗಿಹುದು

ಎಲ್ಲಿಹುದು ನಿನ್ನ ಮಡಿಯಾದ ವಸ್ತ್ರ,

ಓ ಪ್ರಪಂಚಗಳ ಶೃಂಗಾರಕನೇ?

ಮನುಷ್ಯರ ಕೃತ್ಯಗಳಿಂದಾಗಿ ಅನುಗ್ರಹದ ಸಮುದ್ರವು

ಸ್ತಬ್ಧವಾಗಿಹುದು:

ಎಲ್ಲಿಹವು ನಿನ್ನ ಔದಾರ್ಯದ ಅಲೆಗಳು,

ಓ ಪ್ರಪಂಚಗಳ ಆಕಾಂಕ್ಷೆಯೇ?

ನಿನ್ನ ದಿವ್ಯ ಸಾನ್ನಿಧ್ಯಕ್ಕೊಯ್ಯುವ ದ್ವಾರವು ಶತ್ರುಗಳ ಷಡ್ಯಂತ್ರ

ದಿಂದಾಗಿ ಮುಚ್ಚಿಹುದು:

ಎಲ್ಲಿಹವು ನಿನ್ನ ಕೊಡುಗೈಯ ಚಾವಿ,

ಓ ಪ್ರಪಂಚಗಳ ಕೀಲಿಕಾರಕನೇ?

ವಿದ್ರೋಹದ ವಿಷಪೂರಿತ ಗಾಳಿಯಿಂದಾಗಿ ಎಲೆಗಳು ಹಳದಿಯಾಗಿಹವು:

ಎಲ್ಲಿಹುದು ನಿನ್ನ ಔದಾರ್ಯದ ಮೇಘಧಾರೆ,

ಓ ಪ್ರಪಂಚಗಳ ದಾತನೇ?

ಈ ವಿಶ್ವವು ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು:

ಎಲ್ಲಿಹುದು ನಿನ್ನ ಕ್ಷಮೆಯ ತಂಗಾಳಿ,

ಓ ಪ್ರಪಂಚಗಳ ಕ್ಷಮಾದಾತನೇ?

ನಿರ್ಜನ ಸ್ಥಳದಲ್ಲಿ ಈ ಯುವಕನು ಏಕಾಂಗಿಯಾಗಿಹನು:

ಎಲ್ಲಿಹುದು ನಿನ್ನ ದಿವ್ಯಾನುಗ್ರಹದ ಮಳೆ,

ಓ ಪ್ರಪಂಚಗಳ ಕೊಡುಗೈ ದೊರೆಯೇ?

ಓ ಪರಮ ಶ್ರೇಷ್ಠ ಲೇಖನಿಯೇ, ಅಮರ ರಾಜ್ಯದಲ್ಲಿ

ಅತ್ಯಂತ ಸುಮಧುರವಾದ ನಿನ್ನ ಕರೆಯನ್ನು ನಾವು ಆಲಿಸಿಹೆವು

ವೈಭವಯುಕ್ತವಾದ ನಾಲಿಗೆಯ ನುಡಿಗೆ ನೀನು ಕಿವಿಗೊಡು,

ಓ ಪ್ರಪಂಚಗಳಲ್ಲಿ ದಬ್ಬಾಳಿಕೆಗೊಳಪಟ್ಟವನೇ!

ಚಳಿಯಿಂದಲ್ಲದಿರೆ ನಿನ್ನ ನುಡಿಗಳ ಶಾಖವು ಹೇಗೆ ವಿರಾಜಿಸುತ್ತಿತ್ತು,

ಓ ಪ್ರಪಂಚಗಳ ವ್ಯಾಖ್ಯಾಕಾರನೇ?

ವಿಪತ್ತುಗಳಿಂದಲ್ಲದಿರೆ ನಿನ್ನ ಸಹನೆಯ ಸೂರ್ಯನು ಹೇಗೆ

ಪ್ರಕಾಶಿಸುವನು.

ಓ ಪ್ರಪಂಚಗಳ ಬೆಳಕೇ?

ಗೋಳಾಡದಿರು ದುಷ್ಟರಿಂದಾಗಿ,

ಸಹಿಸಲು ಮತ್ತು ತಾಳ್ಮೆಯಿಂದಿರಲು ನೀನು ಸೃಷ್ಟಿಸಲ್ಪಟ್ಟಿದ್ದಿಯೇ,

ಓ ಪ್ರಪಂಚಗಳ ಸಹನಾಶೀಲನೇ.

ದ್ರೋಹಿಗಳ ಮಧ್ಯೆ ಒಡಂಬಡಿಕೆಯ ದಿಗಂತದಲ್ಲಿನ ನಿನ್ನ ಉದಯ

ಹಾಗೂ ದೇವರಿಗಾಗಿ ನಿನ್ನ ಹಂಬಲಿಕೆ ಎಷ್ಟು ಮನೋಹರವಾಗಿತ್ತು.

ಓ ಪ್ರಪಂಚಗಳ ಪ್ರೇಮವೇ?

ಸ್ವಾತಂತ್ರ್ಯದ ಪತಾಕೆ ಉನ್ನತ ಶಿಖರದ ತುತ್ತತುದಿಯಲ್ಲಿ ನಿನ್ನಿಂದಲೇ

ನೆಡಲಾಗಿತ್ತು ಮತ್ತು ಅನುಗ್ರಹದ ಸಮುದ್ರವು ಭೋರ್ಗರೆದಿತ್ತು.

ಓ ಪ್ರಪಂಚಗಳ ಆನಂದ ಪರವಶನೇ

ನಿನ್ನ ಒಂಟಿತನದಿಂದಲೇ ಐಕ್ಯತೆಯ ಸೂರ್ಯ ಬೆಳಗಿಹನು,

ಹಾಗೂ ನಿನ್ನ ಗಡೀಪಾರಿನಿಂದಲೇ ಐಕ್ಯತೆಯ ಭೂಮಿಯು

ಅಲಂಕೃತಗೊಂಡಿಹುದು

ಸಹನೆಯಿಂದಿರು ಓ ಪ್ರಪಂಚಗಳ ದೇಶಭ್ರಷ್ಟನೇ,

ನಾವು ಅಪಮಾನವನ್ನು ವೈಭವದ ಉಡುಗೆಯನ್ನಾಗಿಸಿಹೆವು

ಹಾಗೂ ವ್ಯಥೆಯನ್ನು ನಿನ್ನ ದೇಗುಲದ

ಭೂಷಣವನ್ನಾಗಿಸಿಹೆವು

ಓ ಪ್ರಪಂಚಗಳ ಪ್ರತಿಷ್ಠೆಯೇ.

ಹೃದಯಗಳು ದ್ವೇಷಗಳಿಂದ ತುಂಬಿರುವುದನ್ನೂ

ನೀನು ನೋಡುತ್ತಿರುವೆ ಮತ್ತು ಅವುಗಳನ್ನು ಲಕ್ಷಿಸದಿರುವುದು

ನಿನಗೆ ಸೇರಿಹುದು,

ಓ ಪ್ರಪಂಚಗಳ ಪಾಪಗಳನ್ನು ಮರೆಮಾಚುವವನೇ.

ಖಡ್ಗಗಳು ಥಳಥಳಿಸಿದಾಗ ಮುನ್ನುಗ್ಗು!

ಈಟಿಗಳು ಹಾರಿದಾಗ ಮುಂದಕ್ಕೆ ಹೋಗು!

