Return   Facebook   Zip File

Arabic

1

ಓ ದೇವಾತ್ಮಸಂಜಾತನೆ!

ಇದು ನನ್ನ ಪ್ರಥಮ ಉಪದೇಶ: ಪ್ರಾಚೀನವೂ ಅವಿನಾಶಿಯೂ, ಶಾಶ್ವತವೂ ಆದ ಪ್ರಭುತ್ವ ನಿನಗೆ ಸಲ್ಲಬೇಕಾದರೆ ಪರಿಶುದ್ಧ ದಯಾಪೂರ್ಣ ಹಾಗೂ ಉಜ್ಜಲವಾದ ಹೃದಯ ನಿನ್ನದಾಗಿರಲಿ!

2

ಓ ದೇವಾತ್ಮ ಸಂಜಾತನೆ!

ಸಮಸ್ತ ವಸ್ತುಗಳಲ್ಲಿ ನನ್ನ ದೃಷ್ಟಿಗೆ ಅತ್ಯಂತ ಸುಪ್ರಿಯವಾದದ್ದು ನ್ಯಾಯ; ನಾನು ನಿನಗೆ ಬೇಕಾಗಿದ್ದರೆ ನ್ಯಾಯಕ್ಕೆ ನೀನು ವಿಮುಖನಾಗಬೇಡ! ಅದನ್ನು ಅಲಕ್ಷಿಸದಿದ್ದಲ್ಲಿ ನೀನು ನನ್ನ ಅಂತರಂಗದ ವಿಶ್ವಾಸಕ್ಕೆ ಅರ್ಹನಾಗುವೆ. ನ್ಯಾಯದ ನೆರವಿದ್ದರೆ ನಿನಗೆ, ನಿನ್ನ ಕಣ್ಣುಗಳಿಂದಲೇ ನೀನು ನೋಡಲಾರಂಭಿಸುವೆ. ಹೆರವರ ಕಣ್ಣುಗಳನ್ನು ಕಡ ತರಬೇಕಾಗಿಲ್ಲ! ನಿನ್ನ ಪರಿಜ್ಞಾನದಿಂದಲೇ ನೀನು ಅರಿತುಕೊಳ್ಳುತ್ತೀಯೆ, ನೆರೆಹ್ರೆರೆಯವನ ಪರಿಜ್ಞಾನದಿಂದ ಅಲ್ಲ. ಹೇಗೆ ಜೀವಿಸುವುದು ಒಳ್ಳೆಯದೆಂಬುದನ್ನು ನಿನ್ನ ಅಂತರ್ಯದಲ್ಲಿ ಪರ್ಯಾಲೋಚಿಸು, ನ್ಯಾಯ ನಿನಗೆ ಸತ್ಯವಾಗಿ ನನ್ನ ದಾನವು ನನ್ನ ಕರುಣೆ - ಪ್ರೀತಿಗಳ ಕುರುಹು, ನಿನ್ನ ಕಣ್ಣಿದಿರು ಅದನ್ನು ಸ್ಥಾಪಿಸಿಕೊಂಡಿರು!

3

ಓ ಮಾನವತನುಜನೆ!

ನಾನು ನನ್ನ ಅನಾದಿ ತನ್ಮಯದಲ್ಲಿ, ನನ್ನ ತಿರುಳಿನ ಸನಾತನ ಚಿರಂತನತೆಯಲ್ಲಿ ಮುಳುಗಿದ್ದರೂ ನಿನಗಾಗಿ ನನ್ನೊಳಗಿರುವ ಅಗಾಧ ಪ್ರೇಮವನ್ನು ನಾನರಿತುಕೊಂಡೆ! ಅಂತೇ ನಿನ್ನನ್ನು ಸೃಷ್ಟಿಸಿದೆ ನಾನು! ನನ್ನ ಪ್ರತಿಮೆಯನ್ನೇ ನಿನ್ನಾಕಾರದಲ್ಲಿ ಕೊರೆದ. ನಿನಗಾಗಿ ನನ್ನ ಸೌಂದರ್ಯವನ್ನು ಅನಾವರಿಸಿದೆ!

4

ಓ ಮಾನವತನುಜನೆ!

ನಿನ್ನನ್ನು ಸೃಷ್ಟಿಸುವುದು ನನಗೆ ಪ್ರಿಯವೆನ್ನಿಸಿತು; ಅಂತೇ ನಿನ್ನನ್ನು ಸೃಷ್ಟಿಸಿದೆ! ಅದಕ್ಕಾಗಿ ನೀನು ನನ್ನನ್ನು ಪ್ರೀತಿಸು, ಆಗ ಹೆಸರಿಟ್ಟು, ನಿನ್ನನ್ನು ನಾನು ಕರೆಯುತ್ತೇನೆ, ಜೀವ ಚೈತನ್ಯದಿಂದ ನಿನ್ನ ಆತ್ಮವನ್ನು ತುಂಬ ತುಂಬುತ್ತೇನೆ.

5

ಓ ತನ್ಮಯದ ಪುತ್ರನೆ!

ನನ್ನಲ್ಲಿ ಪ್ರೀತಿಯಿರಲಿ! ಅಂದರೆ ನನ್ನ ಪ್ರೀತಿ ನಿನ್ನ ಮೇಲೆ ಸುರಿದೀತು! ನೀನು ನನ್ನನ್ನು ಪ್ರೀತಿಸದಿದ್ದಲ್ಲಿ ನಿನ್ನನ್ನು ತುಂಬಿ ಬಿಡಲು ನನ್ನ ಪ್ರೀತಿಗೆ ದಾರಿಯೇ ಇರುವುದಿಲ್ಲ! ಇದನ್ನು ನೀನು ತಿಳಿ, ಓ ಸೇವಕನೇ!

6

ಓ ತನ್ಮಯದ ಪುತ್ರನೆ!

ನನ್ನ ಪ್ರೇಮವೇ ನಿನ್ನ ನಂದನವು. ನನ್ನೊಡನೆ ಪುನರ್ಮಿಲನವೇ ನಿನ್ನ ದಿವ್ಯ ಸದನವು: ಅದರೊಳಕ್ಕೆ ಪ್ರವೇಶಿಸು; ಸಾವಕಾಶ ಮಾಡಬೇಡ. ನಮ್ಮ ಮೇಲಣ ರಾಜ್ಯದಲ್ಲಿ, ನಮ್ಮ ಮಹೋನ್ನತ ಅಧಿಪತ್ಯದಲ್ಲಿ ನಿನ್ನ ದೈವನಿಧಿಯಾಗಿ ನಿನಗಾಗಿ ಕಾದಿರುವ ಐಸಿರಿಯೇ ಅದು - ನನ್ನ ಪ್ರೇಮ.

7

ಓ ಮಾನವತನುಜನೆ!

ನನ್ನ ಮೇಲೆ ನಿನಗೆ ಒಲುಮೆಯಿದ್ದಲ್ಲಿ ನಿನ್ನಿಂದಲೇ ನೀನು ಪರಾಂಮ್ಮುಖನಾಗು: ನನ್ನ ಸಂತೋಷವು ನಿನ್ನ ಅನ್ವೇಷಣೆಯಾದಲ್ಲಿ ನಿನ್ನ ಸ್ವಂತ ಸಂತೋಷದ ಕಡೆಗೆ ಲಕ್ಷ್ಯ ಕೊಡಬೇಡ; ಹಾಗೆ ನಡೆದುಕೊಂಡರೆ ನೀನು ನನ್ನೊಳಗೆ ಲೀನವಾಗಿ ಇಲ್ಲದಾಗುವೆ. ನಾನು ನಿನ್ನೊಳಗೆ ಚಿರಂತನವಾಗಿ

8

ಓ ಜೀವಾತ್ಮಸಂಜಾತನೆ!

ನಿನ್ನ ಸ್ವಾರ್ಥವನ್ನು ನೀನೇ ಪರಿತ್ಯಜಿಸಿ ನನ್ನತ್ತ ತಿರುಗಿದಲ್ಲದೆ ನಿನಗೆ ಏನೇನೂ ಶಾಂತಿಯಿಲ್ಲ; ಏತಕ್ಕೆಂದರೆ ನನ್ನ ನಾಮದ ಮಹಿಮೆಯಲ್ಲಿ ತಲ್ಲೀನವಾಗಿ ಸಂತಸ ಪಡುವುದೇ ನಿನ್ನ ಕರ್ತವ್ಯ: ನಿನ್ನ ಹೆಸರಿನಲ್ಲೇ ಹೆಮ್ಮೆ ಪಡುವುದಿಲ್ಲ. ನನ್ನಲ್ಲಿ ನಿನ್ನ ನೆಚ್ಚಿಕೆಯನ್ನು ಇಡುವುದೇ ನಿನ್ನ ಕರ್ತವ್ಯ. ನಿನ್ನನ್ನು ನೀನು ನೆಚ್ಚಬಾರದು. ಕಾರಣ, ಪ್ರಪಂಚವಿದನ್ನೆಲ್ಲ ಮಿರಿ-ಕೇವಲ ನನ್ನನ್ನೇ ನೀನು ಪ್ರೀತಿಸಬೇಕೆಂದು ನನ್ನ ಹಂಬಲವಾಗಿದೆ.

9

ಓ ತನ್ಮಯದ ಪುತ್ರನೆ!

ನನ್ನ ನಲ್ಮೆಯೇ ನನ್ನ ಕೋಟೆಯು, ಅದರೊಳಕ್ಕೆ ಯಾವನು ಪ್ರವೇಶಿಸುತ್ತಾನೋ ಅವನೇ ಸುರಕ್ಷಿತನು ಅವನಿಗೇ ನಿರ್ಭೀತಿ. ಯಾವಾತ ಅದಕ್ಕೆ ಬೆನ್ನು ತಿರುಗಿಸುತ್ತಾನೋ ಆತ ಖಂಡಿತವಾಗಿ ದಾರಿ ತಪ್ಪುತ್ತಾನೆ. ಖಂಡಿತವಾಗಿ ಆತ ನಾಶ ಹೊಂದುತ್ತಾನೆ.

10

ಓ ದಿವ್ಯೋಕ್ತಿಯೌರಸನೆ!

ನಿನ್ನತ್ಮವು ನಾನು ಕಟ್ಟಿದ ಕೋಟೆ! ಅದನ್ನು ಒಳಹೊಕ್ಕಲ್ಲಿ ನೀನು ನಿರಾತಂಕದಿಂದ ನೆಲಸಿರಬಹುದು. ನನ್ನ ಪ್ರೇಮ ನಿನ್ನೊಳಗೇ ಕುಳಿತಿದೆ; ಅದನ್ನು ತಿಳಿ! ಆಗ ನನ್ನನ್ನು ನಿನ್ನ ಬದಿಯಲ್ಲೇ ಕಾಣುವೆ!

11

ಓ ತನ್ಮಯದ ಪುತ್ರನೆ!

ನೀನು ನನ್ನ ದೀಪ ನಿನ್ನೊಳಗೇ ನನ್ನ ಜ್ಯೋತಿ ಇದೆ ಅದರಿಂದ ಮಾತ್ರ ನಿನ್ನ ಉಜ್ಜಲತೆಯನ್ನು ನೀನು ಪಡೆ! ನನ್ನನ್ನುಳಿದು ಇನ್ನಾವುದನ್ನರಸಿ ನೀನು ಅಲೆದಾಡಬೇಡ! ಆಗರ್ಭ ಶ್ರೀಮಂತವಾಗಿಸಿ ನಾನು ನಿನ್ನನ್ನು ಹುಟ್ಟಿಸಿದ್ದೇನೆ! ನನ್ನ ಕೃಪೆಯನ್ನೆಲ್ಲ ಸಮೃದ್ಧವಾಗಿ ನಿನ್ನ ಮೇಲೆ ಸುರಿಸಿದ್ದೇನೆ!

12

ಓ ತನ್ಮಯದ ಪುತ್ರನೆ!

ಸಮರ್ಥ ಹಸ್ತಗಳಿಂದ ನಿನ್ನನ್ನು ನಿರ್ಮಸಿದೆ ನಾನು! ಬಲಿಷ್ಠ ಬೆರಳುಗಳಿಂದ ನಿನ್ನನ್ನು ತಿದ್ದಿ ತೀಡಿ ಮಾಡಿದೆನು. ನನ್ನ ಜ್ಯೋತಿಯ ಸಾರಸತ್ವವನ್ನು ನಿನ್ನೊಳಗೆ ಇರಿಸಿದ್ದೇನೆ. ಅದರಿಂದ ಸಚಿತೃಪ್ತನಾಗು ಮತ್ತಾವುದನ್ನು ಅರಸದಿರು! ಏತಕ್ಕೆಂದರೆ ನನ್ನ ಕೈಗೆಲಸದಲ್ಲಿ ಪರಿಪೂರ್ಣತೆಯಿದೆ! ನನ್ನ ಆಜ್ಞೆ ಅನುಲ್ಲಂಘನೀಯ! ಅದನ್ನು ಪ್ರಶ್ನಿಸಬೇಡ, ಅದರೆ ವಿಚಾರದಲ್ಲಿ ಸಂಶಯಬೇಡ!

13

ಓ ದೇವಾತ್ಮಸಂಜಾತನೆ!

ನಿನ್ನನ್ನು ನಾನು ಭಾಗ್ಯವಂತನನ್ನಾಗಿ ಸೃಷ್ಟಿಸಿದೆನು. ಅದೇತಕ್ಕೆ ನಿನ್ನನ್ನು ನೀನೇ ದಾರಿದ್ರ್ಯಕ್ಕೆ ಕೆಡವಿಕೊಳ್ಳುತ್ತೀಯೆ? ಶ್ರೀಮಂತನಾಗಿರುವುದಕ್ಕೇ ನಿನ್ನನ್ನು ನಾನು ವಿರಚನೆ ಮಾಡಿದೆನು. ಅದೇತಕ್ಕೆ ನಿನ್ನನ್ನು ನೀನೇ ಕೀಳೈಸಿಕೊಳ್ಳುತ್ತೀಯೇ? ಜ್ಞಾನದ ಅಚಿತಃಸತ್ವದಿಂದಲೇ ನಿನಗೆ ನಾನು ಆಸ್ತಿತ್ವವಿತ್ತೆನು. ನನ್ನನ್ನಲ್ಲದೆ ಬೇರೆ ಯಾವೊಬ್ಬನಿಂದಲೋ ಏತಕ್ಕೆ ನೀನು ಜ್ಞಾನೋದಯವನ್ನು ಅಪೇಕ್ಷಿಸುತ್ತೀಯೆ? ಪ್ರೇಮದ ಜೇಡಿಮಣ್ಣಿನಿಂದ ನಾನು ನಿನಗೆ ಆಕಾರವಿತ್ತೆನು. ಬೇರೊಬ್ಬನೊಂದಿಗೆ ನೀನು ಅದೇತಕ್ಕೆ ರೂಪಿಸಿಕೊಳ್ಳಬಯಸುತ್ತೀ? ನಿನ್ನ ದೃಷ್ಟಿಯನ್ನು ನಿನ್ನೊಳಕ್ಕೇ ತಿರುಗಿಸಿಕೊಳ್ಳು! ನಾನು ಬಲಾಢ್ಯನಾಗಿ ಸಮರ್ಥನಾಗಿ ಸ್ವಯಂಜೀವಿಯಾಗಿ ನಿನ್ನಲ್ಲಿ ನಿಂತಿರುವುದನ್ನು ನೀನು ನಿಶ್ಚಿತ ಕಾಣುವೆ!

14

ಓ ಮಾನವತನುಜನೆ!

ಸಾರ್ವಭೌಮನಾದ ನನ್ನ ಮಂಡಲ ನೀನು! ನನ್ನ ರಾಜ್ಯ ಚಿರಂಜೀವಿ. ಹೀಗಿರುವಾಗ ಅಂತ್ಯಗೊಳ್ಳುತ್ತೇನೆಂಬ ಅಂಜಿಕೆ ನಿನಗೇಕೆ? ನೀನು ನನ್ನ ಬೆಳಕು. ನನ್ನ ಬೆಳಕಿಗೆ ಚ್ಯುತಿಯೇ ಇಲ್ಲ! ಅಂದ ಮೇಲೆ ಲಯವಾಗುವಿಯೆಂಬ ಭೀತಿ ನಿನಗೇಕೆ? ನೀನು ನನ್ನ ವಿಶಿಷ್ಟ ಪ್ರತಾಪವು. ನನ್ನ ಪ್ರತಾಪ ಕಾಂತಿಗುಂದುವುದಿಲ್ಲ: ನೀನು ನನ್ನ ನಿಲುವಂಗಿಯ ನನ್ನ ನಿಲುವಂಗಿ ಎಂದೆಂದಿಗೂ ಮಾಸಿ ಹೋಗದು. ನನ್ನ ಮೇಲಣ ಪ್ರೇಮದಲ್ಲಿ ನೀನು ಸುಸ್ಥಿರನಾಗಿರು. ಆಗ ವೈಭವ ಸಾಮ್ರಾಜ್ಯದಲ್ಲಿ ನೀನು ನನ್ನನ್ನು ಕಾಣುವೆ!

15

ಓ ದಿವ್ಯೋಕ್ತಿಯೌರಸನೆ!

ನಿನ್ನ ಮುಖವನ್ನು ನನ್ನ ಮುಖದತ್ತ ತಿರುಗಿಸು ನನ್ನನ್ನುಳಿದು ಮಿಕ್ಕೆಲ್ಲವನ್ನೂ ನಿರಾಕರಿಸು! ನನ್ನ ಪ್ರಭುತ್ವ ಚಿರಕಾಲ ಉಳಿಯುವುದು. ನನ್ನ ಆಧಿಪತ್ವಕ್ಕೆ ನಾಶವೇ ಇಲ್ಲ! ನನ್ನನಲ್ಲದೆ ಮತ್ತೊಬ್ಬನಿಗೆ ನೀನು ಅಂಡಲೆದರೆ, ಅಷ್ಟೇಕೆ, ಇಡೀ ವಿಶ್ವದಲ್ಲೇ ನೀನು ಸಂತತವಾಗಿ ಅರಸಿ ಅಲೆದಾಡಿದರೂ ನಿನ್ನ ಶೋಧನೆ ನಿಷ್ಫಲವಾಗುವುದು.

16

ಓ ಜ್ಯೋತಿಪುತ್ರನೆ!

ನನ್ನ ಹೊರತು ಮಿಕ್ಕೆಲ್ಲವನ್ನೂ ಮರೆತುಬಿಡು! ನನ್ನ ದಿವ್ಯ ಚೈತನ್ಯದೊಡನೊಂದು ಧೇನಿಸು! ನನ್ನ ಆಜ್ಞೆಯ ಒಳತಿರುಳೆ ಇದು! ಅಂತೇ ಅದರೆಡೆಗೆ ಮುಖತಿರುಗಿಸು.

17

ಓ ಮಾನವತನುಜನೆ!

ನನ್ನನ್ನು ಹೊಂದಿ ನಿಂದು ಸಂತೃಪ್ತನಾಗಿರು! ಬೇರೊಬ್ಬ ಸಹಾಯಕನಿಗಾಗಿ ಅರಸಬೇಡ. ನನ್ನನ್ನುಳಿದು ಇನ್ನೊಬ್ಬರಿಂದ ನಿನಗೆ ಸಮೃದ್ಧಿ ಎಲ್ಲಿ?

18

ಓ ದೇವಾತ್ಮಸಂಜಾತನೆ!

ನಿನಗಾಗಿ ನಾವು ಸಂಕಲ್ಪಿಸದಿರುವುದನ್ನು ನಮ್ಮಿಂದ ನೀನಪೇಕ್ಷಿಸಬೇಡ! ನಿನಗಾಗಿ ನಾವು ಸಂಕಲ್ಪಿಸಿರುವುದರಿಂದಲೇ ನೀನು ಸಚಿತೃಪ್ತಿಪಡು! ಸಂಕಲ್ಪಿತದಿಂದ ನೀನು ಸಚಿತೃಪ್ತಿಗೊಳ್ಳುವುದೇ ನಿನಗೆ ಶ್ರೇಯಸ್ಕರ. ನೀನು ಸಚಿತೃಪ್ತಿಪಡು! ಸಂಕಲ್ಪಿತದಿಂದ ನೀನು ಸಚಿತೃಪ್ತಿಗೊಳ್ಳುವುದೇ ನಿನಗೆ ಶ್ರೇಯಸ್ಕರ.

19

ಓ ಅದ್ಭುತ ದರ್ಶನದ ಔರಸನೆ!

ನನ್ನ ಸ್ವಂತ ಚೈತನ್ಯದೊಂದುಸಿರನ್ನೇ ನಿನ್ನೊಳಗೆ ನಾನು ಉಸಿರಿದ್ದೇನೆ! ಏಕೆ ಗೊತ್ತೇ? ನೀನು ನನ್ನನ್ನು ಸಂತತ ಪ್ರೀತಿಸುವ ಪ್ರೇಮಿಯಾಗಿರಲೆಂದು! ನೀನು ನನ್ನನ್ನು ಬಿಟ್ಟಿದ್ದೇಕೆ ಮಗು? ಬಿಟ್ಟು ಅನ್ಯ ಪ್ರೇಮಿಯನ್ನರಸುತ್ತಿರುವುದೇಕೆ?

20

ಓ ದೇವಾತ್ಮ ಸಂಜಾತನೆ!

ನಿನ್ನ ಮೇಲೆ ನನಗೆ ಇರುವ ಹಕ್ಕು ಘನವಾದದ್ದು, ಅದನ್ನು ಮರೆಯುವಂತಿಲ್ಲ! ನಿನಗೆ ನಾನು ತೋರಿಸಿರುವ ಅವ್ಯಾಜ ಕರುಣೆಯು ಸಮೃದ್ಧವಾದುದು; ಅದಕ್ಕೆ ಮುಸುಕು ಹಾಕುವಂತಿಲ್ಲ! ನನ್ನ ಪ್ರೇಮ ನಿನ್ನಲ್ಲಿ ಮನೆಮಾಡಿಕೊಂಡಿದೆ, ಅದನ್ನು ಅಡಗಿಸಿಡುವಂತಿಲ್ಲ. ನನ್ನ ಜ್ಯೋತಿ ನಿನ್ನಲ್ಲಿ ಒಡಮೂಡಿದೆ. ಅದನ್ನು ಮಬ್ಬಾಗಿಸುವುದು ಅಸಾಧ್ಯ!

21

ಓ ಮಾನವತನುಜನೆ!

ನಿನಗಾಗಿ ಉತ್ತಮೋತ್ತಮ ಫಲಗಳನ್ನು ಪ್ರಕಾಶಮಯ ವೈಭವಪೂರ್ಣ ವೃಕ್ಷದ ಮೇಲೆ ತೂಗುವಂತೆ ಮಾಡಿದ್ದೇನೆ! ಅವುಗಳಿಂದ ಹೀಗೇಕೆ ವಿಮುಖನಾಗಿರುವೆ? ಅಷ್ಟೊಂದು ಶ್ರೇಯಸ್ಕರವ ಲ್ಲದ ಫಲಗಳನ್ನು ತಿಂದು ನೀನೇಕೆ ತೃಪ್ತಿಗೊಂಡಿರುವೆ? ಹಿಂದಿರುಗಿ ಬಾ! ಊಧ್ರ್ವೋನ್ನತ ರಾಜ್ಯದಲ್ಲಿ ನಿನಗೆ ಕಲ್ಯಾಣಪ್ರದವಾದುದನ್ನು ಸ್ವೀಕರಿಸು!

22

ಓ ದೇವಾತ್ಮ ಸಂಜಾತನೆ!

ಉದಾತ್ತ ಮೂರ್ತಿಯಾಗಿ ನಿನ್ನನ್ನು ಸೃಷ್ಟಿಸಿದೆ ನಾನು, ದೀನ-ಹೀನನಾಗಿ ನೀನು ಬಾಳುತ್ತಿರುವೆ. ಯಾವ ಪವಿತ್ರೋದ್ದೇಶಕ್ಕಾಗಿ ನಿನ್ನ ಸೃಷ್ಟಿಯಾಗಿದೆಯೇ ಅದನ್ನು ಸಾಧಿಸಿಕೊಳ್ಳು!

23

ಓ ಪರಾತ್ಪರದ ಕಂದನೆ!

ಚಿಂರತನದೆಡೆಗೆ ನಿನ್ನನ್ನು ಕೂಗಿ ಕರೆಯುತ್ತಿದ್ದೇನೆ, ನಶ್ವರವಾದುದನ್ನು ನೀನು ನಂಬುತ್ತಿದ್ದೀಯೆ! ನಮ್ಮ ಇಚ್ಛೆಗೆ ವಿಮುಖನಾಗಿ ನಿನ್ನ ಸ್ವಂತದ ಇಚ್ಛೆಯನ್ನೇ ಗಮನಿಸುವಂತೆ ನಿನ್ನನ್ನೊಲಿಸಿದ

ಕೇಡಾವುದು?

24

ಓ ಮಾನವತನುಜನೆ!

ನಿನ್ನ ಸೀಮೆಗಳನ್ನು ಉಲ್ಲಂಘಿಸಬೇಡ! ನಿನಗಾವದುಚಿತವಿಲ್ಲೋ ಅದನ್ನು ನಿನಗೋಸ್ಕರ ಪಡೆಯಬೇಡ! ನಿನ್ನ ದೇವದೇವನೆದುರಿಗೆ ಸಾಷ್ಟಾಂಗವೆರಗು! ಕರ್ತುಮ್ ಅಕರ್ತುಮದ ಸಾಮಥ್ರ್ಯವಾತನದು!