ಓ ಪ್ರಪಂಚಗಳ ತ್ಯಾಗಮಯಿಯೇ,

ನೀನು ರೋದಿಸುವೆಯಾ, ಅಥವಾ ನಾನು ರೋದಿಸಲೇ?

ಇಲ್ಲಾ, ನಿನ್ನ ಕೆಲವೇ ಕೆಲವು ಮುಂದಾಳುಗಳನ್ನು ಕಂಡು

ನಾನು ಗೋಳಾಡಲೇ,

ಓ ಪ್ರಪಂಚಗಳ ರೋದನೆಯ ಕಾರಣ ಕರ್ತನೇ?

ನಿಶ್ಚಯವಾಗಿಯೂ ನಾನು ನಿನ್ನ ಕರೆಯನ್ನು ಆಲಿಸಿರುವೆ,

ಓ ವೈಭವೋಪೇತ ಪ್ರಿಯತಮನೇ ಮತ್ತು ಬಹಾರ

ಮುಖಾರವಿಂದವು ಈ ಗ ಕಷ್ಟಗಳ ಶಾಖದಿಂದ ಮತ್ತು ನಿನ್ನ

ಪ್ರಕಾಶಮಾನವಾದ ನುಡಿಗಳ ಜ್ವಾಲೆಗಳಿಂದ ಉರಿಯುತ್ತಿದೆ ಮತ್ತು ಆತನು ಅಹುತಿಯ ಸ್ಥಾನದಲ್ಲಿ ನಿಷ್ಠೆಯಿಂದ

ಎದ್ದು ನಿನ್ನ ಇಚ್ಛೆಯ ಕಡೆ ನೋಡುತಿಹನು,

ಓ ಪ್ರಪಂಚಗಳ ಆಜ್ಝಾಕಾರಕನೇ,

ಓ ಅಲಿ ಅಕ್ಬರ್, ಈ ಶಾಸನದಲ್ಲಿ ನೀನು ನಿನ್ನ ಪ್ರಭುವನ್ನು ವಂದಿಸು, ಅದರಿಂದ ನೀನು ನಿನ್ನ ಸೌಮ್ಯತೆಯ ಸುವಾಸನೆಯನ್ನು

ಆಘ್ರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜ್ಯನಾದ ದೇವರ ಪಥದಲ್ಲಿ ಎಂಥ ಕಷ್ಟಗಳು ನಮ್ಮನ್ನಾವರಿಸಿರಬಹುದೆಂದು ತಿಳಿಯಬಹುದು.

ಸೇವಕರೆಲ್ಲಾ ಇದನ್ನು ಪಠಿಸಿ, ವಿಚಾರ ಮಾಡಿದ್ದೇ ಆದರೆ, ಸರ್ವಲೋಕಗಳನ್ನೇ ಹತ್ತಿ ಉರಿಸುವಂತಹ ಅಗ್ನಿಯು ಅವರ ನರನಾಡಿಗಳಲ್ಲಿ ಹೊತ್ತಿಸಲಾಗುವುದು.

#9519
- Bahá'u'lláh

 

ಅಬ್ದುಲ್ ಬಹಾ ಅವರ ದರ್ಶನ ಶಾಸನ

(ಅಬ್ದುಲ್ ಬಹಾ ಅವರ ಸಮಾಧಿ ಬಳಿ ಸಲ್ಲಿಸುವ ಪ್ರಾರ್ಥನೆ ಇದು. ಏಕಾಂತವಾಗಿಯೂ ಈ ಪ್ರಾರ್ಥನೆಯನ್ನು ಸಲ್ಲಿಸುವುದುಂಟು ಅಬ್ದುಲ್ ಬಹಾ ಹೀಗೆ ಹೇಳಿದ್ದಾರೆ:

“ಯಾರು ಈ ಪ್ರಾರ್ಥನೆಯನ್ನು ನಮ್ರತೆಯಿಂದಲು ನಿಷ್ಠೆಯಿಂದಲು ಸಲ್ಲಿಸುವರೋ ಅವರು ಈ ಸೇವಕನ ಆತ್ಮಕ್ಕೆ ಸಂತೋಷ ಮತ್ತು ಹರ್ಷವನ್ನುಂಟುಮಾಡುವರು. ಅವನನ್ನು ಸಮಕ್ಷಮ ದರ್ಶನ ಮಾಡಿದಂತೆಯೇ ಆದೀತು.”)

ಅವನು ಅಖಂಡ ಪುಣ್ಯ ಪುರುಷ! ಓ ದೇವರೇ, ನನ್ನ ದೇವರೇ! ವಿನಯನಾಗಿ ಕಣ್ಣೀರು ಸುರಿಸುತ್ತಾ ನಿನ್ನತ್ತ ನನ್ನ ಕೈಗಳನ್ನು ಜೋಡಿಸಿ, ನಿನ್ನ ಪಾದಧೂಳಿಯಿಂದ ನನ್ನ ಮುಖವನ್ನು ಲೇಪಿಸಿಕೊಂಡು ಪ್ರಾರ್ಥಿಸಿಕೊಳ್ಳುವವನಾಗಿದ್ದೇನೆ. ಸರ್ವ ಪ್ರಜ್ಞತೆ ಹಾಗೂ ಮಹಿಮೆಯನ್ನು ಸ್ತುತಿಸುತ್ತಾ ನಿಂತಿದ್ದೇನೆ. ನಿನ್ನ ದ್ವಾರದ ಮುಂದೆ ನಮ್ರತೆ ಹಾಗೂ ವಿನೀತಭಾವದಿಂದ ನಿಂತಿರುವ ನಿನ್ನ ಸೇವಕನನ್ನು ದಯಾಮಯ ದೃಷ್ಟಿಯಿಂದ ಕಾಣು. ನಿನ್ನ ಅನಂತ ಕಾರುಣ್ಯದ ಸಾಗರದಲ್ಲಿ ಮುಳುಗಿಸು.

ಪ್ರಭುವೇ, ಅವನು ಬಡವ ಹಾಗೂ ನಮ್ರತೆಯ ನಿನ್ನ ಸೇವಕ. ದಾಸ್ಯಭಾವದಿಂದ ನಿನ್ನ ಸೆರೆಯಾಳಾಗಿ ಮೊರೆಯಿಡುತ್ತಿದ್ದಾನೆ. ನಿಷ್ಠೆಯಿಂದ ನಿನ್ನಲ್ಲಿ ಪ್ರಾರ್ಥಿಸುತ್ತಿದ್ದಾನೆ. ನಿನ್ನಲ್ಲಿ ಪೂರ್ಣ ವಿಶ್ವಾಸವನ್ನಿಟ್ಟು, ನಿನ್ನ ಮುಂದೆ ಕಣ್ಣೀರು ಸುರಿಸುತ್ತಾ ಕೋರುತ್ತಾ ಬೇಡುತ್ತಾ ಹೀಗೆ ನುಡಿಯುತ್ತಾನೆ:

ದೇವರೇ, ಓ ನನ್ನ ದೈವವೇ, ನಿನಗೆ ಪ್ರೀತಿಪಾತ್ರರಾದವರ ಸೇವೆ ಸಲ್ಲಿಸಲು ಕೃಪೆಮಾಡು. ನಿನ್ನ ಸೇವೆಗಾಗಿ ಶಕ್ತಿ ಬಲಪಡಿಸು. ನಿನ್ನನ್ನು ಗೌರವಿಸುವಲ್ಲಿ ನನ್ನ ದೃಷ್ಟಿಯನ್ನು ಬೆಳಗಿಸು. ಶೋಭಾಯಮಾನವಾದ ನಿನ್ನ ಪ್ರದೇಶದ ಸಲುವಾಗಿ ಒಳಿತನ್ನು ಕೋರುವಂತೆ ಮಾಡು. ಸ್ವಾರ್ಥರಹಿತನಾಗಿರಲು ಸಹಾಯ ನೀಡು. ನಿನ್ನ ಸ್ವರ್ಗ ಸದೃಶವಾದ ಪ್ರವೇಶ ದ್ವಾರದಲ್ಲಿ ನಿಃಸ್ವಾರ್ಥ ಬುದ್ಧಿಯಿಂದ ಇರುವಂತೆ ಅವಕಾಶ ಕಲ್ಪಿಸು. ನಿನ್ನ ಪವಿತ್ರ ಪರಿಸರದಲ್ಲಿ ಎಲ್ಲ ವಸ್ತುಗಳಿಂದಲು ಅಲಿಪ್ತನಾಗಿರುವಂತೆ ಮಾಡು. ಸ್ವಾಮಿಯೇ, ಸ್ವಾರ್ಥದಿಂದ ಅತೀತವಾದ ಬಟ್ಟಲಿನಿಂದ ಪಾನಮಾಡುವಂತೆ ಕೃಪೆ ತೋರು. ಅದರ ವಸ್ತ್ರವನ್ನು ನನಗೆ ತೊಡಿಸು. ಅದರ ಸಾಗರದಲ್ಲಿ ನನ್ನನ್ನು ಮುಳುಗಿಸು. ನಿನ್ನ ಪ್ರೀತಿಪಾತ್ರರ ಮಾರ್ಗದಲ್ಲಿನ ಧೂಳನ್ನಾಗಿ ನನ್ನನ್ನು ಮಾಡು. ವೈಭವ ಮೇರುವಿನ ಓ ಪ್ರಭುವೇ, ನಿನ್ನ ವಿಶ್ವಾಸಗಳಿಸಿದವರಿಂದ ಪಾವನವಾಗಿರುವ ಭೂಮಿಗೆ ನನ್ನ ಆತ್ಮವನ್ನು ಸಮರ್ಪಿಸುವಂತೆ ಒತ್ತಾಸೆ ನೀಡು. ಈ ಪ್ರಾರ್ಥನೆಯಿಂದ ಉಷಃ ಕಾಲದಲ್ಲಿ ಮತ್ತು ರಾತ್ರಿಯಲ್ಲಿ ನಿನ್ನ ಸೇವಕ ನಿನ್ನನ್ನು ಅರಸುತ್ತಿದ್ದಾನೆ. ಅವನ ಆಕಾಂಕ್ಷೆಯನ್ನು ಈಡೇರಿಸು. ಅವನ ಆತ್ಮವನ್ನು ಪ್ರಜ್ವಲಿಸು. ಅವನ ಎದೆ ಆನಂದದಿಂದ ಉಬ್ಬುವಂತೆ ಮಾಡು. ಜ್ಯೋತಿಯನ್ನು ಬೆಳಗಿಸು. ಈ ಪ್ರಕಾರ ಅವನು ಮೂರ್ತಿವಂತನಾಗಿ ನಿನ್ನ ಹಾಗೂ ನಿನ್ನ ಸೇವಕರ ಸೇವೆ ಸಲ್ಲಿಸುವಂತೆ ಎಸಗು.

ನೀನು ದಾನಿ, ದಯಾಪರ ಉದಾರಿ ಘನತೆವೆತ್ತವ, ದಯಾಮಯ, ಕರುಣಾಸಾಗರ.

#9520
- `Abdu'l-Bahá

 

ಅಹಮದ್ ಶಾಸನ

(ಕಷ್ಟದಲ್ಲಿದ್ದಾಗ ಅಥವಾ ತೊಂದರೆಯಲ್ಲಿದ್ದಾಗ ಇದನ್ನು ಪಠಿಸಿದರೆ ಪರಿಹಾರ ನೀಡುವ ವಿಶೇಷ ಶಕ್ತಿ ಈ ಶಾಸನಕ್ಕಿದೆ.)

ಅವನು ದೊರೆ, ಸರ್ವಜ್ಞ, ಸುಜ್ಞಾನಿ, ಆಲಿಸಿ, ಅನಂತ ಸ್ವರೂಪದ ಕೊಂಬೆಗಳ ಮೆಲೆ ಕುಳಿತು ಪವಿತ್ರ ಹಾಗೂ ಸುಮಧುರ ಧ್ವನಿಗಳಲ್ಲಿ ಭಕ್ತಸಮೂಹಕ್ಕೆ ಪರಮಾತ್ಮನ ಸಾಮೀಪ್ಯದ ಸಂತಸದ ಸುದ್ದಿಯನ್ನು ಸಾರುತ್ತ, ದೈವಿಕ ಏಕತೆಯಲ್ಲಿ ವಿಶ್ವಾಸವುಳ್ಳವರನ್ನೆಲ್ಲ ಔದಾರ್ಯ ಮೂರ್ತಿಯ ಸಾನ್ನಿಧ್ಯಕ್ಕೆ ಕರೆಯುತ್ತಾ, ವಿಯೋಗಿಗಳಿಗೆ, ದೊರೆ, ಮಹಾಪುರುಶ ಹಾಗೂ ಅಸಮಾನ್ಯ ದೇವರು ಪ್ರಕಟಿಸಿದ ಸಂದೇಶವನ್ನು ತಿಳಿಸುತ್ತಾ, ಪ್ರೇಮಿಗಳಿಗೆ ಪವಿತ್ರ ಜಾಗದ ದಾರಿ ತೋರುತ್ತಾ, ಅಷ್ಟೇ ಅಲ್ಲ, ಈ ಮಹೋಜ್ವಲ ರಮ್ಯತೆಯತ್ತ ನಡೆಸುತ್ತಾ ಸ್ವರ್ಗದ ನೈಟಿಂಗೇಲ್ ಪಕ್ಷಿಯು (ಬುಲ್ ಬುಲ್) ಹಾಡುತ್ತಿದೆ.

ಯಾರ ಮೂಲಕ ಸತ್ಯ ಮತ್ತು ಮಿಥ್ಯೆಗಳು ವಿಮರ್ಶಿಸಲ್ಪಟ್ಟು ಪ್ರತಿಯೊಂದು ಆದೇಶದ ಯುಕ್ತಾಯುಕ್ತತೆಯು ಪರೀಕ್ಷಿಸಲ್ಪಡುವುದೋ ಅಂಥ ದೇವದೂತರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವ ಮಹಾ ಸೌಂದರ್ಯವೇ ಇದು. ಸತ್ಯ ವಿಚಾರ, ಭಗವಂತನ ಪ್ರಸಾದರೂಪವಾದ ಫಲವನ್ನು ಬಿಡುವ ಜೀವಿತದ ಗಿಡವೇ ನಿಜಕ್ಕೂ ಅವನು. ಇಷ್ಟು ಮಾತ್ರವಲ್ಲ, ಅವನು ಉನ್ನತ, ಬಲಶಾಲಿ ಹಾಗೂ ಶ್ರೇಷ್ಠ.