25

ಓ ದೇವಾತ್ಮಸಂಜಾತನೆ!

ದರಿದ್ರನೆದುರಿಗೆ ಉರಿದಾಡಬೇಡ! ಅವನಿಗೆ ನಾನೇ ದಾರಿ ತೋರುತ್ತಿದ್ದೇನೆ. ನನ್ನ ಮಾತಿನಂತೆ ನಡೆಯದಿದ್ದರೆ ನಿನ್ನ ದುಃಸ್ಥಿತಿಯಲ್ಲಿ ನಿನ್ನ ಕಂಡು ನೀನು ಶಾಶ್ವತವಾಗಿ ದಿಗ್ಭ್ರಾಂತನಿರುವಂತೆ ಮಾಡೇನು!

26

ಓ ತನ್ಮಯದ ವತ್ಸನೆ!

ನಿನ್ನವೇ ಆದ ಡೊಂಕುಗಳನ್ನು ಮರೆತು ಅನ್ಯರ ದೋಷಗಣನೆಯಲ್ಲಿ ವೇಳೆಗಳೆಯುವರೇ? ಹೀಗೆ ಮಾಡುವವರ ಮೇಲೆಲ್ಲ ನನ್ನ ಶಾಪವಿದೆಯೆಂದು ಗೊತ್ತಿಲ್ಲವೇ?

27

ಓ ಮಾನವತನುಜನೆ!

ಪಾಪಿಯಾಗಿರುವಾಗ ಅನ್ಯರ ಪಾಪಗಳನ್ನು ಕುರಿತೇಕೆ ಮಾತು? ಆಜ್ಞೆಯಿದನ್ನು ನೀನು ಮಾರಿದುದಾದರೆ ನಿನ್ನ ತಲೆಯ ಮೇಲೆ ನನ್ನ ಶಾಪವಿದೆ. ಅದಕ್ಕೆ ನಾನೇ ಸಾಕ್ಷಿ!

28

ಓ ದೇವಾತ್ಮ ಸಂಜಾತನೆ!

ಇದೊಂದು ತತ್ವವನ್ನು ತಿಳಿದುಕೋ! ಯಾವನು ಜನರಿಗೆ ನ್ಯಾಯಪರರಾಗಿರೆಂದು ಬೋಧಿಸಿ ತಾನು ಅನ್ಯಾಯವೆಸಗುತ್ತಾನೋ ನನ್ನ ಹೆಸರಿಟ್ಟುಕೊಂಡಿದ್ದರೂ ಆತ ನನ್ನವನಲ್ಲ!

29

ಓ ತನ್ಮಯದ ಪುತ್ರನೆ!

ಯಾವ ಆಪಾದನೆ ನಿನ್ನ ಮೇಲೆ ಬೇಡವೆಂದು ಬಗೆದಿರುವೆಯೋ ಅದನ್ನು ನೀನು ಯಾವೊಬ್ಬನ ಮೇಲೂ ಹೊರಿಸಬೇಡ. ನಿನ್ನ ಕೃತಿಯಲ್ಲಿ ಇಲ್ಲದಿರುವುದನ್ನು ನಿನ್ನ ಮಾತಿನಲ್ಲಿ ಹೊರಹೊಮ್ಮಿಸ ಬೇಡ. ಇದು ನಿನಗೆ ನನ್ನ ಕಟ್ಟಪ್ಪಣೆ: ಅದನ್ನು ನೀನು ಪಾಲಿಸಲೇಬೇಕು!

30

ಓ ಮಾನವತನುಜತೆ!

ನನ್ನ ಸೇವಕ ನಿನ್ನನ್ನು ಏನನ್ನಾದರೂ ಕೊಡು ಎಂದು ಕೇಳಿದರೆ ಅದನ್ನು ನೀಡದಿರಬೇಡ. ಏತಕ್ಕೆಂದರೆ ಅವನ ಮೊಗವೇ ನನ್ನ ಮೊಗ. ನೀಡದಿದ್ದರೆ ನಾನೇ ಆದ ಅವನೆದುರು ನೀನು ತುಂಬ ನಾಚಿಕೆಯಿಂದ ನಿಲ್ಲಬೇಕಾದಿತು!

31

ಓ ತನ್ಮಯದ ಪುತ್ರನೆ!

ಪ್ರತಿದಿನದ ನಿನ್ನ ಗುಣಾವಗುಣದ ಲೆಕ್ಕವನ್ನು ಸರಿ ಪಡಿಸಿ ತಿಳಿದುಕೋ! ನಿನ್ನ ಜನ್ಮದ ಆಯವ್ಯಯದ ಪಟ್ಟಿಯನ್ನು ಒಮ್ಮಿಂದೊಮ್ಮೆ ಒಪ್ಪಿಸಲು, ನಿನಗೆ ಕರೆ ಬರದೆ ಇರದು. ಯಾವ ಡಂಗುರದ ಆಡಂಬರವಿರದೆ ಮೃತ್ಯುವು ನಿನ್ನ ಮೇಲೆರಗುವುದು ನಿಶ್ಚಿತ. ಆಗ ನಿನ್ನ ಕೃತ್ಯಗಳ ಲೆಕ್ಕವೊಪ್ಪಿಸಲು ನೀನು ಕರೆಯಲ್ಪಡುತ್ತೀಯೆ!

32

ಓ ಸರ್ವೋತ್ತಮನ ಸೂನುವೆ!

ಮೃತ್ಯುವನ್ನು ನಿನಗಾಗಿ ಸಂತಸದೋಲೆಯ ಓಲೆಕಾರ ಆಗಿರುವಂತೆ ನಾನು ನೇಮಿಸಿದ್ದೇನೆ. ಎಂದಮೇಲೆ ನೀನು ಶೋಕಪಡುವುದೇತಕ್ಕೆ? ನಿನ್ನ ಮೇಲೆ ಬೆಳಕು ತನ್ನ ಪ್ರಕಾಶವನ್ನೆಲ್ಲ ಚೆಲ್ಲುವಂತೆ ಮಾಡಿದೆ! ಏತಕ್ಕೆ ನೀನು ಆದರಿಂದ ನಿನ್ನನ್ನು ಮರೆಮಾಚಿಕೊಳ್ಳುತ್ತೀಯೆ?

33

ಓ ದೇವಾತ್ಮಸಂಜಾತನೆ!

ಜ್ಯೋತಿರಾಗಮನದ ಸಂತೋಷದ ವಾರ್ತೆಯೊಂದಿಗೆ ನಾನು ನಿನ್ನನ್ನು ಸ್ವಾಗತಿಸುತ್ತಿದ್ದೇನೆ! ನಲಿದಾಡು! ಪವಿತ್ರತೆಯ ಆ ಸ್ಥಾನಕ್ಕೆ ನಿನ್ನನ್ನು ಕರೆಯುತ್ತಿದ್ದೇನೆ; ಅಲ್ಲಿದ್ದು ಕೊಂಡು ನಿರಂತರವಾಗಿ ಶಾಂತಿಯನ್ನು ನೀನು ಅನುಭವಿಸು!

34

ಓ ದೇವಾತ್ಮಸಂಜಾತನೆ!

ಪುನರ್ಮಿಲನದ ಹರ್ಷವಾರ್ತೆಯನ್ನು ಪವಿತ್ರತೆಯ ಅಂತ ಶ್ಚ್ಯೆತನ್ಯ ನಿನ್ನೆಡೆಗೆ ತರುತ್ತಿದೆ! ಏತಕ್ಕಾಗಿ ನೀನು ಶೋಕಪಡುತ್ತಿದ್ದೀಯೇ? ಸಾಮಥ್ರ್ಯದ ಅಂತಃ ಶಕ್ತಿ ನಿನ್ನನ್ನು ಆತನನ್ನು ಕುರಿತು ನಿಷ್ಠೆಯಲ್ಲಿ ಸ್ಥಿರವಾಗಿಸಿದೆ. ಏತಕ್ಕೆ ನೀನು ಮುಸುಕು ತೆರೆ ಹಾಕಿಕೊಳ್ಳುತ್ತಿದ್ದೀಯೇ? ಆತನ ಮುಖದಲ್ಲಿ ತೊಳಗುವ ಜ್ಯೋತಿ ನಿನ್ನ ನೇತಾರನಾಗಿದೆ. ಚಾರಿ ತಪ್ಪುವುದು ನಿನಗೆ ಸಾಧ್ಯವೇ ಇಲ್ಲ!

35

ಓ ಮಾನವತನುಜನೆ!

ನಮ್ಮಿಂದ ದೂರ ಇರುವುದಕ್ಕಲ್ಲದೆ ಮತ್ತಾವುದಕ್ಕೂ ದುಃಖಪಡಬೇಡ. ನಮ್ಮ ಬಳಿಗೆ ಹಿಂದಿರುಗುವುದಕ್ಕಾಗಿ ನಮಗೆ ಹತ್ತಿರ ಹತ್ತಿರ ಆಗುತ್ತಿದ್ದೀಯೆ ಎಂಬುದರ ಹೊರೆತು ಬೇರೆ ಯಾವುದಕ್ಕೂ ಹರ್ಷಗೊಳ್ಳಬೇಡ.

36

ಓ ಮಾನವತನುಜನೆ!

ನನ್ನನ್ನು ಸಂಧಿಸಲು ನೀನು ಅರ್ಹನಾಗುವಿ; ನನ್ನ ಚೆಲುವನ್ನು ಪಡಿಮೂಡಿಸಲು ನೀನು ಸಮರ್ಥನಾಗುವಿ; ಈ ಎರಡರ ಅರ್ಹತೆಗಾಗಿ ಮಾತ್ರ ಹ್ಲದಯ ಆನಂದ ತುಂದಿಲವಿರಲು, ನೀನು ನಲಿದಾಡು!

37

ಓ ಮಾನವತನುಜನೆ!

ನಾನಿತ್ತಿರುವ ಚೆಲುವ ನಿಲುವಂಗಿಯನ್ನು ನೀನು ತೆಗೆದಿಡಬೇಡ! ಸದಾ ಪುಟಿಯುತ್ತಿರುವ ನನ್ನ ಅದ್ಭುತ ಕರಂಜಿಯಿಂದ ಹರಿಯುವ ಸಮೃದ್ಧಿಯಲ್ಲಿ ನಿನ್ನ ಭಾಗಕ್ಕೆ ಹೊರತಾಗಬೇಡ! ಹೊರತಾದರೆ ನಿನ್ನ ನೀರಡಿಕೆಗೆ ಕೊನೆಯೇ ಇಲ್ಲವಾದೀತು!

38

ಓ ತನ್ಮಯದ ಪುತ್ರನೆ!

ನನ್ನ ಪ್ರೀತಿಯೇ ನಿನಗೆ ಬೇಕಾಗಿದ್ದರೆ ಗಣ್ಯತೆಯ ಸೀಮೆಯಲ್ಲಿ ಓಡಾಡಿರು! ನನ್ನ ಸಂತೋಷ ನಿನ್ನ ಗುರಿಯಾಗಿದ್ದಲ್ಲಿ ಯಾವುದನ್ನು ನೀನು ಬಯಸುತ್ತಿರುವೆಯೋ ಅದನ್ನು ತ್ಯಜಿಸಿಬಿಡು!

39

ಓ ಮಾನವತನುಜನೆ!

ನನ್ನ ಸೌಂದರ್ಯ ನಿನಗೆ ಪ್ರಿಯವಾದಲ್ಲಿ ನನ್ನ ಕಟ್ಟಳೆಗಳನ್ನು ಉಪೇಕ್ಷೆಗೈಯದಿರು! ನನ್ನ ಸಂಪ್ರೀತಿಯನ್ನು ಸಾಧಿಸಿಕೊಳ್ಳುವ ಆಸೆ ನಿನಗಿದ್ದಲ್ಲಿ ನನ್ನ ಹಿತನುಡಿಗಳನ್ನು ಮರೆಯದಿರು.

40

ಓ ಮಾನವತನುಜನೆ!

ನಿನ್ನ ಸೀಮೆಯರಿತು ನಡೆ. ಉಲ್ಲಂಘಿಸಬೇಡ! ನಿನಗೆ ಅನುಚಿತವಾದುದನ್ನು ನಿನ್ನದೆಂದು ಸಾಧಿಸಬೇಡ. ನಿನ್ನ ದೇವನಿಗೆ ಸಮ್ಮುಖನಾಗಿ ಸಾಷ್ಟಾಂಗ ಪ್ರಣಾಮ ಮಾಡು! ಭಗವಂತ ಭಕ್ತಿ –ಅಧಿಕಾರಗಳ ಪ್ರಭಾವವಾಗಿದ್ದಾನೆ.

41

ಓ ಮಾನವತನುಜನೆ!

ನನ್ನ ತತ್ವ ಪಕ್ಷವನ್ನು ನೀನು ಹೊಗಳಿ ಹೆಚ್ಚು ಮಾಡಿದರೆ ನನ್ನ ಘನಮಹಿಮೆಯ ರಹಸ್ಯಗಳನ್ನು ನಿನಗಾಗಿ ನಾನು ಪ್ರದರ್ಶಿಸಬಹುದು, ಹಾಗೂ ನಿತ್ಯತೆಯ ಜ್ಯೋತಿಯಿಂದ ನಿನ್ನಮೇಲೆ ಪ್ರಕಾಶ ಬೀರಬಹುದು.

42

ಓ ಮಾನವತನುಜನೆ!

ನನ್ನ ಮುಂದೆ ನೀನು ದೀನನಾಗಿ ನಡೆದುಕೊಂಡರೆ ಕರುಣೆಯಿಂದ ನಾನು ನಿನಗೆ ಭೇಟಿ ಕೊಡಬಹುದು. ನನ್ನ ತತ್ವಪಕ್ಷದ ಮಹಾವಿಜಯಕ್ಕಾಗಿ ಎದ್ದು ಶ್ರಮಿಸು; ತನ್ಮೂಲಕ ನಿನಗೂ ಭೂಮಿಯ ಮೇಲೆ ಇರುವಾಗಲೇ ವಿಜಯ ದೊರಕಬಹುದು.

43

ಓ ತನ್ಮಯದ ಪುತ್ರನೆ!

ಬಡವರೆದುರಿಗೆ ಉರಿದಾಡಬೇಡ. ದೀನದಲಿತರನ್ನು ಕೈಹಿಡಿದು ಕರೆದೊಯ್ಯವವನು ನಾನು! ನೀನು ಅಡ್ಡ ಬಂದೆಯಾದರೆ ನಿನ್ನನ್ನೇ ನಾನು ಹೀನಸ್ಥಿತಿಯಲ್ಲಿ ನೋಡಬೇಕಾದೀತು. ಕೊನೆಯವರೆಗೆ ನಿನ್ನನ್ನು ಹಿಂಸೆಪಡಿಸುಬೇಕಾದೀತು.

44

ಓ ಪರಮಶ್ರೇಷ್ಠ ಸಿಂಹಾಸನದೌರಸನೆ!

ನನ್ನ ಶ್ರವಣವೇ ನಿನ್ನ ಶ್ರವಣ ನನ್ನ ದೃಷ್ಟಿಯೇ ನಿನ್ನ ದೃಷ್ಟಿ. ಆ ನನ್ನ ಶ್ರಮಣ- ದೃಷ್ಟಿಗಳಿಂದಕೇಳು ನೋಡು! ನನ್ನ ಉಚ್ಚತಮ ಪಾವಿತ್ರ್ಯಕ್ಕೆ ಆಗ ನಿನ್ನ ಅಂತರಾತ್ಮದೊಳಗೆ ಆಧಾರ ದೊರೆಯಬಹುದು. ನನ್ನಂತರಂಗದಲ್ಲಿ ನಿನಗೊಂದು ಅತ್ಯುನ್ನತ ಸ್ಥಾನವಿದೆಯೆಂದು ನಾನು ಸಾಕ್ಷಿ ನುಡಿಯಬಹುದು!

45

ಓ ತನ್ಮಯದ ಪುತ್ರನೆ!

ನನ್ನ ಮಾರ್ಗದಲ್ಲಿ ಮುಂದುವರಿಯುವಾಗ, ಬಂದರೆ ಆಹುತಾತ್ಮನ ಸಾವು ನಿನಗೆ ಬರಲಿ. ಅದನ್ನರಸು! ನನ್ನ ಸಂತೋಷವೇ ನಿನ್ನ ಸಂತೃಪ್ತಯಾಗಲಿ! ನನ್ನ ಆಜ್ಞೆಗಳನ್ನೆಲ್ಲ ಕೃತಜ್ಞತೆಯಿಂದ ಶಿರಸಾವಹಿಸು. ಆಗ ನನ್ರ್ನೆಂದಿಗೆ ನೀನು ವೈಭವದ ಮೌನದ ಕೆಳಗೆ ವಿಶ್ರಾಂತಿ ಹೊಂದುವಿ ನನ್ನ ಪ್ರತಾಪಮಯ ವಸತಿಯ ಹಿಂದೆ ನನ್ನ ಜೊತೆಗಿರುವಿ!

46

ಓ ಮಾನವತನುಜನೆ!

ಆಲೋಚಿಸು, ಮನಸ್ಸಿನೊಳಗೆ ಮಂಥನ ಮಾಡು! ಸುಮ್ಮನೆ ಮಲಗಿದಲ್ಲಿ ಹಾಸಿಗೆಯ ಮೇಲೆ ಸತ್ತು ಹೋಗುವುದು ನಿನಗಿಷ್ಟವೇ? ಇಲ್ಲವೆ ನನ್ನ ಮಾರ್ಗದಲ್ಲಿ ಆಹುತಾತ್ಮನಾಗಿ ನಿನ್ನ ಬಿಸಿಬಿಸಿ ರಕ್ತವನ್ನು ನನಗಾಗಿ ಮಣ್ಣಿನಲ್ಲಿ ಸುರಿಸುವಿಯೋ? ಆಹುತಾತ್ಮನಾದ ಪಕ್ಷದಲ್ಲಿ ನೀನು ನಾನ್ನಾಜ್ಞೆಯನ್ನು ಅಭಿವ್ಯಕ್ತಿಸುವಿ. ನನ್ನ ಉನ್ನತತಮ ನಂದನದಲ್ಲಿದ್ದ ಜ್ಯೋತಿಯನ್ನು ಜನತೆಗೆ ಪ್ರಕಾಶಗೊಳಿಸುವೆ! ಓ ಸೇವಕ! ಉಚಿತವಾಗಿ ತೀರ್ಮಾನಿಸು!

47

ಓ ಮಾನವತನುಜನೆ!

ನನ್ನ ಸೌಂದರ್ಯಸಾq್ಷಯಾಗಿ ಹೇಳುತ್ತೇನೆ! ವಿಶ್ವದ ನಿರ್ಮಾಣಕ್ಕಿಂತಲೂ ಇಹ-ಪರಗಳ ಬೆಳಕಿಗಿಂತಲೂ ನಿನ್ನ ತಲೆಗೂದಲಿಗೆ ನಿನ್ನ ನೆತ್ತರದ ಬಣ್ಣ ಲೇಪಿಸುವುದು ಘನತರ ವಿಷಯ! ಈ ಲೇಪನವನ್ನು ಸಾಧಿಸಲು ಸರ್ವ ವಿಧದಿಂದ ಪ್ರಯತ್ನಿಸು.

48

ಓ ಮನವತನುಜನೆ!

ಪ್ರತಿಯೊಂದಕ್ಕೂ ಒಂದೊಂದು ಸಂಜ್ಞೆಯುಂಟು. ನನ್ನನ್ನು ಕುರಿತು ನಿನ್ನೊಳಿದ್ದ ಪ್ರೇಮದ ಸಂಜ್ಞೆಯನ್ನು ತಿಳಿಯುವುದಿದೆಯೇ? ನನ್ನ ತೀರ್ಪನ್ನು ಸ್ಥೈರ್ಯದಿಂದ ಸ್ವೀಕರಿಸುವುದೂ ನನ್ನ ಪರೀಕ್ಷಾ ಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದೂ ಪ್ರೇಮದ ಸಂಜ್ಞೆಯೆಂದು ತಿಳಿ!

49

ಓ ಮಾನವತನುಜನೆ!

ಚಂಗೆಕೋರನು ಕ್ಷಮೆಗಾಗಿಯೂ ಪಾತಕಿಯು ಕರುಣೆಗಾಗಿಯೂ ಹೇಗೋ ಹಾಗೆ ನೈಜಪ್ರೇಮಿಯು ಕ್ಲೇಶಕ್ಕಾಗಿ ಹಾತೊರೆಯುತ್ತಾನೆ.

50

ಓ ಮಾನವತನುಜನೆ!

ಕೇವಲ ನನ್ನ ಸುಖವನ್ನು ಸಂಪಾದಿಸಿ ಸಂತೃಪ್ತರಾದವರಿದ್ದಾರೆ. ಆ ನನ್ನ ಸುಖವೇ ಅವರಿಗೆ ಮಾರ್ಗವಾಗಿದೆ. ನೀನು ನನ್ನ ಪಥದಲ್ಲಿ ನಡೆಯಬೇಕೆಂದು ನೋಂತವ ಅಲ್ಲಿ ನೀನು ವಿಪತ್ತುಗಳನ್ನು ಅನುಭಾವಿಸದಿದ್ದ ಪಕ್ಷದಲ್ಲಿ ನನ್ನ ಸುಖವೇ ಪಥವಾದ ಆ ಜನರ ಮಾರ್ಗಗಳಲ್ಲಿ ಎಂತಲೆದಾಡಬಲ್ಲೆ? ನನ್ನ ಸೌಂದರ್ಯವನ್ನು ನೀನು ಪ್ರೀತಿಸುತ್ತಿರುವಿ. ನನ್ನ ದರ್ಶನ ಪಡೆಯಲು ನೀನು ತವಕಗೊಂಡಿರುವಾಗ ಅಗ್ನಿ ದಿವ್ಯಗಳು ನಿನ್ನನ್ನು ಎದುರಿಸದೆ ಹೋದಲ್ಲಿ, ನನ್ನ ಸೌಂದರ್ಯವನ್ನು ಕುರಿತು ನೀನು ತಳೆದ ಪ್ರೇಮ ಶಾಂತಿಮಯವೆಂತಾದೀತು?

51

ಓ ಮಾನವತನುಜನೆ!

ನಾನು ತರುವ ಅನರ್ಥ ನನ್ನ ಮುಂಚಾಗ್ರತೆಯೆಂದು ತಿಳಿ. ಹೊರಗಡೆಗೆ ಅದು ಬೆಂಕೆ ಮತ್ತು ಪ್ರತೀಕಾರದಂತೆ ಕಾಣುವುದುಂಟು. ಆದರೆ ಅದರೊಳತಿರುಳಿನಲ್ಲಿ ಅದು ಪ್ರಕಾಶ ಹಾಗೂ ಕರುಣೆಯಾಗಿದೆ. ಅದರೆಡಗೆ ನೀನು ತ್ವರೆಯಿಂದ ನಡೆ! ಆಗ ನೀನೊಂದು ಚಿರಂತನ ಜ್ಯೋತಿಯೂ ಅಮರ ಚೇತನವೂ ಆಗುವಿ! ಇದು ನನ್ನಾಜ್ಞೆ ನಿನಗೆ! ಅದನ್ನು ನೀನು ಪರಿಪಾಲಿಸು!

52

ಓ ಮಾನವತನುಜನೆ!

ಅಭ್ಯುದಯ ನಿನಗೊದಗಿ ಬಂದಾಗ ಕುಣಿದಾಡಬೇಡ! ಹೀನಸ್ಥಿತಿಯು ನಿನ್ನ ಮೇಲೆರಗಿದಾಗ ದುಃಖಿಸಬೇಡ. ಎರಡೂ ಮೈಗರೆದು ಇಲ್ಲವಾಗುತ್ತವೆ.

53

ತನ್ಮಯದ ಪುತ್ರನೆ!

ಬಡತನ ನಿನ್ನನ್ನು ಮುತ್ತಿದಾಗ ದುಃಖಿಸಬೇಡ! ಸೂಕ್ತ ಸಮಯದಲ್ಲಿ ಸಂಪದಭ್ಯುದಯದ ಸ್ವಾಮಿ ನಿನ್ನ ಮೇಲೆ ಕರುಣೆದೋರುತಾನೆ. ಕೀಳುಸ್ಥಿತಿಯು ಬಂದಿತೆಂದು ಭಯ ಪಡಬೇಡ. ಒಂದು ದಿನ ಅಮಿತ ವೈಭವ ಕಿರೀಟ ಪ್ರಾಯವಾಗಿ ನಿನ್ನನ್ನು ಅಲಂಕರಿಸುತ್ತೇನೆ.

54

ಓ ತನ್ಮಯದ ಪುತ್ರನೆ!

ಈ ಚಿರಂತನ ಅವಿನಾಶಿ ರಾಜ್ಯದ ಮೇಲೆ, ಈ ಸನಾತನ, ಸರ್ವಕಾಲೀನ ಜೀವಿತದ ಮೇಲೆ ನಿನ್ನ ಎದೆಯೊಲವು ಕೊತಿದೆಯೇ? ಹಾಗಿದ್ದರೆ ಈ ಮತ್ರ್ಯ, ನಶ್ವರ, ಪದಸಂಪದಗಳ ಮೋಹವನ್ನು ತ್ಯಜಿಸು!

55

ಓ ತನ್ಮಯದ ಪುತ್ರನೆ!