ಓ ಅಹಮದ್, ಅವನೇ ಪರಮಾತ್ಮ, ನಿಜಕ್ಕೂ ಅವನಲ್ಲದೇ ಬೇರೆ ದೇವರಿಲ್ಲ ಎಂಬುದಕ್ಕೆ ನೀನೇ ಸಾಕ್ಷಿ, ದೊರೆ, ರಕ್ಷಕ, ಅನುಪಮ ಹಾಗೂ ಸರ್ವಶಕ್ತ ಎಂಬುದಕ್ಕೂ ಪ್ರಮಾಣ, “ಅಲಿ’ (ಭಗವಾನ್ ಬಾಬ್) ಎಂಬ ಹೆಸರಿನಲ್ಲಿ ಯಾವಾತನನ್ನು ಅವನು ಕಳುಹಿಸಿರುವನೋ ಅವನೆ ಪರಮಾತ್ಮನಿಂದ ಬಂದ ನಿಜ ವ್ಯಕ್ತಿಯಾಗಿರುವನು. ಈತನ ಆಜ್ಞೆಗೆ ನಾವೆಲ್ಲ ಬದ್ದರು. ಹೇಳು: ದಿವ್ಯ ಜ್ಞಾನಿಗಳ ಮೂಲಕ ಬಯಾನ್ನಲ್ಲಿ ವಿಧಿಸಲಾಗಿರುವ ಪರಮ್ಮಾನ ಆಜ್ಞೆಗಳನ್ನು, ಓ ಜನರೇ, ಪಾಲಿಸಿರಿ, ಸತ್ಯವಾಗಿಯೂ ಅವನು ದೇವದೂತರ ದೊರೆ. ಅವನು ಗ್ರಂಠ ಮಾತೃಸ್ವರೂಪದ ಗ್ರಂಥವಾಗಿದೆ ಎಂಬುದನ್ನು ತಿಳಿಯಿರಿ.

ಈ ಪ್ರಕಾರವಾಗಿ ನೈಟಿಂಗೇಲ್ ಪಕ್ಷಿಯು (ಬುಲ್ ಬುಲ್) ಈ ಸೆರೆಮನೆಯಿಂದ ನಿಮಗೆ ಕರೆಕೊಟ್ಟಿದೆ. ಈ ಖಚಿತ ಸಂದೇಶವನ್ನು ಸಾರುವುದು ಅದರ ಕರ್ತವ್ಯ. ಈ ಉಪದೇಶದಿಂದ ದೂರ ಸರಿಯಬೇಕೆಂಬ ಇಚ್ಛೆಯಿದ್ದವನು ಹಾಗೆ ಮಾಡಲಿ. ಬೇಕಿದ್ದವರು ಪರಮಾತ್ಮನ ಹಾದಿ ಹಿಡಿಯಲಿ. ಓ ಜನರೇ, ಈ ಮಾತುಗಳನ್ನು ತೃಣೀಕರಿಸುವಿರಾದರೆ ನೀವು ಯಾವ ಆಧಾರದ ಮೆಲೆ ಪರಮಾತ್ಮನನ್ನು ನಂಬಿದಿರಿ? ಓ ಕಪಟಿಗಳ ಗುಂಪೇ, ಆ ಆಧಾರಗಳನ್ನು ಮುಂದೆ ತನ್ನಿ.

ಸಾಧ್ಯವಿಲ್ಲ ಯಾರ ಹಸ್ತದಲ್ಲಿ ನನ್ನ ಆತ್ಮವಿದೆಯೋ ಅಂತಹವರಿಂದಲೂ ಅವರೆಲ್ಲರೂ ಒತ್ತಟ್ಟಿಗೆ ಕಲೆತು ಒಬ್ಬರಿಗೊಬ್ಬರು ಸಹಾಯವೆಸಗಿದರೂ ಆಗದ ಕಾರ್ಯವೇ ಹೌದು. ಓ ಅಹಮದ್, ನಾನಿಲ್ಲದಿದ್ದರೂ ಸಹ ನನ್ನ ಕೊಡುಗೆಯನ್ನು ಮರೆಯಬೇಡ. ನಿನ್ನ ಕಾಲದಲ್ಲಿ ನನ್ನ ದಿನಗಳನ್ನು ಸ್ಮರಿಸಿಕೋ, ಈ ಸೆರೆಮನೆಯಲ್ಲಿನ ನನ್ನ ಸಂಕಟ ಹಾಗೂ ದೇಶ ಭ್ರಷ್ಟತೆಯ ಪಾಡನ್ನು ಜ್ಞಾಪಿಸಿಕೋ. ನಿನ್ನ ಮೇಲೆ ಶತೃಗಳ ಖಡ್ಗಗಳು ಪೆಟ್ಟಿನ ಮೇಲೆ ಪೆಟ್ಟುಗಳನ್ನು ಹಾಕುತ್ತಿದ್ದರೂ, ಸ್ವರ್ಗ ಹಾಗೂ ಭೂಮಿ ನಿನ್ನ ಮೆಲೆ ಎರಗಿಬಿದ್ದು ಘಾತಿಸುತ್ತಿದ್ದರೂ ನನ್ನ ಬಗ್ಗೆ ನಿನ್ನ ಪ್ರೇಮ ಅಚಲವಾಗಿರಲಿ. ನಿನ್ನ ಹೃದಯ ಚಂಚಲವಾಗದಿರಲಿ. ನನ್ನ ಶತೃಗಳೀಗೆ ನೀವು ಬೆಂಕಿಯ ಜ್ವಾಲೆಯಂತಿರಿ. ನನ್ನ ಪ್ರೀತಿಪಾತ್ರರಿಗೆ ಆನಂತ ಜೀವ ಸಂಶಯಪಡುವಂತಹ ಜನರಂತಾಗದಿರಿ.

ನನ್ನ ಹಾದಿ ಹಿಡಿದಾಗ ನಿಮಗೆ ಕಷ್ಟಪ್ರಾಪ್ತವಾದರೆ ಅಥವಾ ನನ್ನ ದೆಶೆಯಿಂದ ಅಪಮಾನಿತರಾದಾಗ ಅದಕ್ಕಾಗಿ ವ್ಯಥೆ ಪಡದಿರಿ. ಭಗವಂತನನ್ನು, ನಿಮ್ಮ ಭಗವಂತನನ್ನು ಹಾಗೂ ನಿಮ್ಮ ಪೂರ್ವಜರ ಪ್ರಭುವನ್ನು ನಂಬಿ. ಎಕೆಂದರೆ ಜನರು ಭ್ರಮೆಯ ಮಾರ್ಗದಲ್ಲಿ ಅಲೆದಾಡುತ್ತಿದ್ದು, ತಮ್ಮ ಕಣ್ಣುಗಳಿಂದ ಭಗವಂತನನ್ನು ದರ್ಶಿಸುವ ಭಾಗ್ಯವಿಹೀನರಾಗಿ ಅಥವಾ ತಮ್ಮ ಕಿವಿಗಳಿಂದ ಅವನ ಸುಮಧುರ ಧ್ವನಿಯನ್ನು ಕೇಳುವ ಸದಾವಕಾಶವನ್ನು ಕಳೆದುಕೊಂಡಿದ್ದಾರೆ. ಹೀಗೆ ನಾವು ಅವರನ್ನು ಕಂಡಿದ್ದೇವೆ. ನೀನೂ ಸಹ ಸಾಕ್ಷೀಭೂತನಾಗಿದ್ದೀಯೇ.

ಈ ತೆರನಾಗಿ ಅವರ ಅಂಧಶ್ರದ್ದೆ ಅವರ ಮತ್ತು ಅವರ ಅಂತರಂಗಗಳ ಮಧ್ಯೆ ಮುಸುಕಿನ ಪರದೆಯಂತಾಗಿದ್ದು, ಸರ್ವೋತ್ತಮ ಹಾಗೂ ಮಹಾಮಹಿಮನಾದ ಭಗವಂತನ ಮಾರ್ಗದಿಂದ ದೂರ ಸರಿಯುವಂತೆ ಮಾಡಿದೆ. ಯಾವನು ಈ ಸೌಂದರ್ಯದಿಂದ ಅತೀತನಾಗುವನೋ ಅವನು ಗತಕಾಲದ ದೇವದೂತರಿಂದಲೂ ಅತೀತನಾಗುವನೆಂದು ಭರವಸೆ ಹೊಂದಿ. ಅನಂತದಿಂದ ಅನಂತ ದಿಶೆಯವರೆಗೂ, ಅವನು ಭಗವಂತನ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದಂತೆಯೇ, ಇದು ಸತ್ಯ.

ಈ ಶಾಸವನ್ನು ಓ ಅಹಮದ್, ಚೆನ್ನಾಗಿ ಕಲಿ, ಅಭ್ಯಾಸ ಮಾಡು. ಉಚ್ಚರಿಸು, ಕೈಬಿಡಬೇಡ. ಏಕೆಂದರೆ ಪರಮಾತ್ಮ ಹೀಗೆ ವಿಧಾಯಕ ಮಾಡಿದ್ದಾನೆ. ಯಾರು ಇದನ್ನು ಪಠಿಸುವರೋ ಅಂಥವರಿಗೆ ನೂರು ಹುತಾತ್ಮರ ಬಹುಮಾನವನ್ನೂ ಎರಡು ಲೋಕಗಳ ಸೇವಾವಕಾಶವನ್ನು ದಯಪಾಲಿಸುವನು. ನಾವು ನಿಮಗೆ ಈ ಕರುಣೆಯನ್ನು ಅನುಗ್ರಹಿಸಿದ್ದೇವೆ. ನಮ್ಮ ಸಾನಿಧ್ಯದಿಂದ ದಯೆ ತೋರಿದ್ದೇವೆ. ಕೃತಜ್ಞತಾ ವ್ಯಕ್ತಿಗಳಲ್ಲಿ ನೀವು ಒಳಗೊಂಡಿರಿ ಯಾರು ಕಷ್ಟ ಹಾಗೂ ಸಂಕಟಕ್ಕೊಳಗಾಗಿರುವವರು ಸಂಪೂರ್ಣ ನಿಷ್ಠೆಯಿಂದ ಈ ಶಾಸವನ್ನು ಪಠಿಸುವನೋ ಅವನ ದುಃಖವನ್ನು ಭಗವಂತ ದೂರ ಮಾಡುವನು, ಅವನ ಕಷ್ಟಗಳನ್ನು ನಿವಾರಿಸುವನು, ತೊಂದರೆಗಳನ್ನು ಪರಿಹರಿಸುವನು.

ವಾಸ್ತವವಾಗಿ ಅವನು ದಯಾನಿಧಿ, ಕರುಣಾಮಯಿ ಸಕಲ ಲೋಕದೊಡೆಯನಾದ ಪರಮಾತ್ಮ ಧನ್ಯ ಪ್ರಶಂಸನೀಯ.

#9516
- Bahá'u'lláh

 

ರಿದ್ವಾನ್ ಶಾಸನ (ಆಯ್ದ ಭಾಗಗಳು)

(ಏಪ್ರಿಲ್ 21ರಿಂದ ಮೇ ತಿಂಗಳ 2ರವರೆಗೆ ಆಚರಿಸಲ್ಪಡುವ ರಿದ್ವಾನ್ ಹಬ್ಬವು ತಮ್ಮ ಅನುಯಾಯಿಗಳಿಗೆ

ರವರು ಮಾಡಿರುವ ತಮ್ಮ ಧ್ಯೇಯದ ಮಹಾಘೋಷಣೆಯ ಸ್ಮರಣೋತ್ಸವವಾಗಿದೆ.

ರವರು ಇದನ್ನು “ಹಬ್ಬಗಳ ರಾಜ” ಎಂದು ಘೋಷಿಸಿರುವರು ಹಾಗೂ ತಮ್ಮ ಪರಮ ಪಾವನ ಗ್ರಂಥವಾದ ಕಿತಾಬ್-ಈ-ಅಕ್ದಾಸ್ದಲ್ಲಿ ಇದನ್ನು “ಸಮಸ್ತ ಸೃಷ್ಟಿಯು ಪಾವನತೆಯ ಸಾಗರದಲ್ಲಿ ವಿಲೀನ”ವಾಗಿರುವ ಮಹಾದಿನಕ್ಕೆ ಹೋಲಿಸಿರುವರು.)

ಓ ಮಹಾಲೇಖನಿಯೇ, ದಿವ್ಯವಾದ ವಸಂತ ಋತುವಿನ ಆಗಮನವಾಗಿದೆ. ಏಕೆಂದರೆ, ಸರ್ವಕೃಪಾಕರನ ಮಹೋತ್ಸವವು ಸಮೀಪಿಸುತ್ತಿದೆ. ಸಕಲ ಸೃಷ್ಟಿಯು ಪುನರುಜ್ಜೀವಿತಗೊಂಡು ನವೀನವಾಗುವಂತೆ ಸಂಪೂರ್ಣ ಸೃಷ್ಟಿಯೆದುರು ದೇವರ ನಾಮವನ್ನು ಹೊಗಳಿ ಆತನ ಸ್ತೋತ್ರವನ್ನಾಚರಿಸಲು ಸ್ವಯಂ ಉತ್ಸಾಹದಿಂದ ಸಿದ್ಧತೆ ಮಾಡಿ. ಮೌನದಿಂದಿರಬೇಡಿ, ಮಾತನಾಡಿ, ಪರಮ ಸುಖದ “ನಮ್ಮ ಹೆಸರಿನ” ದಿಗಂತದಲ್ಲಿ ಸುಖಪ್ರದ ದಿನ ನಕ್ಷತ್ರವು ಕಂಗೊಳಿಸುತ್ತಿದೆ. ಏಕೆಂದರೆ ದೇವರ ಹೆಸರಿನ ಸಾಮ್ರಾಜ್ಯವು ಸ್ವರ್ಗಗಳ ಸೃಷ್ಟಿಕರ್ತ, ನಿನ್ನ ಪ್ರಭುವಿನ ನಾಮದ ಆಭರಣದಿಂದ ಅಲಂಕೃತಗೊಂಡಿರುವುದು. ಈ ಮಹಾಮಹಿಮೆ ಹೆಸರಿನ ಶಕ್ತಿಯಿಂದ ಸುಸಜ್ಜಿತರಾಗಿ ಪೃಥ್ವಿಯ ರಾಷ್ಟಗಳೆದುರು ಎದ್ದುನಿಲ್ಲಿ, ತಡಮಾಡಿ ಕಾದಿರುವವರಲ್ಲಿ ಒಬ್ಬರಾಗದಿರಿ. . . .