ಈ ಪ್ರಪಂಚದ ವ್ಯವಹಾರಗಳಲ್ಲಿ ಕಾರ್ಯಸಕ್ತನಾಗಿದಿರು; ನಾವು ಕಾಂಚನವನ್ನು ಬೆಂಕಿಯಿಂದ ಪರೀಕ್ಷಿಸುತ್ತೇವೆ. ಕಾಂಚನದಿಂದ ನಮ್ಮ ಸೇವಕರನ್ನು ಪರೀಕ್ಷಿಸುತ್ತೇವೆ.

56

ಓ ಮಾನವತನುಜನೆ!

ಚಿನ್ನ ಬೇಕೆಂದು ನೀನು ಆಸೆಪಡುತ್ತೀಯೆ ಅದರಿಂದ ನೀನು ಬಿಡುಗಡೆ ಹೊಂದಬೇಕೆಂದು ನನ್ನಾಸೆಯಿದೆ! ಅದನ್ನು ಪಡೆದುಕೊಂಡರೆ ಶ್ರೀಮಂತನಾಗಿವೆನೆಂದು ನಿನ್ನ ಭಾವನೆಯಿದೆ. ಅದನ್ನು ಮುಟ್ಟದೆ ಪವಿತ್ರನಾಗುಳಿದರೆ ನೀನು ಐಶ್ವರ್ಯವಂತನೆಂದು ನಾನು ಎಣಿಸುತ್ತೇನೆ. ನನ್ನ ಆಯಸ್ಸಿನಾಣೆ! ಇದು ನನ್ನ ತಿಳುವಳಿಕೆಯಾದರೆ ಅದು ನಿನ್ನ ಭ್ರಾಂತಿಯಾಗಿದೆ. ಹೀಗಿದ್ದಾಗ ನನ್ನ- ನಿನ್ನ ದಾರಿಗಳು ಒಂದಾಗುವ ಬಗೆ ಎಲ್ಲಿ?

57

ಓ ಮಾನವತನುಜನೆ!

ನನ್ನ ಸಂಪತ್ತನ್ನು ನೀನು ನನ್ನವರಾದ ದರಿದ್ರರಿಗೆ ದಾನಮಾಡಿದರೆ, ಸ್ವರ್ಗದಲ್ಲಿ ಕಳೆಗುಂದದ ಕಾಂತಿಯ ಭಾಂಡಾರಗಳೂ ಅಮರ ವೈಭವದ ನಿಧಿಗಳೂ ನಿನಗಾಗಿ ತೆರೆಯುವುವು! ಆದರೆ ನನ್ನ ಜೀವದಾಣೆ! ನನಗಾಗಿ ನಿನ್ನ ಆತ್ಮವನ್ನೇ ಸಮರ್ಪಿಸುವುದು ಇದಕ್ಕೂ ಘನತರವಾದ ಕೃತಿ. ನನ್ನ ಕಣ್ಣಿಂದ ನೀನು ಕಂಡೆಯಾದರೆ ಇದನ್ನು ನೀನು ತಿಳಿಯಬಲ್ಲೆ!

58

ಓ ಮಾನವತನುಜನೆ!

ನಿನ್ನ ತನ್ಮಯದ ಮಂದಿರವೇ ನನ್ನ ಸಿಂಹಾಸನವಾಗಿದೆ. ಎಲ್ಲ ಜಡವಸ್ತುಗಳ ಕಸವನ್ನು ಗುಡಿಸಿಹಾಕಿ ಅದನ್ನು ನ್ಣು ಶುಚಿಗೊಳಿಸಿದಲ್ಲಿ ಅಲ್ಲಿ ನಾನು ಸ್ಥಾಪಿತನಾಗುವೆನು. ಆಲಿಯೇ ನೆಲೆ ನಿಲ್ಲುವೆನು!

59

ಓ ತನ್ಮಯದ ಪುತ್ರನೆ!

ನಿನ್ನ ಹ್ಲದಯವೇ ನನ್ನ ಮನೆ! ಅದನ್ನು ಪವಿತ್ರವಾಗಿರಿಸು. ಅಂದರೆ ನಾ ಬಂದು ನೆಲೆಸುವೆನಲ್ಲಿ! ನಿನ್ನ ಅಂತಶ್ಚೇತನವೇ ನನ್ನ ಸಾಕ್ಷಾತ್ಕರಣದ ಸ್ಥಳ. ಅಲ್ಲಿ ನಾನು ಅಭಿವ್ಯಕ್ತವಾಗಲು ಅದನ್ನು ಶುಚಿಗೊಳಿಸು!

60

ಓ ಮನವತನುಜನೆ!

ನನ್ನೆದೆಯ ಮೇಲೆ ನಿನ್ನ ಕೈಯನ್ನಿಡು! ಆಗ ಜಾಜ್ವಲ್ಯ ಮಾನವಾಗಿ. ಉದ್ದೀಪ್ತನಾಗಿ ನಾನು ನಿನ್ನನ್ನು ಮಿರಿ ನಿಲ್ಲುತ್ತೇನೆ.

61

ಓ ಮಾನವತನುಜನೆ!

ನನ್ನ ಸ್ವರ್ ಲೋಕಕ್ಕೆ ಆರೋಹಣಗೈಯ್ದು ಬಾ ಆಗ ನೀನು ಪುನರ್ಮಿಲನದ ಆನಂದವನ್ನು ಹೊಂದುತ್ತೀಯೆ! ನಾಶರಹಿತ ವೈಭವದ ಪಾತ್ರೆಯಿಂದಾಗ ನೀನು ಆದ್ವಿತೀಯ ಪೇಯವನ್ನೀಂಟಲು ಅರ್ಹನಾಗುತ್ತೀಯೆ!

62

ಓ ಮಾನವತನುಜನೆ!

ನಿನ್ನ ಚಿತ್ರವಿಚಿತ್ರ ಕಲ್ಪನೆಗಳಲ್ಲಿಯೂ ಭ್ರಾಂತಿಭ್ರಮೆಗಳಲ್ಲಿಯೂ ನೀನು ಸಿಕ್ಕಿ ತೊಳಲಾಡುತ್ತಿರುವಾಗ ಅನೇಕ ದಿನಗಳು ಕಳೆದುಹೋಗಿವೆ. ಹಾಸಿಗೆಯ ಮೇಲೆ ಬಿದ್ದುಕೊಂಡು ಇನ್ನೆಷ್ಟು ದಿನಗಳನ್ನು ಕಳೆಯುವವನಿದ್ದೀ ನೀನು! ನಿದ್ರೆಯನ್ನು ಮುಗಿಸಿ ನಿನ್ನ ತಲೆಯೆತ್ತು! ಸೂರ್ಯ ಆಗಲೇ ಮಧ್ಯಾಹ್ನದ ಶಿಖರವನ್ನೇರಿದ್ದಾರೆ! ಸೌಚಿದರ್ಯದ ಪ್ರಭೆಯಿದೊಡಗೂಡಿದ ಆ ಸೂರ್ಯ ನಿನ್ನನ್ನು ಬೆಳಗಿದರೂ ಬೆಳಗಬಹುದು!

63

ಓ ಮಾನವತನುಜನೆ!

ಪ್ಯಣ್ಯಗಿರಿಯ ಕ್ಷಿತಿಜದಿಂದ ದಿವ್ಯಪ್ರಭೆ ನಿನ್ನ ಮೇಲೆ ಹರಿದುಬಂದಿದೆ; ಹ್ಲದಯದ ಸಿನಾಯಿ ಪರ್ವತದಲ್ಲಿ ಪ್ರಜ್ಞಾನದ ಉಸಿರಾಡಿದೆ. ಅಂತೇ ಓ ಮಾನವತನುಜ! ವ್ಯರ್ಥಕಲ್ಪನೆಗಳ ಮುಸುಕುಗಳಿಂದ ನಿನ್ನನ್ನು ನೀ ಬಿಡಿಸಿಕೊಳ್ಳು! ನನ್ನ ಸಭಾಮಂದಿರವನ್ನು ಪ್ರವೇಶಿಸು! ಆಗ ನೀನು ಅಮರಜೀವನದ ಅರ್ಹತೆಯನ್ನು ಪಡೆಯುವಿ! ಕಣ್ಣೆರೆದು ನನ್ನನ್ನು ಭೇಟಿ ಮಾಡಲು ಶಕ್ತನಾಗುವಿ! ಆಗ ದಣಿವಾಗಲಿ, ದುಮ್ಮಾನವಾಗಲಿ, ಮರಣವಾಗಲಿ ನಿನ್ನನ್ನು ಕಾಡಲಾರದು!

64

ಓ ಮಾನವತನುಜನೆ!

ನನ್ನ ಚಿರಂತನತೆಯೇ ನನ್ನ ಸೃಷ್ಟಿ ಅದನ್ನು ನಿನಗಾಗಿ ನಾನು ಸೃಷ್ಟಿಸಿದ್ದೇನೆ. ನಿನ್ನ ದೇವಮಂದಿರಕ್ಕೆ ಅದನ್ನು ಅಧಿವಾಸವನ್ನಾಗಿ ಮಾಡು! ನನ್ನ ಏಕತೆಯೂ ನನ್ನ ಮಾಟ. ಅದನ್ನು ನಾನು ನಿನಗಾಗಿ ತಯಾರಿಸಿದ್ದೇನೆ. ನೀನು ಅದನ್ನು ನಿನ್ನ ಉಡುಪಾಗಿ ಬಳಸಿಕೊಳ್ಳು! ಆಗ ನೀನು ಅನಂತಕಾಲದುದ್ದಕ್ಕೂ ನನ್ನ ಚಿರಂತನ ತನ್ಮಯದ ಸಾಕ್ಷಾತ್ಕರಣವಾಗಿ ಇರುತ್ತೀ!

65

ಓ ಮಾನವತನುಜನೆ!

ನನ್ನ ಅದ್ಭುತ ಪ್ರಭುಶಕ್ತಿಯು ನಿನಗೆ ನಾನಿತ್ತ ಕಾಣಿಕೆಯಾಗಿದೆ! ನನ್ನ ವೈಭವವು ನನಗೆ ನಿನ್ನ ಮೇಲಿದ್ದ P್ಪರುಣೆಯ ದ್ಯೋತಕವಾಗಿದೆ. ಯಾವುವು ನನಗೊಪ್ಪುವವೋ ಅದನ್ನು ಯಾರೂ ತಿಳಿಯಲಾರರು ಇಲ್ಲವೆ ಪಥಿಸಲಾರರು! ನನ್ನ ಭೃತ್ಯರ ಮೇಲೆ ನನಗೆ ಇರುವ ಕರುಣೆ -ಪ್ರೀತಿಯ ಹಾಗೂ ನನ್ನ ಜನರ ಮೇಲೆ ನನಗೆ ಇರುವ ಕೃಪೆಯ ಕುರುಹೆಂದು ನಾನು ಅದನ್ನು ನನ್ನ ಗುಪ್ತ ಉಗ್ರಾಣಗಳಲ್ಲಿ, ನನ್ನ ಅಧೀನದ ಖಜಾನೆಗಳಲ್ಲಿ ಜೋಪಾನವಾಗಿ ಇರಿಸಿದ್ದೇನೆ.

66

ಓ ದಿವ್ಯ ಅದೃಶ್ಯ ಸತ್ವಸಾರದ ಮಕ್ಕಳೆ!

ನನ್ನನ್ನು ಪ್ರೀತಿಸುವ ದಾರಿಯಲ್ಲಿ ಅತಂಕಗಳು ನಿಮಗೆ ಎದುರಾಗುತ್ತವೆ! ನನ್ನ ಉಲ್ಲೇಖವು ಸಹ ಆತ್ಮಗಳನ್ನು ಕೆರಳಿಸುತ್ತದೆ. ಏಕೆಂದರೆ ಮನಸ್ಸು ಗಳು ನನ್ನನ್ನು ತಿಳಿದುಕೊಳ್ಳಲಾರವು. ಹೃದಯಗಳು ನನ್ನನ್ನು ಸ್ವಾಧೀನಪಡಿಸಿಕೊಳ್ಳಲಾರವು.

67

ಓ ಸೌಂದರ್ಯನಂದನನೆ!

ಆತ್ಮ ಚೈತನ್ಯವೇ ಸಾಕ್ಷಿ! ನಿನ್ನ ಕುರಿತಿರುವ ನನ್ನ ಪ್ರಸನ್ನತೆಯೆ ಸಾಕ್ಷಿ! ನನ್ನ P್ಪರುಣೆ ಸಾಕ್ಷಿ! ನನ್ನ ಚೆಲುವು ಸಾಕ್ಷಿ! ಪ್ರಭುಸಮ್ಮತದಿಂದ ಹಾಗೂ ಸಮರ್ಥ ಲೇಖನಿಯಿಂದ ನಾನು ನಿನಗೆ ನಿರೂಪಿಸಿರುವುದೆಲ್ಲ ನಿನ್ನ ಸಾಧ್ಯತೆ ಮತ್ತು ಗ್ರಹಣಶಕ್ತಿಯ ಮಟ್ಟಕ್ಕೆ ತಕ್ಕುದಾದ್ದದು. ನನ್ನ ಪರಾಸ್ಥಿತಿಗೂ ನನ್ನ ಧ್ವನಿಮಾಧುರ್ಯಕ್ಕೂ ಅದರ ಯಾವ ಸಂಬಂಧವೂ ಇಲ್ಲ!

68

ಓ ಮನುಕುಲದ ಔರಸರೆ!

ನಿಮ್ಮನ್ನೆಲ್ಲ ನಾವು ಒಂದೇ ಮಣ್ಣುಹುಡಿಯಿಂದ ನಿರ್ಮಾಣ ಮಾಡಿದೆವು. ಏಕೆ ಗೊತ್ತಿದೆಯೇ? ಯಾವೊಬ್ಬನೂ ತನ್ನನ್ನು ಮತ್ತೊಬ್ಬನ ಮೇಲೆ ಏರಿಸಿಕೊಳ್ಳದಿರಲೆಂದು ಹಾಗೆ ಮಾಡಿದ್ದುಂಟು! ನಿಮ್ಮ ನಿರ್ಮಾಣ ಯಾವ ರೀತಿ ಆಯ್ತು ಎಂಬುದನ್ನು ಯಾವಾಗಲೂ ನಿಮ್ಮೊಳಗೆ ನೀವು ಪಾರ್ಯಲೋಚಿಸುತ್ತಿರಿ! ಒಂದೇ ದ್ರವ್ಯದಿಂದ ನಾವು ನಿಮ್ಮನ್ನೆಲ್ಲಾ ನಿರ್ಮಿಸಿರುವೆವು! ಕಾರಣ: ಒಂದೇ ಜೀವವಾಗಿ ನೀವು ಬಾಳಿರಿ! ನಿಮ್ಮ ನಡೆಯಲ್ಲಿ ಈ ಏಕತೆಯಿರಲಿ! ಊಟದಲ್ಲಿ ಸಾಮರಸ್ಯವಿರಲಿ! ಒಂದೇ ನೆಲದ ಮೇಲೆ ನೀವು ವಾಸಿಸಿರಿ! ನಿಮ್ಮ ಜೀವ ಜೀವಾಳದಲ್ಲಿ, ನಿಮ್ಮ ಕರ್ತವ್ಯ ಕರ್ಮಗಳಲ್ಲಿ ಈ ಏಕತೆಯ ಕುರುಹುಗಳು ನಿರ್ಲಿಪûತೆಯ ಸಾರವೂ ಪ್ರಕಟಿತವಾಗಲಿ! ಓ ಬೆಳಕಿನ ತಳುಕೆ! ಇದು ನನ್ನ ಬುದ್ಧಿವಾದ ನಿಮಗೆ, ಅದನ್ನು ನೀವು ಲಕ್ಷಿಸಿದಲ್ಲಿ ಕಲ್ಪತರುವಿನಂತಹ ಅದ್ಭುತ ವೃಕ್ಷದಿಂದ ಬಂದ ಪಾವಿತ್ರ್ಯದ ಫಲ ನಿಮ್ಮದಾಗುವುದು!

69

ಓ ಚೈತನ್ಯದ ಚಿರಂಜೀವಿಗಳೆ!

ನೀವೇ ನನ್ನ ಕೋಶಾಗಾರ! ಏತಕ್ಕೆಂದರೆ ನಿಮ್ಮೊಳಗೆ ನನ್ನ ರಹಸ್ಯಗಳ ಮೌಕ್ತಿಗಳನ್ನೂ, ಸುಜ್ಞಾನದ ಪದ್ಮರಾಗಗಳನ್ನೂ ನಾನು ಗೌಪ್ಯವಾಗಿ ಇರಿಸಿದ್ದೇನೆ! ನನ್ನ ಸೇವಕರ ಗುಂಪಿನಲ್ಲಿರಬಹುದಾದ ಅಪರಿಚಿತರಿಂದ, ನನ್ನ ಜನಸಮುದಾಯದ ಮಧ್ಯದಲ್ಲಿರುವ ಪಾಷಂಡಿಗಳಿಂದ ಅವುಗಳನ್ನು ರಕ್ಷಿಸಿಕೊಳ್ಳಿರಿ!

70

ಯಾವಾತನು ತನ್ನ ಜೀವಾತ್ಮದ ರಾಜ್ಯದಲ್ಲಿ ತನ್ನದೇ ಆದ ವ್ಯಕ್ತಿಮತ್ವವನ್ನು ನಂಬಿನಿಂತನೋ ಆತನ ಆತ್ಮಜನೆ! ಇದನ್ನು ತಿಳಿದುಕೊಳ್ಳು ನಾನು ಪವಿತ್ರತೆಯ ಪರಿಮಳಗಳೆಲ್ಲವನ್ನೂ ನಿನ್ನೆಡೆಗೆ ಪಸರಿಸುವಂತೆ ಮಾಡಿದ್ದೇನೆ. ನನ್ನ ನುಡಿಯನ್ನು ನಿನಗೆ ಪೂರ್ತಿ ಒಡನುಡಿದಿದ್ದೇನೆ. ನನ್ನ ಔದಾರ್ಯವನ್ನು ನಿನ್ನ ದ್ವಾರಾ ಪರಿಪೂರ್ಣಗೊಳಿಸಿದ್ದೇನೆ! ನನ್ನ ಸ್ವಂತಕ್ಕೆ ಏನನ್ನು ನಾನು ಅಪೇಕ್ಷಿಸಿಕೊಂಡಿರುವೆನೋ ಅದನ್ನೇ ನಿನಗಾಗಿಯೂ ಅಪೇಕ್ಷಿಸಿಕೊಂಡಿದ್ದೇನೆ. ಎಂದ ಮೇಲೆ ನನ್ನ ಸಂತೋಷದಿಂದ ನೀನು ಸಂತೃಪ್ತನಾಗಿರು! ನನಗೆ ಕೃತಜ್ಞನಾಗಿರು!

71

ಓ ಮಾನವತನುಜನೆ!

ನಿನಗೆ ನಾವು ಪ್ರದರ್ಶಿಸಿರುವುದೆಲ್ಲವನ್ನೂ ಬೆಳಕಿನ ಶಾಯಿಯಿಂದ ನಿನ್ನ ಆತ್ಮದ ಫಲಕದ ಮೇಲೆ ಬರೆದಿಡು! ಹೀಗೆ ಮಾಡುವುದು ನಿನ್ನ ಸಾಮಥ್ರ್ಯಕ್ಕೆ ಮಿರಿದ್ದಾದರೆ ನಿನ್ನ ಹ್ಲದಯದ ಸಾರಸತ್ವವನ್ನೇ ಶಾಯಿಮಾಡಿಕೊಳ್ಳು! ಅದನ್ನು ಮಾಡಲೂ ನಿನ್ನ ಕೈಯಲ್ಲಿ ಆಗದಿದ್ದರೆ ನನ್ನ ಪಥ್ಯದಲ್ಲಿ ಸುರಿದು ಬಿದ್ದಿರುವ ಕುಂಕುಮಗೆಂಪು ಮಸಿಯಿಂದ ಬರೆದಿಡು! ನಾನು ಒಡನುಡಿದುದನ್ನೆಲ್ಲ ಯಾವ ರೀತಿಯಿಂದ ಬರೆದಿಟ್ಟರೂ ಸರಿ. ಉಳಿದೆಲ್ಲಕ್ಕಿಂತ ನನಗೆ ಮಧುರತಮ ವಿಷಯ ಯಾವ್ಯದೆಂದರೆ, ಆ ನುಡಿಯ ಬೆಳಕು ಶಾಶ್ವತವಾಗಿ ಉಳಿದಿರಬೇಕೆಂಬುದು!

Persian

1

ಓ ಜಿಜ್ಞಾಸುಗಳೂ ಶ್ರವಣಪ್ರಿಯರೂ ಆದ ಜನರೆ!

ಸಂಪ್ರೀತನ ಪ್ರಪ್ರಥಮ ಕರೆಯೇ ಇದು: ಓ ನಿಗೂಢ ಬುಲ್ ಬುಲ್ ಪಕ್ಷಿಯೆ! ಆತ್ಮದ ಗುಲಾಬಿ ತೋಟದಲ್ಲಲ್ಲದೆ ಬೇರೆ ಎಲ್ಲಿಯೂ ವಾಸಿಸಬೇಡ! ಓ ಪ್ರೇಮ ಚಕ್ರವರ್ತಿ ಸಾಲೋಮನ್ನ ಓಲೆಕಾರನೇ! ಸಂಪ್ರೀತನ ಶೀಬಾಪುರವನ್ನುಳಿದು ಬೇರೆ ಎಲ್ಲಿಯೂ ಆಶ್ರಯವನ್ನು ಆರಸದಿರು! ಓ ಅಮರ ಫೀನಿಕ್ಸ್ ಪq್ಷಯೆ! ನಂಬಿಗಸ್ಥನ ಬೆಟ್ಟದ ಮೇಲಲ್ಲದೆ ಬೇರೆ ಎಲ್ಲಿಯೂ ನೆಲಸಬೇಡ! ನಿನ್ನ ಆತ್ಮದ ರೆಕ್ಕೆಗಳಿಂದ ಅನಂತದ ರಾಜ್ಯಕ್ಕೆ ಉಡ್ಡಣಿಸು! ನಿನ್ನ ಗುರಿಮುಟ್ಟಲು ಹವಣಿಸು! ಅದೇ ನಿನ್ನ ನೆಲೆವೀಡು!

2

ಓ ದೇವಾತ್ಮ ಸಂಜಾತನೆ!

ವಿಹಗ ತನ್ನ ಗೂಡಿಗಾಗಿ ಅರಸುತ್ತದೆ ಬುಲ್ ಬುಲ್ ಪಕ್ಷಿ ಗುಲಾಬಿಯ ಮನೋಹರತೆಯನ್ನು ಅಪೇಕ್ಷಿಸುತ್ತದೆ. ಆದರೆ ಮತ್ರ್ಯರ ಹೃದಯಗಳೆಂಬ ಹಕ್ಕಿಗಳು ಅಸ್ಥಿರವಾದ ಮಣ್ಣು ಹುಡಿಯಿಂದ ತೃಪ್ತಿಗೊಂಡು ತಮ್ಮ ಶಾಶ್ವತ ನೆಲೆಯಿಂದ ಬಹುದೂರ ಸರಿದಿವೆ. ನಿರ್ಲಕ್ಷ್ಯವೆಂಬ ಜವುಳು ಪ್ರದೇಶದ ರೊಜ್ಜಿನೆಡೆಗೆ ತಮ್ಮ ದೃಷ್ಟಿ ತಿರುಗಿಸಿಕೊಂಡು ದಿವ್ಯಸನ್ನಿಧಿಯ ವೈಭವವನ್ನು ಕಳೆದುಕೊಂಡಿವೆ! ಆಯ್ಯೋ ಎಷ್ಟು ವಿಲಕ್ಷಣ! ಎಷ್ಟೊಂದು ಶೋಚನೀಯ. ಕೇವಲ ಒಂದು ಬಟ್ಟಲು ಪಾನೀಯಕ್ಕಾಗಿ ಸರ್ವೋತ್ತಮನ ಮಹೋರ್ಮಿಸಾಗರದ ಕಡೆಗೆ ಬೆನ್ನು ತಿರುಗಿಸಿದ್ದಾರೆ ಜನ! ಅತ್ಯಂತ ಪ್ರಕಾಶಮಯವಾದ ಕ್ಷಿತಿಜದಿಂದ ಬಲುದೂರ ನಿಂತಿದ್ದಾರೆ.

3

ಓ ಮಿತ್ರನೆ!

ನಿನ್ನೆದೆಯ ಉದ್ಯಾನದಲ್ಲಿ ಪ್ರೇಮಗುಲಾಬಿಯ ಹೊರತು ಬೇರೆ ಏನನ್ನೂ ನೆಡಬೇಡ! ಪ್ರೀತಿ – ಆಕಾಂಕ್ಷೆಗಳ ಬುಲ್ ಬುಲ್ ಪಕ್ಷಿಯ ಮೇಲಿನ ನಿನ್ನ ಹಿಡಿತವನ್ನು ಸಡಿಲಿಸಬೇಡ! ಧರ್ಮಶೀಲರ ಸಂಗವನ್ನು ಅಮೂಲ್ಯನಿಧಿಯೆಂದು ಪರಿಗಣಿಸು, ಅಧರ್ಮಿಗಳ ಸಹವಾಸವನ್ನು ಪ್ರರ್ತಿಯಾಗಿ ತೊರೆದಿರು!

4

ಓ ನ್ಯಾಯವೆಂಬ ತತ್ವದ ನೈಜ ಔರಸನೆ!

ಪ್ರೇಮಿ ತನ್ನ ಪ್ರೇಯಸಿಯ ನಾಡಿಗಲ್ಲದೆ ಮತ್ತೆಲ್ಲಿಗೆ ಹೋದಾನು? ಯಾವ ಅನ್ವೇಷಕ ತನ್ನ ಎದೆಯಾಸೆಗೆ ದೂರವಾಗಿ ವಿಶ್ರಾಂತಿ ಪಡೆದಾನು? ನೈಜಪ್ರೇಮಿಗೆ ಪುನರ್ ಮಿಲನವೇ ಜೀವನವು. ಸೇರ್ಪಡೆ ಜೀವನವಾದರೆ ಬೇರ್ಪಡೆಯೇ ಮರಣ. ಅವನ ಎದೆಯಲ್ಲಿ ಸಹನೆಯೆಂಬುದು ಶೂನ್ಯ, ಅವನ ಹೃದಯಕ್ಕೆ ಶಾಂತಿಯೇ ಇಲ್ಲ. ತನ್ನ ಪ್ರೇಯಸಿಯ ನಿವಾಸಕ್ಕೆ ತ್ವರೆಯಿಂದ ಹೋಗುವುದಕ್ಕಗಿ ಅವನು ಸಾವಿರ ಜೀವಿತಗಳನ್ನಾದರೂ ಬಿಟ್ಟು ಕೊಡಬಲ್ಲನು.

5

ಓ ಮಣ್ಣಿನ ಮಗನೆ!

ನಿಜವಾಗಿ ಇದನ್ನು ನಿನಗೆ ನಾನು ಹೇಳುತ್ತಿರುವೆ ತನ್ನ ಸಹೋದರನಿಗಿಚಿತ ತಾನೇ ಮೇಲಾಗುವ ಆಸೆಯಿಂದ ಮೈಗಳ್ಳನಾಗಿ ವಾದ ಮಾಡುವವ ಅತ್ಯಂತ ಹೊಣೆಗೇಡಿಯಾದವನು! ಅಣ್ಣತವ್ಮ್ಮಂದಿರೇ! ಮಾತಲ್ಲ ಮಾಳ್ಕೆಗಳು ನೀವೆಲ್ಲರೂ ಪಡೆಯುವ ಅಲಂಕಾರವಾಗಲಿ!

6

ಓ ಇಳೆಯಣುಗನೆ!

ಸ್ಪಷ್ಟವಾಗಿ ಇದನ್ನು ತಿಳಿ! ಯಾವಾತನ ಎದೆಯೊಳಗೆ ಅಸೂಯೆಯ ಲವಲೇಶ ಇನ್ನೂ ಮನೆಮಾಡಿದೆಯೇ ಆತ ಎಂದಿಗೂ ನನ್ನ ಅಮರ ಸ್ವರಾಜ್ಯದಲ್ಲಿ ಸೇರಲಾರ! ಪಾವಿತ್ರ್ಯದ ತವರಾದ ನನ್ನ ಪಾವನತೆಯ ಮಧುರ ಸುಗಂಧಗಳನ್ನು ಆಘ್ರಾಣಿಸಲಾರ!

7

ಓ ಪ್ರೇಮಕುಮಾರನೆ!

ಮೇಲಣ ವೈಭವಯುಕ್ತ ಉನ್ನತ ಶ್ರೇಣಿಗಳಿಂದ, ಪ್ರೇಮದ ಕಲ್ಪವೃಕ್ಷದಿಂದ ನೀನು ಒಂದೇ ಹೆಜ್ಜೆ ಈಚೆ ಇದ್ದೀಯೆ! ಒಂದೇ ಒಂದು ಹೆಜ್ಜೆಯಿಡು! ಅದರ ಮುಂದಣ ಹೆಜ್ಜೆಯಿಂದಲೇ ನೀನು ಅಮರ ಸ್ವಾರಾಜ್ಯಕ್ಕೆ ಮುಂಬರಿದು ಆನಚಿತತೆಯ ಮಂಟಪವನ್ನು ಪ್ರವೇಶಿಸುತ್ತೀಯೆ! ಅಂತೇ ಪ್ರಭುಸಮ್ಮಿತದ ಪ್ರಭೆಯ ಲೇಖನಿಯು ಯಾವುದನ್ನು ನಿನಗೆ ಅವಿಷ್ಕರಿಸಿದೆಯೋ ಅದಕ್ಕೆ ಕಿವಿಗೊಡು!

8

ಓ ವೈಭವಸಂಭವನೆ!

ಪವಿತ್ರತೆಯ ಪಥದಲ್ಲಿ ಶೀಘ್ರಗಾಮಿಯಾಗು! ನನ್ನ ಸಂಸರ್ಗದ ಸ್ವರ್ಗವನ್ನು ಪ್ರವೇಶಿಸು! ನಿನ್ನ ಹೃದಯವನ್ನು ಆತ್ಮ ಚೈತನ್ಯದ ಶಾಂತಿಯಿಂದ ಶುಚಿಗೊಳಿಸು! ಸರ್ವೋತ್ತುಂಗನ ಸಭೆಗೆ ತ್ವರೆಯಿಂದ ನಡೆ!

9

ಓಡುತ್ತಿರುವ ನೆರಳೆ, ಓ!

ಸಂಶಚಿiÀುದ ನಿಕೃಷ್ಟಸ್ತರಗಳನ್ನು ರಾದಾ ನಿಶ್ಚಿತ ಜ್ಞಾನದ ಉಚ್ಚಶ್ರೇಣಿಗಳನ್ನೇರು! I್ಮತದ ಹಣೆಗಣ್ಣನ್ನು ತೆರೆ! ಆಗ ಮುಚ್ಚುಮರೆಯಿಲ್ಲದೆ ಸೌಂದರ್ಯವನ್ನು ನೀನು ಅವಲೋಕಿಸಬಲ್ಲೆ! ಆಗ ನೀನು ಉದ್ಗರಿಸುವಿ; ಬ್ರಹ್ಮರಲ್ಲೆಲ್ಲ ಸರ್ವೋತ್ತಮನಾದ ಪುರುಷೋತ್ತಮನಿಗೆ ಜಯಜಯಕಾರವಿರಲಿ!

10

ಓ ಕಾಮನಂದನನೆ!

ಕಿವಿಗೊಟ್ಟು ಕೇಳು! ಅಳಿವಿಲ್ಲದ ಲಾವಣ್ಯವನ್ನು ಅಳಿದು ಹೋಗುವ ಅಕ್ಷಿ ಎಂದೂ ಗುರುತಿಸಲಾರದು. ಜೀವನ್ ಮೃತ ಆನಂದವನ್ನು ಹೊಂದುವುದು. ಜಗತ್ತಿನ ನಿಯಮವೇ ಹೀಗೆ! ಸಾಮ್ಯವಿದ್ದುದೇ ಗಮ್ಯವಾಗುವುದು. ತನ್ನ ಮಾದರಿ, ತನ್ನ ವರ್ಗಕ್ಕೆ ಹೊಂದಿರುವುದೇ ಆನಂದವನ್ನು ಕೊಡುವುದು!

11

ಓ ಮಣ್ಣಿನ ಮಗನೆ!

ನಿನ್ನ ಕಣ್ಣುಗಳನ್ನು ಕುರುಡಾಗಿಸು! ಅಂದರೆ ನನ್ನ ಸೌಂದರ್ಯವನ್ನು ನೀನು ಕಣ್ತುಂಬ ನೋಡುವಿ! ನಿನ್ನ ಕಿವಿಗಳನ್ನು ಮುಚ್ಚಿಕೊಂಡು ತೆಪ್ಪನಾಗು! ಅಂದರೆ ನನ್ನ ಧ್ವನಿಯ ಮಧುರ ಸ್ವರವನ್ನು ನೀನು ಕೇಳುವಿ! ಎಲ್ಲ ವಿದ್ವತ್ತನ್ನೂ ನಿನ್ನಿಂದ ತೆಗೆದೊಗೆದು ನೀನು ತೆರವಾಗು! ಆಗ ನನ್ನ ಪ್ರಜ್ಞಾನದಲ್ಲಿ ನೀನು ಸಹಭಾಗಿಯಾಗುವಿ! ಐಶ್ವರ್ಯದ ಮೈಲಿಗೆಯನ್ನು ಕಳೆದುಕೊಂಡು ನೀನು ಮಡಿವಂತನಾಗು! ಆಗ ಚಿರಂತನ ಸಂಪತ್ತಿನ ಮಹಾಸಾಗರದ ಒಂದು ಶಾಶ್ವತಾಂಶ ನಿನ್ನದಾಗುವುದು! ನಿನ್ನ ಕಣ್ಣು ಗಳನ್ನು ಕುರುಡಾಗಿಸಿಕೊಳ್ಳು. ಎಂದರೆ ನನ್ನ ಸೌಂದರ್ಯವೊಂದನ್ನುಳಿದು ಎಲ್ಲದಕ್ಕೂ ನಿನ್ನ ಕಣ್ಣು ಗಳನ್ನು ಕುರುಡಾಗಿಸು! ನನ್ನ ಶೃತಿಯೊಂದನ್ನುಳಿದು ಮಿಕ್ಕಿದೆಲ್ಲದಕ್ಕೆ ನಿನ್ನ ಕಿವಿ ಮುಚ್ಚಿಕೋ! ನನ್ನನ್ನು ಕುರಿತ ಜ್ಞಾನವೊಂದನ್ನುಳಿದು ಮಿಕ್ಕಿದೆಲ್ಲ ವಿದ್ವತ್ತನ್ನು ಬಿಸುಟಿ ಹಾಕು! ಆಗ ನಿನ್ನ ನಿಚ್ಚಳ ಕಾಣ್ಕೆಯಿಂದ, ನಿಷ್ಠಾಮಯ ಶ್ರವಣದಿಂದ, ಪೂತ ಹೃದಯದಿಂದ ನನ್ನ ಆಸ್ಥಾನವನ್ನು ಪ್ರವೇಶಿಸಲು ನೀನು ಅರ್ಹನಾಗುವಿ!

12

ಓ ಇಬ್ಭಾಗವಾದ ಕಾಣ್ಕೆಯುಳ್ಳವನೆ!

ಒಂದು ಕಣ್ಣನ್ನು ಮುಚ್ಚಿಕೊಂಡು ಇನ್ನೊಂದನ್ನು ತೆರೆ! ಪ್ರಪಂಚಕ್ಕೂ ಪ್ರಪಂಚದಲ್ಲಿರುವ ಎಲ್ಲದಕ್ಕೂ ಒಂದನ್ನು ಮುಚ್ಚು! ಇನ್ನೊಂದನ್ನು ಸಂಪ್ರೀತನ ಪವಿತ್ರ ಸೌಂದರ್ಯಕ್ಕೆ ತೆರೆ!

13

ಓ ನನ್ನ ಮಕ್ಕಳೆ!

ಯಾವಾಗಲೂ ನನಗೊಂದು ಭಯ ಎಲ್ಲಿ ನೀವುದ್ಯುಲೋಕದ ಬಿಳಿಪರಿವಾಳದ ಮಧುರ ಸಂಗೀತವನ್ನು ಮರೆತು, ಸಂಪೂರ್ಣ ನಾಶದ ನೆಳಲುಗಳಲ್ಲಿ ಪತನ ಹೊಂದುವಿರೋ ಎಂದು! ಗುಲಾಬಿಯ ಸೌಂದರ್ಯವನ್ನು ಎಚಿದೆಂದೂ ಕಣ್ತುಂಬ ನೋಡದ ನೀವು ದೈನಂದಿನದ ಕೆಸರು -ನೀರಿಗೆ ಮರುಳುವಿರೋ ಎಂದು!

14

ಓ ಗೆಳೆಯರಿರಾ!

ಮರಣಾಧೀನವಾದ ಚೆಲುವಿಗೋಸ್ಕರ ಶಾಶ್ವತ ಸೌಂದರ್ಯವನ್ನು ತ್ಯಜಿಸಬೇಡಿರಿ! ಮಣ್ಣಿನ ಈ ಮತ್ರ್ಯ ಪ್ರಪಂಚವನ್ನು ಕಂಡು ಅದನ್ನು ಮೋಹಿಸಬೇಡಿರಿ!

15

ಓ ದೇವಾತ್ಮಸಂಜಾತನೆ!

ಬರುತ್ತದೆ, ಆ ಕಾಲ ಬಂದೇ ಬರುತ್ತದೆ! ಪವಿತ್ರತೆಯ ಬುಲ್ ಬುಲ್ ಪಕ್ಷಿ ಅಂತರಂಗದ ರಹಸ್ಯಗಳನ್ನು ಒಡನುಡಿಯದಿರುವ ಕಾಲ ಬಂದೇ ಬರುತ್ತದೆ. ಆ ಸ್ವರ್ಗೀಯ ಸಂಗೀತ ಆಗ ನಿಮಗೆ ಕೇಳಲಾರದು. ಮೇಲಿನಿಂದ ಕೇಳಿ ಬರುತ್ತಿದ್ದ ದಿವ್ಯವಾಣಿಗೆ ಆಗ ನೀವು ಹೊರತಾಗುವಿರಿ.

16

ಓ ಹೊಣೆಗೇಡಿತನದ ಜೀವಜೀವಾಳವೆ!

ಅನೇಕಾನೇಕ ಗೂಢ ಜಿಹ್ವೆಗಳು ಒಂದೇ ಒಂದು ವಾಗ್ ಝರಿಯಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಒಂದೇ ಒಂದು ಸುಸ್ವರ ವಿನ್ಯಾಸದಲ್ಲಿ ಅಸಂಖ್ಯಾತ ಗುಪ್ತರಹಸ್ಯಗಳು ಕೇಳಿಸಿಕೊಳ್ಳುತ್ತವೆ! ಆದರೂ, ಆಚಿiÉ್ಯೂೀ! ಆಲಿಸುವ ಕಿವಿಯೇ ಇಲ್ಲ, ಅರ್ಥಗ್ರಹಿಸುವ ಹೃದಯವೇ ಇಲ್ಲ!

17

ಓ ಒಡನಾಡಿಗಳೆ!

ನಿಃಸ್ಥಲದ ಹೊರಬಾಗಿಲು ಅಗಲವಾಗಿ ತೆರೆದುಕೊಂಡಿದೆ ಸಂಪ್ರೀತನ ಗೃಹವು ಪ್ರೇಮಾಸ್ಪದನ ಶೋಣಿತದಿಂಡ ಅಲಂಕೃತವಾಗಿದೆ; ಆದರೂ ಕೆಲವೇ ಕೆಲವರನ್ನುಳಿದು ಮಿಕ್ಕ ಎಲ್ಲರ ಪಾಲಿಗೂ ಈ ಸ್ವರ್ಗೀಯ ಪುರ ಇಲ್ಲವೇ ಇಲ್ಲದಂತೆ ಆಗಿದೆ; ಆ ಕೆಲವೇ ಕೆಲವರಲ್ಲಿ ಕೂಡ ಅತಿ ಅಲ್ಪಸಂಖ್ಯೆ ವಿನಾ ಮಿಕ್ಕವರಾರಿಗೂ ಪರಿಶುದ್ಧ ಹ್ಲದಯವಿಲ್ಲ ಪವಿತ್ರೀಕೃತ ಆತ್ಮವಿಲ್ಲ.

18

ಓ ಉಚ್ಚತಮ ನಂದನದ ನಿವಾಸಿಗಳೆ!

ಚೃಢಶ್ರದ್ಧೆಯ ಪ್ಯತ್ರರಿಗೆ ಹೀಗೆ ಘೋಷಣೆಗೈಯಿರಿ: ಪವಿತ್ರತೆಯ ಸ್ವಾರಾಜ್ಯದಲ್ಲಿ ಸ್ವರ್ಗೀಯ ನಂದನದ ಸಮಿಪದಲ್ಲಿಯೇ ನೂತನವಾದೊಂದು ತೋಟ ಉದ್ಭವಗೊಂಡಿದೆ. ಉನ್ನತ ಸ್ವಾರಾಜ್ಯದ ಪೌರರೂ ಉನ್ನತತಮ ನಂದನದ ಅಮರ ನಿವಾಸಿಗಳೂ ಅದಕ್ಕೆ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಅಂದಮೇಲೆ ಆ ಸ್ಥಾನವನ್ನು ಪಡೆಯುವುದಕ್ಕಾಗಿ ನೀವು ಪ್ರಯತ್ನಪಡಿರಿ! ಆಗ ಅದರ ವಾತ-ಕುಸುಮಗಳಿಂದ ಪ್ರೇಮರಹಸ್ಯಗಳನ್ನು ನೀವು ಬಿಡಿಸಿ ತೋರಿಸಬಹುದು! ಆದರ ಚಿರಂತನ ಫಲಗಳಿಂದ ದೈವಿಕವೂ ಪರಿಪೂರ್ಣವೂ ಆದ ಸುವಿವೇಕದ ರಹಸ್ಯವನ್ನು ನೀವು ಕಲಿಯಬಹುದು. ಅದರೊಳಕ್ಕೆ ಪ್ರವೇಶಿಸಿ ಅಲ್ಲಿ ನೆಲೆಸುವವರ ಕಣ್ಣುಗಳು ಸಮಾಧಾನ ಪೂರಿತವಾಗಿರುತ್ತವೆ.

19

ಓ ನನ್ನ ಸ್ನೇಹಿತರೇ!

ಆ ನೈಜ, ಉಜ್ಜಲ ಪ್ರಾತಃ ಕಾಲವನ್ನು ನೀವು ಮರೆತು ಬಿಟ್ಟಿದ್ದೀರಾ? ಅಚಿದು ಆ ಪವಿತ್ರ ದೈವೀಕೃಪಾಪಾತ್ರ ಪರಿಸರದಲ್ಲಿ, ಜೀವನವೃಕ್ಷದ ನೆಳಲಿನಡಿಗೆ, ನನ್ನ ಸನ್ನಿಧಿಯಲ್ಲಿ ನನ್ನ ಸಮ್ಮುಖದಲ್ಲಿ ನೀವೆಲ್ಲ ಸೇರಿದ್ದಿರಿ! ವೈಭವ ಪೂರ್ಣ ನಂದನದಲ್ಲಿ ಆ ಜೀವನ ವೃಕ್ಷವನ್ನು ನೆಡಲಾಗಿತ್ತು. ಆಗ ನಾನು ಉಚ್ಛರಿಸಿದ ಈ ಮೂರು ಪವಿತ್ರತಮ ಉಕ್ತಿಗಳನ್ನು ನೀವು ದಂಗುಬಡಿದವರಾಗಿ ಆಗ ಕಿವಿಯಾರೆ ಕೇಳಿದಿರಿ: ನನ್ನ ಇಚ್ಛೆಗಿಂತ ನಿಮ್ಮ ಇಚ್ಛೆ ಮಹತ್ವದ್ದೆಂದು ತಿಳಿಯದಿರಿ! ನಾನು ಏನನ್ನು ನಿಮಗಾಗಿ ಅಪೇಕ್ಷಿಸಿಲ್ಲವೋ ಅದನ್ನೆಂದಿಗೂ ನೀವು ಅಪೇಕ್ಷಿಸದಿರಿ!

ಐಹಿಕ ಆಸೆಗಳಿಂದಲೂ ವಾಸನೆಗಳಿಂದಲೂ ಮಲಿನವಾದ ಹೃದಯಗಳನ್ನು ಹೊಂದಿ ನನ್ನೆಡೆಗೆ ಬರಬೇಡಿರಿ! ನಿಮ್ಮ ಆತ್ಮಗಳ ಪವಿತ್ರತೆಯನ್ನು ನೀವು ಕಾಯ್ದುಕೊಂಡಿದ್ದಲ್ಲಿ ಆ ಸ್ಥಾನವನ್ನೂ ಆ ಪರಿಸರವನ್ನೂ ಈ ಕ್ಷಣಕ್ಕೆ ಸಹ ನೀವು ಜ್ಞಾಪಿಸಿಕೊಳ್ಳಬಲ್ಲಿರಿ! ನಿಮ್ಮೆಲ್ಲರಿಗೂ ನನ್ನ ಉಕ್ತಿಯ ಸತ್ಯ ಆಗಿಂದಾಗ ಸುಸ್ಪಷ್ಟವಾದೀತು!

20

ಪರಮಾನಂದ ಲೋಕದ ಐದನೆಯ ಫಲಕದಲ್ಲಿ, ಪವಿತ್ರತಮಿ ಪಂಕ್ತಿಗಳ ಎಂಟನೆಯದರಲ್ಲಿ ಆತ ಹೇಳುತ್ತಾನೆ: ಓ ಹೊಣಗೇಡಿತನದ ಪರ್ಯಂಕದ ಮೇಲೆ ಮೃತ್ಯುವಶರಾದವರೆಂದ ಬಿದ್ದಿರುವವರೆ!

ಯುಗಗಳು ನಶಿಸಿ ಹೋಗಿವೆ ನಿಮ್ಮ ಪ್ರಶಸ್ತ ಜೀವನ ಇನ್ನೇನು ಅಂತ್ಯಗೊಳ್ಳಲಿದೆ; ಆದರೂ ನಿಮ್ಮ ಕಡೆಯಿಂದ ನಮ್ಮ ಪವಿತ್ರತೆಯ ಆಸ್ಥಾನಕ್ಕೆ ನಿಮ್ಮ ಪರಿಶುದ್ಧಿಯ ಒಂದು ಸುಳಿ ಕೂಡ ಬಂದಿಲ್ಲ. ಮಿಥ್ಯಾಶ್ರದ್ಧೆಗಳ ಮಹಾಂಬುಧಿಯಲ್ಲಿ ಮುಳುಗಿದ್ದರೂ ನೀವು ದೇವರ ಏಕೈಕ ನಿಜಧರ್ಮವನ್ನು ನಂಬಿದ್ದೇವೆಂದು ತುಟಿಮಾತು ಆಡುತ್ತಿದ್ದೀರಿ. ಯಾರನ್ನು ಕಂಡು ನನಗೆ ಆಸಹ್ಯವೋ ಅವನ ಮೇಲೆ ನಿಮಗೆ ನಲ್ಮೆಯಿದೆ: ನನ್ನ ವೈರಿಯನ್ನು ನೀವು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದೀರಿ. ಹೀಗಿದ್ದರೂ ಅತಿ ತೃಪ್ತರಾಗಿ ಎಗ್ಗಿಲ್ಲದೆ ನನ್ನ ಭೂಮಿಯ ಮೇಲೆ ನೀವು ಸಂಚರಿಸುತ್ತಿದ್ದೀರಿ; ನನ್ನ ಭೂಮಿಗೆ ನಿಮ್ಮನ್ನು ಕಂಡು ಬೇಸರಿಕೆ ಎಂಬುದನ್ನೂ ಭೂಮಿಯ ಪ್ರತಿಯೊಂದು ಪದಾರ್ಥವೂ ನಿಮ್ಮನ್ನು ಹತ್ತಿರ ಬರಗೊಡಿಸುವುದಿಲ್ಲ ಎಂಬುದನ್ನೂ ಅ¯ಕ್ಷಿಸಿದ್ದೀರಿ. ನಿಮ್ಮ ಕಣ್ಣುಗಳನ್ನು ಸುಮ್ಮನೆ ತೆರೆದರೆ ಸಾಕು, ದಿಟವಾಗಿ ನಿಮಗೆ ಈ ಸೌಖ್ಯಕ್ಕಿಂತ ಒಂದು ಸಾವಿರ ದುಃಖಗಳು ಹಿತವೆನ್ನಿಸಬಹುದು. ಈ ತರಹದ ಜೀವನಕ್ಕಿಂತ ಮರಣವೇ ಲೇಸು ಎಂದು ನಿಮಗನ್ನಿಸಬಹುದಾ!

21

ಓ ಚಲಿಸುವ ಮಣ್ಣಿನಾಕೃತಿಯೇ!

ನಿನ್ನೊಡನೆ ಸಂಭಾಷಣೆಗಾಗಿ ನನ್ನ ಅಪೇಕ್ಷೆಯಿದೆ. ಆದರೆ ನನ್ನನ್ನು ನೀನು ಎಳ್ಳಷ್ಟೂ ನಂಬಲೊಲ್ಲೆ!

ನಿನ್ನ ಬಂಡಾಯದ ಖಡ್ಗವಿದು ನಿನ್ನ ಆಶಾಪ್ರರ್ಣತೆಯ ವೃಕ್ಷವನ್ನೇ ಕಡಿದುಹಾಕಿದೆ! ಎಲ್ಲ ಸಮಯದಲ್ಲೂ ನಾನು ನಿನ್ನ ಸಮಿಪದಲ್ಲಿಯೇ ಇರುತ್ತೇನೆ, ಆದರೆ ಯಾವಾಗಲೂ ನೀನು ನನ್ನಿಂದ ದೂರವಾಗಿದ್ದೀಯೇ! ನಿನಗಾಗಿ ನಾನು ಅವಿನಾಶ ವೈಭವವನ್ನು ಆಯ್ದಿಟ್ಟಿದ್ದೇನೆ. ಆದರೂ ನೀನು ಅಪಾರ ಅಪಮಾನವನ್ನು ನಿನಗೋಸ್ಕರ ಚುನಾಯಿಸಿ ಕೊಂಡಿದ್ದೀಯೇ! ಕಾಲ ಮಿಂಚಿಹೋಗುವ ಮುನ್ನ ಹಿಂದಿರುಗು! ನಿನಗಿರುವ ಸದವಕಾಶವನ್ನು ಕಳೆದುಕೊಳ್ಳಬೇಡ!