ಇದು ಎಂಥ ಯುಗವೆಂದರೆ ಅದೃಶ್ಯ ಜಗತ್ತು ಈ ರೀತಿ ಕೂಗಿ ಹೇಳುತ್ತಿದೆ: “ಓ ವಸುಂಧರೇ, ನೀನು ಸೌಭಾಗ್ಯಶಾಲಿಯಾಗಿರುವೆ, ಏಕೆಂದರೆ, ನಿನ್ನ ದೇವರ ಪರಮ ಪಾವನ ಹೆಜ್ಜೆಯನ್ನಿಟ್ಟಿರುವ ಸ್ಥಳ ನಿನ್ನದಾಗಿದ್ದು, ಆತನ ಭವ್ಯ ಸಿಂಹಾಸನದ ಪೀಠವನ್ನಾಗಿ ನಿನ್ನನ್ನು ಅಯ್ಕೆ ಮಾಡಲಾಗಿದೆ”. ಭವ್ಯತೆಯ ಸಾಮ್ರಾಜ್ಯವು ಉದ್ಗಾರವೆತ್ತಿದೆ: “ನಿನಗೋಸ್ಕರ ನನ್ನ ಜೀವವೇ ಸಮರ್ಪಿತವಾಗಲಿ. ಏಕೆಂದರೆ, ಭೂತ ಕಾಲದಲ್ಲಾಗಲೀ ಭವಿಶ್ಯತ್ತಿನಲ್ಲಾಗಲೀ ನಿನ್ನ ಹೆಸರಿನ ಶಕ್ತಿಯ ಮೂಲಕ ಎಲ್ಲಾ ವಸ್ತುಗಳಿಗೂ ವಚನವಿತ್ತಂಥ ಆತನ ಸಾಮ್ರಾಜ್ಯವನ್ನು ಸರ್ವಕೃಪಾಕರನ ಪ್ರಿಯತಮನು ನಿನ್ನ ಮೇಲೆ ಸ್ಥಾಪಿಸಿರುವನು. . . . “

ಪರಮ ಪ್ರಿಯತಮನು ಬಂದಿಹನು. ಆತನ ಬಲಗೈಯಲ್ಲಿ ಆತನ ನಾಮದ ಮದಿರೆಯಿದೆ. ಆತನತ್ತ ತಿರುಗಿ, ಸಂಪೂರ್ಣವಾಗಿ ಪಾನ ಮಾಡಿ ಉದ್ಗಾರವೆತ್ತುವವನೇ ಸಂತುಷ್ಟನು : “ನಿನಗೆ ಪ್ರಶಂಸೆಯಾಗಲಿ, ಓ ದೇವರ ಚಿಹ್ನೆಗಳನ್ನು ಪ್ರಕಟಗೊಳಿಸಿದವನೇ!” ಸರ್ವಶಕ್ತನ ಪಾವನತೆಯಿಂದ! ಪ್ರತಿಯೊಂದು ಗುಪ್ತ ವಸ್ತುವೂ ಸತ್ಯದ ಶಕ್ತಿಯ ಮೂಲಕ ವ್ಯಕ್ತಗೊಂಡಿದೆ. ದೇವರ ಎಲ್ಲಾ ಅನುಗ್ರಹಗಳೂ ಆತನ ಕೃಪೆಯ ಕುರುಹಾಗಿ ಕೆಳಗೆ ಕಳುಹಿಸಲ್ಪಟ್ಟಿವೆ. ಅಮರ ಜೀವನ ಜಲವನ್ನು ಮನವರಿಗಾಗಿ ಸಂಪೂರ್ಣವಾಗಿ ಸಮರ್ಪಿಸಲಾಗಿದೆ. ಪ್ರತಿಯೊಂದು ಬಟ್ಟಲು ಕೂಡಾ ಸರ್ವಪ್ರಿಯಕರನ ಕೈಯ ಸ್ಪರ್ಷ ಪಡೆದಿದೆ. ಒಂದು ಕ್ಷಣಕ್ಕಾದರಾಗಲೀ ತಡಮಾಡದೇ ಸಾಮೀಪ್ಯಕ್ಕೆ ಬನ್ನಿ.

ಓ ಬಹಾರ ಜನರೇ, ಸರ್ವಕೃಪಾಕರನು ಆತನ ಮನೆಯಿಂದ ಪವಿತ್ರ ಸ್ಥಾನದೆಡೆ ಮುಂದೆ ಸಾಗುತ್ತ ಸಂಪೂರ್ಣ ಸೃಷ್ಟಿಯ ಮೇಲೆ ಆತನ ನಾಮದ ವೈಭವವನ್ನು ಸಾರುತ್ತಿದ್ದಂತೆ, ಪುರಾತನ ಕಾಲದ ಜಿಹ್ವೆಯ ವಚನವಿತ್ತಂತಹ ಪರಮಾನಂದದ ದಿನದ ಸ್ಮರಣೆಯನ್ನು ಆತ್ಯಾನಂದದಿಂದ ಸಂಭ್ರಮಿಸಿ. ದೇವರೇ ನಮ್ಮ ಸಾಕ್ಷಿಯಾಗಿರುವನು. ನಾವೇನಾದರೂ ಅ ದಿನದ ಗುಪ್ತ ರಹಸ್ಯಗಳನ್ನು ಪ್ರಕಟಿಸಿದ್ದೇ ಆದರೆ, ಪರಾಕ್ರಮಿಯೂ, ಸರ್ವಜ್ಞನೂ, ಸರ್ವ ವಿವೇಕಿಯೂ ಆದ ದೇವರು ರಕ್ಷಿಸಬಹುದಾದವರನ್ನು ಬಿಟ್ಟು ಉಳಿದ, ಈ ಭೂಮಿ ಮತ್ತು ಸ್ವರ್ಗಗಳ ನಿವಾಸಿಗಳೆಲ್ಲರೂ ಮೂರ್ಛಿತರಾಗಿ ಸಾಯಬಹುದು. . . . . . (ಗ್ಲೀನಿಂಗ್ಸ್)

#9517
- Bahá'u'lláh

 

ರವರ ದರ್ಶನ ಶಾಸನ

(ಈಗ ಶಾಸನವನ್ನು ಬಾಬ್ ಹಾಗೂ Baha’u’llah ರವರ ಪವಿತ್ರ ಸಮಾಧಿಗಳ ಬಳಿ ಪಠಿಸಲಾಗುತ್ತದೆ. ಆಗಾಗ್ಗೆ ಅವರ ಜಯಂತಿಗಳ ಸ್ಮರಣೋತ್ಸವದಲ್ಲೂ ಇದನ್ನು ಉಪಯೋಗಿಸಲಾಗುತ್ತದೆ.)