22

ಓ ಆಕಾಂಕ್ಷೆಯ ಕುವರನೆ!

ಪಂಡಿತರೂ ಬುದ್ಧಿವಂತರೂ ಅನೇಕ ಸಂವತ್ಸರಗಳವರೆಗೆ ಹೆಣಗಾಡಿದರೂ ಸರ್ವವೈಭವೇಶನಾದ ನನ್ನ ಸನ್ನಿಧಿಯನ್ನು ಪಡೆಯಲಾರದೆ ಹೋದರು. ಆತನ ಅನ್ವೇಷಣೆಯಲ್ಲಿ ತಮ್ಮ ಜೀವಮಾನವನ್ನೆಲ್ಲ ಅವರು ಕಳೆದರು. ಆದರೆ ಆತನ ಮುಖದ ಸೌಂದರ್ಯವನ್ನು ಅವಲೋಕಿಸಲಿಲ್ಲ! ಸ್ವಲ್ಪವಾದರೂ ಪ್ರಯಾಸಪಡದೆ ನೀನು ನಿನ್ನ ಗುರಿ-ಯಾವುದನ್ನು ಬೋಧಿಸುತ್ತಿದ್ದೆಯೋ ಅದನ್ನು ಯಾವ ಹುಡುಕಾಟವೂ ಇಲ್ಲದೆ ಪಡೆದುಕೊಂಡಿದ್ದೀಯೆ! ಹೀಗಿದ್ದರೂ ಸಹ ನೀನು ನಿನ್ನ ಅಹಮ್ಮಿನ ಮಾಯೆಯ ಮುಸುಕಿನಲ್ಲಿ ಬಹಳ ಸಿಕ್ಕಿಕೊಂಡಿದ್ದೀಯೆ. ಸಂಪ್ರೀತನ ಸೌಂದರ್ಯದ ಮೇಲೆ ನಿನ್ನ ದೃಷ್ಟಿ ಅಡಿಲ್ಲ. ಆತನ ನಿಲುವಂಗಿಯ ತುದಿಯಂಚನ್ನು ನಿನ್ನ ಕೈಗಳು ಸ್ಪರ್ಶಿಸಿಲ್ಲ. ಕಣ್ಣಿದ್ದವರೇ! ಕಣ್ದೆರೆದು ನೋಡಿ ವಿಸ್ಮಿತರಾಗಿರಿ!

23

ಓ ಪ್ರೇಮಪುರದ ನಿವಾಸಿಗಳಿರಾ!

ಮತ್ರ್ಯದ ಬಿರುಗಾಳಿಗಳು ಚಿರಂತನ ಮೇಣಬತ್ತಿಯನ್ನು ಸುತ್ತಿಕೊಂಡಿವೆ; ಸ್ವರ್ಗೀಯ ತಾರುಣ್ಯದ ಸೌಂದರ್ಯವು ಮಣ್ಣುಹ್ಮಡಿಯ ಅಂಧಕಾರದಲ್ಲಿ ಮರೆಮುಸುಕಾಗಿದೆ. ಪ್ರೇಮದ ನೃಪತಿಗಳ ಮುಖ್ಯಸ್ಥನಿಗೆ ಸರ್ವಾಧಿಕಾರ ದರ್ಪದ ಜನ ಅನ್ಯಾಯಮಾಡಿದ್ದಾರೆ. ಪವಿತ್ರತೆಯ ಪಾರಿವಾಳವು ಗೂಗೆಗಳ ಮೊನೆಯುಗುರುಗಳ ಮಧ್ಯೆ ಸಿಕ್ಕಿಕೊಂಡು ಬಂದಿಯಾಗಿ ಬಿದ್ದಿದೆ. ವೈಭವ ಮಂಟಪದ ಸ್ವರ್ಗದ ನಿವಾಸಿಗಳೂ ಹಲುಬುತ್ತಾ ರೋಧಿಸುತ್ತಿದ್ದಾರೆ. ನೀವಾದರೋ ಹೊಣೆಗೇಡಿ ಪ್ರಪಂಚದ¯ಲಿ ಹಾಯಾಗಿ ಮಲಗಿದ್ದೀರಿ. ನೈಜಮಿತ್ರರ ಗಣನೆಯಲ್ಲಿ ಸೇರಿದ್ದೀರೆಂದು ನೀವೇ ತಿಳಿದುಕೊಂಡಿದ್ದೀರಿ! ನಿಮ್ಮ ಕಲ್ಪನೆಗಳು ಎಷ್ಟೊಂದು ಅರ್ಥಶೂನ್ಯವಾಗಿವೆ!

24

ಓ ಬುದ್ಧಿಹೀನರಾದರೂ ಬುದ್ಧಿಶಾಲಿಗಳು ಎಂದು ಪ್ರತೀತಿ ಪಡೆದವರೆ!

ಒಳಗೊಳಗೆ ನೀವು ನನ್ನ ಕುರಿಮಂದೆಯ ಮೇಲೆ ಕಣ್ಣಿಟ್ಟಿರುವ ತೋಳಗಳಾಗಿದ್ದೀರಿ! ಏತಕ್ಕೆ ಕುರಿಗಾಹಿಗಳ ಸೊಗನ್ನು ಹೊರಗೆ ಹೀಗೆ ಧರಿಸುತ್ತೀರಿ? ಆದೊಂದು ನಕ್ಷತ್ರದಂತೆ ನೀವಿದ್ದೀರಿ.

ನಸುಕಿಗಿಂತ ಮೊದಲು ತೋರಿಸಿಕೊಂಡು ಕಿರಣ ಸೂಸುತ್ತ ಬೆಳಕು ಬೀರುವಂತೆ ಅದು ತೋರಿಬಂದರೂ ನನ್ನ ನಗರದೆಡೆ ನಡೆದ ದಾರಿಗರಿಗೆ ಎತ್ತೆತ್ತಲೋ ತಿರುಗುವಂತೆ ಹಾದಿತಪ್ಪಿಸಿ ಅವರನ್ನು ಆತ್ಮ ನಾಶದ ದಾರಿಗಳಿಗೆ ಕರೆದೊಯ್ಯುತ್ತದೆ.

25

ಓ ಹೊರಗೆ ಸುರೂಪಿಗಳಂತೆ ತೋರುತ್ತ ಒಳಗೆ ಕುರೂಪಿಗಳಾದವರೆ!

ತಿಳಿಯಾಗಿ ಕಾಣಿಸುತ್ತ ಕಹಿಯಾದ ನೀರಿನಂತೆಯೇ ನೀವಿದ್ದೀರಿ! ಅದು ಹೊರಗಡೆಗೆ ಸ್ಫಟಿಕ ಸ್ವಚ್ಛವಾಗಿ ತೋರಿಬಂದರೂ ದಿವ್ಯ ಪರೀಕ್ಶಕ ಅದನ್ನು ಶೋಧಿಸಿದಾಗ ಅದರ ಒಂದು ತೊಟ್ಟೂ ಸ್ವೀಕರಣೀಯವಲ್ಲ. ಹೌದು; ಸೂರ್ಯರಶ್ಮಿಯು ಧೂಳಿನ ಮೇಲೂ ದರ್ಪಣದ ಮೇಲೂ ಒಂದೇ ರೀತಿ ಬೀಳುತ್ತದೆ; ಆದರೂ ಅವುಗಳ ಪ್ರತಿ ಬಿಂಬನ ಬೇರೆಬೇರೆ- ನಕ್ಷತ್ರ ಭೂಮಿಯಿಂದ ಬ್ಭೆರೆಯಾಗಿರುವಂತೆ, ಅಷ್ಟೇ ಅಲ್ಲ, ಅವುಗಳ ನಡುವಿನ ವ್ಯತ್ಯಾಸ ಅಳತೆಗೆ ಮಾರಿದಷ್ಟಿದೆ!

26

ಓ ಪ್ರಪಂಚದಲ್ಲಿಯ ನನ್ನ ಮಿತ್ರನೆ!

ಸ್ವಲ್ಪ ಸಮಯ ಆಲೋಚಿಸಿ ನೋಡು! ಮಿತ್ರನೂ ಶತ್ರುವೂ ಒಂದೇ ಹೃದಯದಲ್ಲಿ ವಾಸಿಸಬೇಕೆಂಬುದನ್ನು ಎಂದಾದರೂ ಕೇಳಿದ್ದೀಯಾ? ಸರಿ, ಪರಕೀಯನನ್ನು ನೀನು ಹೊರಕ್ಕೋಡಿಸು. ನಿನ್ನ ಆಪ್ತ ಸಖ ಆಗ ತಾನಾಗಿಯೇ ಬಂದು ಸ್ವಗೃಹವನ್ನು ಸೇರಬಹುದು!

27

ಓ ಮಣ್ಣಿನ ಮಗನೆ!

ಮನುಷ್ಯ ಹೃದಯವೊಂದನ್ನುಳಿದು ಸ್ವರ್ಗಮತ್ರ್ಯಗಳಲ್ಲಿ ಇರುವುದೆಲ್ಲವನ್ನೂ ನಿನಗೋಸ್ಕರ ನಾನು ವಿಧಾಯಿಸಿದ್ದೇನೆ ಮತ್ರ್ಯ ಹೃದಯವನ್ನು ಮಾತ್ರ ನನ್ನ ಸೌಂದರ್ಯ ವೈಭವಗಳಿಗೆ ವಾಸಸ್ಥಾನವಾಗಿ ಮಾಡಿಕೊಂಡಿದ್ದೇನೆ. ಆದರೂ ನೀನು ನನ್ನ ಮನೆ ಮತ್ತು ನೆಲೆಬೀಡಾದ ನಿನ್ನ ಹೃದಯವನ್ನು ಬಿಟ್ಟು

ನನ್ನನ್ನು ಬೇರೊಬ್ಬನಿಗೆ ವಶ ಮಾಡಿದ್ದೀಯೆ; ಅಲ್ಲದೆ ನನ್ನ ಪವಿತ್ರತೆಯ ಅವತಾರ ತನ್ನ ನಿವಾಸವಾದ ನಿನ್ನ ಹೃದಯವನ್ನು ಹುಡುಕಿಕೊಂಡು ಬಂದಾಗೆಲ್ಲ ಅಲ್ಲಿ ಪರಕೀಯನೊಬ್ಬನನ್ನು ನೋಡಿದಿನು; ಹಾಗೂ ವಸತಿಶೂನ್ಯವಾಗಿ ಆತನು ಸಂಪ್ರೀತನ ಶರಣಾಲಯಕ್ಕೆ ತ್ವರೆಯಿಂದ ನಡೆಯಬೇಕಾಯಿತು.

ಹೀಗಾಗಿದ್ದರೂ ರಹಸ್ಯವಿದನ್ನು ನಾನು ಬಚ್ಚಿಟ್ಟಿದ್ದೇನೆ. ನಿನ್ನ ಅವಮಾನ ನನಗೆ ಇಷ್ಟವಿಲ್ಲ.

28

ಓ ಕಾಮದ ತಿರುಳೇ!

ಅನೇಕ ನಸುಕುಗಳಲ್ಲಿ ನಿಸ್ಥಲದ ರಾಜ್ಯಗಳಿಂದ ಹೊರಟು ನಿನ್ನ ನಿವಾಸಕ್ಕೆ ನಾನು ಬಂದೆನು; ಐಷಾರಾಮಿನ ಹಾಸಿಗೆಯಲ್ಲಿ ನಾನಲ್ಲದೆ ಅನ್ಯರೊಂದಿಗೆ ನೀನು ಸಲ್ಲಾಪ ಮಗ್ನನಾಗಿದ್ದುದನ್ನು ನೋಡಿದೆನು. ಕೂಡಲೆ ನಾನು ಆತ್ಮದ ಸೆಳೆಮಿಚಿನಂತೆ ಸ್ವರ್ಗೀಯ ವೈಭವದ ರಾಜ್ಯಗಳಿಗೆ ಮರಳಿದೆ. ಅಲ್ಲಿ ಮೇಲಿರುವ ವಿಶ್ರಾಂತಿಸ್ಥಾನಗಳಲ್ಲಿ ಆ ವಿಷಯವನ್ನು ಪವಿತ್ರ ಅತಿಥೇಯರಿಗೆ ನಾನು ಪಿಸುಗುಟ್ಟಲಿಲ್ಲ ಸಹ!

29

ಓ ಔದಾರ್ಯದ ಔರಸನೆ!

ಶೂನ್ಯತೆಯ ಹಾಳುಬೀಳುಗಳಲ್ಲಿ ನನ್ನ ಆಜ್ಞೆಯ ಕೆಸರು ಮಣ್ಣಿನಿಂದ ನೀನು ಮೂಡಿಬರುವಂತೆ ನಾನು ಮಾಡಿದೆನು. ಅಲ್ಲದೆ ವಿಶ್ವದಲ್ಲಿದ್ದ ಪ್ರತಿಯೊಂದ ಪರಮಾಣುವನ್ನೂ ಸೃಷ್ಟಿಯ ಸಮಸ್ತ ವಸ್ತುಗಳ ಸಾರಸತ್ವವನ್ನೂ ನಿನ್ನ ತರಬೇತಿಗಾಗಿ ನೇಮಿಸಿದ್ದೇನೆ! ಹೀಗೆಯೇ ತಾಯಿಯ ಗರ್ಭದಿಂಡ ನೀನು ಹೊರಬರುವುದಕ್ಕೆ ಮೊದಲೇ ನಿನಗಾಗಿ ಮಿನುಗುತ್ತಿಹ ಕ್ಷೀರದ ಎರಡು ಬುಗ್ಗೆಗಳನ್ನೂ ನಿನ್ನನ್ನು ನೋಡಿಕೊಳ್ಳಲು ನೇತ್ರಗಳನ್ನೂ, ಪ್ರೀತಿಸಲು ಹೃದಯಗಳನ್ನೂ ನಿರ್ದೇಶಿಸಿದೆ. ನನ್ನ ಕರುಣೆ- ಪ್ರೀತಿಗಳ ದ್ವಾರಾ ನನ್ನ ದಯೆಯ ನೆಳಲಿನಲ್ಲಿ ನಿನ್ನನ್ನು ನಾನು ಆರೈಕೆ ಮಾಡಿದೆನು; ನನ್ನ

ನಿವ್ರ್ಯಾಜ ಕರುಣೆ ಮತ್ತು ಅನುಗ್ರಹಗಳ ಸಾರಸತ್ವದಿಂದ ಸಂರಕ್ಷಿಸಿದೆನು. ಇದೆಲ್ಲದರಲ್ಲೂ ನನ್ನ ಉದ್ದೇಶ ಒಂದೇ ಒಂದಾಗಿದ್ದಿತು. ನೀನು ನನ್ನ ಚಿರಂತನ ಸ್ವಾರಾಜ್ಯದಲ್ಲಿ ಸೇರಿ ನನ್ನ ಆಗೋಚರ ದಾನಗಳಿಗೆ, ಅರ್ಹನಾಗಿರಬೇಕೆಂಬುದೇ ಅದಾಗಿದ್ದಿತು! ಹೀಗಿದ್ದರೂ ನೀನು ಅಜಾಗೃತನಾಗಿಯೇ ಉಳಿದೆ! ಪೂರಾ ಬೆಳೆದ ಕೂಡಲೇ ನನ್ನ ಕೊಡುಗೆಗಳನ್ನೆಲ್ಲ ಅಲಕ್ಷಿಸಿರುವುದಲ್ಲದೆ ನಿನ್ನ ಸ್ವಂತ ನಿರರ್ಥಕ ಕಲ್ಪನೆಗಳಲ್ಲಿ ಮುಳುಗಿ ಹೋದೆ! ಎಷ್ಟರಮಟ್ಟಿಗೆ ಎಂದರೆ, ಸಂಪೂರ್ಣ ವಿಸ್ಮೃತಿಗೆ ನೀನು ಒಳಗಾದೆ. ನಿನ್ನ ಸ್ನೇಹಿತನ ಹೆಬ್ಬಾಗಿಲಿನಿಂದ ಹೊರಬಿದ್ದು ನನ್ನ ಶತ್ರುವಿನ ಹಜಾರಗಳಲ್ಲಿ ವಾಸಮಾಡ ತೊಡಗಿದೆ!

30

ಓ ಪ್ರಪಂಚದ ಜೀತದಾಳೆ, ಗುಲಾಮನೆ!

ಅನೇಕ ಮುಂಜಾವುಗಳಲ್ಲಿ ನನ್ನ ಕರುಣೆ - ಪ್ರೀತಿಗಳ ಸುಳಿಗಾಳಿ ನಿನ್ನೆಡೆಗೆ ಬೀಸಿಬಂದಿತು. ಆದರೆ ಹೊಣೆಗೇಡಿ ತನದ ಗಾದೆಯ ಮೇಲೆ ನೀನು ಗಾಢ ನಿದ್ರೆಯಲ್ಲಿಯೇ ಇದ್ದೆ! ನಿನ್ನ ದುಃಸ್ಥಿತಿಗಾಗಿ ಪ್ರಲಾಪಿಸುತ್ತ ಆಗ ಆ ಸುಳಿಗಾಳಿ, ಅದು ಎಲ್ಲಿಂದ ಬಂದಿತ್ತೋ ಅಲ್ಲಿಗೇ ಹಿಂತಿರುಗಿ ಬಿಟ್ಟಿತು!

31

ಓ ಪೃಥ್ವಿಯ ಪುತ್ರನೆ!

ನಾನು ನಿನಗೆ ಆವಶ್ಯಕವಾದರೆ ನನ್ನ ಹೊರತು ಬೇರೆ ಯಾವೊಬ್ಬನಿಗಾಗಿಯೂ ಅರಸಬೇಡ! ನನ್ನ ಸೌಂದರ್ಯವನ್ನು ಕಣ್ಣಿಟ್ಟು ನೋಡುವ ಆಕಾಂಕ್ಷೆ ನಿನ್ನದಾದಲ್ಲಿ ಜಗತ್ತಿಗೂ, ಅದರಲ್ಲಿ ಇರುವುದೆಲ್ಲಕ್ಕೂ ಕಣ್ಣು ಮುಚ್ಚಿಕೊಳ್ಳು! ಏತಕ್ಕೆಂದರೆ, ನನ್ನ ಸಂಕಲ್ಪವೂ ನಾನಲ್ಲದ ಬೇರೊಬ್ಬನ ಸಂಕಲ್ಪವೂ, ಬೆಂಕಿ ನೀರುಗಳು ಹೇಗೋ ಹಾಗೆ ಒಂದೇ ಹೃದಯದಲ್ಲಿ ಜೀವಿಸಲಾರವು.

32

ಗೊತ್ತಿರದೆ ನನ್ನ ನೇಹವನ್ನು ಪಡೆದ ಅಪರಿಚಿತನೆ!

ನಿನ್ನೆದೆಯ ಮೇಣುಬತ್ತಿಯನ್ನು ನನ್ನ ಸಾಮಥ್ರ್ಯದ ಹಸ್ತ ಹೊತ್ತಿಸಿದೆ. ಅಹಮ್ಮಿಕೆಯ ಹಾಗೂ ರಾಗದ ವಿರುದ್ಧ ವಾತಗಳಿಂದ ಅದನ್ನು ನಂದಿಸಬೇಡ! ನಿನ್ನ ಸಕಲ ಅಸ್ವಸ್ಥತೆಗಳಿಗೂ ನನ್ನ ಜ್ಞಾಪಕವೇ ವೈದ್ಯ. ಇದನ್ನು ಮರೆಯದಿರು! ನನ್ನ ಪ್ರೀತಿಯನ್ನು ನಿನ್ನ ಅಮೂಲ್ಯ ಸಂಪತ್ತೆಂದು ಭಾವಿಸಿಕೊಳು, ಹಾಗೂ ಅದು ನಿನ್ನ ಕಣ್ಣೆಂಬಂತೆ ನಿನ್ನ ಜೀವನವೆಂಬಂತೆ ಅದನ್ನು ಜೋಪಾನ ಮಾಡು!

33

ಓ ನನ್ನ ಸಹೋದರನೇ!

ನನ್ನ ಮಧು ಜಿಹ್ವೆಯ ಆಹ್ಲಾದಕರ ಉಕ್ತಿಗಳನ್ನು ಕಿವಿಗೊಟ್ಟು ಕೇಳು! ಸಕ್ಕರೆ ಸುರಿಸುವ ನನ್ನ ಅಧರಗಳಿಂಡ ಹೊರಹೊಮ್ಮುವ ರಹಸ್ಯಮಯ ಪವಿತ್ರತೆಯ ಸ್ತೋತ್ರವನ್ನು ಗಟಗಟನೆ ಪಾನಮಾಡು. ನಿನ್ನೆದೆಯ ಹಸನಾದ ಕೃಷಿಭೂಮಿಯಲ್ಲಿ ನನ್ನ ದಿವ್ಯ ಸುವಿವೇಕದ ಬೀಜಗಳನ್ನು

ಬಿತ್ತು! ನಂಬುಗೆಯ ಜಲದಿಂದ ಅವುಗಳಿಗೆ ನೀರೊದಗಿಸು! ಆಗ ನನ್ನ ಜ್ಞಾನ - ಪ್ರಜ್ಞಾನಗಳ ಧೂಮ್ರನೀಲ ಹಚಿiÀiÁ ಸಿಂಥ ಪುಷ್ಟಗಳು ನಿನ್ನ ಪವಿತ್ರ ಹೃನ್ನಗರದಲ್ಲಿ ಹೊಚ್ಚ ಹೊಸದಾಗಿ ಹಚ್ಚ ಹಸಿರಾಗಿ ಅರಳಿ ಬರಲಿ!

34

ಓ ನನ್ನ ನಂದನದ ನಿವಾಸಿಗಳೆ!

ನಂದನದ ಪುಣ್ಯಾರಾಮದಲ್ಲಿ ನಿಮ್ಮ ಪ್ರೇಮ ಮತ್ತು ಸ್ನೇಹದ ಎಳೆಯ ಸಸಿಯನ್ನು ಕರುಣೆ- ಪ್ರೀತಿಂiÀi ಹಸ್ತಗಳಿಂದ ನಾನು ಹಚ್ಚಿದ್ದೇನೆ! ನನ್ನ ಕೋಮಲ ಅವ್ಯಾಜ ಕರುಣೆಯ ಸುವೃಷ್ಟಿಗಳಿಂದ ಅದಕ್ಕೆ ನೀರೆರೆದಿದ್ದೇನೆ! ಅದು ಇನ್ನೇನು ಫಲ ಕೊಡುತ್ತದೆ ಎನ್ನುವ ಘಳಿಗೆ ಬಂದಿದೆ. ಅದನ್ನು ಕಾಪಾಡಿಕೊಳ್ಳಲು ಪ್ರಯತ್ನಪಡಿರಿ! ಆಸೆ ರಾಗೋದ್ರೇಕಗಳ ಜ್ವಾಲೆಯಿಂದ ಅದು ಭಸ್ಮವಾಗದಿರಲಿ!

35

ಓ ನನ್ನ ಸ್ನೇಹಿತರೆ!

ತಪ್ಪು ದಾರಿ ತೋರುವ ದೀಪವನ್ನು ನೀವು ನಂದಿಸಿ ಬಿಡಿಸಿ! ದೈವಿಕ ಮಾರ್ಗದರ್ಶನದ ಚಿರಂತನ ಪಂಜನ್ನು ನಿಮ್ಮ ಹೃದಯದೊಳಗೆ ಹೊತ್ತಿಸಿಕೊಳ್ಳಿರಿ! ಏತಕ್ಕೆಂದರೆ, ಇಷ್ಟರಲ್ಲಿ ಮನುಕುಲದ ನ್ಯಾಯಧೀಶರು ಆಗಮಿಸಲಿದ್ದಾರೆ! ಸಂಪೂಜಿತನ ಪಾವನ ಸಮ್ಮುಖದಲ್ಲಿ ಅವರು ನಿರ್ಮಲತಮ

ಸಜ್ಜನಿಕೆಯನ್ನೂ ನಿಷ್ಕಳಂಕ ಪವಿತ್ರತೆಯ ಕೃತಿಗಳನ್ನೂ ಮಾತ್ರ ಒಪ್ಪುತ್ತಾರೆ!

36

ಓ ಮಣ್ಣಿನ ಮಗುವೆ!

ಕೇಳುವವರು ಇದ್ದರೆ ಮಾತ್ರವೇ ಮಾತನ್ನಾಡುವವರನ್ನು ಬುದ್ಧಿಶಾಲಿಗಳೆಂದೆನ್ನ ಬಹುದು: ಹೇಗೆ ಮಧ್ಯ ಪಾತ್ರೆಯನ್ನು ಒಪ್ಪುವ ಭೃತ್ಯ ಪಾನಬೇಕು ಎನ್ನುವವ ಸಿಕ್ಕುವ ತನಕ ಬಟ್ಟಲನ್ನು ಮುಂದೊಡ್ಡುವುದಿಲ್ಲ, ಹಾಗೆ ಪ್ರೇಮಿ ತನ್ನ ಪ್ರೇಯಸಿಯ ಲಾವಣ್ಯವನ್ನು ಕಣ್ಣಿಟ್ಟು ವೀಕ್ಷಿಸಿದಾಗ ಮಾತ್ರ ಆತನ ಹೃದಯದಾಳದಿಂದ ಉದ್ಗಾರ ಏಳುತ್ತದೆ. ಪ್ರಜ್ಞಾನವೂ ಹಾಗೆಯೇ. ಆದ್ದರಿಂದ ನಿನ್ನ ಎದೆಯ ಪರಿಶುದ್ಧ ಕೃಷಿಭೂಮಿಯಲ್ಲಿ ಜ್ಞಾನ-ವಿವೇಕಗಳ ಬೀಜಗಳನ್ನು ಬಿತ್ತಿ ಅವುಗಳನ್ನು

ಬಚ್ಚಿಡು! ರಾಡಿ ಕೆಸರಿನಿಂದಲ್ಲ. ನಿನ್ನ ಹೃದಯದಿಂದ ದಿವ್ಯ ಪ್ರಜ್ಞಾನದ ಹಯಾಸಿಂಥ್ಗಳು ತಲೆ ದೋರುವ ತನಕ ಬೀಜ ಮರೆಯಲ್ಲಿಯೇ ಇರಲಿ!

ಫಲಕದ ಮೊದಲನೆಯ ಪಂಕ್ತಿಯಲ್ಲಿ ಬರೆದು ದಾಖಲೆಯಾದದ್ದು ದೇವರ ಪಾವನ ಬೀಡಿನ ಆಶ್ರಂiÀiದಲ್ಲಿ ಬಚ್ಚಿಡಲಾಗಿದೆ.

37

ಓ ನನ್ನ ಸೇವಕನೆ!

ಅವಿನಾಶಿಯಾದ ಆಧಿಪತ್ಯವನ್ನು ನಶ್ವರವಾವುದೋ ಅದಕ್ಕಾಗಿ ಪರಿತ್ಯಜಿಸಬೇಡ! ಪ್ರಾಪಂಚಿಕ ಅಪೇಕ್ಷೆ ಗೋಸ್ಕರ ಸ್ವರ್ಗೀಯ ಪ್ರಭುತ್ವವನ್ನು ಹೊರಕ್ಕೆ ಬಿಸಾಡದಿರು! ಇದೇ ದಯಾಮಯನ

ಲೇಖನಿಯ ಉಗಮಸ್ಥಾನದಿಂದ ಪ್ರವಹಿಸಿ ಬಂದಿರುವ ಅಮರ ಜೀವನದ ನದಿಯು! ಅದನ್ನು ಸವಿದವರಿಗೆ ಎಲ್ಲವೂ ಮಂಗಲಮಯ!

38

ಓ ದೇವಾತ್ಮ ಸಂಜಾತನೆ!

ನಿನ್ನ ಪಂಜರವನ್ನು ಸೀಳಾಗಿ ಭೇದಿಸಿಬಿಡು! ಪ್ರೇಮದ ಫೀನಿಕ್ಸ್ ಪಕ್ಷಿಯಂತೆ ಪವಿತ್ರತೆಯ ಆಕಾಶಮಂಡಲಕ್ಕೆ ನೆಗೆ! ನಿನ್ನದೆಂಬುದೆಲ್ಲವನ್ನು - ನಿನ್ನನ್ನೇ – ತ್ಯಜಿಸಿಬಿಡು! ದಯಾ ಭಾವದಿಂದ ತುಂಬಿಕೊಂಡು ಸ್ವರ್ಗೀಯ ಪಾವಿತ್ರ್ಯದ ಸ್ವಾರಾಜ್ಯದಲ್ಲಿ ನೆಲಸು!

39

ಓ ಮಣ್ಣು ಹ್ಮಡಿಯ ಸಂತಾನವೆ!

ಗತಿಸಿಹೋಗುವ ದಿವಸವೊಂದರ ನೆಮ್ಮದಿಯಿಂದ ತೃಪ್ತನಾಗದಿರು; ನಿರವಧಿಯಾದ ಚಿರಂತನವಾದ ವಿಶ್ರಾಂತಿಯಿಂದ ನೀನು ದೂರಾಗಬೇಡ! ಮಣ್ಣುಗುಂಡಿಯ ಒಂದು ಮತ್ರ್ಯ ಜಗತ್ತಿಗಾಗಿ ಚಿರಂತನ ಆನಂದದ ಉಪವನವನ್ನೇ ಕೊಟ್ಟುಬಿಡಬೇಡ! ನೀನಿರುವ ಸೆರೆಮನೆಯೊಳಗಿಂದ ಬಂದು ಮೇಲಿರುವ ಸುಂದರ ಹುಲ್ಲುಗಾವಲುಗಳನ್ನು ಹತ್ತಿ ನಿಲ್ಲು! ನಿನ್ನ ಮತ್ರ್ಯ ಪಂಜರವನ್ನು ತೊರೆದು ರೆಕ್ಕೆಬೀಸುತ್ತ ನಿಃಸ್ಥಲದ ನಂದನಕ್ಕೆ ನೆಗೆದುಹೋಗು!

40

ಓ ನನ್ನ ಸೇವಕನೆ!

ಈ ಪ್ರಪಂಚದ ಕಾಲ್ಬೇಡಿಗಳಿಂದ ನಿನ್ನನ್ನೇ ಬಿಡಿಸಿಕೊಳ್ಳು! ಅಹಮ್ಮಿನ ಸೆರೆಮನೆಯಿಂದ ನಿನ್ನ ಆತ್ಮವನ್ನು ಬಿಡಿಸಿಕೋ! ನಿನಗಾಗಿ ಬಂದಿರುವ ಸದವಕಾಶವನ್ನು ತಪ್ಪದೆ ನಿನ್ನದಾಗಿಸಿಕೋ! ಒಮ್ಮೆ ಹೋಯಿತೆಂದರೆ ಅದು ನಿನ್ನೆಡೆಗೆ ಮತ್ತೆಂದಿಗೂ ಬರುವುದಿಲ್ಲ!

41

ಓ ನನ್ನ ಸೇವಕಿಯ ಕುವರನೆ!

ಅಮರ ಪ್ರಭುತ್ವದ ದರ್ಶನವು ನಿನಗೆ ಲಭಿಸಿದ್ದಾದರೆ ಈ ನಶ್ವರ ಪೃಥ್ವಿಯಿಂದಾಚೆ ಹೋಗುವುದಕ್ಕೆ ಇಷ್ಟರಲ್ಲಿ ನೀನು ಹೆಣಗಾಡುತ್ತಿದ್ದಿ! ಆ ಒಂದನ್ನು ನಿನ್ನಿಂದ ಮುಚ್ಚಿಟ್ಟು ಈ ಇನ್ನೊಂದನ್ನು ನಿನಗೆ ಪ್ರದರ್ಶಿಸುವುದೆಂದರೆ ಒಂದು ರಹಸ್ಯವೇ ಸರಿ. ಅದು ನಿಷ್ಕಲ್ಮಷ ಹೃದಯದವರಿಗಲ್ಲದೆ ಬೇರೆ ಯಾವೊಬ್ಬರಿಗೂ ಅರ್ಥವಾಗುವುದಿಲ್ಲ!

42

ಓ ನನ್ನ ಸೇವಕನೆ!

ಮತ್ಸರವು ನಿನ್ನ ಹೃದಯದಲ್ಲಿ ಉಳಿಯದಂತೆ ಅದನ್ನು ಶುದ್ಧಿಮಾಡಿಕೊ! ಅಸೂಯೆ ನಿನ್ನನ್ನು ಸೋಂಕದಂತೆ ನೋಡಿಕೋ! ಅಲ್ಲಿಂದ ಪವಿತ್ರತೆಯ ದಿವ್ಯಾಸ್ಥಾನವನ್ನು ಪ್ರವೇಶಿಸು!

43

ಓ ನನ್ನ ಸ್ನೇಹಿತರೆ!

ಸಖನ ಸಂಪ್ರೀತಿ ಉಂಟಾಗುವ ರೀತಿಯಲ್ಲಿ ನೀವು ನಡೆದುಕೊಳ್ಳಿರಿ! ಗಿÁನು ಸೃಷ್ಟಿಸಿದ ಜೀವಿಗಳ ಸಂತೋಷದಲ್ಲೇ ಆತನಿಗೆ ಸಂತೋಷ ಎಂಬುದು ನಿಮಗೆ ತಿಳಿದಿರಲಿ! ಯಾವ ವ್ಯಕ್ತಿಯೇ ಆಗಲಿ, ತನ್ನ ಮಿತ್ರನಿಗೆ ಸಂತೋಷವಾಗುತ್ತಿದ್ದರೆ ಮಾತ್ರ ಆತನು ತನ್ನ ಮಿತ್ರನ ಮನೆಯನ್ನು ಪ್ರವೇಶಿಸಲಿ! ಮಿತ್ರನ ವಸ್ತು-ಒಡವೆಗಳಿಗೆ ಕೈಯಿಕ್ಕದಿರಲಿ! ಮಿತ್ರನ ಆಜ್ಞೆಗಿಂತ ತನ್ನ ಆಜ್ಞೆಗೆ ಪ್ರಾಶಸ್ತ್ಯವಿರಲೆಂದು ಭಾವಿಸದಿರಲಿ! ತನ್ನ ಮಿತ್ರನ ಅನುಕೂಲತೆಗಳನ್ನು ತನ್ನ ಪ್ರಯೋಜನಕ್ಕಾಗಿ ಬಳಸಿಕೊಳ್ಳದಿರಲಿ! ವಿವೇಕವುಳ್ಳವರೇ! ಇದನ್ನೆಲ್ಲ ಕುರಿತು ನೀವು ಪಚಿiÀiರ್Áಲೋಚಿಸಿರ್!

44

ಓ ನನ್ನ ಸಿಂಹಾಸನದ ಒಡನಾಡಿಯೇ!

ಕೆಟ್ಟುದನ್ನು ಕೇಳಬೇಡ ಕೆಟ್ಟುದನ್ನು ನೋಡಬೇಡ, ನಿನ್ನನ್ನೇ ಕೀಳೈಸಿಕೊಳ್ಳಬೇಡ, ನಿಟ್ಟುಸಿರು ಕರೆಯಬೇಡ! ರೋದಿಸಬೇಡ! ನಿನಗಾರೂ ಕೆಟ್ಟುದನ್ನು ಮಾತನಾಡುವುದನ್ನು ಕೇಳಬಾರದೆಂಬ ಮನವಿದ್ದರೆ, ಕೆಟ್ಟುದನ್ನು ನೀನು ಆಡಬೇಡ! ನಿನ್ನ ದೋಷಗಳನ್ನು ರಾವುಗನ್ನಡಿಯಲ್ಲಿ ಕಂಡಂತೆ ದೊಡ್ಡದಾಗಿಸಬಾರದೆಂಬ ಮನವಿದ್ದರೆ ಇತರರ ದೋಷಗಳನ್ನು ದೊಡ್ಡದಾಗಿಸಿ ನೋಡಬೇಡ! ನಿನಗಾದ ಅವಮಾನ ಇನ್ನೊಬ್ಬರಿಗೆ ಗೊತ್ತಾಗಬಾರದೆಂಬ ಬಯಕೆ ಇದ್ದರೆ, ಅನ್ಯರಿಗೆ ಅವಮಾನವಾಗಲೆಂದು ನೀನು ಬಯಸಬೇಡ! ಕ್ಷಿಪ್ರದಲ್ಲಿ ಮಾಯವಾಗುವ ಕ್ಷಣಕ್ಕಿಂತಲೂ ಕ್ಷಣಿಕವಾದ ನಿನ್ನ ಬಾಳಿನ ದಿನಗಳನ್ನು ನೀನು ನಿಷ್ಕಳಂಕ ಮನಸ್ಸಿನಿಂದಲೂ ನಿರ್ಮಲ ಹೃದಯದಿಂದಲೂ, ವಿಶುದ್ಧ ವಿಚಾರಗಳಿಂದಲೂ ಪವಿತ್ರೀಕೃತ ಸ್ವಭಾವದಿಂದಲೂ ಕೂಡಿ ಇರು! ಹಾಗಾದಲ್ಲಿ ನೀನು ಸ್ವತಂತ್ರ ಹಾಗೂ ಸಂತೃಪ್ತನಾಗಿ, ಅದರ ವೇಳೆ ಬಂದಾಗ ನೀನು ಈ ಮತ್ರ್ಯರ ಶರೀರವನ್ನು ಬಿಟ್ಟು ನಿಗೂಢ ನಂದನಕ್ಕೆ ನಡೆದು ಆ ಚಿರಂತನ ಸ್ವಾರಾಜ್ಯದಲ್ಲಿ ಅನಂತವಾಗಿ ನೆಲಸ¨ಹುದು!

45

ಓ ಅಕಟಕಟ! ಐಹಿಕ ಆಸೆಗಳಿಗೆ ಮೋಹಿಸಿದವರೆ!

ಮಿಂಚಿನ ವೇಗದಿಂದ ಸಂಪ್ರೀತನಾಚೆಗೆ ನಡೆದುಬಿಟ್ಟು ಸೈತಾನೀ ಕಲ್ಪನೆಗಳಿಗೆ ನಿಮ್ಮ ಹೃದಯವನ್ನು ಮಾರಿ ಕೊಂಡಿದ್ದೀರಿ! ಪೆÇಳ್ಳಾದ ಕಲ್ಪನೆಯೇ ಪಥ್ಯವೆಂದು ಭ್ರಮಿಸಿ ಅದರೆದುರಿಗೆ ಮಂಡಿ ಮಣಿಯುತ್ತೀರಿ! ಕಂಟಕದ ಕಡೆ ಕಣ್ಣು ಹಾಯಿಸಿ ಅದಕ್ಕೇ ಕುಸುಮವೆಂದು ಹೆಸರಿಡುತ್ತೀರಿ.

ನಿರ್ಮಲಿನವಾದ ಒಂದು ಉಸಿರನ್ನಾದರೂ ನೀವು ಎಳೆದಿಲ್ಲ! ನಿಮ್ಮ ಹೃದಯಗಳ ಹುಲ್ಲುಗಾವಲುಗಳಿಂದ ನಿರ್ಲಿಪ್ತತೆಯ ಒಂದು ಸುಳಿಗಾಳಿಯೂ ಇತ್ತ ಸುಳಿದಿಲ್ಲ! ಸಂಪ್ರೀತನು ಪ್ರೇವi ಪೂರ್ವಕವಾಗಿ ಮಾಡಿದ ಬುದ್ಧಿವಾದಗಳನ್ನು ನೀವು ಗಾಳಿಗೆ ತೂರಿಬಿಟ್ಟಿದ್ದೀರಿ! ನಿಮ್ಮ ಹೃದಯಗಳ ಫಲಕದಿಂದ ಅವುಗಳನ್ನು ಪ್ರರ್ತಿಯಾಗಿ ತೊಡೆದುಹಾಕಿದ್ದೀರಿ! ಹೊಲದಲ್ಲಿ ಮೇಯುವ ರಾಗ – ಆಕಾಂಕ್ಷೆಗಳ ಗೋಮಾಳಗಳಲ್ಲಿ ಚಲಿಸಿ ಅಂತೂ ಇಂತೂ ಬದುಕುತ್ತಿದ್ದೀರಿ!

46

ಓ ಸಾಧನಾ ಮಾರ್ಗದಲ್ಲಿಯ ಬಂಧುಗಳೇ!

ಸಂಪ್ರೀತನ ನಾಮಾಂಕಿತವನ್ನು ಉಲ್ಲೇಖಿಸಲು ನಿಮಗೇತಕ್ಕೆ ಅಲಕ್ಷ್ಯ? ಆತನ ಪವಿತ್ರ ಸಮ್ಮುಖದಿಂದ ನೀವು ಏತಕ್ಕೆ ದೂರವಾಗಿ ನಿಂತಿದ್ದೀರಿ? ಅದ್ವಿತೀಯ ಮಂಟಪದೊಳಗೆ ವೈಭವಯುತ್ತ ಸಿಂಹಾಸನದ ಮೇಲೆ ಸೌಂದರ್ಯ ಸತ್ವ ಸಾರ ವಿರಾಜಮಾನವಾಗಿದೆ. ನೀವು ಮಾತ್ರ ನಿರರ್ಥಕವಾದ ವಿವಾದಗಳಲ್ಲಿ ತೆರಪಿಲ್ಲದೆ ತೊಡಗಿದ್ದೀರಿ! ಪಾವಿತ್ರ್ಯದ ಮಧುರ ಸುವಾಸನೆಗಳು ಸೂಸುತ್ತಿವೆ; ಔದಾರ್ಯದ ಸುಗಂಧದುಸಿರು ಹರಡುತ್ತಿದೆ! ಆದರೆ ನೀವೆಲ್ಲ ಕ್ಲೇಶದಲ್ಲಿದ್ದು

ಇದಕ್ಕೆಲ್ಲ ಹೊರತಾಗಿದ್ದೀರಿ! ನಿಮ್ಮನ್ನೂ ನಿಮ್ಮ ಹೆಜ್ಜೆಯಲ್ಲಿ ಹೆಜ್ಜೆಯನ್ನಿಟ್ಟು ನಿಮ್ಮ ದಾರಿಯಲ್ಲಿ ನಡೆಯುವವರನ್ನೂ ನೆನೆದು ಅಕಟ! ಎನ್ನದೆ ಗತಿಯಿಲ್ಲ!

47

ಓ ಆಕಾಂಕ್ಷೆಯ ಔರಸರೆ!

ಒಣಹೆಮ್ಮೆಯ ಬಟ್ಟೆಯನ್ನು ಕಳಚಿ ಎಸೆಯಿರಿ! ಸೊಕ್ಕು ದರ್ಪಗಳ ವೇಷಭೂಷಣಗಳನ್ನು ನಿಮ್ಮಿಂದ ತೆಗೆದು ಆಚೆಗಿಡಿರಿ!

ಮಾಣಿಕ್ಯ ಫಲಕದಲ್ಲಿ ಅದೃಶ್ಯದ ಲೇಖನಿಯಿಂದ ಬರೆದು ದಾಖಲೆಯಾದ ಅತ್ಯಂತ ಪವಿತ್ರ ಪಂಕ್ತಿಗಳಲ್ಲಿ ಮೂರನೆಚಿiÀುದಾದ ಪಂಕ್ತಿಯಲ್ಲಿ ಹೀಗೆ ತಿಳಿಯಪಡಿಸಲಾಗಿದೆ.

48

ಓ ಬಂಧುಗಳೆ

ಒಬ್ಬರನ್ನೊಬ್ಬರನ್ನು ತಾಳ್ಮೆಯಿಂದ ಸಹಿಸಿಕೊಳ್ಳಿರಿ! ಈ ಪ್ರಪಂಚದ ವಸ್ತುಗಳನ್ನು ನೀವು ಮೋಹಿಸಬೇಡಿರಿ! ನಿಮ್ಮ ವೈಭವಕ್ಕಾಗಿ ನೀವು ಹೆಮ್ಮೆಪಡಬೇಕಾಗಿಲ್ಲ; ನಿಮ್ಮ ಕೀಳುದೆಸೆಗಾಗಿ ನಾಚಬೇಕಾಗಿಲ್ಲ! ನನ್ನ ಸೌಂದರ್ಯವೇ ಇದಕ್ಕೆ ಸಾಕ್ಷಿ ಇರಲಿ! ಸಮಸ್ತ ಪದಾರ್ಥಗಳನ್ನೂ ನಾನು ಮಣ್ಣುಹುಡಿಯಿಂದ ನಿರ್ಮಿಸಿದ್ದೇನೆ; ಮತ್ತೆ ಅವುಗಳನ್ನು ಮಣ್ಣುಹ್ಮಡಿಗೆ ಹಿಂದಿರುಗಿಸುತ್ತೇನೆ!

49

ಓ ಹುಡಿಮಣ್ಣಿನ ಮಕ್ಕಳಿರಾ!

ಬಡವರು ನಟ್ಟಿರುಳಿನಲ್ಲಿ ನಿಟ್ಟುಸಿರು ಬಿಡುತ್ತಿರುವುದನ್ನು ತಪ್ಪದೆ ನೀವು ಮನದಟ್ಟಾಗಿಸಿರಿ! ಈ ವಿಷಚಿiÀುದಲ್ಲಿ ಜಾಗೃತಿ ವಹಿಸದಿದ್ದರೆ ನಿಶ್ಚಿತವಾಗಿ ಅವರು ವಿನಾಶ ಪಥದಲ್ಲಿ ಧುಮುಕಬಹುದು! ಸಂಪನ್ಮೂಲ ವೃಕ್ಷದಿಂದಲೇ ಅವರು ದೂರಾಗಬಹುದು! ಕೊಡುಗೈಯೂ ಔದಾರ್ಯವೂ ನನ್ನ

ಗುಣಸಮುಚ್ಛಯದಂಶವಾಗಿದೆ! ನನ್ನ ಸದ್ಗುಣಗಳಿಂದ ಯಾರು ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೋ ಅವರು ಸದಾ ಸುಖಿಯಿರುತ್ತಾರೆ!

50

ಓ ರಾಗವಿರಾಗಗಳ ತಿರುಳುಗಳಿರಾ!

ಎಲ್ಲ ಲೋಭವನ್ನೂ ಬದಿಗೊತ್ತಿ ತೃಪ್ತಿ ಯನ್ನರಸಿರಿ! ಏಕೆಂದರೆ ಲೋಭಿಗೆ ಯಾವಾಗಲೂ ಏನೂ ದಕ್ಕಿಲ್ಲ. ಯಾವಾಗಲೂ ಪ್ರೀತಿಯೂ, ಪ್ರಶಂಸೆಯೂ ಸಂತೃಪ್ತನಿಗೆ ಲಭಿಸಿವೆ.

51

ಓ ನನ್ನ ಸೇವಕಿಯ ಸುತನೆ!

ಬಡತನ ಅಡಸಿದಾಗ ಕೊರಗಬೇಡ! ಐಶ್ವರ್ಯ ಬಂದಾಗ ಅದು ಶಾಶ್ವತವೆಂದು ನಂಬಬೇಡ! ಬಡತನದ ಹಿಂದೆಯೇ ಐಶ್ವರ್ಯ ಬರುತ್ತದೆ. ಐಶ್ವರ್ಯದ ಹಿಂದೆಯೇ ಬಡತನ! ಅದೊಂದು ಚಕ್ರನೇಮಿಕ್ರಮ. ಭಗವಂತ ನೋರ್ವನನ್ನುಳಿದು ಉಳಿದ ವಿಷಯಗಳಲ್ಲೆಲ್ಲ ಬಡವನಾಗಿರುವುದು ಒಂದು ಅದ್ಭುತ ವರವೇ ಆಗಿದೆ! ಅದರ ಮೌಲ್ಯವನ್ನು ಕಡೆಗಣಿಸದಿರು! ಏಕೆಂದರೆ ಕೊನೆಯಲ್ಲಿ ಅದೇ ನಿನ್ನನ್ನು ಈಶ್ವರನೆಂಬ ಐಶ್ವರ್ಯದಲ್ಲಿ ಸಮೃದ್ಧನನ್ನಾಗಿ ಮಾಡುತ್ತದೆ! ಹೀಗೆ ನಿನಗೆ ಈ ಉಕ್ತಿಯ ಅರ್ಥ ಸ್ಪಷ್ಟವಾಗುತ್ತದೆ. “ನಿಜವಾಗಿ ನೀವೇ ಬಡವರು! ಸರ್ವ ಸ್ವಾಮ್ಯವೂ ಭಗವಂತನದೇ!” ಈ ಪವಿತ್ರ ವಚನವು ಪ್ರೇಮಿಯ ಹೃದಯ ಕ್ಷಿತಿಜದ ಮೇಲೆ ನೈಜ ಪ್ರಾತಃ ಕಾಲದಂತೆ ದೇದೀಪ್ಯಮಾನವಾದ ಮಹೋಜ್ವಲತೆಯಿಂದ ಬೆಳಗುತ್ತದೆ! ಸಂಪದ್ಭರಿತ ಸಿಂಹಾಸನದಲ್ಲಿ ಸುಭದ್ರವಾಗಿ ನೆಲಸುತ್ತದೆ!

52

ಓ ಅಜಾಗ್ರತೆ- ರಾಗಗಳ ಔರಸರೆ!