ಓ ಮಹಾವೈಭವದ ಅವತಾರವೇ ಮತ್ತು ಚಿರಂತನತೆಯ ದೊರೆಯೇ ಹಾಗೂ ಭೂಮಿ ಮತ್ತು ಸ್ವರ್ಗದಲ್ಲಿರುವವರೆಲ್ಲರ ಪ್ರಭುವೇ, ನಿನ್ನ ಪರಮ ಶ್ರೇಷ್ಠ ಆತ್ಮದಿಂದಲೇ ಉದಯಿಸಿರುವ ಪ್ರಶಂಸೆ ಹಾಗೂ ನಿನ್ನ ಪ್ರಕಾಶಮಾನವಾದ ಸೌಂದರ್ಯದಿಂದ ಕಂಗೊಳಿಸಿರುವ ವೈಭವವು ನಿನ್ನ ಮೇಲಿರಲಿ! ನಿನ್ನಿಂದಲೇ ದೇವರ ಪ್ರಭುತ್ವ ಮತ್ತು ಆತನ ಸಾಮ್ರಾಜ್ಯ, ಹಾಗೂ ದೇವರ ಭವ್ಯತೆ ಮತ್ತು ಆತನ ಗಾಂಭೀರ್ಯ ಪ್ರಕಟಗೊಂಡಿರುವವೆಂದೂ, ಹಾಗೂ ನಿನ್ನ ಬದಲಾಯಿಸಲಾಗದ ಶಾಸನದ ಸ್ವರ್ಗದಲ್ಲಿ ಪುರಾತನ ವೈಭವದ ದಿನ ನಕ್ಷತ್ರಗಳು ತಮ್ಮ ಕಾಂತಿಯನ್ನು ಪಸರಿಸಿವೆಯೆಂದೂ ಹಾಗೂ ಅದೃಶ್ಯ ಸೌಂದರ್ಯವು ಸೃಷ್ಟಿಯ ದಿಗಂತದ ಮೇಲೆ ಪ್ರಕಾಶಿಸಿರುವುದೆಂದೂ ನಾನು ಸಾಕ್ಷಿ ನುಡಿಯುತ್ತೇನೆ. ಅದೂ ಅಲ್ಲದೆ, ನಿನ್ನ ಲೇಖನಿಯ ಕೇವಲ ಒಂದು ಚಲನೆ ಮಾತ್ರದಿಂದ ನಿನ್ನಾಜ್ಞೆಯಾದ ‘ನೀನಿರು’ ಜಾರಿಗೆ ಬಂದಿರುವುದಕ್ಕೂ ಮತ್ತು ದೇವರ ನಿಗೂಢ ರಹಸ್ಯವು ಪ್ರಕಟಗೊಂಡಿರುವುದಕ್ಕೂ; ಮತ್ತು ಎಲ್ಲಾ ಸೃಷ್ಟಿಗಳು ಅಸ್ತಿತ್ವಕ್ಕೆ ಬರುವಂತೆ ಕರೆ ನೀಡಿರುವುದಕ್ಕೂ ಹಾಗೂ ಎಲ್ಲಾ ಪ್ರಕಟಣೆಗಳನ್ನು ಭೂಮಿಯ ಮೇಲೆ ಕಳುಹಿಸಲಾಗಿದ್ದಕೂ ನಾನು ಸಾಕ್ಷಿ ನುಡಿಯುತ್ತೇನೆ.

ಇಷ್ಟೂ ಅಲ್ಲದೆ, ನಿನ್ನ ಸೌಂದರ್ಯದಿಂದಲೇ ಪೂಜಿಸಲ್ಪಟ್ಟವನ ಸೌಂದರ್ಯವು ಅನಾವರಣವಾಯಿತೆಂದೂ, ನಿನ್ನ ಮುಖದಿಂದಲೇ ಅಪೇಕ್ಷಿಸಲ್ಪಟ್ಟವನ ಮುಖಾರವಿಂದವು ಶೋಭಿತಗೊಂಡಿತೆಂದೂ, ಹಾಗೂ ಸೃಷ್ಟಿಗಳ ಮಧ್ಯೆ, ನಿನ್ನ ಭಕ್ತರು ವೈಭವದ ಶಿಖರಕ್ಕೇರುವ ಹಾಗೂ ದೈವ ಪ್ರತಿಭಟಕರು ಪಾತಾಳಕ್ಕಿಳಿಯುವ ನಿರ್ಣಯವು ನಿನ್ನ ಒಂದು ನುಡಿಯ ಮೂಲಕ ಆಯಿತೆಂಬುದಕ್ಕೂ ನಾನೇ ಸಾಕ್ಷಿಯಾಗಿದ್ದೇನೆ.

ಯಾರು ನಿನ್ನನ್ನು ಅರಿತಿದ್ದಾನೋ ಅವನು ದೇವರನ್ನು ಅರಿತಿದ್ದಾನೆ, ಹಾಗೂ ಸಾನ್ನಿಧ್ಯವನ್ನು ಪಡೆದಿದ್ದಾನೆ, ಎಂಬುದಕ್ಕೆ ನಾನೇ ಸಾಕ್ಷಿ. ಆದ್ದರಿಂದ, ಯಾರು ನಿನ್ನಲ್ಲಿ ಮತ್ತು ನಿನ್ನ ಚಿಹ್ನೆಗಳಲ್ಲಿ ವಿಶ್ವಾಸವಿಟ್ಟಿರುವನೋ, ಹಾಗೂ ನಿನ್ನ ಸಾರ್ವಭೌಮತ್ವದ ಮುಂದೆ ವಿನೀತನಾಗಿರುವನೋ, ನಿನ್ನನ್ನು ಭೇಟಿ ಮಾಡುವ ಗೌರವವನ್ನು ಪಡೆದಿರುವನೋ, ಹಾಗೂ ನಿನ್ನ ಇಚ್ಛೆಯ ಆನಂದವನ್ನು ಪಡೆದಿರುವನೋ, ಹಾಗೂ ನಿನ್ನ ಪ್ರದಕ್ಷಿಣೆ ಮಾಡಿರುವನೋ, ಮತ್ತು ನಿನ್ನ ಸಿಂಹಾಸನದ ಮುಂದೆ ನಿಂತಿರುವನೋ ಅವನ ಧನ್ಯತೆಯೇ ಮಹಾನ್, ಯಾರು ನಿನ್ನನ್ನು ಉಲ್ಲಂಘಿಸಿರುವನೋ, ನಿನ್ನನ್ನು ಅಲ್ಲಗಳೆದಿರುವನೋ, ನಿನ್ನ ಚಿಹ್ನೆಗಳನ್ನು ನಿರಾಕರಿಸಿರುವನೋ, ನಿನ್ನ ಪ್ರಭುತ್ವವನ್ನು ವಿರೋಧಿಸಿರುವನೋ, ನಿನ್ನ ವಿರುದ್ಧಿ ಎದ್ದಿರುವನೋ, ನಿನ್ನ ಮುಖಾರವೈಂದದೆದುರು ಅಹಂಕಾರವನ್ನು ತೋರ್ಪಡಿಸಿರುವನೋ, ನಿನ್ನ ಸಾಕ್ಷ್ಯಾಧಾರಗಳನ್ನು ಖಂಡಿಸಿರುವನೋ, ನಿನ್ನ ಶಾಸನ ಮತ್ತು ನಿನ್ನ ಸಾಮ್ರಾಜ್ಯದಿಂದ ದೂರ ಸರಿದಿರುವನೋ, ನಿನ್ನ ಪವಿತ್ರ ಶಾಸನಗಳಲ್ಲಿ ನಿನ್ನ ಆಜ್ಞೆಯ ಬೆರಳುಗಳಿಂದ ಕೊರೆಯಲ್ಪಟ್ಟ ದೈವಪ್ರತಿಭಟಕರಲ್ಲಿ ಯಾರ ಹೆಸರು ಎಣಿಸಲ್ಪಟ್ಟಿದೆಯೋ ಅಂಥವರಿಗೆ ಸಂಕಟಗಳು ಬರಲಿ.

ಓ ನನ್ನ ದೇವರೇ ಮತ್ತು ನನ್ನ ಪ್ರಿಯತಮನೇ, ನಿನ್ನ ಕರುಣೆಯ ಬಲಗೈಯಿಂದ ಮತ್ತು ನಿನ್ನ ಪ್ರೇಮಪೂರಿತ ದಯೆಯಿಂದ ನಿನ್ನ ಅನುಗ್ರಹಗಳ ಉಸಿರಿನ ತಂಗಾಳಿಯನ್ನು ನನ್ನ ಮೇಲೆ ಹರಿಸು ಅದರಿಂದ ಅವು ನನ್ನನ್ನು ನನ್ನಿಂದ ಮತ್ತು ಈ ಲೋಕದಿಂದ ದೂರ ಮಾಡಿ ನಿನ್ನ ಸಾಮೀಪ್ಯ ಹಾಗೂ ನಿನ್ನ ಸಾನ್ನಿಧ್ಯದ ಆಸ್ಥಾನಗಳೆಡೆ ಕರೆದೊಯ್ಯಲಿ, ನಿನ್ನಿಚ್ಛೆಯಂತೆಯೇ ಮಾಡುವ ಸಾಮಥ್ರ್ಯವುಳ್ಳವನು ನೀನೇ. ನಿಜವಾಗಿಯೂ, ನೀನು ಎಲ್ಲಾ ವಸ್ತುಗಳ ಮೇಲೂ ಶ್ರೇಷ್ಠನಾಗಿದ್ದೀಯೇ.