ನನ್ನ ಶತ್ರುವು ನನ್ನ ಮನೆಯೊಳಕ್ಕೆ ಪ್ರವೇಶಿಸಲು ನೀವು ಆಸ್ಪದ ಕೊಟ್ಟಿದ್ದೀರಿ. ನನ್ನ ಮಿತ್ರವನ್ನು ಹೊರಕ್ಕೆ ಅಟ್ಟಿದ್ದೀರಿ. ಹೇಗೆಂದರೆ, ನಾನಲ್ಲದ ಅನ್ಯನೊಬ್ಬನ ಪ್ರೇಮವನ್ನು ನೀವು ನಿಮ್ಮ

ಹೃದಯಗಳಲ್ಲಿ ಪ್ರತಿಷ್ಠಾಪಿಸಿದ್ದೀರಿ! ಸಖೋತ್ತಮನ ವಚನಗಳಿಗೆ ಕಿವಿಗೊಡಿರಿ! ಆತನ ನಂದನ ದೆಡೆಗೆ ತಿರುಗಿರಿ! ಪ್ರಾಪಂಚಿಕ ಮಿತ್ರರು ತಮ್ಮ ಸ್ವಂತ ಪ್ರಯೋಜನಕ್ಕೋಸ್ಕರ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವಂತೆ ತೋರಿಸಿಕೊಳ್ಳುತ್ತಾರೆ. ಆದರೆ ನೈಜ ಸಖೋತ್ತಮನು ನಿಮಗೋಸ್ಕರ ಮಾತ್ರ ನಿಮ್ಮನ್ನು ಪ್ರೀತಿಸಿದ್ದಾನೆ, ಪ್ರೀತಿಸುತ್ತಾನೆ! ನಿಜವಾಗಿ, ನಿಮಗೆ ಮಾರ್ಗದರ್ಶನವಿರಲೆಂದು ಲೆಕ್ಕವಿಲ್ಲದಷ್ಟು ಕ್ಲೇಶಗಳನ್ನು ಆತನು ಸಹಿಸಿದ್ದಾನೆ. ಇಂಥ ಸಖೋತ್ತಮನಿಗೆ ನೀವು ದ್ರೋಹಿಗಳಾಗಬೇಡಿರಿ! ಬದಲಾಗಿ ಆತನ ಬಳಿಗೆ ಬೇಗಬೇಗ ನಡೆಯಿರಿ! ಸಕಲ ನಾಮಾವಳಿಗಳ ಸ್ವಾಮಿಯ ಲೇಖನಿಯ ಬಿಂಬ, ದಿಗಂತದ ಮೇಲೆ ಮೂಡಿರುವ ಸತ್ಯ-ಶ್ರದ್ಧಾ ಮಯತೆಗಳ ವಚನ

ದಿನಮಣಿಯಂತೆ ಇಷ್ಟೊಂದು ತೇಜಃ ಪುಂಜವಾಗಿದೆ. ನಿಮ್ಮ ಕಿವಿಗಳನ್ನು ತೆರೆದಿಡಿರಿ! ಆಪದ್ ಬಂಧುವೂ, ಸ್ವಯಂಭೂ ಮೂರ್ತಿಯೂ ಆದ ಭಗವಂತನ ವಚನ ಆಗ ನಿಮ್ಮ ಕಿವಿಗೆ ಬೀಳಬಹುದು!

53

ಓ ಮತ್ರ್ಯ ಸಂಪತ್ತು ನಿಮ್ಮದಾಗಿದೆಯೆಂದು ಹೆಮ್ಮೆಗೊಂಡು ಬೀಗುವವರೆ!

ಈ ಸತ್ಯವನ್ನು ತಿಳಿದುಕೊಳ್ಳಿರಿ! ಅನ್ವೇಷಕನ ಮತ್ತು ಅಪೇಕ್ಷಿತ ಪದಾರ್ಥದ ಮಧ್ಯೆ, ಪ್ರೇಮಿಯ ಮತ್ತು ಪ್ರೇಯಸಿಯ ಮಧ್ಯೆ, ಐಶ್ವರ್ಯವು ಒಂದು ಪ್ರಬಲ ಆತಂಕವಾಗಿ, ದೊಡ್ಡ ಅಡ್ಡಗೋಡೆಯಾಗಿ ನಿಲ್ಲುತ್ತದೆ! ಕೆಲವೇ ಕೆಲವರನ್ನುಳಿದು ಬೇರೆ ಯಾವ ಶ್ರೀಮಂತರೂ ಆತನ ಸವiುುಖದ ಹಜಾರಕ್ಕೆ ಪ್ರವೇಶಾ ಸಾಧಿಸಲಾರರು. ತೃಪ್ತಿ ವೈರಾಗ್ಯಗಳ ಪುರವನ್ನು ಅವರು ಪ್ರವೇಶಿಸಲಾರರು! ಯಾವಾತ ಧನಿಕನಾಗಿದ್ದರೂ ಅಮರ ರಾಜ್ಯ ಪ್ರವೇಶದಿಂದ ಅವನ ಶ್ರೀಮಂತಿಕೆಯು ಅವನನ್ನು ಪ್ರತಿಬಂಧಿಸುವುದಿಲ್ಲವೋ ಆತನೇ ಸುಖಿ! ಯಾವನ ಶ್ರೀಮಂತಿಕೆಯು ಆತನ ಅವಿನಾಶಿ ಆಧಿಪತ್ಯವನ್ನು ಕಳೆಯುವುದಿಲ್ಲವೋ ಆತನೇ ಸುಖಿ! ಉದಾತ್ತ ನಾಮದ ಸಾq್ಷಯಾಗಿ ಹೇಳುತ್ತೇನೆ; ಸೂರ್ಯನು ವ್ಮತ್ರ್ಯರಿಗೆ ಬೆಳಕು ಬೀರುವಂತೆ ಅಂತಹ ಶ್ರೀಮಂತನ ವೈಭವವು ಸ್ವರ್ಗನಿವಾಸಿಗಳಿಗೆ ತೇಜಸ್ಸು ನೀಡುತ್ತದೆ!

54

ಓ ಧರಿತ್ರಿಯ ಧನಾಡ್ಯರೆ!

ನಿಮ್ಮ ಮಧ್ಯೆ ಇರುವ ನಿU್ರ್ಪತಿಕರಿಗೆ ಹ್ರೆಣೆ ನಾನು ಆಗಿದ್ದೇನೆ! ನಾನು ಹೊತ್ತ ಹೊಣೆಯನ್ನು ಕಾಪಾಡಿಕೊಳ್ಳಿರಿ. ಬರಿ ನಿಮ್ಮ ಸ್ವಂತದ ಐಷಾರಾಮವೊಂದೇ ನಿಮ್ಮ ಉದ್ದೇಶವಾಗಿ ಇರದಿರಲಿ!

55

ಓ ರಾಗವಿರಾಗದ ನಂದನನೆ!

ಶ್ರೀಮಂತಿಕೆಯ ಮಾಲಿನ್ಯದಿಂದ ನಿನ್ನನ್ನು ನೀನು ಶುಚಿಯಾಗಿಸಿಕೋ! ಸಂಪೂರ್ಣ ಸಮಾಧಾನದಿಂದ ಬಡತನದ ಪ್ರಾಂತಕ್ಕೆ ಮುಂದುವರಿ! ನಿರ್ಲಿಪ್ತತೆಯ ಬೆಲೆಯಿಂದ ಉಗಮಿಸಿದ ಅಮರ ಜೀವನದ ವiಧುವನ್ನು ಆಗ ನೀನು ಮನಬಂದಂತೆ ಹೀರಬಹುದು; ಸವಿಯಬಹುದು!

56

ಓ ನನ್ನ ಪುತ್ರನೆ!

ಅಧರ್ಮಿಯ ಸಾಹಚರ್ಯವು ವ್ಯಸನವನ್ನು ವರ್ಧಿಸುತ್ತದೆ! ಧರ್ಮಿಷ್ಠನ ಸಹವಾಸವು ಹ್ಲದಯದಿಂದ ತುಕ್ಕನ್ನು ತೊಡೆದುಹಾಕುತ್ತದೆ! ದೇವರೊಂದಿಗೆ ಆಪ್ತ ಸಂಭಾಷಣೆ ನಡೆಸುವುದಕ್ಕೆ ಅಪೇಕ್ಷೆಪಡುವ ವ್ಯಕ್ತಿ ಆತನ ಪ್ರೀತಿಪಾತ್ರರ ಸಹವಾಸವನ್ನು ದೊರಕಿಸಲಿ! ಭಗವದ್ ವಚನವನ್ನು ಕೇಳಬೇಕೆಂದು ಇಚ್ಛೆಯಿಂದ ವ್ಯಕ್ತಿಯು ಆತನ ಆಯ್ಕೆಯಲ್ಲಿ ಯಶಸ್ವಿಯಾದವರ ವಚನಗಳಿಗೆ ಕಿವಿಗೊಡಲಿ!

57

ಓ ಹುಡಿ ಮಣ್ಣಿನ ಕುವರನೆ!

ಎಚ್ಚರಿಕೆ! ಚೇವದ್ವಿಷರೊಡನೆ ನಡೆದಾಡಬೇಡ; ಅವನ ಸಂಗಕ್ಕೆ ಆಸೆಪಡದಿರು! ಏಕೆಂದರೆ ಆ ಸಹವಾಸವು ಹೃದಯದ ಉಜ್ವಲ ಪ್ರಕಾಶವನ್ನು ನರಕದ ಜ್ವಾಲೆಗಳಾಗಿಸಿ ಪರಿವರ್ತಿಸುತ್ತದೆ.

58

ಓ ನನ್ನ ಸೇವಕಿಯ ಕುವರನೇ!

ಪವಿತ್ರ ದೇವಾತ್ಮದ ಅವ್ಯಾಜ ಕರುಣೆಗೆ ನೀನು ಅಪೇಕ್ಷೆಪಡುವುದಾದರೆ ಧರ್ಮನಿಷ್ಠನ ಸಹವಾಸಕ್ಕೆ ಸೇರಿಕೊಳ್ಳು! ಏಕೆಂದರೆ ಧರ್ಮನಿಷ್ಠನು ಅಮರ ಪಾನಭೃತ್ಯನ ಕೈಯಿಂದ ಅದ್ಭುತ ಜೀವನದ ಮಧುಪಾತ್ರೆಯನ್ನು ಇಸಿದುಕೊಂಡು ಮಧುವನ್ನು ಕುಡಿದಿದ್ದಾನೆ. ನೈಜ ಪ್ರಾತಃ ಕಾಲದಂತೆ ಆತನೂ ಸಹ ಸತ್ತವರ ಹೃದಯಗಳಲ್ಲಿ ಮತ್ತೆ ಜೀವ ಕಳೆದುಂಬಿ ಅವುಗಳನ್ನು ಬೆಳಗಬಲ್ಲನು!

59

ಓ ಹೊಣೆಗೇಡಿಗಳೆ!

ಎದೆಯ ಗುಟ್ಟುಗಳು ನಿಗೂಢವಾಗಿವೆಯೆಂದು ಭಾವಿಸಬೇಡಿರಿ! ಹಾಗಲ್ಲ, ಇದನ್ನು ಖಂಡಿತವೆಂದು ತಿಳಿದುಕೊಳ್ಳಿರಿ. ಅವುಗಳನ್ನು ಸ್ಪಷ್ಟಾಕ್ಷರಗಳಲ್ಲಿ ಕೊರೆದಿದೆ. ಸಂಪ್ರೀತನ ಪವಿತ್ರ ಸಮ್ಮುಖದಲ್ಲಿ ಅವು ಬಹಿರಂಗವಾಗಿ ಸ್ಫುಟಗೊಂಡಿವೆ!

60

ಓ ಸ್ನೇಹಿತರೆ!

ನಿಜವಾಗಿ ನಾನು ಹೇಳುತ್ತೇನೆ: ನಿಮ್ಮ ಹೃದಯಗಳಲ್ಲಿ ಏನೇನನ್ನು ನೀವು ಬಚ್ಚಿಟ್ಟುಕೊಂಡಿದ್ದೀರೋ ಅದೆಲ್ಲವೂ ನಮಗೆ ಹಗಲಿನಂತೆ ಮುಕ್ತವೂ ಸ್ಪಷ್ಟವೂ ಆಗಿದೆ. ಆದರೆ ಅದು ಜನದೃಷ್ಟಿಯಿಂದ ವiರೆಯಾಗಿರುವುದು ನಮ್ಮ ಅವ್ಯಾಜ P್ಪರುಣೆ ಹಾಗೂ ಅನುಗ್ರಹದಿಂದ, ನಮ್ಮ ಯೋಗ್ಯತೆಯಿಂದಲ್ಲ!

61

ಓ ಮಾನವತನುಜನೆ!

ಜಗತ್ತಿನ ಜನಾಂಗಗಳ ಮೇಲೆ ನಾನು ಸುರಿಸಿರುವುದು ನನ್ನ ಕೃಪೆಯ ಅಗಾಧ ಅಂಬುಧಿಯಿಂದ ತೆಗೆದುಕೊಂಡ ಒಂದು ಮಂಜು ಹನಿಯು! ಆದರೂ ಇದನ್ನು ಗುರುತಿಸಿ ಅದರ ಕಡೆಗೆ ತಿರುಗಿದ ಒಬ್ಬನನ್ನೂ ನಾನು ಕಾಣಲಿಲ್ಲ! ಏಕೆಂದರೆ, ಪ್ರತಿಯೊಬ್ಬನೂ ಐಕಮತ್ಯದ ಸ್ವರ್ಗೀಯ ಮಧುಪಾನವನ್ನು ನಿರಾಕರಿಸಿ ಅಶುದ್ಧಿಯ ಹೊಲಸು ಸೃಷ್ಟಿಗೆ ಇಷ್ಟ ಪಟ್ಟಿದ್ದಾನೆ. ಮತ್ರ್ಯದ ಮದ್ಯಪಾತ್ರೆಯಿಂದ ತೃಪ್ತನಾಗಿ ಅಮರ ಲಾವಣ್ಯದ ಬಟ್ಟಲವನ್ನು ಅತ್ತಕಡೆಗೆ ನೂಕಿದ್ದಾನೆ. ಯಾವ್ಯದರಿಂದ ಅವನು ತೃಪ್ತಿಗೊಂಡಿದ್ದಾನೋ ಅದು ತೀರ ಕ್ಷುಲ್ಲಕ ಬದುಕಾಗಿದೆ.

62

ಓ ಮಣ್ಣಿನ ಕುವರನೆ!

ಅಮರ ಸಂಪ್ರೀತನ ಅನ್ಯಾದೃಶ ಮಧುಪಾನವನ್ನು ತ್ಯಜಿಸಿ, ನಿನ್ನ ಕಣ್ಣುಗಳನ್ನು ಬೇರೆಕಡೆಗೆ ಹಾಯಿಸಬೇಡ! ಅವುಗಳನ್ನು ಮತ್ರ್ಯದ ಕೊಳಕು ಗಷ್ಟುಗಳಿಗೆ ತೆರೆಯಬೇಡ! ದಿವ್ಯ ಪಾನಭೃತ್ಯನ ಹಸ್ತದಿಂದ ಅಮರಜೀವನದ ಪಾನ ಪಾತ್ರೆಯನ್ನು ತೆಗೆದುಕೊಳ್ಳು! ಹಾಗೆಸಗಿದಲ್ಲಿ ಸಮಸ್ತ ಸುವಿವೇಕವೂ ನಿನ್ನದಾಗಬಹುದು; ಅಗೋಚರ ಸ್ವಾರಾಜ್ಯದಿಂಡ ಕರೆಯುತ್ತಿರುವ ಅತೀಂದ್ರಿಯ ವಾಣಿಯನ್ನು ನೀನು ಆಲೈಸಬಹುದು. ಕೀಳುಗುರಿಯಿದ್ದವರೆ! ಗಟ್ಟಿಯಾಗಿ ಕೂಗಿಕೊಳ್ಳಿರಿ! ನನ್ನ ಪಾವನವೂ ಅವಿನಾಶಿಯೂ ಆದ ಮಧುರಸದೆಡೆಗೆ ಬೆನ್ನು ತಿರುಗಿಸಿ, ಕ್ಷಣಿಕ ಜೀವಿಯಾದ ನೀರಿಗೋಸ್ಕರ ನೀನು ಬಂದಿದ್ದೇಕೆ?

63

ಓ ಜಗತ್ತಿನ ಜಾನಪದಗಳಿರಾ!

ಖಂಡಿತವಾಗಿ ತಿಳಿದುಕೊಳ್ಳಿ! ಯಾವುದೋ ಅನಿರೀಕ್ಷಿತ ಆಪತ್ತು ನಿಮ್ಮನ್ನು ಹಿಂಬಾಲಿಸುತ್ತಿದೆ! ದುರ್ಭರ ಪ್ರತೀಕಾರ ನಿಮಗಾಗಿ ಕಾಯುತ್ತಿದೆ! ನೀವು ಎಸಗಿರುವ ಕೃತ್ಯಗಳು ನನ್ನ ಲಕ್ಷ್ಯದಿಂದ

ಅಳಿಸಿಹೋಗಿವೆಯೆಂದು ಬಗೆಯದಿರಿ! ನನ್ನ ಲಾವಣ್ಯವೇ ಸಾಕ್ಷಿ! ನನ್ನ ಲೇಖನಿಯು ನಿಮ್ಮ ಕೃತ್ಯಗಳನ್ನೆಲ್ಲ ಪಚ್ಚೆವ್ಮಣಿಯ ಫಲಕಗಳ ಮೇಲೆ ಮುಕ್ತಾಕ್ಷರಗಳಲ್ಲಿ ಕೊರೆದಿಟ್ಟಿದೆ.

64

ಓ ಲೋಕಕಂಟಕರೆ!

ದಬ್ಬಾಳಿಕೆಯಿಂದ ನಿಮ್ಮ ಕೈಗಳನ್ನು ಹಿಂತೆಗೆಯಿರಿ! ಏಕೆಂದರೆ ಯಾರೆಸಗಿದ ಅನ್ಯಾಯವನ್ನೂ ಕ್ಷಮಿಸುವುದಿಲ್ಲವೆಂದು ನಾನು ಪಣತೊಟ್ಟಿದ್ದೇನೆ. ಎಂದಿಗೂ ಪಲ್ಲಟಿಸುವುದಿಲ್ಲವೆಂದು ನಾನು ತೀರ್ಮಾನಿಸಿರುವ ಈ ನನ್ನ ಒಡಂಬಡಿಕೆಯನ್ನು ಜತನದಿಂದಿಟ್ಟ ಫಲಕದ ಮೇಲೆ ಬರೆದು ನನ್ನ ವೈಭವಯುತ ಮುದ್ರೆಯನ್ನು ಅದಕ್ಕೆ ಒತ್ತಿದ್ದೇನೆ!

65

ಓ ಬಂಡುಗಾರರೆ

ನನ್ನ ತಾಳ್ಮೆ ನಿಮಗೆ ಧೈರ್ಯವಿತ್ತಿದೆ. ನನ್ನ ದೀರ್ಘಾವಧಿಯ ಸಹನೆಯಿಂದ ನಿಮ್ಮಲ್ಲಿ ಅಲಕ್ಷ್ಯ ಉಂಟಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ನೀವು ರಾಗೋದ್ರೇಕವೆಂಬ ಬೆಂಕಿಯುಸಿರಿನ, ಗಾಳಿವೇಗದ ಕುರುರೆಯನ್ನು ವಿನಾಶದ ಕಡೆಗೊಯ್ಯುವ ಅಪಾಯಕರ ಮಾರ್ಗಗಳಲ್ಲಿ ಹಿಮ್ಮಡಿಮುಳ್ಳು ಚುಚ್ಚುತ್ತ

ನೀವು ಓಡಿಸುತ್ತಿದ್ದೀರಿ. ನಾನು ಹೊಣೆಗೇಡಿ ಇಲ್ಲವೆ ಏನೂ ಗೊತ್ತಿಲ್ಲದವನೆಂದು ಬಗೆದಿದ್ದೀರಾ?

66

ಓ ವಲಸೆಗಾರರೆ!

ನನ್ನ ನಾಮೋಚ್ಛಾರಣೆಗೆ ನಾನು ನಿರ್ಮಿಸಿರುವ ನಾಲಗೆಯನ್ನು ಇನ್ನೊಬ್ಬರ ನಿಂದೆಗಾಗಿ

ಉಪಯೋಗಿಸಿ ಮಲಿನವಾಗಿಸಬೇಡಿರಿ! ಅಹಮಹಮಿಕೆಯ ಬೆಂಕಿ ನಿಮ್ಮನ್ನು ಆಕ್ರಮಿಸಿದರೆ, ನಿಮ್ಮ ದೋಷಗಳನ್ನು ಜ್ಞಾಪಿಸಿಕೊಳ್ಳಿರಿ. ನಾನು ನಿರ್ಮಿಸಿದ ಉಳಿದ ಪ್ರಾಣಿಗಳ ದೋಷಗಳನ್ನಲ್ಲ! ಏಕೆಂದರೆ, ನಿಮ್ಮಲ್ಲಿ ಪ್ರತಿಯೊಬ್ಬನೂ ಅನ್ಯರನ್ನು ಅರಿ ತಿರುವುದಕ್ಕಿಂತ ಹೆಚ್ಚು ಸಮರ್ಪಕವಾಗಿ ತನ್ನನ್ನು ತಾನೇ ಅರಿತವನಾಗಿರುತ್ತಾನೆ.

67

ಓ ಲಘುಕಲ್ಪನೆಯ ಕುವರರೆ!

ಖಂಡಿತವಾಗಿ ತಿಳಿದುಕೊಳ್ಳಿರಿ; ಉಜ್ಜಲ ಪ್ರಭಾತವು ಚಿರಂತನ ಪವಿತ್ರತೆಯ ದಿಗಂತದ ಮೇಲೆ ಮೂಡಿದಾಗ ಸೈತಾನೀ ರಹಸ್ಯಗಳನ್ನೂ ಇರುಳಗತ್ತಿಲೆಯಲ್ಲಿ ಜರುಗಿದ ದುಷ್ಕೃತ್ಯ ಗಳನ್ನೂ ಜಗತ್ತಿನ ಜಾನಪದಗಳೆದುರಿಗೆ ಬಟ್ಟ ಬಯಲಾಗಿಸಿ ಪ್ರಕಟಗೊಳಿಸಲಾಗುವುದು.

68

ಓ ಮಣ್ಣು ಹುಡಿಯಿಂದ ಜಿಗಿಯುವ ಕಳೆ ಸಸ್ಯವೆ!

ಈ ನಿನ್ನ ಮಲಿನ ಕರಗಳು ಅದೇತಕ್ಕೆ ನಿನ್ನ ಸ್ವಂತದ ಬಟ್ಟೆಗಳನ್ನೇ ಮೊದಲು ಸ್ಪರ್ಶಿಸಲಿಲ್ಲ? ಆಕಾಂಕ್ಷೆ ರಾಗೋದ್ರೇಕಗಳಿಂದ ನಿನ್ನ ಹೃದಯ ಕಳಂಕಿತವಾಗಿದೆ. ಹೀಗಿರುವಾಗ ಏಕೆ ನೀನು ನನ್ನೊಡನೆ ಸಂಭಾಷಣೆಗಾಗಿ ನನ್ನ ಪವಿತ್ರ ಸ್ವಾರಾಜ್ಯದೊಳಗೆ ಪ್ರವೇಶಕ್ಕಾಗಿ ಅಪೇಕ್ಷಿಸುತ್ತಿದ್ದೀಯೆ? ಏನೆಲ್ಲವನ್ನೂ ನೀವು ಬಯಸುತ್ತಿರುವಿರೋ ಅದರಿಂದ ನೀವು ದೂರ, ಬಹು ದೂರವಾಗಿದ್ದೀರಿ.

69

ಓ ಅದಮನ ಮಕ್ಕಳೆ!

ಪವಿತ್ರ ವಚನಗಳೂ ಶುದ್ಧ ಸತ್ಕಾರ್ಯಗಳೂ ದಿವ್ಯ ವೈಭವದ ಸ್ವರ್ಗಕ್ಕೆ ಏರುತ್ತವೆ. ಅಹಂಕಾರ ಮತ್ತು ಕಪಟಾಚಾರಗಳ ಧೂಳು ತಾಕದಂತೆ ನಿಮ್ಮ ಕಾರ್ಯಗಳನ್ನು ಶುಚಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿರಿ! ಅವು ವೈಭವಯುಕ್ತ ನ್ಯಾಯಾಲಯದಲ್ಲಿ ಎಲ್ಲರೂ ಒಪ್ಪಿಕೊಳ್ಳುವಂತಾಗಲಿ! ಮನುಕುಲದ ಮೌಲ್ಯಗ್ರಾಹಿಗಳು ಇಷ್ಟರಲ್ಲಿ ಆರಾಧಿತನ ಪಾವನ ಸಮ್ಮುಖದಲ್ಲಿ ಪರಮ ಸದ್ಗುಣ ವiತ್ತು ಪರಿಶುದ್ಧ ಕಾರ್ಯಗಳನ್ನೆಲ್ಲದೆ ಬೇರೆ ಯಾವೊಂದನ್ನೂ ಒಪ್ಪುವುದಿಲ್ಲ. ಇದೇ ದೈವಸಂಕಲ್ಪದ ದಿಗಂತದ ಮೇಲೆ ಪ್ರಕಾಶಿಸಿದ ಸುವಿವೇಕ ಮತ್ತು ದೈವಿಕ ರಹಸ್ಯಗಳ ದಿನಮಣಿ! ಇದರ ಕಡೆಗೆ ತಿರುಗುವವರು ಧನ್ಯರು!

70

ಓ ಪ್ರಾಪಂಚಿಕತೆಯ ಪುತ್ರ!

ನೈಜ ತನ್ಮಯದ ಸ್ವಾರಾಜ್ಯವನ್ನು ನೀನು ಪಡೆದು ಕೊಂಡೆಯಾದರೆ ಅದು ಹಿತವಾದದ್ದೇ. ನಶ್ವರ ಪ್ರಪಂಚವನ್ನು ಅತಿಕ್ರಮಿಸಿ ನೀನು ಮುಂದುವರಿದೆಯಾದರೆ ಚಿರಂತನತೆಯ ಲೋಕ ವೈಭವಾನ್ವಿತವಾದದ್ದೇ! ಸ್ವರ್ಗೀಯ ತಾರುಣ್ಯದ ಕರಗಳು ತಂದ ಪಾನಪಾತ್ರೆಯಿಂದ ನೀನು ರಹಸ್ಯಮಧುವನ್ನು ಕುಡಿದೆಯೆಂದರೆ ನಿನಗೆ ಉಂಟಾಗುವ ಪಾವನ ಹರ್ಷೋನ್ಮಾದ ಮಧುರವಾದದ್ದೇ. ಈ ಸ್ಥಾನವನ್ನು ನೀನು ಗಳಿಸಿಕೊಂಡಲ್ಲಿ ವಿನಾಶದಿಂದ, ಮೃತ್ಯುವಿನಿಂದ, ದುಡಿತದಿಂದ, ಪಾತಕದಿಂದ ನಿನಗೆ ವಿಮೋಚನೆ ಲಭಿಸುವ್ಯದೆಂದೇ ತಿಳಿ!

71

ಓ ನನ್ನ ಸ್ನೇಹಿತರೇ!

ಜಾಮಾನಿನ ಪಾವನ ಗೌರವದ ಪರಿಸರದಲ್ಲಿ ನೆಲಸಿರುವ ಪಾರಾನ್ ಪರ್ವತದ ಮೇಲೆ ನೀವು ನನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಣೆಗೆ ತಂದುಕೊಳ್ಳಿರಿ! ಅತಿಮೇಲಣ ದಿವ್ಯ ಸಮುದಾಯವನ್ನು ಚಿರಂತನತೆಯ ನಗರದ ನಿವಾಸಿಗಳನ್ನೂ ನಾನು ಸಾಕ್ಷಿಗಳನ್ನಾಗಿಸಿಕೊಂಡಿದ್ದೇನೆ. ಆದರೂ ಈಗ ಒಪ್ಪಂದದಲ್ಲಿ ನಿಷ್ಠೆಯುಳ್ಳವನಾಗಿರುವ ಒಬ್ಬನನ್ನೂ ನಾನು ನೋಡಿಲ್ಲ! ಒಂದು ವಿಧದ ಗರ್ವವೂ ಬಂಡೆಬ್ಬಿಸುವ ಪ್ರವೃತ್ತಿಯಾಗಿ ಹೃದಯಗಳಿಂದ ಅದನ್ನು ಆಳಿಸಿಬಿಟ್ಟಿವೆ. ಅದರ ಒಂದು ಗುರುತು ಸಹ ಈಗುಳಿದಿಲ್ಲ! ಇದನ್ನು ಅರಿತಿದ್ದರೂ ನಾನು ಸುಮ್ಮನೆ ಕಾದುನಿಂತೆ!

ಯಾವೊಬ್ಬನಿಗೂ ಅದನ್ನು ಪ್ರಕಟಿಸಲಿಲ್ಲ!

72

ಓ ನನ್ನ ಸೇವಕನೆ!

ಚೆನ್ನಾಗಿ ಬಿಸಿ-ತಂಪು ನೀರುಣಿಸಿ ಹವಣಾಗಿಸಿದ ಉಕ್ಕಿನ ಖಡ್ಗದಂತೆ ನೀನಿದ್ದೀ. ಆ ಖಡ್ಗವನ್ನು ಒರೆಯ ಕತ್ತಲೆಯಲ್ಲಿ ಇಡಲಾಗಿರುತ್ತದೆ. ಅದನ್ನು ತಯಾರಿಸಿದವನಿಗೂ ಅದರ ಕಿಮ್ಮತ್ತು ತಿಳಿದಿರುವುದಿಲ್ಲ! ಆದಕಾರಣ, ಅಹಂಕಾರ ಹಾಗೂ ಆಸೆಯ ಒರೆಯಿಂದ ಹೊರಗೆ ಬಾ!

ಲೋಕಕ್ಕೆಲ್ಲ ನಿನ್ನ ಯೋಗ್ಯತೆಯು ಸ್ಫುಟವಾಗಲಿ, ಝಗಝುಗಿತವಾಗಲಿ!

73

ಓ ನನ್ನ ಸ್ನೇಹಿತನೆ!

ನನ್ನ ಪವಿತ್ರತೆಯ ಆಕಾಶದ ದಿನಮಣಿ ನೀನು! ಜಗತ್ತಿನ ಮಾಲಿನ್ಯ ನಿನ್ನ ತೇಜಸ್ಸಿಗೆ ಗ್ರಹಣ ಹಿಡಿದಂತೆ ಮಾಡದಿರಲಿ! ಹೊಣೆಗೇಡಿತನದ ಮುಸುಕನ್ನು ಕೀಳಾಗಿ ಹರಿದು ಹಾಕು! ಅಂದರೆ ಮೋಡಗಳ ಹಿಂದಿನಿಂದ ಮುಂದಕ್ಕೆ ಕಣ್ಣು ಕೋರೈಸುತ್ತ ನೀನು ಮುಂದೆ ಬಂದು ಸಮಸ್ತ ಪದಾರ್ಥಗಳಿಗೆ ಜೀವಕಳೆ ತುಂಬಿ ಅವುಗಳನ್ನು ಓರಣಗೊಳಿಸಬಹುದು!

74

ಓ ಆಡಂಬರದ ಅಣುಗರೆ!

ಕ್ಷಣಿಕ ಪ್ರಭುತ್ವಕ್ಕಾಗಿ ನೀವು ನನ್ನ ಅವಿನಾಶಿ ಆಧಿಪತ್ಯವನ್ನು ಪರಿತ್ಯಜಿಸಿದ್ದೀರಿ! ಜಗತ್ತಿನಲ್ಲಿ ದೊರೆಂiÀiುವ ಅಧಿಕಾರ, ಸಂಪತ್ತು ಮೊದಲಾದ ರಂಗುರಂಗಾದ ಬಟ್ಟೆಗಳಿಂದ ನಿಮ್ಮನ್ನು ಅಲಂಕರಿಸಿಕೊಂಡು, ಅದರ ಬಗೆಗೆ ನೀವು ಜಂಬ ಕೊಚ್ಚುತ್ತಿದ್ದೀರಿ! ನನ್ನ ಲಾವಣ್ಯದ ಸಾq್ಷಯಾಗಿ ಹೇಳುತ್ತೇನೆ. ಇದನ್ನೆಲ್ಲ ಒಂದು ಬಣ್ಣದ ಧೂಳಿಯ ಕಂಬಳಿಯ ಕೆಳಗೆ ನಾನು ಒಟ್ಟುಗೂಡಿಸುತ್ತೇನೆ! ಉಳಿದ ಈ ವಿವಿಧ ವರ್ಣಗಳನ್ನೆಲ್ಲ ತೊಡೆದು ಹಾಕುತ್ತೇನೆ! ನನ್ನ ಸ್ವಂತದ ಬಣ್ಣವನ್ನು ಆಯ್ದುಕೊಂಡವರಿಗೆ ಮಾತ್ರ ಇದು ಅನ್ವಯಿಸುವುದಿಲ್ಲ. ಆದರೆ- ಪ್ರತಿಯೊಂದು ಬಣ್ಣದಿಂದ ದೂರವಿರುವುದೇ ನನ್ನ ಸ್ವಂತದ ಬಣ್ಣ!

75

ಓ ಹೊಣೆಗೇಡಿತನದ ಮಕ್ಕಳಿರಾ!

ಮತ್ರ್ಯ ಪ್ರಭುತ್ವದ ಮೇಲೆ ಪ್ರೀತಿ ಇಡದಿರಿ, ಅದರಿಂದ ಸಂತಸಗೊಳ್ಳದಿರಿ! ವೃಕ್ಷಶಾಖೆಯಲ್ಲಿ ಕುಳಿತು ಪೂರ್ಣ ಭರವಸೆಯಿಂದ ಕೂಜನಗೈಯುವ ಅಜಾಗಕೂಕ ಪಕ್ಷಿಯಂತೆ ಇದ್ದೀರಿ ನೀವು! ವ್ಯಾಧನಾಗಿ ಮೃತ್ಯು ಹಠಾತ್ತನೆ ಮೇಲೆರಗಿ ಅದನ್ನು ಮಣ್ಣುಹ್ಮಡಿಗೆ ಬಿಸಾಡುತ್ತದೆ. ಆಗ ಆ ಪq್ಷಂiÀi ಸುಸ್ವರ, ಸುರೂಪ, ರಂಗುರಂಗು ಎಲ್ಲವೂ ಗುರುತೊಂದನ್ನು ಉಳಿಸದೆ ಹೊರಟು ಹೋಗುತ್ತದೆ ಆದ್ದರಿಂದ ಓ ಆಕಾಂಕ್ಷೆಯ ಗುಲಾಮರೆ, ಎಚ್ಚರವಿರಲಿ!

76

ಓ ನನ್ನ ಸೇವಕಿಯ ಸುತನೆ!

ಹಿಂದೆ ಯಾವಾಗಲೂ ವಾಕ್ಕಿನ ಮೂಲಕ ಮಾರ್ಗದರ್ಶನವನ್ನು ಕೊಡಲಾಗುತ್ತಿದ್ದಿತು. ಈಗ ಕೃತಿಗಳ ದ್ವಾರಾ ಅದನ್ನು ಒದಗಿಸಲಾಗುತ್ತಿದೆ. ಪ್ರತಿಯೊಬ್ಬನೂ ಶ್ಮಚಿ ಹಾಗೂ ಪವಿತ್ರ ಕೃತಿಗಳನ್ನು ಈಗ ನಿದರ್ಶಿಸಬೇಕಾಗಿದೆ! ಮಾತುಗಳು ಸರ್ವರಿಗೂ ಸಮನಾಗಿ ಸೇರಿದ ಆಸ್ತಿ; ಇಚಿಥ ಕೃತಿಗಳು ಮಾತ್ರ ನಮ್ಮ ಪ್ರೀತಿಯನ್ನು ಹೊಂದಿದವರಿಂದ ಜರುಗುತ್ತವೆ. ನಿಮ್ಮ ಕೃತಿಗಳಿಂದ ಕೀರ್ತಿವಂತರಾಗಲೂ ಮನಃಪೂರ್ವಕವಾಗಿ ಆತ್ಮಸಂತೋಷದಿಂದ ನೀವು ಪರಿಶ್ರಮಿಸಿರಿ! ಈ ಪವಿತ್ರೋಜ್ವಲ ಫಲಕದಲ್ಲಿ ನಾನು ನಿಮಗೆ ಕರುಣಿಸುವ ಉಪದೇಶ ಈ ರೀತಿಯಾಗಿದೆ!

77

ಓ ನ್ಯಾಯ ತತ್ವದ ನಂದನನೆ!

ಉÁತ್ರಿ ಸಮಯದಲ್ಲಿ ಅಮರ ತನ್ಮಯದ ಸೌಂದರ್ಯವು ಸ್ವಾಮಿಭಕ್ತಿಯ ಹರಿತ ಶಿಖರದಿಂದ ಸದ್ರತುಲ್-ಮುನ್-ತಹ ಕ್ಕೆ ನಡೆಯಿತು. ಅಲ್ಲಿ ಎಷ್ಟೊಂದು ವಿಷಾದದಿಂದ ರೋದಿಸಿತು ಗೊತ್ತೇ? ಮೇಲಣ ದಿವ್ಯತೇಜಸ್ಸರ ಸಮುದಾಯವೂ ಊಧ್ರ್ವಲೋಕದ ನಿವಾಸಿಗಳೂ ಅದನ್ನು ಕೇಳಿ ಆತನ ಆಕ್ರಂದನಕ್ಕೆ ಅತಿ ದುಃಖಿಸಿದರು. ಆಮೇಲೆ ಪ್ರಶ್ನೆ ಎದ್ದಿತು: “ಏತಕ್ಕೆ ಈ ಹಲುಬು, ಈ ಪ್ರಲಾಪ?”ಆತ ಜವಾಬು ಹೇಳಿದನು: ನಿರೂಪದಂತೆ ಸ್ವಾಮಿಭಕ್ತಿಯ ಬೆಟ್ಟದ ಮೇಲೆ ನಾನು ನಿರೀಕ್ಷಿಸುತ್ತ ಕಾದು ನಿಂತೆನು; ಆದರೆ ಭೂಮಿಯಲ್ಲಿ ಬಾಳುತ್ತಿರುವವನಿಂದ ಸ್ವಾಮಿ ಭಕ್ತಿಯ ಸುಗಂಧವು ತೇಲಿ ಬರಲಿಲ್ಲ. ಅಮೇಲೆ ಮರಳಲು ಕರೆ ಬಂತು. ಹಿಂದಿರುಗಿ ನೋಡಿದರೆ, ಓ! ಪವಿತ್ರತೆಯನ್ನು ಸಂಕೇತಿಸುವ ಕೆಲವು ಪಾರಿವಾಳಗಳು ಇಹದ ಶ್ವಾನಗಳ ಉಗುರು ಪಂಜರಗಳಲ್ಲಿ ಸಿಕ್ಕಿಕೊಂಡು ಬಲು ನರಳುತ್ತಿದ್ದವು. ಆಗ ಓರ್ವ ಸ್ವರ್ಲೋಕದ ಕನ್ಯೆಯು ತಲೆಮುಸುಕಿಲ್ಲದೆ ಉಜ್ವಲವಾಗಿ ಪ್ರಕಾಶಿಸುತ್ತ ತನ್ನ ರಹಸ್ಯಮಯ ಮಹಲಿನಿಂದ ಶೀಘ್ರವಾಗಿ ಹೊರಬಂದು ಆ ಪಾರಿವಾಳಗಳ ಹೆಸರೇನೆಂದು ಕೇಳಿದಳು. ಒಂದು ಹೊರತು ಎಲ್ಲ ಹೆಸರುಗಳನ್ನೂ ಹೇಳಲಾಯಿತು. ಒತ್ತಾಯಗೊಳಿಸಿದ ತರುವಾಯ, ಉಲ್ಲೇಖಿತ ನಾಮಗಳ ಪ್ರಥಮಾಕ್ಷರವು ಉಚ್ಚಾರಿತವಾಯ್ತು. ಆಗ ಕೂಡಲೆ ಸ್ವರ್ಗೀಯ ಕೊಠಡಿಗಳ ನಿವಾಸಿಗಳು ತಮ್ಮ ವೈಭವದ ಬಿಡಾರದಿಂದ ಆತುರವಾಗಿ ಹೊರಗೆ ಬಂದರು. ದ್ವಿತೀಯಾಕ್ಷರದ ಉಚ್ಚಾರಣೆ ಅಗುವಾಗ ಅವರೆಲ್ಲರೂ ಪತನಗೊಂಡು, ಒಬ್ಬನೂ ಉಳಿಯದಂತೆ ಎಲ್ಲರೂ ಧೂಳಿಗುರುಳಿದರು. ಆ ಕ್ಷಣದಲ್ಲಿ ಗರ್ಭಗುಡಿಯ ಪೀಠದೊಳಗಿನಿಂದ ಧ್ವನಿಯೊಂದು ಕೇಳಿ ಬಂದಿತು: “ಇಲ್ಲಿಯ ತನಕ ಮಾತ್ರ, ಮುಂದೆ ಕೂಡದು! ನಿಜವಾಗಿ, ಇಲ್ಲಿಯವರೆಗೆ ಅವರೇನು ಮಾಡಿದ್ದಾರೋ ಹಾಗೂ ಈಗ ಮಾಡುತ್ತಿರುವವರೋ ಅದಕ್ಕೆಲ್ಲ ನಾವು ಸಾಕ್ಷಿಯಾಗಿದ್ದೇವೆ!

78

ಓ ನನ್ನ ಸೇವಕಿಯ ಕುವರನೆ!

ದಯಾಮಯನ ರಸನೆಯಿಂದ ದ್ರವಿಸುವ ದಿವ್ಯ ರಹಸ್ಯದ ಸ್ತೋತ್ರವನ್ನು ಮೊಗೆಮೊಗೆದು ಪಾನಮಾಡು! ದಿವ್ಯ ಉಕ್ತಿಯ ಹಗಲು ಬುಗ್ಗೆಯಿಂದ ದಿನವ್ಮಣಿಯ ಅನ್ಯಾವೃತ ವೈಭವದಂತಿರುವ ಪ್ರಜ್ಞಾನವನ್ನು ಕಣ್ತುಂಬ ನೋಡು! ಹೃದಯದ ಪರಿಶುದ್ಧ ನೆಲದಲ್ಲಿ ನನ್ನ ದಿವ್ಯ ಸುವಿವೇಕದ ಬೀeಗಳನ್ನು ಬಿತ್ತು! ನಿಶ್ಚಿತ ಜ್ಞಾನದ ಜಲದಿಂದ ಅವುಗಳಿಗೆ ನೀರು ಹಾಯಿಸು! ಆಗ ಹೃದಯದ ಪವಿತ್ರ ನಗರದಲ್ಲಿ ಜ್ಞಾನ-ಸುಜ್ಞಾನಗಳ ಹಯಸಿಂಥಾ ಪುಷ್ಪಗಳು ಹೊಚ್ಚ ಹೊಸದಾಗಿ ಹಚ್ಚ ಹಸುರಾಗಿ ಚಿಗಿಯಬಹುದು!

79

ಓ ಆಕಾಂಕ್ಷೆಯ ಕುವರನೆ!

ಎಷ್ಟು ಕಾಲ ನೀನು ಆಕಾಂಕ್ಷೆಯ ರಾಜ್ಯದಲ್ಲಿ ಹೀಗೆ ಹಾರಾಡುವಿ! ಸೈತಾನೀ ಕಲ್ಪಕತೆಯ ಪ್ರಾಂತದಲ್ಲೆಲ್ಲ ಪವಿತ್ರ ಅನುಭಾವದ ರಾಜ್ಯದಲ್ಲಿ ನೆಗೆದಾಡಲೆಂದು ನಿನಗೆ ರೆಕ್ಕೆಗಳನ್ನು ಕೊಡಲಾಗಿದೆ. ನಿನಗೆ ನಾನು ಹಣಿಗೆಯನ್ನಿತ್ತ ಕಾರಣವು ಗೊತ್ತೇ? ನನ್ನ ಕೊರಳನ್ನು ಕತ್ತರಿಸಲಿಕ್ಕಿ¯್ಲ ಎಂದಲ್ಲ, ನನ್ನ ಈ ಕೋಗಿಲಗಪ್ಪು ಕುರುಳುಗಳನ್ನು ಬಾಚಲೆಂದು ಅದನ್ನು ನಿನಗೆ ಕೊಟ್ಟಿದ್ದೇನೆ!

80

ಓ ನನ್ನ ಭೃತ್ಯರೆ!

ನೀವು ನನ್ನ ಉಪವನದ ವೃಕ್ಷಗಳು! ನೀವೂ ಮತ್ತು ಇತರರೂ ಪ್ರಯೋಜನ ಪಡೆಯುವಚಿಥ ಬೆರಗುಗೊಳಿಸುವ ಉತ್ಕೃಷ್ಟ ಫಲಗಳನ್ನು ನೀವು ಕೊಟ್ಟೇ ಕೊಡಬೇಕು! ಹೀಗೆ ಕೈಗೆಲಸಗಳಲ್ಲೂ ವೃತ್ತಿಗಳಲ್ಲೂ ತೊಡಗುವುದು ಪ್ರತಿಯೊಬ್ಬನಿಗೂ ಅವಶ್ಯವಾಗಿದೆ. ಪ್ರಾಜ್ಞತೆ! ಇದರಲ್ಲಿಯೇ ಸಂಪತ್ತಿನ ರಹಸ್ಯವಿದೆ. ಸಿದ್ಧಿಗಳು ಸಾಧನೆಗಳನ್ನು ಅವಲಂಬಿಸಿವೆ; ದೇವರ ಅವ್ಯಜಕರುಣೆಯೊಂದು ನಿಮಗೆ ಸಾಕು! ಏನೂ ಫಲಕೊಡದ ವೃಕ್ಷಗಳು ಇಲ್ಲಿಯವರೆಗೆ ಒಲೆಯ ಉರಿಗೆ ಇಂಧನವಾಗಿವೆ. ಇನ್ನು ಮುಂದೆಯೂ ಆಗುವುದರಲ್ಲಿ ಸಂಶಯವಿಲ್ಲ!

81

ಓ ನನ್ನ ಸೇವಕನೆ!

ಭೂಮಿಯ ಮೇಲೆ ಇದ್ದುಕೊಂಡು ಯಾರು ನಿಷ್ಫಲ, ನಿಷ್ಟ್ರಯೋಜಕರಾಗುತ್ತಾರೋ ಅವರೇ ಅತ್ಯಂತ ಕೀಳು ಜನ, ಅಂಥ ಮನುಷ್ಯರನ್ನು ಸತ್ತವರೆಂದು ನಿಜವಾಗಿ ಪರಿಗಣಿಸಲಾಗುತ್ತದೆ! ಅಷ್ಟೇ ಅಲ್ಲ, Œದೇವರ ದೃಷ್ಟಿಯಲ್ಲಿ ಇಂತಹ ಆಯೋಗ್ಯ ಮೈಗಳ್ಳರಿಗಿಂತ ಸತ್ತವರೇ ಒಂದು ಪಾಲು ಮೇಲು!

82

ಓ ನನ್ನ ಸೇವಕನೇ!

ಮನುಷ್ಯರಲ್ಲಿ ಅತ್ಯುತ್ತಮರು ಯಾರು? ಯಾರು ತಮ್ಮ ಉದ್ಯೋಗದಲ್ಲಿ ನಿರತರಾಗಿ ದುಡಿದು ತಮ್ಮ ಉದರ ನಿರ್ವಹಣೆಯನ್ನು ಮಾಡಿಕೊಳ್ಳುತ್ತಾರೋ ಅವರು! ಯಾರು ಸಕಲ ಲೋಕಗಳ ಸ್ವಾಮಿಚಿiÀiÁ ದ ಭಗವಂತನ ಪ್ರೇಮಕ್ಕೋಸ್ಕರ ತಮ್ಮ ಹಾಗೂ ತಮ್ಮವರ ಸಲುವಾಗಿ ತಮ್ಮ ಸಂಪಾದನೆಯನ್ನು ವೆಚ್ಚ ಮಾಡುತ್ತಾರೋ ಅವರು!

ಇಂದ್ರಿಯಾತೀತಳಾಗಿ ಬೆರಗುಗೊಳಿಸುವ ಮದುವಣಗಿತ್ತಿ ಇದುವರೆಗೂ ಉಕ್ತಿಯ ಮುಸುಕಿನ ಕೆಳಗೆ ಅಡಗಿದ್ದಳು. ಈಗ ದೇವರ ಅವ್ಯಾಜ ಕರುಣೆ ಹಾಗೂ ದಿವ್ಯಾನುಗ್ರಹ ದೊರೆತಿದೆ. ಅಂತೇ ಸಂಪ್ರೀತನ ಸೌಂದರ್ಯದಿಂದ ಮಳೆಗರೆದ ದೇದೀಪ್ಯಮಾನವಾದ ಪ್ರಕಾಶದಂತೆ ಆಕೆ ಅವತರಿಸಿದ್ದಾಳೆ. ಓ ಸ್ನೇಹಿತರೇ ಅನುಗ್ರಹ ಪೂರ್ಣವಾಗಿದೆ. ಮಂಡನೆಮಿಮಾಂಸೆಯೆಲ್ಲ ಸಫಲವಾಗಿದೆ. ಆಧಾರಗಳೆಲ್ಲ ಸ್ಪಷ್ಟವಾಗಿವೆ. ಇವೆಲ್ಲವುಗಳ ಮೇಲೆ ಆಧಾರಿತವಾದ ಸತ್ಯ ಪ್ರಸ್ತಾಪಿತವಾಗಿದೆ. ಇದಕ್ಕೆ ನಾನೇ ಸಾಕ್ಷಿ! ನಿರ್ಲಿಪ್ತತೆಯ ದಾರಿಯಲ್ಲಿ ನಿಮ್ಮ ಹವಣಿಕೆಗಳು ಈಗ ನಿಮಗಾವ ಅನುಭವವನ್ನು ಕೊಡುವವೋ ಅದನ್ನು ನೀವೇ ಕಣ್ಣಾರೆ ಕಾಣುವಿರಿ! ನಿಮಗೂ ದ್ಯಾವಾಪೃಥ್ವೀಲೋಕಗಳಲ್ಲಿದ್ದ ಎಲ್ಲರಿಗೂ ದಿವ್ಯಾನುಗ್ರಹವನ್ನು ಈ ರೀತಿ ಕರುಣಿಸಲಾಗಿದೆ. ಸರ್ವಲೋಕಗಳ ಸ್ವಾಮಿಯಾದ ಭಗವಂತನಿಗೆ ಸರ್ವ ಪ್ರಶಂಸೆಸಲ್ಲಲಿ!

ರ ಕೇಂದ್ರ ಬಿಂದುವಾದ ಕಮಲ ಮಂದಿರ ನವ ದೆಹಲಿ; ಕೆನಡಾದ ಒಟ್ಟಾವದಲ್ಲಿನ ಬಸ್ಸುನ್ನು ಹತ್ತಿ ಪ್ರನ್ಸ್ನ ಪ್ಯಾರಿಸ್ ನಗರದಲ್ಲಿ ಪತ್ರಿಕೆಯೊಂದನ್ನು ತಲುಪಿ ಅಥವಾ ಇಡೆಲಿಯ ರಿಮಿನಿ ರೈಲು ನಿಲ್ದಾನದಲ್ಲಿ ತಲೆ ಎತ್ತಿ ನೋಡಿದರೆ ಅಷ್ಟೇ ಏಕೆ ಪ್ರಪಂಚದಾದ್ಯಂತ ಭಾರತದ ಬಹಾಯಿ ಆರಾಧನಾ ಮಂದಿರವು ಸಾರ್ವಜನಿಕರ ಗಮನವನ್ನು ಸೆಳೆಯುತ್ತದೆ.

Bahá'u'lláh

Windows / Mac