ದೇವರ ಸ್ಮರಣೆ, ಆತನ ಪ್ರಶಂಸೆ, ದೇವರ ಜ್ಯೋತಿ ಹಾಗೂ ಆತನ ಭವ್ಯತೆಯು ಆತನ ಸೌಂದರ್ಯನಾಗಿರುವ ನಿನ್ನ ಮೇಲಿರಲಿ! ಸೃಷ್ಠಿಯ ಕಣ್ಣುಗಳು ದಬ್ಬಾಳಿಕೆಗೊಳಪಟ್ಟ ನಿನ್ನಂಥವವನ್ನು ಎಂದೂ ನೋಡಿರಲಿಕ್ಕಿಲ್ಲ ಎಂಬುದಕ್ಕೆ ನಾನೇ ಸಾಕ್ಶಿ. ನಿನ್ನ ಬಾಳಿನ ಎಲ್ಲಾ ದಿನಗಳಲ್ಲೂ ನೀನು ಯಾತನೆಗಳ ಸಾಗರದ ತರದಲ್ಲಿ ಮುಳುಗಿದ್ದೆ. ಒಂದು ಸಮಯದಲ್ಲಿ ನೀನು ನಿನ್ನ ಶತ್ರುಗಳ ಖಡ್ಗಗಳಿಂದ ಬೆದರಿಸಲ್ಪಟ್ಟಿದ್ದೆ. ಇಷ್ಟೆಲ್ಲಾ ಆದರೂ, ನಿನಗೆ ಸರ್ವಜ್ಞ ಹಾಗೂ ಸರ್ವಪ್ರಜ್ಞನು ವಿಧಿಸಲ್ಪಟ್ಟಿರುವುದನ್ನು ಮನುಷ್ಯರೆಲ್ಲರೂ ಆಚರಿಸುವಂತೆ ನೀನು ಆಜ್ಞೆ ಮಾಡಿರುವೆ.

ನನ್ನ ಚೈತನ್ಯವು ನೀನನುಭವಿಸಿದ ನಿಂದನೆಗೆ ಅಹುತಿಯಾಗಲಿ ಮತ್ತು ನನ್ನ ಆತ್ಮವು ನೀನು ಸಹಿಸಿರುವ ವಿಪತ್ತುಗಳ ವಿಮುಕ್ತಿಯ ಬೆಳೆಯಾಗಲಿ. ನಿನ್ನಿಂದ ಹಾಗೂ ನಿನ್ನ ಮುಖಾರವಿಂದದ ಪ್ರಕಾಶದ ವೈಭವದಿಂದ ಯಾರ ಮುಖಗಳು ಪ್ರಕಾಶಿತಗೊಂಡವೋ, ಅವರಿಂದ ಹಾಗೂ ಯಾರು ನಿನ್ನ ಪ್ರೀತಿಗೋಸ್ಕರವಾಗಿ ಅವರಿಗೆ ಆಜ್ಞಾಪಿಸಿರುವುದನ್ನೆಲ್ಲಾ ಆಚರಿಸುವರೋ ಅವರಿಂದ, ನೀನು ಮತ್ತು ನಿನ್ನ ಸೃಷ್ಟಿಗಳ ನಡುವೆ ಬಂದಿರುವ ಪರದೆಗಳನ್ನು ತೆಗೆದುಹಾಕುವಂತೆಯೂ ಹಾಗೂ ಈ ಪ್ರಪಂಚ ಮತ್ತು ಮುಂದಿನ ಪ್ರಪಂಚದ ಒಳ್ಳೆಯದನ್ನು ದಯಪಾಲಿಸೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನೀನು ಸತ್ಯವಾಗಿಯೂ ಸರ್ವಶಕ್ತನೂ, ಪರಮೋತ್ತಮನೂ, ಸಕಲ ವೈಭವಪೂರಿತನೂ, ಸದಾ ಕ್ಷಮಾಶೀಲನೂ, ಮಹಾಕೃಪಾಕರನೂ ಆಗಿರುವೆ.

ಓ ಪ್ರಭುವೇ, ನನ್ನ ದೇವರೇ, ದಿವ್ಯ ಕಲ್ಪವೃಕ್ಷ ಮತ್ತದರ ಎಲೆಗಳು, ಮತ್ತದರ ಟೊಂಗೆಗಳು, ಮತ್ತದರ ರೆಂಬೆಗಳು, ಮತ್ತದರ ಕಾಂಡಗಳು, ಮತ್ತದರ ಉಪಶಾಖೆಗಳು ನಿನ್ನ ಮಹಾಉಪಾಧಿಗಳಿರುವ ತನಕ ಹಾಗೂ ನಿನ್ನ ಪ್ರಭಾವಶಾಲಿ ಗುಣಲಕ್ಷಣಗಳಿರುವ ತನಕ ಬಾಳಲೆಂದು ಹರಸು. ಆಕ್ರಮಣಕಾರರ ಹಾವಳಿ ಮತ್ತು ನಿರಂಕುಶಾಧಿಕಾರವುಳ್ಳ ಅತಿಥೇಯರಿಂದ ಅದನ್ನು ರಕ್ಷಿಸು. ನೀನು, ಸತ್ಯವಾಗಿಯೂ, ಪರಾಕ್ರಮಶಾಲಿಯೂ, ಮಹಾಬಲನೂ ಆಗಿರುವೆ. ನಿನ್ನನ್ನು ಪಡೆದ ನಿನ್ನ ಸೇವಕರನ್ನು ಹಾಗೂ ನಿನ್ನ ಸೇವಕಿಯರನ್ನು ಹರಸು, ಓ ಪ್ರಭುವೇ ನನ್ನ ದೇವರೇ, ಸತ್ಯವಾಗಿಯೂ ನೀನು ಸರ್ವ ಉದಾರಿ, ನಿನ್ನ ಅನುಗ್ರಹ ಅಪಾರ. ಸರ್ವಕ್ಷಮಾಶೀಲನೂ ಪರಮದಾನಿಯೂ ಆದ ನೀನಲ್ಲದೆ ಬೇರೆ ದೇವರಿಲ್ಲ.

(ಟೆಹರಾನಿನ ಸಿಯಾಚಾಲ್ ಕಪ್ಪುಗುಂಡಿಯಲ್ಲಿ ಬಂಧಿತ ಬಾಬಿಗಳು ಪಠಿಸುತ್ತಿದ್ದ ಮಂತ್ರ: ದೇವರು ನನಗೆ ತೃಪ್ತಿಪಡಿಸುವಷ್ಟಿದ್ದಾನೆ; ನಿಶ್ಚಯವಾಗಿಯೂ, ಆತನು ಸರ್ವಸಂತೃಪ್ತದಾತನು! ವಿಶ್ವಾಸವಿರುವವರು ಆತನಲ್ಲಿ ವಿಶ್ವಾಸವನ್ನಿಡಲಿ.

#9518
- Bahá'u'lláh